22nd December 2024
Share

 ಗಂಗಸಂದ್ರ ಗ್ರಾಮದಲ್ಲಿ ಅಂತರ ರಾಷ್ಟ್ರೀಯ ಮಟ್ಟದ ಹೈಟೆಕ್ ನೀರಾವರಿ ಗ್ರಂಥಾಲಯ ಸ್ಥಾಪಿಸುವ ಮೂಲಕ ಕರ್ನಾಟಕದ ಸಮಗ್ರ ನೀರಾವರಿ ಅಭಿವೃದ್ಧಿ ಯೋಜನೆಗಳ ಮಾಹಿತಿಯೊಂದಿಗೆ ವಾಟರ್ ಮ್ಯೂಸಿಯಂ ಸ್ಥಾಪಿಸಲಾಗುವುದು ಎಂದು ಲೋಕಸಭಾ ಸದಸ್ಯ ಶ್ರೀ  ಜಿ.ಎಸ್.ಬಸವರಾಜ್ ಘೋಶಿಸಿದರು.

  ರೈತರ ಋಣ ತೀರಿಸುವ ಕೆಲಸ ಸರ್ಕಾರಗಳ ಹೊಣೆಗಾರಿಕೆ, ಪ್ರಧಾನಿ ಮೋದಿಜಿ ಮತ್ತು ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನರು ಬಗ್ಗೆ ವಿಶೇಷ ಗಮನ ಹರಿಸಿದ್ದಾರೆ. 2022 ರೊಳಗೆ ರೈತರ ಅದಾಯ ದುಪ್ಪಟ್ಟು ಮಾಡ ಬೇಕಾದರೆ ರೈತನ ಜಮೀನಿಗೆ ನೀರು, ರೈತರ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ, ಉತ್ತಮ ಮಾರುಕಟ್ಟೆ ದೊರಕಿಸುವುದು ಮೊದಲ ಆಧ್ಯತೆಯಾಗಬೇಕು. ಸಂಬಂಧ ಸರ್ಕಾರಗಳು ಮುಂಗಡ ಪತ್ರದಲ್ಲಿ ಪ್ರಕಟಿಸಿವ ಹಲವಾರು ಯೋಜನೆಗಳನ್ನು ಬಳಸಿಕೊಂಡು ರಾಜ್ಯದ ರೈತರ ಉದ್ಧಾರಕ್ಕಾಗಿ ಪರಮಶಿವಯ್ಯನವರ ಅಧ್ಯಯನ ಕೇಂದ್ರ ಕಾರ್ಯ ನಿರ್ವಹಿಸಲು ಸಲಹೆ ನೀಡಿದರು.

 ಅವರು ತುಮಕೂರು ವಿಶ್ವವಿದ್ಯಾನಿಲಯದ ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯನವರ ಅಧ್ಯಯನ ಪೀಠದ ವತಿಯಿಂದ ಗಂಗಸಂದ್ರ ಗ್ರಾಮದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದರು.

  ವಿವಿಧ ದೇಶದಿಂದ ಗಂಗಸಂದ್ರ ಕೆರೆಯಲ್ಲಿ ಸುಮಾರು 62 ಜಾತಿಯ ಪಕ್ಷಿಗಳು ಬರಲಿವೆ ಎಂದು ಪಕ್ಷಿ ಪ್ರೇಮಿಗಳು ಹೇಳುತ್ತಿದ್ದಾರೆ. ಪಕ್ಷಿಗಳ ಉಳಿವಿಗೆ ಮತ್ತು ವೃದ್ಧಿಗಾಗಿ ಅಗತ್ಯ ಮೂಲಭೂತ ಸೌಕರ್ಯ ಮಾಡುವ ಮೂಲಕ ಇದೊಂದು ಪಕ್ಷಿಗಳ ತಾಣವಾಗುವಂತೆ ಯೋಜನೆ ರೂಪಿಸಲು ಸಲಹೆ ನೀಡಿದರು.

  ಕೆರೆಯ ಸುತ್ತ ಮತ್ತು ಬಟಾನಿಕಲ್ ಗಾರ್ಡನ್ನಲ್ಲಿ ಎಲ್ಲಾ ಜಾತಿಯ ಮರಗಿಡಗಳನ್ನು ಹಾಕುವ ಮೂಲಕ ಇದೊಂದು ವಿವಿಧ ರೀತಿಯ ಸಸ್ಯ ಪ್ರಾತ್ಯಾಕ್ಷಿಕೆ ಕೇಂದ್ರವಾಗುವಂತೆ ಮಾಡುವುದು ಅಗತ್ಯವಾಗಿದೆ. ಯಾವುದೇ ಕಾಮಗಾರಿ ಮಾಡಿದರೂ ಅದು ನ್ಯಾಚುರಲ್ ಆಗಿರಬೇಕು ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಬೇಕು.

