22nd December 2024
Share

TUMAKURU:SHAKTHIPEETA FOUNDATION

 ನನಗೆ ತಿಳಿದಿರುವ ಗೂಗಲ್ ಮಾಹಿತಿ ಪ್ರಕಾರ, ಇಡೀ ವಿಶ್ವದಲ್ಲಿಯೇ ಯಾರೂ ಇನ್ನೂ ರೀತಿ ಮಾಡದೇ ಇರುವಂತಹ ಭೂಮಿಯ ಮೇಲೆ ಭಾರತದ ನಕ್ಷೆ ಮಾಡಿ ಶಕ್ತಿಪೀಠಗಳ ಮತ್ತು ಭಾರತದ ಪ್ರಮುಖ ನದಿಗಳ ಪ್ರಾತ್ಯಕ್ಷಿಕೆ ಮಾಡುವ ವಿಚಿತ್ರವಾದ, ವಿಶಿಷ್ಠವಾದ ವಿನೂತನವಾದ ಯೋಜನೆ. ಅಮ್ಮನವರು ಆದೇಶ ನೀಡಿದ ಹಾಗೆ ಮಾತ್ರ ಕೆಲಸ ಆಗುತ್ತಿದೆ. ಆರಂಭವೂ ಅಮ್ಮನವರ ಅನುಗ್ರಹ  ಯೋಜನೆಯ ಪೂರ್ಣಗೊಳಿಸುವ ಜವಾಬ್ಧಾರಿಯೂ ಅಮ್ಮನವರದೇ. ಎಲ್ಲರೂ ಇಲ್ಲಿ ನೆಪಮಾತ್ರ.

ವಿಶ್ವದ 108 ಶಕ್ತಿಪೀಠಗಳ ಮಾಹಿತಿ ಸಂಗ್ರಹಿಸಲು ಅಧ್ಯಯನ ಆರಂಭಮಾಡುತ್ತಿದ್ದಂತೆ, 108  ಶಕ್ತಿಪೀಠಗಳು ಮಾಹಿತಿ ದೊರಕಿದ್ದರೂ ಕೆಲವು ಗೊಂದಲಗಳಿವೆ, ಗೊಂದಲವಿರುವ ಶಕ್ತಿಪೀಠಗಳು ಸೇರಿ ಸುಮಾರು 123 ಶಕ್ತಿಪೀಠಗಳ ಮಾಹಿತಿಯನ್ನು ನಾನೇ ಗೂಗಲ್’ನಲ್ಲಿ ಹುಡುಕಾಟ ಮಾಡಿ ಪಟ್ಟಿ ಮಾಡಲಾಯಿತು.

ಬೆಣಚಗೆರೆ ಶ್ರೀ ಚಿದಾನಂದ್‌ರವರು 108 ಶಕ್ತಿ ಪೀಠಗಳ ಪಟ್ಟಿ ಮಾಡುವುದಾಗಿ ತಿಳಿಸಿದ್ದಾರೆ. ಅವರು ಸಹ ಇನ್ನೂ ಮಾಹಿತಿ ನೀಡಿಲ್ಲ. ಅಮ್ಮನವರು ಅವರ ಕೆಲಸವನ್ನು ಪೂರ್ಣಗೊಳಿಸಿಲ್ಲ.

ತಮಿಳು ನಾಡಿನ ದೇವಾಲಯ ನಿರ್ಮಾಣ ಮಾಡುವ ತಪತಿ ಶ್ರೀ ಗಣೇಶ್‌ರವರಿಗೆ ತಮಿಳು ಭಾಷೆಯ ಪುಸ್ತಕವನ್ನು ನೀಡಿ 108 ಶಕ್ತಿಪೀಠಗಳ ಭಾವಚಿತ್ರದ ಅಂತಿಮ ಪಟ್ಟಿ ಮಾಡುತ್ತಿದ್ದಾರೆ. ಅವರು ಸಹ ಇನ್ನೂ ಮಾಹಿತಿ ನೀಡಿಲ್ಲ. ಅಮ್ಮನವರು ಅವರ ಕೆಲಸವನ್ನು ಪೂರ್ಣಗೊಳಿಸಿಲ್ಲ.

