21st November 2024
Share

 ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು ತುಮಕೂರಿನಲ್ಲಿ ಉದ್ಘಾಟನೆ ಮಾಡಿದ ಫುಡ್ ಪಾರ್ಕ್‌ನಲ್ಲಿ ಏನೇನು ನಡೆಯಬೇಕಾಗಿತ್ತು, ಈಗ ಏನು ನಡೆಯುತ್ತಿದೆ ಎಂಬುದು ಚಿದಂಬರ ರಹಸ್ಯವಾಗಿದೆ ಎಂದು ನಗರದ ಜನತೆಯ ಮನೆ ಮಾತಾಗಿದೆ.

  ಫುಡ್ ಪಾರ್ಕ್ ಸ್ಥಾಪನೆ ಮಾಡುವಾಗ  ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ Mega Food Parks coordination committee(MFPCC)ರಚಿಸಲು ಮತ್ತು ಆಗಿಂದಾಗ್ಗೆ ಪ್ರಗತಿ ಪರೀಶಿಲನೆ ಮಾಡಲು ಕೇಂದ್ರ ಸರ್ಕಾರ ದಿನಾಂಕ:25.08.2010 ರಲ್ಲಿಯೇ ಸುತ್ತೋಲೆ ಹೊರಡಿಸಿದೆ.

  ಯೋಜನೆ ಜಾರಿ ಮಾಡುವಾಗ ತುಮಕೂರು ಲೋಕಸಭಾ ಸದಸ್ಯರಾಗಿದ್ದ ಶ್ರೀ ಜಿ.ಎಸ್.ಬಸವರಾಜ್ ರವರು ಮಂಜೂರಾತಿಗೆ ಶ್ರಮಿಸಿದ್ದರು. ಉದ್ಘಾಟನೆ ವೇಳೆ ಮಾಜಿಯಾದರು. ನಂತರ ಬಂದ ಶ್ರೀ ಎಸ್.ಪಿ.ಮುದ್ದುಹನುಮೇಗೌಡರವರು ದಿಶಾ ಸಮಿತಿಯಲ್ಲಿ ಈ ಬಗ್ಗೆ ಚರ್ಚಿಸಿದ್ದರ ಬಗ್ಗೆ ಮಾಹಿತಿ ಇಲ್ಲ.

  ಪ್ರಸ್ತುತ ಶ್ರೀ ಜಿ.ಎಸ್.ಬಸವರಾಜ್ ರವರು ಫುಡ್ ಪಾರ್ಕ್‌ನಲ್ಲಿ ದಿಶಾ ಸಮಿತಿ ಸಭೆ ನಡೆಸಿ ಯೋಜನೆಯಿಂದ ರೈತರಿಗೆ ಆಗಿರುವ ಅನೂಕೂಲಗಳ ಬಗ್ಗೆ ಹಾಗೂ ಗ್ರಾಮೀಣ ಸಂಪತ್ತು ಯಾವ ರೀತಿ ಬೆಳೆದಿದೆ ಎಂಬ ಬಗ್ಗೆ ಸಮಾಲೋಚನೆ ನಡೆಸಲಿದ್ದಾರೆ.