20th December 2024
Share

ಕೇಂದ್ರ ಸರ್ಕಾರದ ನಿಯಮ ಪ್ರಕಾರ ಕರ್ನಾಟಕ ರಾಜ್ಯ ಮಟ್ಟದ ದಿಶಾ ಸಮಿತಿಯನ್ನು ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದೆ.

ಸದಸ್ಯ ಕಾರ್ಯದರ್ಶಿಯಾಗಿ ಯೋಜನಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಾದ ಶ್ರೀಮತಿ ಶಾಲಿನಿರಜನೀಶ್ ನೇಮಕವಾಗಿದ್ದಾರೆ.

ಪ್ರಸ್ತುತ ಕರ್ನಾಟಕ ರಾಜ್ಯ ಸರ್ಕಾರವು 30 ಜಿಲ್ಲೆಗಳ ದಿಶಾ ಸಮಿತಿಗಳಿಗೆ ಒಬ್ಬೊಬ್ಬ ಸರ್ಕಾರಿ ಅಧಿಕಾರಿಗಳನ್ನು ನೇಮಕ ಮಾಡಬೇಕು.

  ರಾಜ್ಯ ಸರ್ಕಾರ ಪ್ರತಿ ಜಿಲ್ಲೆಗೆ ಒಬ್ಬ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯಾಗಿ ಹಿರಿಯ ಅಧಿಕಾರಿಗಳನ್ನು ನೇಮಕ ಮಾಡುವ ಸಂಪ್ರದಾಯವಿದೆ. ಈಗಾಗಲೇ ನೇಮಕವನ್ನು ಮಾಡಿದ್ದಾರೆ. ಅವರನ್ನೇ ಮಾಡುತ್ತಾರೋ ಅಥವಾ ಬೇರೆಯವನ್ನು ಮಾಡುತ್ತಾರೋ ನೋಡಬೇಕು.

ಜಿಲ್ಲಾ ಮಟ್ಟದ ದಿಶಾ ಸಮಿತಿಗಳಿಗೆ ಯಾವ ಗ್ರೇಡ್ ಅಧಿಕಾರಿಗಳನ್ನು ನೇಮಕ ಮಾಡಲಿದ್ದಾರೆ. ಸರ್ಕಾರವೇ ನೇರವಾಗಿ ನೇಮಕ ಮಾಡುತ್ತದೆಯೋ ಅಥವಾ ಆಯಾ ಜಿಲ್ಲೆಯ ದಿಶಾ ಸಮಿತಿಯ ಅಧ್ಯಕ್ಷರುಗಳಾದ ಲೋಕಸಭಾ ಸದಸ್ಯರ ಸಲಹೆ ಪಡೆದು ನೇಮಕ ಮಾಡುವುದೋ ಕಾದು ನೋಡಬೇಕು.

 ನಾಮಕವಾಸ್ಥೆಗೆ ಅಧಿಕಾರಿಗಳನ್ನು ನೇಮಕ ಮಾಡದೇ  ಜವಾಬ್ಧಾರಿಯುತ ಅಧಿಕಾರಿಗಳನ್ನು ನೇಮಕ ಮಾಡುವುದು ಅಗತ್ಯವಾಗಿದೆ. ಅವರು ರಾಜ್ಯ ಮತ್ತು ಜಿಲ್ಲಾ ಮಟ್ಟದ ದಿಶಾ ಸಮಿತಿಗಳಿಗೆ ಕೊಂಡಿಯಾಗಿ ಕಾರ್ಯನಿರ್ವಹಿಸ ಬೇಕಿದೆ. ಅವರೆಲ್ಲಾ ಡಿಜಿಟಲ್ ಇಂಡಿಯಾ ವ್ಯವಸ್ಥೆಗೆ ಹೊಂದಿಕೊಳ್ಳಬೇಕಿದೆ.

ಶ್ರೀಮತಿ ಶಾಲಿನಿರಜನೀಶ್‌ರವರ ಪ್ರಥಮ ಹೆಜ್ಜೆ ಇದಾಗಲಿದೆ. ಪ್ರಥಮ ಸಭೆಯಲ್ಲಿಯೇ ಈ ವಿಚಾರ ಮಂಡನೆಯಾಗುವುದು ಅಗತ್ಯವಾಗಿದೆ.

ಶಕ್ತಿಪೀಠ ಪೌಂಡೇಷನ್ ರಾಜ್ಯ ಮಟ್ಟದ ಮತ್ತು 30 ಜಿಲ್ಲಾ ಮಟ್ಟದ ದಿಶಾ ಸಮಿತಿಗಳ ಪಬ್ಲಿಕ್ ಟಾಸ್ಕ್ ಫೋರ್ಸ್ ರೀತಿ ಕಾರ್ಯ ನಿರ್ವಹಿಸಲಿದೆ.

ಸಂಬಂಧ ಪಟ್ಟ ಅಧಿಕಾರಿಗಳ ಜೊತೆ ನಿಕಟ ಸಂಪರ್ಕ ಹೊಂದಿ ಕೇಂದ್ರ ಸರ್ಕಾರದಿಂದ ಅತಿ ಹೆಚ್ಚು ಅನುದಾನ ಪಡೆಯಲು ಶ್ರಮಿಸಲಿದೆ.