12th October 2024
Share

  ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ಮಂಡಿಸುವ ಮುಂಗಡ ಪತ್ರಗಳು ಬಹುತೇಕ ಮೊದಲು ಬಂದವರಿಗೆ ಮೊದಲ ಆಧ್ಯತೆ ಎನ್ನುವ ಹಾಗೆ ಇರಲಿವೆ. ಈಗಾಗಲೇ ಅವರು STRATEGY FOR NEW INDIA @ 75 | NITI AAYOG ರವರೆಗಿನ ಮುಂಗಡ ಪತ್ರವನ್ನು ಮಂಡಿಸಿದ್ದಾರೆ.   ಅವರು ಜಾರಿಗೆ ತಂದಿರುವ ಹೊಸ ಯೋಜನೆಗಳಿಗೆ 2022 ರ ನಿರ್ಧಿಷ್ಠ ಗುರಿ ನಿಗದಿ ಪಡಿಸಿದ್ದಾರೆ.

ಎಲ್ಲಾ ರಾಜ್ಯಗಳಿಗೂ ಪತ್ರ ಬರೆದು ರಾಜ್ಯ ಸರ್ಕಾರ ಕೈಗೊಳ್ಳುವ ಯೋಜನೆಗಳ ಮೊತ್ತದ ಮಾಹಿತಿ ಅಫ್ ಲೋಡ್ ಮಾಡಲು ಸೂಚಿಸಿದ್ದಾರೆ. ಪ್ರಧಾನಿಯವರು ಇಂತಹ ನಗರಕ್ಕೆ ಇಂತಹ ಯೋಜನೆ ಎಂದು ಮುಂಗಡ ಪತ್ರದಲ್ಲಿ ಮಂಡಿಸುವುದು ಬಹುತೇಕ ಕಡಿಮೆ.

  ರಾಜ್ಯದ ಎಲ್ಲಾ ಜಿಲ್ಲೆಯ ದಿಶಾ ಸಮಿತಿಗಳು ಕೇಂದ್ರ ಸರ್ಕಾರ ಮುಂಗಡ ಪತ್ರವನ್ನು ಮಂಡಿಸಿದ ನಂತರ ನಮ್ಮ ಜಿಲ್ಲೆಗೆ ಯಾವ ಇಲಾಖೆಯಡಿ, ಯಾವ ಯೋಜನೆಯ ಪ್ರಸ್ತಾವನೆ ಸಲ್ಲಿಸಬೇಕು ಎಂಬ ಬಗ್ಗೆ ಕುಲೂಂಕಷವಾಗಿ ಸಮಾಲೋಚನೆ ನಡೆಸಬೇಕು. ಕೇಂದ್ರದ ಪ್ರತಿಯೊಂದು ಇಲಾಖೆಗೂ ಪ್ರಸ್ತಾವನೆ ಸಲ್ಲಿಸುವುದು ಅಗತ್ಯವಾಗಿದೆ.