ನಂತರ ಶ್ರೀ ಸತ್ಯಾನಂದ್‌ರವರಿಗೆ ಇತಿಹಾಸ ಸಹಿತ ಜಿಐಎಸ್ ಲೇಯರ್ ಮಾಡಲು ತಿಳಿಸಿದಾಗ ಅವರು  ಶ್ರೀ ನರೇಶ್‌ರವರನ್ನು ಪರಿಚಯ ಮಾಡಿಸಿ, ನಾನು ಹುಡಕಿರುವ ಶಕ್ತಿಪೀಠಗಳ ವಿಳಾಸ ಹುಡುಕುಲು ತಿಳಿಸಿದೆವು. ಅವರು ಸುಮಾರು 68 ಶಕ್ತಿಪೀಠಗಳ ಲ್ಯಾಟ್‌ಲ್ಯಾಗ್  ಪತ್ತೆಹಚ್ಚಿದರು. ಅಮ್ಮನವರು ಅವರ ಕೆಲಸವನ್ನು ಪೂರ್ಣಗೊಳಿಸಿಲ್ಲ.

ನಂತರ ಶ್ರೀ ಬಸವರಾಜ್ ಸುರಣಗಿರವರು 108 ಶಕ್ತಿಪೀಠಗಳ ಜಿಐಎಸ್ ಆಧಾರಿತ ಮ್ಯಾಪ್ ಸಿದ್ಧಪಡಿಸಿ ಭೂಮಿಯಲ್ಲಿ ಭಾರತ ನಕ್ಷೆ ಸಹಿತ ಗುರುತು ಮಾಡುವ ಕೆಲಸವನ್ನು ಅಂತಿಮಗೊಳಿಸಲು ಸಾಧ್ಯವಾಗಿಲ್ಲ. ಅಮ್ಮನವರು ಅವರ ಕೆಲಸವನ್ನು ಪೂರ್ಣಗೊಳಿಸಿಲ್ಲ.

ಚಿ!! ಕೆ.ಆರ್.ಸೋಹನ್‌ರವರು ಸುಮಾರು 108  ಶಕ್ತಿಪೀಠಗಳ ಕೋಆರ್ಡಿನೇಟ್ಸ್ ಸಹಿತ ಕೆಲವು ಮಾಹಿತಿ ಹುಡುಕಿದ್ದಾರೆ. ಇವು ಸಹ ಸರಿಯಾಗಿ ಮ್ಯಾಚ್ ಆಗುತ್ತಿಲ್ಲ.

ಶ್ರೀ ಮಹೇಂದ್ರರವರಿಗೆ 108 ಶಕ್ತಿಪೀಠಗಳ ಪೋಟೋ ಹುಡುಕುವ ಬಗ್ಗೆ ಮಾತನಾಡಿದಾಗ ಅವರು ಶ್ರೀ ನವೀನ್‌ರವರಿಗೆ ಸೂಚಿಸಿದರು ಅವರು ಸಹ ಕೆಲವು ಪೋಟೋ ಹುಡುಕಿದ್ದಾರೆ. ಇದು ಸಹ ಅಪೂರ್ಣವಾಗಿದೆ. ಅಮ್ಮನವರು ಅವರ ಕೆಲಸವನ್ನು ಪೂರ್ಣಗೊಳಿಸಿಲ್ಲ.

ಶ್ರೀ ವಿನಯ್‌ರವನ್ನು ಖಚಿತವಾದ ವಿಳಾಸ ಹುಡುಕುಲು ತಿಳಿಸಿದೆ, ಅವರು ಸಹ ಇನ್ನೂ ಅಪೂರ್ಣ ಮಾಡಿದ್ದಾರೆ. ಅಮ್ಮನವರು ಅವರ ಕೆಲಸವನ್ನು ಪೂರ್ಣಗೊಳಿಸಿಲ್ಲ.

ಕುಮಾರಿ ಐಶ್ವರ್ಯರವರು ಜಿಐಎಸ್ ಆಧಾರಿತ ಮ್ಯಾಪ್ ಅಧ್ಯಯನ ಮಾಡಲು ಸೂಚಿಸಿದೆ. ಅವರು ಸಹ ಇನ್ನೂ ಅಪೂರ್ಣ ಮಾಡಿದ್ದಾರೆ. ಅಮ್ಮನವರು ಅವರ ಕೆಲಸವನ್ನು ಪೂರ್ಣಗೊಳಿಸಿಲ್ಲ.

