21st November 2024
Share

TUMAKURU: SHAKTHIPEETA FOUNDATION

ದಿನಾಂಕ:02.06.2020 ನೇ ಮಂಗಳವಾರ ಶಕ್ತಿಪೀಠ ಹಸಿರು ಕ್ಯಾಂಪಸ್ ಸಮಾಲೋಚನಾ ಸಭೆಯನ್ನು  ಕ್ಯಾಂಪಸ್‌ನ ವೃತ್ತದ ಕೇಂದ್ರ ಬಿಂದುವಿಗೆ ಪೂಜೆ ಸಲ್ಲಿಸಿ, ಭಾರತ ನಕ್ಷೆಯ ಸುತ್ತಲೂ ಸಾಯಿಬಾಬಾರವರ ಪಾದಗಳ ಮೇಲಿನ ಪುಷ್ಪಗಳನ್ನು ಸಮರ್ಪಣೆ ಮಾಡುವ ಮೂಲಕ ಆರಂಭಿಸಲಾಯಿತು. ವಿಶ್ವದ 108  ಶಕ್ತಿಪೀಠಗಳು ಒಂದೇ ಆವರಣದಲ್ಲಿ ಬರುವಂತಹ ವಿಶಿಷ್ಟವಾದ  ಕ್ಯಾಂಪಸ್ ಅನ್ನು ಒಂದು ‘ಆಯುಷ್ ವನ’ದಂತೆ ನಿರ್ಮಾಣ ಮಾಡಲು ಚಿಂತನೆ ನಡೆಸಲಾಗಿದೆ. 

ಉತ್ತರಖಂಡ ರಾಜ್ಯದ ಹರಿದ್ವಾರ್ ಜಿಲ್ಲೆಯ ಕಂಕಲ್‌ನಲ್ಲಿ ನಡೆದಿದ್ದ ಯಜ್ಞದ ಸ್ಥಳದಿಂದ ತಂದಿದ್ದ ಗಂಗಾ ಜಲ ಮತ್ತು ಮಣ್ಣನ್ನು ಭೂಮಿಗೆ ಸೇರಿಸುವ ಮೂಲಕ ಶಕ್ತಿಪೀಠ ಕ್ಯಾಂಪಸ್ ಕಾಮಗಾರಿ ಆರಂಭಿಸಲು ಚಾಲನೆ ನೀಡಲಾಯಿತು.

ಹಸಿರು ಕ್ಯಾಂಪಸ್ ನಿರ್ಮಾಣ ಮಾಡಲು ಸುಮಾರು 342 ಗಿಡಗಳನ್ನು ಹಾಕಲು ತುಮಕೂರಿನ ಶ್ರೀ ವೀರಪ್ಪದೇವರು ಮತ್ತು ಅವರ ಕುಟುಂಬ ಮುಂದೆ ಬಂದಿದೆ. ಅವರು ಗಿಡಹಾಕುವ ಸ್ಥಳಗಳನ್ನು ಗುರುತಿಸಿ, ಯಾವ ಜಾತಿಯ ಗಿಡಗಳನ್ನು ಎಲ್ಲಿ ಹಾಕಬೇಕು ಎಂಬ ಬಗ್ಗೆ ಬ್ಲೂಪ್ರಿಂಟ್ ನೀಡುವ ಬಗ್ಗೆ ಚರ್ಚಿಸಲಾಯಿತು.

 ಶಕ್ತಿಪೀಠ ಸಲಹಾಗಾರರಾದ ಶ್ರೀ ಎಲ್.ಕೆ.ಅಶೋಕ್‌ರವರು, ಜಲಪೀಠ ಸಲಹಾಗಾರರಾದ ಶ್ರೀ ಹರೀಶ್‌ರವರು ಮತ್ತು ಶ್ರೀ ಮಲ್ಲೇಶ್‌ರವರು, ಕ್ಯಾಂಪಸ್‌ನ ಆರ್ಕಿಟೆಕ್ಟ್ ಶ್ರೀ ಚಿದಾನಂದ್‌ರವರು, ಲೇಔಟ್ ವಿನ್ಯಾಸಗಾರ ಶ್ರೀ ಸತ್ಯಾನಂದ್‌ರವರು ಮತ್ತು ಹಸಿರು ಕ್ಯಾಂಪಸ್ ಸಲಹಾಗಾರರಾದ ಶ್ರೀ ಚಂದ್ರಪ್ಪನವರು ಹಸಿರು ನೀಲಿ ನಕ್ಷೆಯನ್ನು ದಿನಾಂಕ:05.06.2020  ರೊಳಗೆ ನೀಡಲು ನಿರ್ಣಯ ಕೈಗೊಳ್ಳಲಾಯಿತು.

ನಿವೃತ್ತ ಆಯುಷ್ ನಿರ್ಧೇಶಕರಾದ ಶ್ರೀ ಗಾ.ನಂ.ಶ್ರೀಕಂಠಯ್ಯನವರ ಸಲಹೆ ಪಡೆಯಲು ಸಹ ಚಿಂತನೆ ನಡೆಸಲಾಯಿತು.

