15th September 2024
Share

2012  ಮತ್ತು 2013  ರಲ್ಲಿ ಆಗಿನ ಸಂಸದ ಶ್ರೀ ಜಿ.ಎಸ್.ಬಸವರಾಜ್ ರವರು ತುಮಕೂರಿಗೆ ನಿಮ್ಜ್ ಮಂಜೂರು ಮಾಡಿಸಿ ಇಡೀ ದಕ್ಷಿಣ ಇಂಡಿಯಾದಲ್ಲಿ ಪ್ರಥಮ ನಿಮ್ಜ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು..

   ದೇಶದಲ್ಲಿ 10  ನಿಮ್ಜ್ ಮಂಜೂರಾಗಿದ್ದರೂ ದಕ್ಷಿಣ ಇಂಡಿಯಾಕ್ಕೆ ಒಂದೇ ಒಂದು ಅದೂ ತುಮಕೂರಿಗೆ. ಕೇಂದ್ರದಲ್ಲಿ ಯುಪಿಎ ಸರ್ಕಾರ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಗ ಶ್ರೀ ಜಿ.ಎಸ್.ಬಸವರಾಜ್ ರವರು ಬಿಜೆಪಿ/ಕೆಜೆಪಿ ಎಂಬ ಗೊಂದಲದಲ್ಲಿ ಇದ್ದರೂ ಎಲ್ಲರ ಸಹಕಾರದಿಂದ ಗುರಿ ತಲುಪಿದರು.

  ಆಗ ರಾಜ್ಯ ಸರ್ಕಾರದಲ್ಲಿ ಶ್ರೀ ಎಸ್.ವಿ.ರಂಗನಾಥ್ ರವರು ಮುಖ್ಯಕಾರ್ಯದರ್ಶಿಗಳಾಗಿದ್ದರು, ಶ್ರೀ ವಿದ್ಯಾಶಂಕರ್ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾಗಿದ್ದರು ಮತ್ತು ಶ್ರೀ ಮಹೇಶ್ವರ ರಾವ್ ಕೈಗಾರಿಕಾ ಇಲಾಖೆಯ ಆಯುಕ್ತರಾಗಿದ್ದರು, ಕೇಂದ್ರ ಸರ್ಕಾರದಲ್ಲಿ ಶ್ರೀ ಡಿ.ವಿ.ಪ್ರಸಾದ್ ರವರ ಸಹಕಾರ ನಿಜಕ್ಕೂ ಶ್ಲಾಘನೀಯ.

ಇತಿಹಾಸ

  ನಿಮ್ಜ್ ಹೊಸ ಯೋಜನೆಗೆ ಕರಡು ಪ್ರತಿ ಕೇಂದ್ರ ಸರ್ಕಾರದಲ್ಲಿ ಸಿದ್ಧವಾಗುತ್ತಿತ್ತು. ವಿಜ್ಞಾನ ಭವನದಲ್ಲಿ ಆಗಿನ ಪ್ರಧಾನಿ ಶ್ರೀ ಮನಮೋಹನ್ ಸಿಂಗ್ ರವರು ಒಂದು ಸಭೆ ನಡೆಸಿದ್ದರು. ನಾನು ದೆಹಲಿಗೆ ಹೋಗಿ ಆ ಸಭೆಯಲ್ಲಿ ಭಾಗಿಯಾಗಿದ್ದೆ. ನಿಮ್ಜ್ ಯೋಜನೆಗೆ 5000  ಹೆಕ್ಟೇರ್ ಜಮೀನು ಬೇಕು ಎಂಬ ನಿಯಮ ಚರ್ಚೆಯಾಗುತ್ತಿತ್ತು.

  ನಾನು ತುಮಕೂರಿಗೆ ಬಂದವನೇ ಶ್ರೀ ಟಿ.ಆರ್.ರಘೋತ್ತಮರಾವ್ ರವರೊಂದಿಗೆ ಚರ್ಚಿಸಿದೆ. ಶ್ರೀ ಜಿ.ಎಸ್.ಬಸವರಾಜ್ ರವರು ಆಗ ಮಾಜಿಯಾಗಿದ್ದರು. ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಶ್ರೀ ಎಸ್. ಸುರೇಶ್ ಕುಮಾರ್ ರವರು ಮತ್ತು ಅವರ ಆಪ್ತ ಕಾರ್ಯದರ್ಶಿ ಶ್ರೀ ಎ.ಆರ್.ಮಂಜುನಾಥ್ ರವರೊಂದಿಗೆ ಚರ್ಚಿಸಿದೆ. ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಮನವಿ ನೀಡಿದೆ.

