22nd December 2024
Share
ಮುನಿಸು ಒಳ್ಳೆಯದಲ್ಲ ಹತ್ತಿರ ಹತ್ತಿರ ಬಾ

  ಕರ್ನಾಟಕ ರಾಜ್ಯ ಕೇಂದ್ರ ಸರ್ಕಾರದಿಂದ ಅತಿ ಹೆಚ್ಚು ಅನುದಾನ ಪಡೆದ ರಾಜ್ಯವಾಗಬೇಕು  ಎಂಬ ಗುರಿ ತಲಪಲು ಅವಿರತವಾಗಿ ಶ್ರಮಿಸುತ್ತಿರುವ ತುಮಕೂರಿನ ಶಕ್ತಿಪೀಠ ಫೌಂಡೇಷನ್ ಮತ್ತು ಅಭಿವೃದ್ಧಿ ರೆವೂಲ್ಯೂಷನ್ ಫೋರಂ ರಾಜ್ಯದ ಎಲ್ಲಾ 30 ಜಿಲ್ಲೆಗಳ ದಿಶಾ ಸಮಿತಿ ಸಭೆಗಳಿಗೆ ಒಂದು ವಿಶಿಷ್ಟವಾದ  ಟೆಂಪ್ಲೆಟ್ ಸಿದ್ಧಪಡಿಸುವ ಮೂಲಕ ಬೆರಳ ತುದಿಯಲ್ಲಿ ಕೇಂದ್ರ ಸರ್ಕಾರದ ಯೋಜನೆಗಳ ಡಿಜಿಟಲ್ ಮಾಹಿತಿ ಸಂಗ್ರಹಿಸುವ  ಸಂಶೋಧನೆ ಮಾಡುವತ್ತಾ ಸಾಗಿದೆ.

  ಒಂದೊಂದು ಜಿಲ್ಲೆಯಲ್ಲಿ ಒಂದೊಂದು ರೀತಿಯಲ್ಲಿ ಕೇಂದ್ರ ಸರ್ಕಾರದ ಯೋಜನೆಗಳ ಮಂಜೂರಾತಿ ಪಡೆಯಲಾಗಿದೆ. ಎಂಬ ಅಂಶದ ಅರಿವು ಇದೆ. ಕೆಲವು ಯೋಜನೆಗಳು ಸಾಮಾನ್ಯವಾಗಿ ಎಲ್ಲಾ ಜಿಲ್ಲೆಗಳಿಗೂ ಅನ್ವಯವಾಗಲಿವೆ.

  ಕೇಂದ್ರ ಸರ್ಕಾರದಿಂದ ಇಲಾಖೆಗಳು, ನಿಗಮ, ಕಾರ್ಪೋರೇಷನ್, ಮಂಡಳಿ, ಎನ್.ಜಿ.ಓ ಗಳು ಹೀಗೆ ಪ್ರತಿಯೊಂದು ಯೋಜನೆಯೂ ಎಲ್ಲಿ ನಡೆಯುತ್ತಿದೆ. ಯಾವ ಹಂತದಲ್ಲಿದೆ, ಶೇಕಡವಾರು ಎಷ್ಟು ಕೆಲಸ ಮುಗಿದಿದೆ, ಎಷ್ಟು ಹಣ ಪಾವತಿಯಾಗಿದೆ ಎಂಬ ಹತ್ತಾರು ಮಾಹಿತಿಗಳು ಒಂದೇ ಕಡೇ ಲಭ್ಯವಾಗಲಿದೆ.

  ಕೇಂದ್ರ ಸರ್ಕಾರ ಪ್ರಕಟಿಸರುವಂತೆ 2022 ರೊಳಗೆ ರೈತರ ಅದಾಯ ದ್ವಿಗುಣಗೊಳ್ಳಲು ಎಂಪಿಸಿಎಸ್ ಮಾದರಿಯಲ್ಲಿ ರೈತರ ಉತ್ಪನ್ನಗಳ ರಫ್ತು ಮಾಡಲು ಬ್ಯಾಕ್‌ವಾರ್ಡ್ ಮತ್ತು ಫಾರ್‌ವಾರ್ಡ್ ಲಿಂಕೇಜ್.

 ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿಯೂ ರೈತರು ಹೆಚ್ಚಿಗೆ ಬೆಳೆಯುವ ಬೆಳೆಗಳ ಆಧಾರದಲ್ಲಿ   ಉತ್ಪನ್ನವಾರು ಕ್ಲಸ್ಟರ್‌ಗಳ ಸ್ಥಾಪನೆ ಸೇರಿದಂತೆ. ಪ್ರತಿ ಜಿಲ್ಲೆಯಲ್ಲಿ ಕೈಗೊಳ್ಳಬೇಕಾಗಿರುವ ಹೊಸ ಯೋಜನೆಗಳ ಬಗ್ಗೆಯೂ ಗಮನ ಹರಿಸುವುದು ಅಗತ್ಯವಾಗಿದೆ. 