ಶ್ರೀಮತಿ ಶ್ರುತಿರವರಿಗೆ  ಜಿಐಎಸ್ ಆಧಾರಿತ ಮ್ಯಾಪ್ ಅಧ್ಯಯನ ಮಾಡಲು ಸೂಚಿಸಿದೆ. ಅವರು ಸಹ ಇನ್ನೂ ಅಪೂರ್ಣ ಮಾಡಿದ್ದಾರೆ. ಅಮ್ಮನವರು ಅವರ ಕೆಲಸವನ್ನು ಪೂರ್ಣಗೊಳಿಸಿಲ್ಲ.

ನಂತರ ಕೆಳಕಂಡ ಈ ಮೂರು ಪುಸ್ತಕಗಳನ್ನು ಹುಡಕಿ ತರಲಾಯಿತು.

  1. ತಮಿಳುನಾಡಿನ ಸೇವಾರತ್ನ ಜಬಲ್ ಪುರ ಶ್ರೀ ಎ. ನಾಗರಾಜ ಶರ್ಮಾರವರು ಬರೆದಿರುವ 51  ಅಕ್ಷರಪೀಠಗಳು ತಮಿಳಿನ ಪುಸ್ತಕವನ್ನು ಕನ್ನಡಕ್ಕೆ ಭಾಷಾಂತರ ಮಾಡಿರುವ ಬೆಂಗಳೂರಿನ ಶ್ರೀಮತಿ ಲಲಿತಾಶೇಷಾದ್ರಿರವರ 51  ಅಕ್ಷರಪೀಠಗಳು
  2. ಶ್ರೀ ರಾಘವೇಂದ್ರ ಕುಲಕರ್ಣಿ ದಿದ್ದಿಗಿರವರು ಬರೆದಿರುವ ಭಾರತದ 108  ಶಕ್ತಿಪೀಠಗಳು.
  3. ಶ್ರೀ ರಾಜರಾಜೇಶ್ವರಿ ಪೀಠಾಧಿಪತಿ ಶ್ರೀ ಡಾ.ಅಂಬಾಪ್ರಸಾದ್ ತೇಜಸ್ವಿಸ್ವಾಮಿರವರು ಬರೆದಿರುವ ಭಾರತದ 108  ಶಕ್ತಿಪೀಠಗಳು.

 ಬೆಂಗಳೂರಿನ ಶ್ರೀ ನಾಗರಾಜಶರ್ಮರವರು ಸಹ ಶಕ್ತಿಪೀಠಗಳ ದೇವಾಲಯ ಮಾಡುತ್ತಿರುವುದಾಗಿ ತಮಿಳುನಾಡಿನ ಶ್ರೀ ನಾಗರಾಜ್‌ರವರು ತಿಳಿಸಿದರು, ಅವರ ಜೊತೆಯೂ ಸಮಾಲೋಚನೆ ನಡೆಸಲಾಗಿದೆ.

ಶ್ರೀ ರಾಘವೇಂದ್ರ ಕುಲಕರ್ಣಿ ದಿದ್ದಿಗಿರವರು ಬೆಂಗಳೂರಿನ ಶ್ರೀ ಉಮೇಶ್‌ಶರ್ಮಾ ಗುರೂಜಿಯರ ಬಳಿ ಕರೆದುಕೊಂಡು ಹೋಗಿದ್ದರು ಅವರೊಂದಿಗೂ ಸಮಾಲೋಚನೆ ನಡೆಸಲಾಯಿತು.

 ಬೆಂಗಳೂರಿನ ಶ್ರೀ ರಂಗನಾಥಸ್ವಾಮಿರವರು ಬ್ರಹ್ಮಾಂಡಗುರುಗಳ ಬಳಿ ಕರೆದು ಕೊಂಡು ಹೋಗಿದ್ದರು. ಅವರ ಬಳಿಯು ಸಮಾಲೋಚನೆ ನಡೆಸಲಾಗಿದೆ.  

ಶ್ರೀಮತಿ ಚಂದ್ರಿಕಾ ಎಲ್.ಕೆ.ಅಶೋಕ್‌ರವರು ಈ ದಂಪತಿಗಳು ಎಲ್ಲಾ ಶಕ್ತಿಪೀಠಗಳ ಸ್ಥಳಕ್ಕೆ ಯಾತ್ರೆ ಮಾಡುವುದಾಗಿ ನಿಶ್ಚಯಿಸಿ ಸುಮಾರು ಶಕ್ತಿಪೀಠಗಳ ಯಾತ್ರೆ ಮಾಡಿದ್ದಾರೆ. ಅವರ ಅನುಭವಗಳನ್ನು https//lkashok.wixsite.com/jurneys ನಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಅವರು ಅಂತಿಮ ಪಟ್ಟಿ ಮಾಡುವ ಭರವಸೆ ನೀಡಿದ್ದಾರೆ. 

