30th October 2024
Share

ತುಮಕೂರು ಸಂಸದ ಶ್ರೀ ಜಿ.ಎಸ್.ಬಸವರಾಜ್ ಐಡಿಯಾ ನೋಡಿ

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿರವರ ಕನಸು ನದಿ ಜೋಡಣೆಯಾಗಿತ್ತು, ಮಾನ್ಯ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಕನಸು ಪ್ರತಿ ಗ್ರಾಮಗಳ  WATER AUDIT, WATER BUDJET, WATER STRTAGY  ಆಗಿದೆ, ಅದೇ ಉದ್ದೇಶದಿಂದ  PMKSY  ಯೋಜನೆ ಜಾರಿಗೊಳಿಸಿದೆ. ಪ್ರಸ್ತುತ ATAL BHUJAL ಯೋಜನೆ ಜಾರಿಗೊಳಿಸಿದೆ. ಜಲಶಕ್ತಿ ಜನಾಂದೋಲನವನ್ನು ರೂಪಿಸಿದೆ.

  ತಾವು ಸಹ ನನ್ನ ಮನವಿ ಮೇರೆಗೆ ಈ ಭಾರಿ ಮುಖ್ಯಮಂತ್ರಿಗಳಾದ ತಕ್ಷಣವೇ ಮಾನ್ಯ ಪ್ರಧಾನಿಯವರಿಗೆ ಎರಡು ಪತ್ರ ಬರೆದು ಒಂದರಲ್ಲಿ ರಾಜ್ಯದ ಎಲ್ಲಾ ಕೆರೆ ಕಟ್ಟೆಗಳಿಗೆ ನದಿ ನೀರಿನಿಂದ ತುಂಬಿಸಲು ಮತ್ತು ಇನ್ನೊಂದು ಪತ್ರದಲ್ಲಿ ನದಿ ಜೋಡಣೆ ಮಾಡಿ ನೀರು ಒದಗಿಸಲು ಮನವಿ ಮಾಡಿರುವುದು ಶ್ಲಾಘನೀಯ.

  ಹಿಂದಿನ ರಾಜ್ಯ ಸರ್ಕಾರ 2019 ನ್ನು ಜಲವರ್ಷ ಎಂದು ಘೋಶಿಸಿದೆ, ಜಲಧಾರೆ. ಜಲಾಮೃತ ಹೀಗೆ ಹಲವಾರು ಯೋಜನೆಗಳನ್ನೂ ಪ್ರಕಟಿಸಿದೆ. ಇವುಗಳ ಯಶಸ್ವಿ ಅನುಷ್ಠಾನಕ್ಕಾಗಿ ದಿಟ್ಟ ನಿರ್ಧಾರ ಕೈಗೊಳ್ಳುವುದು ಸೂಕ್ತವಾಗಿದೆ.

 ತಾವು 30  ಜಿಲ್ಲೆಗಳ ದಿಶಾ ಸಮಿತಿಗೆ ರಾಜ್ಯ ಸರ್ಕಾರದಿಂದ ಪ್ರತಿನಿಧಿಗಳನ್ನು ನೇಮಕ ಮಾಡಬೇಕಿದೆ. ಈ ಭಾರಿ 30 ಜಿಲ್ಲೆಗಳಿಗೂ ನೀರಾವರಿ ಇಲಾಖೆಯ 30 ಮುಖ್ಯ ಇಂಜಿನಿಯರ್‌ಗಳನ್ನು ಸರ್ಕಾರದ ಪ್ರತಿನಿಧಿಯಾಗಿ ನೇಮಕ ಮಾಡುವುದು ಸೂಕ್ತವಾಗಿದೆ.

ನಂತರ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಬ್ಬ ಎಸ್.ಇ ಅಥವಾ ಇ.ಇ. ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಹಾಗೂ ನಗರ ಸ್ಥಳೀಯ ವ್ಯಾಪ್ತಿಗೆ ಒಬ್ಬೊಬ್ಬ ಎ.ಇ.ಇ ಹಾಗೂ ಪ್ರತಿ ಗ್ರಾಮಕ್ಕೆ ಒಬ್ಬ ಎಇ ಅಥವಾ ಜೆಇ ಅಥವಾ ಒಬ್ಬ ಅಧಿಕಾರಿಗಳನ್ನು ನೋಡೆಲ್ ಅಧಿಕಾರಿಗಳನ್ನು ನೇಮಕ ಮಾಡಿ ಪ್ರತಿ ಗ್ರಾಮವಾರು ಜಲಕ್ಯಾಲೆಂಡರ್ ಮಾಡಿಸುವ ಮೂಲಕ ದೇಶಕ್ಕೆ ಮಾದರಿ ಕೆಲಸ ಮಾಡುವುದು ಅಗತ್ಯವಾಗಿದೆ.