  ನೀತಿ ಆಯೋಗ ಪ್ರಕಟಿಸಿರುವ 75 ನೇ ವರ್ಷದ ಅಜೆಂಡಾಗಳ ಅನುಷ್ಠಾನಕ್ಕೆ ನಮ್ಮ ರಾಜ್ಯದಲ್ಲಿ ಕೈಗೊಳ್ಳಲು ಉದ್ದೇಶಿಸಿರುವ ಯೋಜನೆಗಳಿಗೆ ಅಗತ್ಯವಿರುವ ಜಮೀನು ಸಹಿತ ಸೂಕ್ತ ಪ್ರಸ್ತಾವನೆ ಕೇಂದ್ರ ಸರ್ಕಾರಕ್ಕೆ ಹೋಗಲೇ ಬೇಕಿದೆ. ರಾಜ್ಯ ಸರ್ಕಾರದ ಮುಂಗಡ ಪತ್ರದಲ್ಲಿ ಸೇರ್ಪಡೆ ಮಾಡುವುದು ಅಗತ್ಯವಾಗಿದೆ.

   ಪ್ರತಿಯೊಂದು ಇಲಾಖೆಯ ಅಲ್ಪ ಕಾಲದ ಯೋಜನೆಗಳು, ಮಧ್ಯಮ ಕಾಲದ ಯೋಜನೆಗಳು ಮತ್ತು ದೀರ್ಘಕಾಲದ ಯೋಜನೆಗಳು ಹೀಗೆ ವಿಂಗಡಿಸಿಕೊಳ್ಳುವುದು ಉತ್ತಮ. ಕೇಂದ್ರ ಮತ್ತು ರಾಜ್ಯ ಸರ್ಕಾರ ಯೋಜನೆಗಳಡಿಯಲ್ಲಿ ಪ್ರಗತಿಯಲ್ಲಿರುವ ಎಲ್ಲಾ ಯೋಜನೆಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವುದು ಪ್ರಮುಖ ಉದ್ದೇಶವಾಗಿದೆ.

   ಪ್ರತಿ ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರವಾರು, ಗ್ರಾಮ ಪಂಚಾಯಿತಿವಾರು ಮತ್ತು ಗ್ರಾಮವಾರು ಕೆಳಕಂಡ ವಿಭಾಗ ಮಾಡಿ ಯೋಜನೆ ಗುರುತಿಸಿ, ಸಮೋರಾಪಾದಿಯಲ್ಲಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳುವುದು. ನಿರ್ಧಿಷ್ಷ ಕಾಲಂಗಳಲ್ಲಿ ಪ್ರತಿಯೊಂದು ಮಾಹಿತಿಯೂ ಲಭ್ಯವಿರುವಂತೆ ಸಿದ್ಧಪಡಿಸುವುದು ಅಗತ್ಯವಾಗಿದೆ.

                ನನೆಗುದಿಗೆ ಬಿದ್ದಿರುವ ಯೋಜನೆಗಳು.

                ಪ್ರಗತಿಯಲ್ಲಿರುವ ಯೋಜನೆಗಳು.

                ಮಂಜೂರಾತಿ ಹಂತದಲ್ಲಿರುವ ಯೋಜನೆಗಳು.

                ಪುನರ್‌ನವೀಕರಣ ಯೋಜನೆಗಳು.

                ಹೊಸ ಪ್ರಸ್ತಾವನೆಗಳು.

   ದಿಶಾ ಸಮಿತಿ ಅಧ್ಯಕ್ಷರು ಹಾಗೂ ಲೋಕಸಭಾ ಸದಸ್ಯರ ಜೊತೆಗೆ, ರಾಜ್ಯದ ಎಲ್ಲಾ ಜಿಲ್ಲೆಗಳ ದಿಶಾ ಸಮಿತಿಯ ಸದಸ್ಯ ಕಾರ್ಯದರ್ಶಿಗಳಾದ ಸಿಇಓ ರವರು, ಜಿಲ್ಲಾಧಿಕಾರಿಗಳು ಮತ್ತು ದಿಶಾ ಸಮಿತಿಯ ಕೇಸ್ ವರ್ಕರ್‌ಗಳ ಪಾತ್ರ ಮಹತ್ತರವಾಗಿದೆ.

  ದಿಶಾ ಸಮಿತಿಯ ನಾಮನಿರ್ಧೇಶನ ಸದಸ್ಯರುಗಳು  ಚುರುಕಾದರೆ ಒಳ್ಳೆಯದು. ಶೀಘ್ರವಾಗಿ 30 ಜಿಲ್ಲೆಗಳ ಪ್ರವಾಸ ಕೈಗೊಳ್ಳಲು ನಮ್ಮ ಸಂಸ್ಥೆ ಯೋಜನೆ ರೂಪಿಸುತ್ತಿದೆ.

 ನಮ್ಮ ಸಂಸ್ಥೆ ಹೊರ ತಂದಿರುವ ನಿಮಗಿದು- ಗೊತ್ತೆ ಇ-ಪೇಪರ್ ನ ಪ್ರಮುಖ ಉದ್ದೇಶವೂ ಇದೇ ಆಗಿದೆ. ಅಧಿಕಾರಿಗಳು ಸೇರಿದಂತೆ ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಯಾರೊಬ್ಬರೂ ಬರೆದರು ಅವರ ಹೆಸರಿನಲ್ಲಿಯೇ ಪ್ರಕಟಿಸಲಾಗುವುದು.