9th October 2024
Share

  ಕೇಂದ್ರ ಸರ್ಕಾರದ ಅನುದಾನ ಬಳಕೆ ಮತ್ತು ಯೋಜನೆಗಳ ಅನುಷ್ಠಾನಕ್ಕಾಗಿ ಕೊನೆಗೂ ರಾಜ್ಯ ಮಟ್ಟದ ದಿಶಾ ಸಮಿತಿಯನ್ನು ಮಾನ್ಯ ಮುಖ್ಯಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ರಚಿಸಿದ್ದಾರೆ. ಮಾನ್ಯ ಶ್ರೀ ಹೆಚ್.ಡಿ.ಕುಮಾರಸ್ವಾಮಿರವರ ಅವಧಿಯಲ್ಲಿ ದಿಶಾ ಸಮಿತಿಯನ್ನೆ ರಚಿಸಿರಲಿಲ್ಲ.

   ನಿಯಮದ ಪ್ರಕಾರ ಎಲ್ಲಾ ಪಕ್ಷದ ಶಾಸಕರು ಮತ್ತು ಸಂಸದರು ಈ ಸಮಿತಿಯಲ್ಲಿ ಇರಬೇಕು, ರಾಜಕೀಯ ಮರೆತು ಎಲ್ಲರೂ ಒಟ್ಟಾಗಿ ಕೇಂದ್ರ ಸರ್ಕಾರದಿಂದ ಹೆಚ್ಚಿಗೆ ಅನುದಾನ ಪಡೆಯಲು ಮುಂದಾಗುವುದು ಒಳ್ಳೆಯದು.

   ಬಿಎಸ್‌ವೈ ಜೊತೆಗೆ ಕಾಂಗ್ರೆಸ್‌ನಿಂದ ಮಾಜಿ ಮುಖ್ಯ ಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯನವರು, ಜೆಡಿಎಸ್ ನಿಂದ ಮಾಜಿ ಮುಖ್ಯ ಮಂತ್ರಿಗಳಾದ ಶ್ರೀ ಹೆಚ್.ಡಿ.ಕುಮಾರಸ್ವಾಮಿರವರು ಇದ್ದಲ್ಲಿ ಒಳ್ಳೆಯ ಬೆಳವಣಿಗೆ.

  ಸಂಸದರ ಪೈಕಿ ಪಕ್ಷೇತರ ಸಂಸದರಾಗಿ ಶ್ರೀಮತಿ ಸುಮಲತ ರವರು, ಜೆಡಿಎಸ್‌ನಿಂದ ಪ್ರಜ್ವಲ್ ರೇವಣ್ಣನವರು,  ಕಾಂಗ್ರೆಸ್‌ನಿಂದ ಶ್ರೀ ಡಿ.ಕೆ.ಸುರೇಶ್‌ರವರು ಸದಸ್ಯಾರಾಗಲೇ ಬೇಕು, ಇದು ಸಹ ನಿಯಮವಾಗಿದೆ.

  ಹಾದಿ ಬೀದಿಯಲ್ಲಿ ನಿಂತು ಮಲತಾಯಿ ಧೋರಣೆ ಎಂಬ ಹೋರಾಟಕ್ಕಿಂತ ಅಭಿವೃದ್ಧಿ ವಿಚಾರದಲ್ಲಿ ಎಲ್ಲ ಪಕ್ಷಗಳು ಹೊಸ ಸಂಪ್ರದಾಯ ಮೆರೆಯುವುರೇ ಕಾದು ನೋಡಬೇಕು.

   ದೇಶದಲ್ಲಿಯೇ ಮೊಟ್ಟಮೊದಲ ಭಾರಿಗೆ ರಾಜ್ಯ ಮಟ್ಟದ ದಿಶಾ ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿ, ಅಪರ ಮುಖ್ಯ ಕಾರ್ಯದರ್ಶಿಗಳು ಯೋಜನಾ ಇಲಾಖೆ ಇವರನ್ನು ನೇಮಕ ಮಾಡುವ ಮೂಲಕ ಹೊಸ ಸಂಪ್ರಾದಾಯ ಹುಟ್ಟು ಹಾಕಿದ್ದಾರೆ.

   ಇದರಿಂದ ಕೇಂದ್ರ ಮತ್ತು ರಾಜ್ಯ ಮಟ್ಟದ ಎಲ್ಲಾ ಇಲಾಖೆಗಳ ಅನುದಾನವನ್ನು ಒಂದೇ ಕಡೆ ಡಿಜಿಟಲ್ ಡೇಟಾ ಸಂಗ್ರಹಕ್ಕೆ ಅನೂಕೂಲವಾಗಲಿದೆ.