ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ಅಧ್ಯಕ್ಷತೆಯಲ್ಲಿರುವ ಜಿಲ್ಲಾ ದಿಶಾ ಸಮಿತಿ ಮಹತ್ವದ ನಿರ್ಣಯ ಕೈಗೊಂಡಿದೆ. ಬಹುಷಃ ಭಾರತ ದೇಶದಲ್ಲಿ ಇರುವ 698 ಜಿಲ್ಲಾ ದಿಶಾ ಸಮಿತಿಗಳಲ್ಲಿ ಯಾರು ಈ ಸಹ ಈ ದಿಟ್ಟ ನಿರ್ಧಾರ ಕೈಗೊಂಡಿಲ್ಲ.
TUMAKURU-GIS ಪೋರ್ಟಲ್ ಮಾಡಿ ಜಿಲ್ಲೆಯಲ್ಲಿರುವ 331 ಗ್ರಾಮ ಪಂಚಾಯಿತಿಗಳು. 11 ನಗರ ಸ್ಥಳೀಯ ಸಂಸ್ಥೆಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರತಿಯೊಂದು ಇಲಾಖೆಯಲ್ಲಿ ಇದೂವರೆಗೂ ಕೈಗೊಂಡಿರುವ ಎಲ್ಲಾ ಯೋಜನೆಗಳ ಜಿಐಎಸ್ ಆಧಾರಿತ ಲೇಯರ್‌ಗಳನ್ನು ಪ್ರತಿಯೊಂದು ಯೋಜನೆಯ ಇತಿಹಾಸ ಸಹಿತ ಅಫ್ ಲೋಡ್ ಮಾಡಿ ಒಂದೇ ಕಡೆ ಎಲ್ಲಾ ಡಿಜಿಟಲ್ ಮಾಹಿತಿ ದೊರೆಯುವ ಯೋಜನೆಗೆ ಚಾಲನೆ ನೀಡಲಾಗಿದೆ.
ದಿನಾಂಕ:28.02.2020 ರಂದು ನಡೆದ ದಿಶಾ ಸಭೆಯಲ್ಲಿ ಅತ್ಯಂತ ಸರಳವಾಗಿ TUMAKURU-GIS ಪೋರ್ಟಲ್ ಅನ್ನು 79 ವರ್ಷಗಳನ್ನು ಪೂರ್ಣ ಗೊಳಿಸಿ, 80 ನೇ ವಯಸ್ಸಿಗೆ ಮುಂದಿನ ಮೇ ತಿಂಗಳಲ್ಲಿ ಪಾದಾರ್ಪಣೆ ಮಾಡುವ ಸಂಸದ ಶ್ರೀ ಜಿ.ಎಸ್.ಬಸವರಾಜ್ ಚಾಲನೆ ನೀಡಿದ್ದಾರೆ. ಇವರ ಡಿಜಿಟಲ್ ಕಾಳಜಿ ನಿಜಕ್ಕೂ ಮೆಚ್ಚುವಂತದ್ದು.
ಈ ಯೋಜನೆಗೆ ಬೆನ್ನುಲುಬಾಗಿ ದಿಶಾ ಸಮಿತಿ ಸದಸ್ಯ ಕಾರ್ಯದರ್ಶಿ ಹಾಗೂ ಜಿಲ್ಲಾ ಪಂಚಾಯತ್ ಸಿ.ಇ.ಓ ಶ್ರೀ ಮತಿ ಶುಭಕಲ್ಯಾಣ್, ಜಿಲ್ಲಾಧಿಕಾರಿ ಶ್ರೀ ಡಾ. ರಾಕೇಶ್ ಕುಮಾರ್ ಮತ್ತು ಕರ್ನಾಟಕ ರಿಮೋಟ್ ಸೆನ್ಸಿಂಗ್ ಅಪ್ಲಿಕೇಷನ್ ಸೆಂಟರ್ ಅಧಿಕಾರಿಗಳು ನಿಂತಿದ್ದಾರೆ. ಜಿಲ್ಲೆಯ ಪ್ರತಿಯೊಂದು ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆಯಲ್ಲಿರುವ ಎಲ್ಲಾ ಮಾಹಿತಿಗಳನ್ನು ಅಫ್ ಲೋಡ್ ಮಾಡಲು ಕಾಲಮಿತಿಗೊಳಿಸಿ ನಿರ್ಣಯವನ್ನು ಮಾಡಲಾಗಿದೆ.
