21st November 2024
Share
ಯಡಿಯೂರಪ್ಪನವರು ಊರಿಗೊಂದು ಕೆರೆ- ಆ ಕೆರೆಗೆ ನದಿ ನೀರು ಪುಸ್ತಕವನ್ನು ದಿನಾಂಕ:02.02.2012  ರಂದು ತುಮಕೂರಿನ ಸಾಯಿಬಾಬಾ ಮಂದಿರದಲ್ಲಿ ಬಿಡುಗಡೆ ಮಾಡಿದ್ದರು.

  ಚಿಕ್ಕಮಂಗಳೂರು ಜಿಲ್ಲೆ ಅಜ್ಜಂಪುರ ತಾಲ್ಲೂಕು ಸೊಲ್ಲಾಪುರದಲ್ಲಿ ಶ್ರೀ ಗುರುಸಿದ್ಧರಾಮ ಶಿವಯೋಗಿಗಳ 847 ನೇ ಜಂಯತಿಯಲ್ಲಿ ನಾಡಿನ ಮಾನ್ಯ ಮುಖ್ಯಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಒಂದು ಘೋಷಣೆ ಮಾಡಿದ್ದಾರೆ.

  ಸಿದ್ಧರಾಮೇಶ್ವರರು ಕೆರೆ-ಕಟ್ಟೆಗಳನ್ನು ನಿರ್ಮಿಸಿದರು, ಸಿದ್ಧರಾಮನ ಆಶಯದಂತೆ ನಾನು ಕೆರೆ-ಕಟ್ಟೆಗಳಿಗೆ ನೀರು ತುಂಬಿಸುವ ಕೆಲಸ ಮಾಡಲು ಬದ್ಧನಾಗಿದ್ದೇನೆ ಎಂದಿರುವುದು ಮುತ್ತಿನಂತ ಮಾತು.

  ಜೊತೆಯಲ್ಲಿದ್ದ ಪ್ರವಾಸೋಧ್ಯಮ ಸಚಿವರಾದ ಶ್ರೀ ಸಿ.ಟಿ.ರವಿರವರು ಗೋಂದಿ ಯೋಜನೆ ಬಗ್ಗೆ ಮಾತನಾಡಿ ನಾನು ಪೂಜಾರಿ ಮಾನ್ಯ ಮುಖ್ಯ ಮಂತ್ರಿಗಳು ದೇವರು, ವರ ಕೊಡುವುದು ದೇವರ ಕೆಲಸ ಎನ್ನುವ ಮೂಲಕ ಅವರ ಖಾತೆಯಡಿಯಲ್ಲಿ ಮತ್ತೊಂದು ಜವಾಬ್ಧಾರಿ ಪಡೆಯುವ ಮಾತನಾಡಿರಬಹದು.

 ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ನರೆಂದ್ರಮೋದಿಯವರು  ಪ್ರತಿ ಗ್ರಾಮದಲ್ಲಿರುವ ಜಲಸಂಗ್ರಹಾಗಾರಗಳನ್ನು ಗುರುತಿಸಿ, ಸಂರಕ್ಷಣೆ ಮಾಡಿ, ಗಂಗಾಮಾತೆ ದೇವಾಲಯ ಎಂಬಂತೆ ಪೂಜಿಸಲು ದೇಶದ ಮಹಿಳೆಯರಿಗೆ ಕರೆ ನೀಡಿದ್ದಾರೆ.

ಪ್ರವಾಸೋಧ್ಯಮ ಸಚಿವರಾದ ಶ್ರೀ ಸಿ.ಟಿ.ರವಿರವರು ಜಲಸಂಗ್ರಹಾಗಾರಗಳನ್ನು ಜಲಶಕ್ತಿ ಪ್ರವಾಸೋಧ್ಯೋಮ ಕೇಂದ್ರಗಳಾಗಿ ಘೋಶಿಸಿ ಪಿಪಿಪಿ ಮಾದರಿಯಲ್ಲಿ ಅಭಿವೃದ್ಧಿ ಪಡಿಸಿ, ಮೊದಲು ಆಯಾಗ್ರಾಮದ ಜನರು ಅಲ್ಲಿಗೆ ಬರುವಂತೆ ಮಾಡುವ ಪೂಜಾರಿಯಾದರೇ ನಿಜಕ್ಕೂ ಅವರ ಮಾತು ಅರ್ಥಪೂರ್ಣ.

ಕೆರೆ-ಕಟ್ಟೆ ಸುತ್ತ ಮರಗಿಡ ಬೆಳೆಸಿ ಸುತ್ತಲೂ ವಾಕ್ ಮಾಡುವಂತಹ ವಾತಾವಾರಣ ನಿರ್ಮಾಣ ಮಾಡಿದರೆ, ಆ ಗ್ರಾಮದ ಜನತೆಗೆ ಅದು ಪ್ರವಾಸಿ ಕೇಂದ್ರವಾಗಲಿದೆ.

ಯಡಿಯೂರಪ್ಪನವರ ಮಾತಿಗೆ ಶ್ರೀ ಸಿದ್ಧರಾಮ ಜಯಂತಿ ಸಮಿತಿ ಅಥವಾ ನೊಳಂಬ ಸಮಾಜ ಇನ್ನೂ ಮುಂದೆ ಪ್ರತಿ ವರ್ಷ ಶ್ರೀ ಗುರುಸಿದ್ಧರಾಮ ಶಿವಯೋಗಿಗಳ ಜಂಯತಿಯಲ್ಲಿ ರಾಜ್ಯದ ಎಷ್ಟೆಷ್ಟು ಕೆರೆಗಳಿಗೆ ನೀರು ತುಂಬಿದೆ ಎಂಬ ಬಗ್ಗೆ ಕೆರೆ-ಕಟ್ಟೆಗಳ ಆಡಿಟ್ ಮಾಡಲು ಒಂದು ಘೋಷ್ಠಿ ನಡೆಸುವುದು ಉತ್ತಮ.

ಜಲಪೀಠ ಕ್ಯಾಂಪಸ್‌ನಲ್ಲಿ ಶಕ್ತಿಪೀಠ ಫೌಂಡೇಷನ್ ಕೆರೆ-ಕಟ್ಟೆಗಳ ಆಡಿಟ್ ಭವನ ನಿರ್ಮಾಣ ಮಾಡಿ, ಪ್ರತಿ ವರ್ಷ ಅಧ್ಯಯನ ಮಾಡಿ ಕೆರೆ-ಕಟ್ಟೆಗಳ ಆಡಿಟ್ ವರದಿ ನೀಡುವ ಕೆಲಸ ಮಾಡಲಿದೆ.