ಶ್ರೀಮತಿ ಎಸ್.ಆರ್.ಪೂರ್ಣಿಮಾ ಡಿ.ಎಸ್. ಹರೀಶ್‌ರವರು ಈ ದಂಪತಿಗಳು ಎಲ್ಲರೂ ಅಂತಿಮ ಪಟ್ಟಿ ಮತ್ತು ಕೋಆರ್ಡಿನೇಟ್ಸ್ ನೀಡಿದ ಮೇಲೆ ಅಂತಿಮ ನಕ್ಷೆಯನ್ನು ಪರಿಶೀಲಿಸಿ ಕೊಡುವುದಾಗಿ ತಿಳಿಸಿದ್ದಾರೆ.

ಶ್ರೀ ಸತ್ಯಾನಂದ್‌ರವರು ಮತ್ತು ಅವರ ತಂಡ ನಾವು ಜಮೀನು ಆಯ್ಕೆ ಮಾಡಿದ ದಿನದಿಂದ ಈವರೆಗೂ ಜಿಐಎಸ್ ಆಧಾರಿತ ಮಾಸ್ಟರ್ ಪ್ಲಾನ್ ಮಾಡುತ್ತಿದ್ದಾರೆ. ಇವರು ಎಲ್ಲರೂ ನೀಡಿರುವ ಪಟ್ಟಿ, ಕೋಆರ್ಡಿನೇಟ್ಸ್ ಪರಿಶಿಲಿಸುತ್ತಿದ್ದಾರೆ.

ಬೆಂಗಳೂರಿನ ಶ್ರೀ ಶಿವಕುಮಾರ್‌ರವರು ಎಲ್ಲರೂ ಅಂತಿಮ ಪಟ್ಟಿ ಮತ್ತು ಕೋಆರ್ಡಿನೇಟ್ಸ್ ನೀಡಿದ ಮೇಲೆ ಅಂತಿಮ ನಕ್ಷೆಯನ್ನು ಪರಿಶೀಲಿಸಿ ಕೊಡುವುದಾಗಿ ತಿಳಿಸಿದ್ದಾರೆ.

 ಹೀಗೆ ಹಲವಾರು ಜನರ ಜೊತೆ ನಿರಂತರವಾಗಿ ಸಮಾಲೋಚನೆ ನಡೆಸುತ್ತಿದ್ದೇನೆ, ಇನ್ನೂ 108 ಶಕ್ತಿಪೀಠಗಳ ಪಟ್ಟಿ, ವಿಳಾಸ ಮತ್ತು ಕೋಆರ್ಡಿನೇಟ್ಸ್ ಪ್ರಕಾರ ಅಂತಿಮ ಗೊಳಿಸಿಲ್ಲ.

ಚಿ!! ಭರತ್‌ರವರು ಸುಮಾರು ಕೆಲವು ಶಕ್ತಿಪೀಠಗಳ ಕೋಆರ್ಡಿನೇಟ್ಸ್ ಹುಡುಕಿದ್ದಾರೆ. ಇದೂವರೆಗೂ ಎಲ್ಲರೂ ಮಾಡಿರುವ ಪಟ್ಟಿ ಮತ್ತು ಗೂಗಲ್‌ನ ಹಲವಾರು ವೆಬ್‌ಸೈಟ್‌ನಲ್ಲಿ ಹುಡುಕಿದ್ದಾರೆ.

 ನಮ್ಮ ವೆಬ್‌ಸೈಟ್  https//shakthipeeta.in ಗೆ ಅಫ್ ಲೋಡ್ ಮಾಡಲಾಗಿದೆ.  ಆಸಕ್ತರು ವೆಬ್‌ಸೈಟ್‌ಗೆ ಭೇಟಿ ನೀಡಿ ಸಲಹೆ ನೀಡಲು ಮನವಿ.

