12th October 2024
Share

  ತುಮಕೂರು ನಗರದಲ್ಲಿ ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು ಬಂದಾಗ 2022 ರೊಳಗೆ ರೈತರ ಅದಾಯ ದುಪ್ಪಟ್ಟು ಮಾಡುವ ಬಗ್ಗೆ ಏನೇನು ಮಾಡಬೇಕು ಎಂಬ ಬಗ್ಗೆ ಭಾಷಣ ಮಾಡಿದ್ದಾರೆ.

  ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನರು ಸಹ ಬೆಂಬಲಿಸಿ ರೈತರಿಗೆ ನೀರು ಕೊಡುವ ಭರವಸೆ ನೀಡಿದ್ದಾರೆ.

  ಈ ಕೆಲಸ ಕಾರ್ಯರೂಪಕ್ಕೆ ಬರಬೇಕಾದರೆ ಈಗಾಗಲೇ ಯೋಜನೆ ರೂಪಿಸಿರಬೇಕು, ಈ ಕೆಳಕಂಡ ವಿಚಾರಗಳಲ್ಲಿ ಏನು ಕ್ರಮ ಕೈಗೊಳ್ಳಲಾಗಿದೆ ಎಂಬ ಬಗ್ಗೆ ಅಂಕಿ ಅಂಶಗಳ ಸಮೇತ ಮಾಹಿತಿ ಪಡೆಯಲು ಇಂದು ತುಮಕೂರಿನ ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಕಚೇರಿಯಲ್ಲಿ ಸೇರಿದ್ದ ವಿವಿಧ ಸಮಾಜದ ಸಮಾನ ಮನಸ್ಕರ ಸಭೆ ಆಗ್ರಹ ಪಡಿಸಿದೆ. ಈ ಐದು ವಿಷಯಗಳು ಆರಂಭದಲ್ಲಿ ರೈತರಿಗೆ ಅದಾಯ ದುಪ್ಪಟ್ಟು ಮಾಡಲು ಮತ್ತು ಮನಸ್ಸಿಗೆ ನೆಮ್ಮದಿ ತರುವ ವಿಷಯಗಳಾಗಿವೆ

1.             ರೈತರ ಜಮೀನಿಗೆ, ರೈತ ಉಧ್ಯಮಿಗಳಿಗೆ ಮತ್ತು ಮನೆಗೆ ನೀರು

2.            ರೈತರಿಗೆ ವಾಸಕ್ಕೆ ಮನೆ

3.            ರೈತರ ಬೆಳೆಗಳಿಗೆ ಮೌಲ್ಯವರ್ಧಿತ ಬೆಲೆ, ರೈತರ ಮಕ್ಕಳಿಗೆ ಉದ್ಯೋಗ ಮತ್ತು ತರಬೇತಿ.

4.            ರೈತರ ಕುಟುಂಬದ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ಮತ್ತು ವಿಧ್ಯಾಬ್ಯಾಸ

5.            ರೈತರ ಆರೋಗ್ಯ ಮತ್ತು ಮೃತಪಟ್ಟಾಗ ಅಂತ್ಯ ಸಂಸ್ಕಾರ ಮಾಡಲು ಗ್ರಾಮವಾರು ಸ್ಮಶಾನ

  ಕರ್ನಾಟಕ ರಾಜ್ಯದಲ್ಲಿ  ಯಾವ ರೀತಿ ಯೋಜನೆ ರೂಪಿಸಲಾಗಿದೆ ಎಂಬ ಬಗ್ಗೆ ಅಂಕಿ ಅಂಶಗಳ ಸಹಿತ ದಿಶಾ ಸಮಿತಿಯ ರಾಜ್ಯಾಧ್ಯಕ್ಷರು ಹಾಗೂ ಮಾನ್ಯ ಮುಖ್ಯ ಮಂತ್ರಿಗಳು, ವಿರೋಧ ಪಕ್ಷದ ನಾಯಕರುಗಳು ಮತ್ತು ಇತರೆ ಪಕ್ಷಗಳ ಶಾಸಕಾಂಗ ಪಕ್ಷದ ನಾಯಕರು, ಮುಖ್ಯ ಕಾರ್ಯದರ್ಶಿಗಳು ಮತ್ತು ರಾಜ್ಯ ಮಟ್ಟದ ದಿಶಾ ಸಮಿತಿಯ ಸದಸ್ಯ ಕಾರ್ಯದರ್ಶಿ ರಾಜ್ಯದ ಜನತೆಗೆ ಸ್ಪಷ್ಟ ಪಡಿಸಬೇಕು. ಪ್ರತಿ ಮೂರು ತಿಂಗಳಿಗೊಮ್ಮೆ ಶೇಕಡವಾರು ಪ್ರಗತಿ ಬಗ್ಗೆ ಮಾಹಿತಿ ಪಡೆಯಲು ನಿರ್ಣಯಿಸಲಾಯಿತು.