 ಎಲ್ಲಾ ಇಲಾಖೆಯ ಅಧಿಕಾರಿಗಳು ಯಾವ ಯಾವ ಇಲಾಖೆ ವತಿಯಿಂದ ಯಾವ ಯೋಜನೆಗಳನ್ನು ಮಾಡಬೇಕು ಎಂಬ ಬಗ್ಗೆ ಪಟ್ಟಿಮಾಡಿ ಜಿಲ್ಲಾಧಿಕಾರಿಗಳ ಅನುಮೋದನೆ ಪಡೆದು ಯೋಜನೆ ಜಾರಿಗೆ ಶ್ರಮಿಸಲು ಸಮರೋಪಾದಿಯಲ್ಲಿ ಶ್ರಮಿಸಲು ಕರೆ ನೀಡಿದರು.

  ಅಡಿಷನಲ್ ಜಿಲ್ಲಾಧಿಕಾರಿ ಚನ್ನಬಸಪ್ಪನವರು ಮಾತನಾಡಿ ಬೆಳಿಗ್ಗೆಯಿಂದ ನಡೆದ ಪಾದಯಾತ್ರೆ ಮತ್ತು ನಡೆದ ಚರ್ಚೆಯನ್ನು ಗಮನಿಸಿದರೆ ಕೇಂದ್ರ ಒಂದು ಅಂತರರಾಷ್ಟ್ರೀಯ ಪ್ರವಾಸಿ ಕೇಂದ್ರವಾಗಲಿದೆ. ಮಹತ್ತರವಾದ ಯೋಜನೆಗೆ ಜಿಲ್ಲಾಡಳಿತ ಸ್ಪಂದಿಸಲಿದೆ ಕೆರೆಯ ಹದ್ದುಬಸ್ತು ನಿಗದಿಗೊಳಿಸುವುದು ಮತ್ತು ಸರ್ಕಾರಿ ಜಮೀನನ್ನು ಗುರುತಿಸಿ ತುಮಕೂರು ವಿಶ್ವವಿದ್ಯಾನಿಲಯಕ್ಕೆ ಪರಮಶಿವಯ್ಯನವರ ಅಧ್ಯಯನ ಪೀಠದ ಉದ್ದೇಶಕ್ಕೆ ಕಾಯ್ದಿರಿಸಲಾಗುವುದು, ಸಂಸದರ ಅಲೋಚನೆ ನಿಜಕ್ಕೂ ದೇಶಕ್ಕೆ ಮಾದರಿಯಾಗಲಿದೆ ಎಂದರು.

  ಅಧ್ಯಯನ ಕೇಂದ್ರದ ನಿರ್ಧೇಶಕರು ಹಾಗೂ ಕಾವೇರಿ ನಿಗಮದ ನಿರ್ಧೇಶಕರಾದ ಕೆ.ಜೈಪ್ರಕಾಶ್ ಮಾತನಾಡಿ ಜಿ.ಎಸ್.ಪರಮಶಿವಯ್ಯನವರ ಅಧ್ಯಯನ ಕೇಂದ್ರ ಅವರ ಕನಸುಗಳನ್ನು ನನಸು ಮಾಡುವುದರ ಜೊತೆಗೆ ರಾಜ್ಯದ ಪ್ರತಿಯೊಂದು ಭಾಗಕ್ಕೂ ಅನೂಕೂಲವಾಗುವಂತೆ ಊರಿಗೊಂದು ಕೆರೆ ಕೆರೆಗೆ ನದಿ ನೀರು ಯೋಜನೆಯಡಿಯಲ್ಲಿ ರಾಜ್ಯದ ಎಲ್ಲಾ ಕೆರೆಗಳಿಗೆ ನದಿ ನೀರು ತುಂಬಿಸುವ ಯೋಜನೆಗೆ ಕೇಂದ್ರ ಜಲಶಕ್ತಿ ಸಚಿವಾಲಯದ ಸದಸ್ಯರು ಹಾಗೂ ಸಂಸದರಾದ ಶ್ರೀ ಜಿ.ಎಸ್.ಬಸವರಾಜ್ರವರ ಕನಸಿನ ಯೋಜನೆಗೆ ಸಂಪೂರ್ಣವಾಗಿ ಸಹಕಾರ ನೀಡಲು ಶ್ರಮಿಸಲಾಗುವುದು ಎಂದರು.