 ವಿರಾಜ್‌ಪೇಟೆಯ ಶ್ರೀ ದಿವಾಕರ್‌ಭಟ್‌ರವರು ಮತ್ತು ಕಲ್ಲಡ್ಕದ ಶ್ರೀ ಸದಾನಂದ್ ಕಾರಂತ್‌ರವರು ಸ್ಥಳಕ್ಕೆ ಬೇಟಿ ನೀಡಿ ಅಷ್ಟಮಂಗಳ ಪ್ರಶ್ನೆ ಮತ್ತು ಪೂಜೆ ಮಾಡಲು ದಿನಾಂಕ ನಿಗದಿಗೊಳಿಸಲಾಯಿತು. ಅಮ್ಮನವರು ಪೂಜೆ ಮುಂದೂಡಲು ಸಲಹೆ ನೀಡಿದ್ದರಿಂದ ಮುಂದೂಡಲಾಯಿತು. ನಂತರ ಕೊರೊನಾ-  ಲಾಕ್ ಡೌನ್ ಶುರುವಾಯಿತು.

 ಅವರ ಪ್ರಕಾರ ಭೂಮಿದೇವಭೂಮಿ, ಶ್ರೀ ವಿಷ್ಣುವಿಗೂ ಭೂಮಿಗೂ ಅವಿನಾಭಾವ ಸಂಬಂಧ ಇದೆ. ಇಲ್ಲಿ ಶಕ್ತಿಪೀಠಗಳ ಸ್ಥಾಪನೆ? ಎಂಬ ಪ್ರಶ್ನಾರ್ಥಕ ವಿಷಯವನ್ನು ಹಂಚಿಕೊಂಡಿದ್ದಾರೆ.

 ಉತ್ತರಾಖಂಡ ರಾಜ್ಯದ ಹರಿದ್ವಾರ್ ಜಿಲ್ಲೆಯ ಕಂಕಲ್‌ಗೆ ಭೇಟಿ ನೀಡಿದಾಗ ಅಲ್ಲಿನ ಒಬ್ಬರು ಜೋತಿಷ್ಯದಲ್ಲಿ ಡಾಕ್ಟರೇಟ್ ಮಾಡಿದವರನ್ನು ಕೇಳಿದಾಗ ಶಕ್ತಿಪೀಠಗಳ ಪಾರ್ಕ್ ಮಾಡುತ್ತಿರುವುದೇ ವಿಶೇಷ. ಎಲ್ಲಕ್ಕೂ ಮಿಗಿಲಾದ ದೇವತೆಯೇ ಆದಿಶಕ್ತಿ. ಇದಕ್ಕೆ ಭೂಮಿಯ ಮೇಲೆ ಯಾರು ಶಾಸ್ತ್ರ, ಜೋತಿಷ್ಯ ಹೇಳುವಷ್ಟು ತಿಳಿದಿರುವವರು ಇಲ್ಲ. ನೀವೂ ಸಹ ಒಬ್ಬ ತೃಣ ಮಾತ್ರ. ಅಮ್ಮನವರ ಅನಿಸಿಕೆಯಂತೆ ಮಾತ್ರ ನಡೆಯಲಿದೆ.

 ಅಮ್ಮನವರು ನಿಮಗೆ ಈ ಅವಕಾಶ ನೀಡಿರುವುದೇ ಒಂದು ಪುಣ್ಯ, ನಾನು ನಿಮ್ಮನ್ನು ಈ ಹಿಂದೆ ಎಲ್ಲೋ ನೋಡಿದ ನೆನಪು ಎಂದಾಗ, ನಾನು ಹಿಂದಿನ ಜನ್ಮದಲ್ಲಿ ಇಲ್ಲಿಯೇ ಇದ್ದೆ ಎಂದಾಗ ಕನ್ನಡದ ಅನುವಾದವನ್ನು ಹಿಂದಿಯಲ್ಲಿ ಶ್ರೀಮತಿ ಚಂದ್ರಿಕಾ ಎಲ್.ಕೆ.ಅಶೋಕ್‌ರವರು ಮತ್ತು ಶ್ರೀಮತಿ ಎಸ್.ಆರ್.ಪೂರ್ಣಿಮಾ ಡಿ.ಎಸ್. ಹರೀಶ್‌ರವರು ಹೇಳಿದಾಗ ಎಲ್ಲರೂ ನಕ್ಕು ಸುಮ್ಮನಾದೆವು.

ಇಲ್ಲಿ ಬರೆಯುವಾಗ ಯಾವುದಾದರೂ ಹೆಸರು ಮಿಸ್ ಆಗಿದ್ದಲ್ಲಿ ನನ್ನ ಗಮನಕ್ಕೆ ತರಲು ಮನವಿ.