22nd November 2024
Share

  ತಮಿಳು ನಾಡಿನ ಜಬ್ಬಲ್‌ಪುರ್ ಶ್ರೀ ನಾಗರಾಜ ಶರ್ಮರವರು ತಮಿಳಿನಲ್ಲಿ ಬರೆದಿರುವ 51 ಅಕ್ಷರ ಪೀಠ ಎಂಬ ಪುಸ್ತಕವನ್ನು ಕನಡಕ್ಕೆ ಅನುವಾದ ಮಾಡಿದ ಮೈಸೂರು ಸಂಸ್ಥಾನದ ದಿವಾನರಾಗಿದ್ದ ಸರ್.ಕೆ. ಶೇಷಾದ್ರಿ ಅಯ್ಯರ್ ರವರ ಮೊಮ್ಮಗನ ಪತ್ನಿಯಾದ ಶ್ರೀ ಮತಿ ಲಲಿತ ಶೇಷಾದ್ರಿರವರು ಕನ್ನಡಕ್ಕೆ ಅನುವಾದ ಮಾಡಿ ೫೧ ಅಕ್ಷರ ಪೀಠಗಳು ಎಂಬ ಪುಸ್ತಕವನ್ನು ಬರೆದಿದ್ದಾರೆ.

  ಬೆಂಗಳೂರಿನ ಸ್ವಪ್ನ ಬುಕ್ ಸ್ಟಾಲ್‌ನಲ್ಲಿ ಶಕ್ತಿಪೀಠಗಳ ಪುಸ್ತಗಳನ್ನು ಹುಡುಕಾಟ ಮಾಡುವಾಗ ನನ್ನ ಕಣ್ಣಿಗೆ ಬಿದ್ದ 51 ಅಕ್ಷರ ಪೀಠ ಪುಸ್ತಕದಲ್ಲಿರುವ  ವಿಳಾಸವನ್ನು ಹುಡುಕಿಕೊಂಡು ಹೋಗಿ ತಮಿಳುನಾಡಿನ ಚನ್ನೈನಲ್ಲಿರುವ, (JABALPUR A. NAGARAJA SARMA. G-10, SRI VIDYA APARTMENTS.14 BALAKRISHNA MUDALI STREET, WEST MAMBALAM, CHANNAI-600033)

ಶ್ರೀ ನಾಗರಾಜ ಶರ್ಮರವರ ದಂಪತಿಗಳನ್ನು ಭೇಟಿಯಾದ ಸಂದರ್ಭದಲ್ಲಿ ಶಕ್ತಿಪೀಠಗಳ ಬಗ್ಗೆ ಅವರ ಅಭಿಪ್ರಾಯ, ಅವರು ಶಕ್ತಿಪೀಠಗಳಿಗೆ ಭೇಟಿ ನೀಡಿದ್ದ ಇತಿಹಾಸದೊಂದಿಗೆ ಬಹಳಷ್ಟು ವಿಚಾರಗಳನ್ನು ಹಂಚಿಕೊಂಡರು.

  ಇವರು 51 ಅಕ್ಷರ ಪೀಠಗಳ ಬಗ್ಗೆ ವಿಶೇಷವಾಗಿ 30 ವರ್ಷಗಳು ಅಧ್ಯಯನ ಮಾಡಿ 130 ಪುರಾಣಗಳಿಂದ ಸ್ಪೂರ್ತಿ ಪಡೆದು, 51 ಅಕ್ಷರಪೀಠಗಳಿಗೂ ಭೇಟಿ ನೀಡಿ ವಿಷಯಗಳನ್ನು ಸಂಗ್ರಹಿಸಿರುವ ಅವರ ಅನುಭವ ಬಹಳ ವಿಶಿಷ್ಠವಾಗಿದೆ.

ನನಗೆ ಅವರೊಂದಿಗೆ ಸಮಾಲೋಚನೆ ಮಾಡಿದಾಗ ಅನ್ನಿಸಿದ್ದು ಶಕ್ತಿಪೀಠ ಎಂಬುದು ಒಂದು ಆಗಾಧವಾದ ಶಕ್ತಿ, ಒಂದು ನಂಬಿಕೆ, ಶಕ್ತಿಪೀಠಗಳಿಗೆ ಯಾವುದೇ ಆಕಾರವಿಲ್ಲ, ರೂಪುರೇಷೆಗಳಿಲ್ಲ, ಸತಿಯ ದೇಹದ ಭಾಗಗಳು ಬಿದ್ದ ಸ್ಥಳಗಳು ಇಂದು ಪಾವಿತ್ರ್ಯತೆ ಪಡೆದು ಶಕ್ತಿಪೀಠಗಳ ಪ್ರಮುಖ ಕೇಂದ್ರಗಳಾಗಿವೆ.

ಅಲ್ಲಿನ ಜನ ಅವರಿಗೆ ಬೇಕಾದ ಹಾಗೆ, ದೇವರ ಅನುಗ್ರಹದಿಂದ ವಿಗ್ರಹಗಳನ್ನು, ಫೋಟೋಗಳನ್ನು ಸಿದ್ಧಪಡಿಸಿ ಕೊಂಡಿದ್ದಾರೆ ಎಂಬ ಸತ್ಯದ ಅರಿವು ಆಯಿತು.