  ಕನಿಷ್ಟ ಪಕ್ಷ ಒಂದು ವಿಧಾನಸಭಾ ಕ್ಷೇತ್ರಕ್ಕೆ ಒಂದು ವಿಶೇಷ ಯೋಜನೆಯಂತೆ 225 ಜನ ವಿಧಾನಸಭಾ ಸದಸ್ಯರು, 75 ಜನ ವಿಧಾನಪರಿಷತ್ ಸದಸ್ಯರು, 28 ಜನ ಲೋಕಸಭಾ ಸದಸ್ಯರು ಮತ್ತು 12 ಜನ ರಾಜ್ಯಸಭಾ ಸದಸ್ಯರು ಸೇರಿದಂತೆ 340 ಜನ ಚುನಾಯಿತ ಜನ ಪ್ರತಿನಿಧಿಗಳು ಸಹ ಒಂದೊಂದು ಯೋಜನೆಗೆ ಅಗತ್ಯವಿರುವ ಜಮೀನು ಸಹಿತ ಮಾನ್ಯ ಮುಖ್ಯ ಮಂತ್ರಿಗಳು ಹಾಗೂ ಕರ್ನಾಟಕ ರಾಜ್ಯದ ದಿಶಾ ಸಮಿತಿಯ ಅಧ್ಯಕ್ಷರು ಆದ ಶ್ರೀ ಬಿ.ಎಸ್.ಯಡಿಯೂರಪ್ಪನವರಿಗೆ ಪ್ರಸ್ತಾವನೆ ಸಲ್ಲಿಸ ಬೇಕು. ಅವರು ಮಂಡಿಸುವ 2020-21 ರ ಮುಂಗಡ ಪತ್ರದಲ್ಲಿ ಇಂತಹ ಯೋಜನೆಗಳಿಗೆ ರಾಜ್ಯದ ಪಾಲು ಕನಿಷ್ಠ ಪಕ್ಷ ಒಂದು ಕೋಟಿಯಂತೆ ರೂ 500 ಕೋಟಿ ಮೀಸಲಿಡಬೇಕು.

  ಕರ್ನಾಟಕ ರಾಜ್ಯದ ದಿಶಾ ಸಮಿತಿಯ ಸದಸ್ಯ ಕಾರ್ಯದರ್ಶಿಯವರಾದ ಶ್ರೀಮತಿ ಶಾಲಿನಿರಜನೀಶ್ ರವರು ಮಾನ್ಯ ಮುಖ್ಯ ಮಂತ್ರಿಗಳಿಂದ ಎಲ್ಲಾ ಜಿಲ್ಲೆಯ ದಿಶಾ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆಸಿ ಮಾಹಿತಿ ತರಿಸಿಕೊಳ್ಳುವುದು ಸೂಕ್ತವಾಗಿದೆ.

  ಜಿಲ್ಲೆಯ ದಿಶಾ ಸಮಿತಿಗಳಿಗೆ ರಾಜ್ಯ ಮಟ್ಟದ ನಾಮ ನಿರ್ಧೇಶನ ಸದಸ್ಯರುಗಳು ಖುದ್ದಾಗಿ ಭೇಟಿ ನೀಡಿ ಮಾಹಿತಿ ಸಂಗ್ರಹಿಸುವಂತೆ ದಿಶಾ ಸಮಿತಿಯ ಸದಸ್ಯ ಕಾರ್ಯದರ್ಶಿಯವರು ಕ್ರಮವಹಿಸುವುದು ಅಗತ್ಯವಾಗಿದೆ.

 ಸೂಕ್ತ ಪ್ರಸ್ತಾವನೆ ಸಲ್ಲಿಸಿದರೂ ಯೋಜನೆಗೆ ಕೇಂದ್ರ ಮಂಜೂರಾತಿ ಮಾಡದೇ ಇದ್ದಲ್ಲಿ ವಿರೋಧ ಪಕ್ಷಗಳು ಬೀದಿಗಿಳಿಯ ಬೇಕು. ಏಕೆಂದರೆ ಯೋಜನೆಗಳಿಗೆ 2022 ರ ಗಡುವು ನೀಡಿರುವುದು ಕೇಂದ್ರ ಸರ್ಕಾರ. ಪಕ್ಷಾತೀತವಾಗಿ ರಾಜ್ಯದ 40 ಸಂಸದರು ಒಟ್ಟಾಗಿ ಪ್ರಧಾನಿ ಮತ್ತು ಆಯಾ ಸಚಿವರ ಬಳಿ ನಿಯೋಗ ಹೋಗಬೇಕು. ಇದು ಅಭಿವೃದ್ಧಿ ಲಾಭಿ. ದೆಹಲಿ ಪ್ರತಿನಿಧಿಗಳು ಸದಾ ಸಕ್ರಿಯವಾಗಿರ ಬೇಕು.