6th March 2025
Share

  ದೇವರು ಒಬ್ಬೊಬ್ಬರಿಗೆ ಒಂದೊಂದು ವಿಶೇಷ ಆಸಕ್ತಿಯಲ್ಲಿ ತೊಡಗಿಸಿಕೊಳ್ಳಲು ಅನುಗ್ರಹಿಸಿರುತ್ತಾನೆ. ಬೆಂಗಳೂರಿನ ಮತ್ತಿಕೆರೆಯಲ್ಲಿರುವ ಈ ಕುಟುಂಬ ವಿಶ್ವದಲ್ಲಿರುವ ಎಲ್ಲಾ ಶಕ್ತಿಪೀಠಗಳ ಯಾತ್ರೆ ಕೈಗೊಂಡಿದ್ದಾರೆ. ಈಗಾಗಲೇ ಬಹಳಷ್ಟು ಶಕ್ತಿಪೀಠಗಳ ಕ್ಷೇತ್ರಗಳ ದರ್ಶನ ಮಾಡಿದ್ದಾರೆ.

  ನನಗೆ ನನ್ನ ಸ್ನೇಹಿತರಾದ ಶ್ರೀ ಡಿ.ಎಸ್.ಹರೀಶ್‌ರವರು ವಿಶ್ವೇಶ್ವರಯ್ಯ ಜಲ ನಿಗಮದ ಕಚೇರಿಯಲ್ಲಿ ಸಿಕ್ಕಿದಾಗ ಅವರು ನಿವೃತ್ತಿಹೊಂದಿದ ವಿಚಾರ ತಿಳಿಯಿತು. ಹಾಗೇಯೇ ಅಂದೇ ಅವರು ನಿಗಮದ ಸಹೋದ್ಯೋಗಿಗಳಿಗೆ  ಔತಣ ಕೂಟವನ್ನು ಏರ್ಪಡಿಸಿದ್ದರು.

ನಿವೃತ್ತಿ ಹೊಂದಿದ ನಂತರ ಏನು ಮಾಡುತ್ತೀರಿ ಎಂಬ ವಿಚಾರ ಸುತ್ತಿ ಬಳಸಿ ನಮ್ಮ ಶಕ್ತಿಪೀಠ ಕ್ಯಾಂಪಸ್ ವರೆಗೆ ಬಂತು. ಆಗ ಅವರ ಕೋಬ್ರದರ್ ದಂಪತಿಗಳಾದ ಶ್ರೀ ಅಶೋಕ್ ಮತ್ತು ಶ್ರಿ ಮತಿಯವರು ಶಕ್ತಿಪೀಠಗಳ ಪ್ರವಾಸದ ಬಗ್ಗೆ ತಿಳಿಯಿತು.

ನಾನು ಅವರೊಂದಿಗೆ ಸಮಾಲೋಚನೆ ನಡೆಸುವ ಮತ್ತು ತಿಳಿದು ಕೊಳ್ಳುವ ಬಹಳಷ್ಟು ಅಂಶಗಳಿವೆ,   ಶಕ್ತಿಪೀಠ ವೆಬ್‌ಸೈಟ್‌ನಲ್ಲಿ ಪ್ರಕಟಿಸುವ ಅಂಶಗಳು ಮತ್ತು ಶಕ್ತಿಪೀಠ ಟೂರಿಸಂ ಸರ್ಕ್ಯೂಟ್ ಬಗ್ಗೆ ಅವರಿಗೆ ಆಳವಾದ ಜ್ಞಾನವಿದೆ.

108  ಶಕ್ತಿಪೀಠಗಳ ಹಲವಾರು ವಿಚಾರಗಳ ಬಗ್ಗೆ ಜನತೆಗೆ ತಿಳಿಯುವ ಹಾಗೆ ಬರೆದು ಪ್ರಕಟಿಸಲು ಅವರೊಂದಿಗೆ ಸಂವಾದ ಮಾಡುವ ಉದ್ದೇಶವೂ ನನಗೆ ಇದೆ.

ಜೊತೆಗೆ ಶಕ್ತಿಪೀಠಗಳ ದರ್ಶನ ಯಾತ್ರೆಗೆ ಅವರೊಂದಿಗೆ ನಾನು ಸಹ ಯಾತ್ರೆ ಕೈಗೊಳ್ಳಲು ನಿರ್ಧರಿಸಿದ್ದೇನೆ.