27th July 2024
Share

TUMAKURU:SHAKTHIPEETA FOUNDATION

ತುಮಕೂರು ಜಿಲ್ಲೆಯ ಸಮಗ್ರ ನೀರಾವರಿ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲು ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಅಧ್ಯಯನ ಪೀಠ ವಿವಿಧ ಇಲಾಖೆಗಳ ಸಮನ್ವಯತೆಯೊಂದಿಗೆ  ಪರೀಶಿಲಿಸಿ ವರದಿ ನೀಡಲು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ಸಲಹೆ ನೀಡಿದರು.

  1. ಹೇಮಾವತಿ ನದಿ ನೀರನ್ನು ಇಸ್ರೇಲ್ ಮಾದರಿ ಮೈಕ್ರೋ ಇರ್ರಿಗೇಷನ್ ಮತ್ತು ಹೇಮಾವತಿ ವ್ಯಾಪ್ತಿಯ ಕೆರೆಗಳಿಗೆ ನದಿ ನೀರಿನ ಯೋಜನೆಯ ಯೋಜನೆಯ ಪ್ರಸ್ತಾವನೆಯನ್ನು ಕಾವೇರಿ ನೀರಾವರಿ ನಿಗಮ ತಯಾರಿಸಲು ಮುಂದಾಗಿದೆ.
  2. ಕೇಂದ್ರ ಜಲಜೀವನ್ ಮಿಷನ್ ಯೋಜನೆಯಡಿ ಮನೆ ಮನೆಗೆ ನೀರು ಸರಬರಾಜು ಮಾಡುವ ಯೋಜನೆಯ ಪ್ರಸ್ತಾವನೆಯನ್ನು ಗ್ರಾಮೀಣ ಕುಡಿಯುವ ನೀರಿನ ಇಲಾಖೆಯವರು ತಯಾರಿಸಲು ಮುಂದಾಗಿದೆ.
  3. ತುಮಕೂರು ಜಿಲ್ಲೆಯ ಕೆರೆಗಳಿಗೆ ನದಿ ನೀರು ಮತ್ತು ಇತರ ಉದ್ದೇಶಗಳಿಗೆ ಅಗತ್ಯವಿರುವ ನದಿ ನೀರು ತರುವ ಯೋಜನೆಯ ಪ್ರಸ್ತಾವನೆಯನ್ನು ವಿಶ್ವೇಶ್ವರಯ್ಯ ಜಲ ನಿಗಮ ತಯಾರಿಸಲು ಮುಂದಾಗಿದೆ.
  4. ತುಮಕೂರು ಜಿಲ್ಲೆಯ ವಾಟರ್ ಬಡ್ಜೆಟ್, ವಾಟರ್ ಆಡಿಟ್ ಮತ್ತು ವಾಟರ್ ಸ್ಟ್ರಾಟಜಿಯನ್ನು ಜಲಗ್ರಾಮ ಕ್ಯಾಲೆಂಡರ್ ಮೂಲಕ ಅಟಲ್‌ಭೂಜಲ್ ಯೋಜನೆ ಮತ್ತು ಜಲಾಮೃತ/ಅಂತರ್ಜಲ ಚೇತನ ಯೋಜನೆಗಳು ಸೇರಿದಂತೆ ಕನ್ವರ್ಜೆನ್ಸ್ ಯೋಜನೆಯ ಪ್ರಸ್ತಾವನೆಯನ್ನು ಸಣ್ಣ ನೀರಾವರಿ ಇಲಾಖೆ ತಯಾರಿಸಲು ಮುಂದಾಗಿದೆ.
  5. ತುಮಕೂರು ಜಿಲ್ಲೆಯ ನಗರ ಪ್ರದೇಶಗಳ ಕುಡಿಯುವ ನೀರಿನ ಪ್ರಸ್ತಾವನೆಯನ್ನು ಕರ್ನಾಟಕ ನಗರ ನೀರು ಸರಬರಾಜು ಮಂಡಳಿ ಇಲಾಖೆ ತಯಾರಿಸಲು ಮುಂದಾಗಿದೆ.
  6. ತುಮಕೂರು ಜಿಲ್ಲೆಯ ಕೈಗಾರಿಕಾ ಪ್ರದೇಶಗಳ ಕುಡಿಯುವ ನೀರಿನ ಪ್ರಸ್ತಾವನೆಯನ್ನು ಕೆಐಡಿಬಿ ತಯಾರಿಸಲು ಮುಂದಾಗಿದೆ.
  7. ತುಮಕೂರು ಜಿಲ್ಲೆಯ 330 ಗ್ರಾಮ ಪಂಚಾಯಿತಿ ಪ್ರದೇಶಗಳ ಜಲಗ್ರಾಮ ಕ್ಯಾಲೆಂಡರ್‌ನ್ನು ತಮ್ಮ ತಮ್ಮ ಕಚೇರಿಯಲ್ಲಿ ಪ್ರಕಟಿಸಿ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸುವುದು ಸೂಕ್ತವಾಗಿದೆ. ಈ ಕೆಲಸವನ್ನು ಜಿಲ್ಲಾಪಂಚಾಯತ್ ಮಾಡಲಿ
  8. ತುಮಕೂರು ಜಿಲ್ಲೆಯ 11 ನಗರ ಪ್ರದೇಶಗಳ ಜಲಗ್ರಾಮ ಕ್ಯಾಲೆಂಡರ್‌ನ್ನು ತಮ್ಮ ತಮ್ಮ ಕಚೇರಿಯಲ್ಲಿ ಪ್ರಕಟಿಸಿ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸುವುದು ಸೂಕ್ತವಾಗಿದೆ. ಈ ಕೆಲಸವನ್ನು ಜಿಲ್ಲಾ ನಗರಾಭಿವೃದ್ಧಿ ಕೋಶ ಮಾಡಲಿ.
  9. ಮೇಲ್ಕಂಡ ಎಲ್ಲಾ ಇಲಾಖೆಗಳ ವರದಿಗಳ ಮಾಹಿತಿಯನ್ನು ಕ್ರೋಡೀಕರಿಸಿ, ತುಮಕೂರು ಜಿಲ್ಲೆಯ ಸಮಗ್ರ ನೀರಾವರಿ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲು ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಅಧ್ಯಯನ ಪೀಠ ಪರೀಶಿಲಿಸಿ ವರದಿ ನೀಡಲಿ.