  ತುಮಕೂರು ಜಿಲ್ಲೆಯೂ ಸೇರಿದಂತೆ ರಾಜ್ಯದ 30 ಜಿಲ್ಲೆಗಳಲ್ಲೂ ದಿಶಾ ಸಮಿತಿಯ ಅಧ್ಯಕ್ಷರು ಹಾಗೂ ಲೋಕಸಭಾ ಸದಸ್ಯರು, ಜಿಲ್ಲಾ ಉಸ್ತವಾರಿ ಸಚಿವರು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು, ಜಿಲ್ಲಾಧಿಕಾರಿಗಳು ಮತ್ತು ದಿಶಾ ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ಜಿಲ್ಲಾ ಪಂಚಾಯತ್ ಸಿಇಓ ಉತ್ತರಿಸಬೇಕು.

 ರೈತರ ಆದಾಯ ದುಪ್ಪಟ್ಟು ಬಾಷಣದಲ್ಲಿ ಸಾಧ್ಯವಿಲ್ಲ, ಪೂರ್ವ ತಯಾರಿಬೇಕು ಎಲ್ಲಾ ರಾಜ್ಯಗಳು ಯೋಜನೆ ರೂಪಿಸಬೇಕು. ಈ ಬಗ್ಗೆ ನಿರಂತರವಾಗಿ ಸರ್ಕಾರಗಳು ಮತ್ತು ವಿರೋಧ ಪಕ್ಷಗಳ ನಾಯಕರ ಗಮನ ಸೆಳೆಯಲು ಎಲ್ಲಾ ಸಮಾಜದ ಸಮಾನ ಮನಸ್ಕರ ಪ್ರತಿನಿಧಿಗಳು ಶ್ರಮಿಸಲು ನಿರ್ಣಯ ಕೈಗೊಳ್ಳಲಾಯಿತು.

ಜಿಲ್ಲೆಯಲ್ಲಿ ವಾಸವಿರುವ ಎಲ್ಲಾ ಸಮಾಜದ ಪ್ರತಿನಿಧಿಗಳು ಸೇರಿ ಸಮಿತಿಯ ರೂಪುರೇಷೆ ತಯಾರಿಸಲು ನಿರ್ಣಯ ಕೈಗೊಳ್ಳಲಾಯಿತು.

ಕೇಂದ್ರ ಸರ್ಕಾರದ ಎಐಸಿಟಿ ಮಾರ್ಗದರ್ಶಿ ಅನ್ವಯ ರಾಜ್ಯದಲ್ಲಿರುವ ಎಲ್ಲಾ ಇಂಜಿನಿಯರ್ ಕಾಲೇಜು ವಿಧ್ಯಾರ್ಥಿಗಳು ಈ ಮೇಲ್ಕಂಡ ಯೋಜನೆಗಳ ಇಲಾಖಾವಾರು ಡೇಟಾ ಪರಿಶೀಲಿಸಲು   ಕಾಲೇಜುಗಳ ಮುಖ್ಯಸ್ತರಿಗೆ ಮನವಿ ಮಾಡಲು ನಿರ್ಣಯ ಕೈಗೊಳ್ಳಲಾಯಿತು.

ಸಭೆಯಲ್ಲಿ ಸವಿತಾ ಸಮಾಜದ ಶ್ರೀ ವೀರಭಧ್ರಯ್ಯ, ಮರಾಠಿ ಸಮಾಜದ ಶ್ರೀ ಜನಾರ್ಧನ್ ಈಡಿಗ ಸಮಾಜದ ಶ್ರೀ ಹರಿಕುಮಾರ್, ಶ್ರೀ ನಾಗರಾಜು ಉಪ್ಪಾರ ಸಮಾಜದ ಶ್ರೀ ವಿಶ್ವನಾಥ್, ಕುಂಬಾರ ಸಮಾಜದ ಶ್ರೀ ಗುರುಮೂರ್ತಿ, ದೇವಾಂಗ ಸಮಾಜದ ಶ್ರೀ ರೇವಣ್ಣಪ್ಪ, ಮುಸ್ಲಿಂ ಸಮಾಜದ ಶ್ರೀ ಇಮ್ರಾನ್ ಪಾಷಾ ಮತ್ತು ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಅಧ್ಯಕ್ಷ ಕುಂದರನಹಳ್ಳಿ ರಮೇಶ್ ಭಾಗವಹಿಸಿದ್ದರು.