  ಶ್ರೀ ಮಂಜುನಾಥ್ ರವರು ಮಧ್ಯಾಹ್ನ ಊಟ ತರಿಸಿ ಊಟ ಹಾಕಿಸಿ, ರಮೇಶ್ ಕೇಂದ್ರದಲ್ಲಿ ಯುಪಿಎ ಸರ್ಕಾರವಿದೆ. ನಾವು ಪ್ರಯತ್ನ ಮಾಡುವುದು ಹೇಗೆ ಎಂದು ಸಚಿವರು ಕೇಳಿದರು ಏನು ಮಾಡುವುದು ಎಂದರು.

 ನಾನು ಅವರಿಗೆ ಹೇಳಿದೆ ಸಾರ್ ನೀವು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವುದು ಬೇಡ, ಮೊದಲು ತುಮಕೂರು ಜಿಲ್ಲೆಯಲ್ಲಿ ಸುಮಾರು 12500 ಎಕರೆ ಜಮೀನು ನೋಟಿಫಿಕೇಷನ್ ಮಾಡಲು ಕೆ.ಐ.ಡಿ.ಬಿ ಗೆ ಪತ್ರ ಬರೆಯಿರಿ ಎಂದೆ.

  ಇದು ವರ್ಗಾವಣೆ ಅಥವಾ ಗುತ್ತಿಗೆದಾರರಿಗೆ ಬಿಲ್ ನೀಡುವ ಬೇಡಿಕೆ ಪತ್ರ ಅಲ್ಲಾ ಸಾರ್ ಎಂದೇ. ಸರಿ ಇಷ್ಟೊಂದು ಜಮೀನು ರೈತರು ಗಲಾಟೆ ಮಾಡುವುದಿಲ್ಲವಾ? ಎಂದರು.

ನೋಡೋಣ ಒಂದು ಪತ್ರ ಕೊಡಿ ಸಾರ್ ಎಂದಾಗ ಅವರು ಸಹಿ ಹಾಕಿಸಿ ಪತ್ರ ನೀಡಿದರು. ಶ್ರೀ ರಾಮಕೃಷ್ಣರವರು ಎಸ್.ಎಲ್.ಎ.ಓ ಆಗಿದ್ದರು. ಅವರನ್ನು ಭೇಟಿಮಾಡಿ ವಿಷಯ ತಿಳಿಸಿದಾಗ ಜಿಲ್ಲೆಯಲ್ಲಿ ಎಲ್ಲೆಲ್ಲಿ ಮಾಡ ಬೇಕು ನೀವೇ ಹೇಳಿ, ತಹಶೀಲ್ದಾರ್ ರವರಿಂದ ಮಾಹಿತಿ ಕೊಡಿಸಿ ನೋಟಿಫೀಕೇಷನ್ ಮಾಡಿಸುತ್ತೇನೆ ಎಂದರು.

  ದೇವರ ದಯೆ ನೋಟಿಪೀಕೇಷನ್ ಮಾಡಿಸಿದ್ದಾಯಿತು. ನಂತರ 2009  ರ ಚುನಾವಣೆಯಲ್ಲಿ ಶ್ರೀ.ಜಿ.ಎಸ್.ಬಸವರಾಜ್‌ರವರು ಸಂಸದರಾಗಿ ಆಯ್ಕೆಯಾದರು. ಕೇಂದ್ರದಲ್ಲಿ ಕಾಮರ್ಸ್ ಕಮಿಟಿಯ ಸದಸ್ಯರಾಗಿ ನೇಮಕವಾದರು. ಯೋಜನೆಯನ್ನೂ ಮಂಜೂರು ಮಾಡಿಸಿದರು.

  ನಿಮ್‌ಗೆ ಎತ್ತಿನಹೊಳೆ ನೀರು ಕೊಡುವ ಭರವಸೆ ನೀಡಿದ್ದರು, ಪುನಃ ಮಾಜಿಯಾದರು. ಕೈಗಾರಿಕೆಗಳಿಗೆ ನೀರು ಇಲ್ಲ, ಜಿಲ್ಲೆಯ ನಿರುದ್ಯೋಗಿಗಳಿಗೆ ಉದ್ಯೋಗವೂ ಇಲ್ಲ ಎನ್ನುವಂತಾಗಿದೆ. ಪ್ರಸ್ತುತ ಪುನಃ ಸಂಸದರಾಗಿದ್ದಾರೆ ದಿನಾಂಕ:17.01.2020 ರಂದು ಪ್ರಗತಿ ಪರಿಶೀಲನೆ ಸಭೆ ಕರೆದಿದ್ದಾರೆ. ಜಿಲ್ಲೆಯ ನಿರುದ್ಯೋಗಿಗಳಿಗೆ ಉದ್ಯೋಗ ನೀಡಲು ವಿಶಿಷ್ಠವಾದ ಯೋಜನೆ ರೂಪಿಸಲು ಚಿಂತನೆ ನಡೆಸಿದ್ದಾರೆ.