 ಈಗಾಗಲೇ ತಾವು ನೀಡಿದ ಆದೇಶದ ಅನ್ವಯ ತುಮಕೂರು ಜಿಲ್ಲಾ ದಿಶಾ ಸಮಿತಿಯಲ್ಲಿ ನಿರ್ಣಯ ಮಾಡಿ ಜಲಗ್ರಾಮ ಕ್ಯಾಲೆಂಡರ್ ಮಾದರಿ ರಚಿಸಿ, ಕೇಂದ್ರ ಸರ್ಕಾರದ ಜಲಶಕ್ತಿ ಸಚಿವರಾದ ಶ್ರೀ ಗಜೇಂದ್ರಸಿಂಗ್ ಶೇಖಾವತ್, CWC ಚೇರ್‍ಮನ್ ಮತ್ತು NWDA ಡೈರೆಕ್ಟರ್ ಜನರಲ್ ರವರೊಂದಿಗೂ ಜಲಗ್ರಾಮ ಕ್ಯಾಲೆಂಡರ್ ಅಗತ್ಯದ ಬಗ್ಗೆ ಸಮಾಲೋಚನೆ ನಡೆಸಲಾಗಿದೆ.

 ಅವರೆಲ್ಲರೂ ಸ್ಪಂಧಿಸಿದ್ದಾರೆ ಎಂಬ ಅಂಶವನ್ನು ತಮ್ಮ ಆಧ್ಯಗಮನಕ್ಕೆ ತರಬಯಸುತ್ತೇನೆ. ಜೊತೆಗೆ AICTE ಮಾರ್ಗದರ್ಶಿ ಅನ್ವಯ ದೇಶದ ಎಲ್ಲಾ ಇಂಜಿನಿಯರ್ ವಿಧ್ಯಾರ್ಥಿಗಳು ACTIVITY POINT ಗಾಗಿ ಗ್ರಾಮೀಣ ಭಾಗದಲ್ಲಿ ಸೇವೆ ಮಾಡಬೇಕಿದೆ. ಮಾಡದೇ ಇದ್ದಲ್ಲಿ ಪದವಿ ಸರ್ಟಿಫಿಕೇಟ್ ನೀಡುವುದಿಲ್ಲಾ ಎಂಬ ನಿಯಮವಿದೆ.

  ಇದೇ ಮಾದರಿಯಲ್ಲಿ ರಾಜ್ಯದ ಪಿಯುಸಿ ನಂತರದ ಎಲ್ಲಾ ಕಾಲೇಜುಗಳ ವಿಧ್ಯಾರ್ಥಿಗಳು ACTIVITY POINT ಮಾಡಲು ಆದೇಶ ಮಾಡಿ, ಆಯಾ ಗ್ರಾಮದ ವಿಧ್ಯಾರ್ಥಿಗಳು ಅವರ ಗ್ರಾಮದ ಜಲಗ್ರಾಮ ಕ್ಯಾಲೆಂಡರ್ ಮಾಡಲು ಸಹಕರಿಸಲು ಸೂಕ್ತ ಆದೇಶ ನೀಡಲು ಅಗತ್ಯ ಕ್ರಮಕೈಗೊಳ್ಳಲು ಮನವಿ ಮಾಡಿದ್ದಾರೆ.

ಊರಿಗೊಂದು ಕೆರೆ- ಆ ಕೆರೆಗೆ ನದಿ ನೀರು ಘೋಷಣೆಯೊಂದಿಗೆ  ಯಾವ ನದಿ ನೀರನ್ನು, ಯಾವ ಗ್ರಾಮಕ್ಕೆ, ಎಷ್ಟು ಕೊಡಬೇಕು, ಹೇಗೆ ಕೋಡಬೇಕು ಎಂಬ ಬಗ್ಗೆ  DPR ತಯಾರಿಸಲು ಹಾಗೂ ರಾಜ್ಯದ ನದಿ ಜೋಡಣೆಯನ್ನು NPP ಮಾದರಿಯಲ್ಲಿ ಮಾಡಲು ಮಾನ್ಯ ಪ್ರಧಾನಿಗೆ ತಾವು ಬರೆಯುವ ಪತ್ರವನ್ನು ಈಗಾಗಲೇ ಜಲಸಂಪನ್ಮೂಲ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳು ಸಿದ್ಧಪಡಿಸಿದ್ದಾರೆ.

ಈ ಬಗ್ಗೆ ತಾವು ಒಂದು ಸಭೆ ಕರೆದು ಸಮಾಲೋಚನೆ ಮಾಡಲು ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರಿಗೆ ಮನವಿ ಮಾಡಿದ್ದಾರೆ.