 ಅಧ್ಯಯನ ಪೀಠ ಗ್ರಾಮಕ್ಕೆ ಒಂದು ಕೀರಿಟವಾಗಲಿದೆ, ವಿಶ್ವದ ಗಮನ ಸೆಳೆಯುವ ಕೆಲಸವನ್ನು ಮಾಡುವ ಮೂಲಕ ಪರಮಶಿವಯ್ಯನವರ ಕನಸು ನನಸು ಮಾಡಲು ಪದಾಧಿಕಾರಿಗಳು ಪ್ರತಿಜ್ಞೆ ಮಾಡುವುದು ಅಗತ್ಯವಾಗಿದೆ. ಇಂತಿಂಥ ಇಲಾಖೆಯವರು ಇಂತಹ ಕೆಲಸವನ್ನು ಮಾಡಬೇಕು ಎಂಬ ಮಾಹಿತಿಯನ್ನು ನೀಡಲು ಕಾಲ ಮಿತಿಗೊಳಿಸಿದರು.

 ತುಮಕೂರು ಜಿಲ್ಲೆಯ 2715 ಗ್ರಾಮಗಳ  ಜಲಗ್ರಾಮ ಕ್ಯಾಲೆಂಡರ್ ಮಾಡಲು ಜಿಲ್ಲೆಯ 331 ಗ್ರಾಮ ಪಂಚಾಯಿತಿಗಳ ಮತ್ತು 11 ನಗರ ಸ್ಥಳೀಯ ಪ್ರದೇಶಗಳವಾರು ವಿಷನ್ ಗ್ರೂಪ್ ರಚಿಸಲು ಚಿಂತನೆಯಿದೆ ಎಂದರು.

  ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಅಧ್ಯಕ್ಷ ಕುಂದರನಹಳ್ಳಿ ರಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿ ಗ್ರಾಮ ಸಂಸದರಾದ ಶ್ರೀ ಜಿ.ಎಸ್.ಬಸವರಾಜ್ರವರು  ಮತ್ತು ತುಮಕೂರು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ರವರ ಜನ್ಮ ಸ್ಥಳವಾಗಿದೆ. ಪರಮಶಿವಯ್ಯನವರ ನೀರಾವರಿ ಕನಸುಗಳ ಜೊತೆಗೆ ತುಮಕೂರು ನಗರ ಮತ್ತು ತುಮಕೂರು ಜಿಲ್ಲೆಯ ಸಮಗ್ರ ಅಭಿವೃದ್ಧಿ ಪರ ಯೋಜನೆಗಳ ಮಾಹಿತಿಯು ಲಭ್ಯವಾಗುವಂತೆ ಮಾಡುವುದು ಅಗತ್ಯವಾಗಿದೆ ಎಂದು ಪ್ರತಿಪಾದಿಸಿದರು.

   ತಹಶೀಲ್ಧಾರ್ ಮೋಹನ್, ಭಧ್ರಾ ಮೇಲ್ದಂಡೆ ಇಲಾಖೆಯ ಡಿಸಿಇ ಮಲ್ಲೇಶ್, ಟೂಡಾ ಆಯುಕ್ತ ಯೋಗಾನಂದ್. ಬೆಸ್ಕಾಂ ಎಸ್. ಗೋವಿಂದಪ್ಪ, ಲೋಕೊಪಯೋಗಿ ಇಇ ಸಂಜೀವರಾಜು, ಕಾವೇರಿ ನೀರಾವರಿ ಇಇ.ಮೋಹನ್ ಕುಮಾರ್. ನಗರ ನೀರು ಸರಬರಾಜು ಮಂಡಳಿ ಎಇಇ ಚಂದ್ರಶೇಖರ್, ಸ್ಮಾರ್ಟ್ ಸಿಟಿ, ಎಇಇ ಶಿವಕುಮಾರ್, ಸಣ್ಣ ನೀರಾವರಿ ಇಲಾಖೆ ಎಇಇ ರಂಗನಾಥ್, ವಿಶ್ವವಿದ್ಯಾನಿಲಯದ ರಮೇಶ್ ರೆಡ್ಡಿಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

  ಲೋಕೇಶ್, ಹೊನ್ನೇಶ್ ಕುಮಾರ್, ಉಮಾಶಂಕರ್, ಗಂಗಸಂದ್ರ ಗುರು, ಗುರುಸಿದ್ದಪ್ಪ, ಸಿದ್ದೇಶ್, ರೂಪೇಶ್, ಮಹೇಶ್, ಸಾಗರ್, ಇಮ್ರಾನ್ ಪಾಷ, ಸತ್ಯಾನಂದ್, ಗಂಗಣ್ಣ, ಪ್ರದೀಪ್, ಪರಮಶಿವಯ್ಯನವರ ಕುಟುಂಬದ ಓಹಿಲೇಶ್, ವಿಶ್ವನಾಥ್, ಪ್ರಿಯದರ್ಶಿನಿ ಓಹಿಲೇಶ್ ಗಂಗಸಂದ್ರ ಗ್ರಾಮಸ್ಥರು ಸೇರಿದಂತೆ ಹಲವಾರು ಸಾರ್ವಜನಿಕರು ಭಾಗವಹಿಸಿದ್ದರು.