 ಸುಮಾರು 500 ಮೀಟರ್ ಉದ್ದ ಮತ್ತು 30 ಅಡಿ ಅಗಲದ ರಿಂಗ್ ರಸ್ತೆಯ ಎರಡು ಬದಿಯಲ್ಲಿ ವಿವಿಧ ಜಾತಿಯ ಗಿಡಗಳನ್ನು ಹಾಕುವುದು. ರಿಂಗ್ ರಸ್ತೆಯ ಸುತ್ತಲೂ ಸುಮಾರು 3 ಮೀಟರ್ ಅಗಲ ಮತ್ತು 3 ಮೀಟರ್ ಉದ್ದದಲ್ಲಿ ಒಂದೊಂದು ಜಾತಿ ಗಿಡದಂತೆ, ವಿವಿಧ ಜಾತಿಯ ಆಯುಷ್ ಬಳ್ಳಿ/ಗಿಡಗಳನ್ನು ಹಾಕುವುದು, ಜಲಭಾರತ ನಕ್ಷೆಯ ಸುತ್ತಲೂ ಬೇವಿನ ಗಿಡಗಳನ್ನು ಹಾಕುವುದು, ಶಕ್ತಿಪೀಠ ಮತ್ತು ಜ್ಯೋತಿರ್ಲಿಂಗಗಳ ಪಕ್ಕ ಬಿಲ್ವಪತ್ರೆ ಗಿಡಗಳನ್ನು ಹಾಕುವುದು.

  ನವಗ್ರಹಗಳ ಮತ್ತು ಅಷ್ಟ ದಿಕ್ಪಾಲಕರ ದಿಕ್ಕುಗಳು ಮತ್ತು ನಿರ್ಧಿಷ್ಠ ಜಾಗದಲ್ಲಿ ಆಯಾ ಗ್ರಹಗಳ ಗಿಡ ಮತ್ತು ದ್ವಿದಳ ದಾನ್ಯಗಳ ಬೀಜ ಹಾಕುವುದು, ಬೇವಿನ ಮರಗಳಿಗೆ ಅಮೃತ ಬಳ್ಳಿ ಹಾಕಿ ಹಬ್ಬಿಸುವುದು, ರಿಂಗ್ ರಸ್ತೆಯ ಸುತ್ತಲೂ ಹಾಕುವ ಆಯುಷ್ ಗಿಡಗಳ ವಿಭಾಗಗಳ ಪಕ್ಕ ಅಲೋವೇರಾ ಹಾಕುವುದು. ಹೂವಿನ ತೋಟ ನಿರ್ಮಾಣ ಮಾಡುವ ಸ್ಥಳವನ್ನು ಅಂತಿಮಗೊಳಿಸಲು ಚರ್ಚಿಸಲಾಯಿತು.

 ಮುಖ್ಯದ್ವಾರದ ಅಕ್ಕ ಪಕ್ಕ ಅರಳಿ ಗಿಡ ಹಾಕುವುದು. ಸುಮಾರು 30 ಎಕರೆ ಕ್ಯಾಂಪಸ್‌ನಲ್ಲಿ ಈ ವಾತಾವಾರಣದಲ್ಲಿ ಬೆಳೆಯುವ ಎಲ್ಲಾ ಜಾತಿಯ ಕನಿಷ್ಠ ಎರಡು ಗಿಡವನ್ನಾದರೂ ಸಂಗ್ರಹ ಮಾಡಿ ಹಾಕಲು ಚರ್ಚಿಸಲಾಯಿತು. ಕೃತಕ ಅರಭ್ಬಿ ಸಮುದ್ರ, ಬಂಗಾಳಕೊಲ್ಲಿ ಮತ್ತು ಹಿಂದೂಮಹಾಸಾಗರದಲ್ಲಿ ಮೀನು ಬಿಡುವುದು, ಆಮೆ ಬಿಡುವುದು, ತಾವರೆ ಹೂ ಗಿಡ ಹಾಕುವ ಬಗ್ಗೆಯೂ ಚರ್ಚಿಸಲಾಯಿತು.

 ರೈತರು ಹಾಕಿ ಬೆಳೆಸುವ ಎಲ್ಲಾ ಜಾತಿಯ ಗಿಡಗಳ ನರ್ಸರಿ ಆರಂಭಿಸುವ ಬಗ್ಗೆಯೂ ಸಮಾಲೋಚನೆ ನಡೆಸಲಾಯಿತು. ಶಕ್ತಿಪೀಠ ಹಸಿರು ಕ್ಯಾಂಪಸ್ ಬಗ್ಗೆ ಆಸಕ್ತಿ ಇರುವವರು ತಮ್ಮ ಅಮೂಲ್ಯವಾದ ಸಲಹೆ ನೀಡಲು ಮನವಿ ಮಾಡಲಾಗಿದೆ.

ತುಮಕೂರು ಶಿರಡಿ ಸಾಯಿಬಾಬಾ ದೇವಾಲಯದ ಶ್ರೀ ಗುರುಸಿದ್ಧಪ್ಪನವರು, ನಿವೃತ್ತ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಚಂದ್ರಪ್ಪನವರು, ಎಸ್ಟೇಟ್ ಮ್ಯಾನೇಜರ್ ಶ್ರೀ ಚಂದ್ರಶೇಖರ್‌ರವರು, ಶ್ರೀ ನರಸಿಂಹಮೂರ್ತಿರವರು ಮತ್ತು ಜೆಸಿಬಿ ಮಾಲೀಕರಾದ ಶ್ರೀ ಶಿವಕುಮಾರಪ್ಪನವರು ಉಪಸ್ಥಿತರಿದ್ದರು.