22nd December 2024
Share
ಸಚಿವ ಮಾಧುಸ್ವಾಮಿ ಮುಖ್ಯ ಮಂತ್ರಿ ಅಲ್ಲ ಅಲ್ಲ ಮಂತ್ರಿ ಎಂದು ಪ್ರಮಾಣ ವಚನ ಸ್ವೀಕರಿಸಿದ ಕ್ಷಣದ ಚಿತ್ರ.

   ಕರ್ನಾಟಕ ರಾಜ್ಯದ ಎಲ್ಲಾ ಕೆರೆ-ಕಟ್ಟೆಗಳನ್ನು ಒಂದೇ ಸೂರಿನಡಿ ತರಬೇಕೆಂಬ ಮಹತ್ವಾಕಾಂಕ್ಷೆ ಪರಿಕಲ್ಪನೆಯಿಂದ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರವನ್ನು ಕರ್ನಾಟಕ ರಾಜ್ಯ ಸರ್ಕಾರ ರಚಿಸಿದೆ.

ಆದರೆ ಇದೂವರೆಗೂ ಕರ್ನಾಟಕ ರಾಜ್ಯದಲ್ಲಿ ಎಷ್ಟು ಜಲಸಂಗ್ರಹಾಗಾರಗಳು ಇವೆ ಎಂಬ ಕರಾರು ವಕ್ಕಾದ ದಾಖಲೆ ಇಲ್ಲದಿರುವುದು ವಿಷಾದನೀಯ.

  ಸಣ್ಣ ನೀರಾವರಿ ಸಚಿವರಾಗಿದ್ದ ಶ್ರೀ ಟಿ.ಬಿ.ಜಯಚಂದ್ರರವರು  ರಾಜ್ಯದ ಎಲ್ಲಾ ಕೆರೆ-ಕಟ್ಟೆಗಳನ್ನು ಒಂದೇ ಸೂರಿನಡಿ ತರಲು ಅಭಿವೃದ್ಧಿ ರೆವೂಲ್ಯೂಷನ್ ಫೊರಂ  ಮನವಿ ಮಾಡಿತ್ತು. ಅವರು ಸಹ ಪ್ರಾಮಾಣಿಕವಾಗಿ ಪ್ರಯತ್ನ ಮಾಡಿದರೂ ಆಗಿನ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಶ್ರೀ ಹೆಚ್.ಕೆ.ಪಾಟೀಲ್ ರವರು ಅವರ ಇಲಾಖೆಯಲ್ಲಿರುವ ಕೆರೆಗಳನ್ನು ಸಣ್ಣ ನೀರಾವರಿ ಇಲಾಖೆಗೆ ವರ್ಗಾಯಿಸುವ ಕಡತಕ್ಕೆ ಸಹಿ ಹಾಕಲಿಲ್ಲ.

  ನಾನು ಶ್ರೀ ಹೆಚ್.ಕೆ.ಪಾಟೀಲ್ ರವರ ಬಳಿ ಒಮ್ಮೆ ಈ ಬಗ್ಗೆ ಚರ್ಚಿಸಿದಾಗ ಓ ಇದು ನಿನ್ನ ಐಡಿಯಾನ ಎಂದು ಕಿಚಾಯಿಸಿದ್ದರು. ಒಳ್ಳೆಯ ಕೆಲಸ ಸಾರ್ ಯಾರಿಗೂ ಯಾವ ಇಲಾಖೆಯೂ ಶಾಶ್ವತ ಅಲ್ಲ. ಆದರೇ ದೂರದೃಷ್ಟಿಯಿಂದ ಇದಾಗ ಬೇಕು ಎಂದಿದ್ದೆ.

  ಶ್ರೀ ಜೆ.ಸಿ.ಮಾಧುಸ್ವಾಮಿರವರು ಸಣ್ಣ ನೀರಾವರಿ ಸಚಿವರಾದಾಗ ಶ್ರೀ ಜಿ.ಎಸ್.ಬಸವರಾಜ್ ರವರು 36000 ಕೆರೆಗಳ ರಾಜರಪ್ಪ ಎಂದು ಹಾಸ್ಯ ಮಾಡಿದಾಗ ಜೆಸಿಎಂ ನೀವು ಒಂದು ಅರ್ಧ ತಗೊಳ್ಳಿ ಎಂದಿದ್ದರು. ನಂತರ ಬಸವರಾಜ್ ರವರು ಎಲ್ಲಾ ಇವರ ಇಲಾಖೆಗೆ ಬಂದವಾ? ಎಂದು ಕೇಳಿದರು. 

 ಈ ಹಿನ್ನೆಲೆಯಲ್ಲಿ ಕೆರೆಗಳ ಮಾಲೀಕತ್ವ ವರ್ಗಾವಣೆ ಕಡತ ಅನುಸರಣೆ ಮಾಡಿದಾಗ ಕಡತ ಈಗಲೂ ನೆನೆಗುದಿಗೆ ಬಿದ್ದಿದೆ. ಈಗಿನ ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಕೆ.ಎಸ್.ಈಶ್ವರಪ್ಪನವರ ಅಂಗಳದಲ್ಲಿ ಇದೆ 

      ಮಾನ್ಯ ಮುಖ್ಯ ಮಂತ್ರಿಗಳೇ ಪ್ರಸ್ತುತ ಜಲಸಂಪನ್ಮೂಲ ಸಚಿವರಾಗಿದ್ದಾರೆ, ಜೆಸಿಎಂ ಕಾನೂನು ಸಚಿವರಾಗಿಯೂ ಇದ್ದಾರೆ ನೀರಿಗೆ ಸಂಬಂದಿಸಿದ ಎಲ್ಲಾ ಇಲಾಖೆಗಳ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಒಂದೇ ಸೂರಿನಡಿ ತರಲು ಶ್ರಮಿಸುವುದು ಅಗತ್ಯವಾಗಿದೆ.

  ಕೇಂದ್ರ ಸರ್ಕಾರ ನೀರಿಗೆ ಸಂಬಂಧಿಸಿದ ಎಲ್ಲಾ ಇಲಾಖೆಗಳಲ್ಲಿ ಇದ್ದ ಯೋಜನೆಗಳನ್ನು ಒಂದೇ ಸೂರಿನಡಿ ತಂದು ಜಲಶಕ್ತಿ ಸಚಿವಾಲಯ ಮಾಡಿದೆ. ಅವರ ಪಕ್ಷದ ಸರ್ಕಾರವೇ ಇರುವುದರಿಂದ ರಾಜ್ಯದಲ್ಲೂ ಜಲಶಕ್ತಿ ಉದಯವಾಗುವುದೇ ಕಾದು ನೋಡಬೇಕು?