ಸಭೆಯಲ್ಲಿ ಸುಧೀರ್ಘವಾಗಿ ಮೀಟಿಂಗ್ ಮ್ಯಾನೇಜ್‌ಮೆಂಟ್ ಬಗ್ಗೆ ಚರ್ಚಿಸಿ, ಯಾವ ರೀತಿ ದಾಖಲೆ ಸಂಗ್ರಹಿಸಿಡಬೇಕು ಎಂಬ ಬಗ್ಗೆ ಮಾಹಿತಿ ಪಡೆದು ಹೊರ ಬಂದ ನಂತರ ದೆಹಲಿಯ ಸಂಸದರ ಕಚೇರಿಯಿಂದ ಈ ಪತ್ರವನ್ನು ಸೋಶಿಯಲ್ ಮೀಡಿಯಾ ಮೂಲಕ ಕಳುಹಿಸಿದರು.
ನಿಜಕ್ಕೂ ಮುಂದಿನ ತ್ರೈಮಾಸಿಕ ದಿಶಾ ಸಭೆಯ ವೇಳೆಗೆ ಡಿಜಿಟಲ್ ಇಂಡಿಯಾ ಯೋಜನೆಗೆ ಪೂರಕವಾಗಿ ದಿಶಾ ಸಮಿತಿ ಉದ್ದೇಶಕ್ಕೆ ಅನುಗುಣವಾಗಿ ಚಾಲನೆ ನೀಡಲು ಒಂದು ಸ್ಕೆಲಿಟನ್ ರೂಪುರೇಷೆ ಸಿದ್ಧವಾಗಲಿದೆ.
ಜೊತೆಗೆ ದಿಶಾ ಸಮಿತಿ ಸದಸ್ಯರುಗಳು ಯಾವುದೇ ಇಲಾಖೆಗೆ ಭೇಟಿ ನೀಡಿ, ಯೋಜನೆ ಬಗ್ಗೆ ಅವರ ಅನಿಸಿಕೆಗಳನ್ನು ಡಿಜಿಟಲ್ ದಾಖಲೆ ಮಾಡಲು ಅವಕಾಶವಿದೆ ಎಂಬ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ. ಇದರಿಂದ ಸದಸ್ಯರ ಚಟುವಟಿಕೆಗಳು ಡಿಜಿಟಲ್ ದಾಖಲೆ ಆಗುವ ಮೂಲಕ ಅವರ ಕರ್ತವ್ಯ ಪಾಲನೆ ಬಗ್ಗೆ ಅವಕಾಶದ ಮಹತ್ವ ಒಂದು ವಿಶೇಷವಾಗಿದೆ.
ದಿಶಾ ಸಭೆಗೆ ಗೈರಾಜರಿ, ಯೋಜನೆಗಳ ಬಗ್ಗೆ ಡಿಜಿಟಲ್ ದಾಖಲೆ ಮಾಡದೇ ಇರುವ ಸದಸ್ಯರ ಬಗ್ಗೆ ಸಾರ್ವಜನಿಕರೇ RANKING ಕೊಡುವ ಅವಕಾಶ ದೊರಕಿಸಿದಂತಾಗಿದೆ. DISHA MEETING MANAGEMENT SOFTWARE ಬಗ್ಗೆ ಅಧ್ಯಯನ ಮಾಡಿ ಸಾಧಕ-ಭಾದಕಗಳ ಬಗ್ಗೆ ಸಾರ್ವಜನಿಕ ಡಿಜಿಟಲ್ ಚರ್ಚೆ ಮಾಡಲು ಸಹ ಚಿಂತನೆಯಿದೆ.