ಅವರು ಎತ್ತಿನಹೊಳೆ ಮುಖ್ಯ ಇಂಜಿನಿಯರ್ ಕಚೇರಿಯ ಸಭಾಂಗಣದಲ್ಲಿ ನಡೆದ ಜಿ.ಎಸ್.ಪರಮಶಿವಯ್ಯ ಅಧ್ಯಯನ ಪೀಠದ ತಾಂತ್ರಿಕ ಸಮಿತಿಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

  ತುಮಕೂರು ನಗರದ ವ್ಯಾಪ್ತಿಯಲ್ಲಿ ಮಳೆ ನೀರು ಎಷ್ಟು ದೊರೆಯಲಿದೆ? ಆ ಮಳೆ ನೀರು ಎಲ್ಲಿಗೆ ಹರಿಯಲಿದೆ,  ತುಮಕೂರು ನಗರದ ಹೇಮಾವತಿ ನೀರಿನ ಅಲೋಕೇಷನ್ 1.135  ನೀರಿನ ಬಳಕೆ,  ತುಮಕೂರು ನಗರ, ತುಮಕೂರು ನಿಮ್ಜ್ ಮತ್ತು ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಅಭಿವೃದ್ಧಿ ಅಗುತ್ತಿರುವ ತ್ರಿವಳಿ ನಗರ’ ಪ್ರದೇಶಗಳ ನೀರಿನ ಅಗತ್ಯ ಎಷ್ಟು  ಎಂಬ ಬಗ್ಗೆ ಅಧ್ಯಯನ ವರದಿ ನೀಡಲು ತುಮಕೂರು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ಸಲಹೆ ನೀಡಿದರು.

ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಅಧ್ಯಯನ ಪೀಠದ ತಾಂತ್ರಿಕ ಸಮಿತಿಯ ನಿರ್ದೇಶಕರಾದ  ಶ್ರೀ ಕೆ.ಜೈಪ್ರಕಾಶ್‌ರವರು ಮಾತನಾಡಿ ಭಾರತ ದೇಶದಲ್ಲಿಯೇ ವಿನೂತನವಾದ ಸಮಗ್ರ ನೀರಾವರಿ ಯೋಜನೆಯ ಪ್ರಸ್ತಾವನೆಯನ್ನು ತುಮಕೂರು ಜಿಲ್ಲೆಯಲ್ಲಿ ತಯಾರಿಸಲಾಗುತ್ತಿದೆ.

 ತುಮಕೂರು ಜಿಲ್ಲೆಯ ದಿಶಾ ಸಮಿತಿಯ ನಿರ್ಣಯ, ಮಾನ್ಯ ಮುಖ್ಯಮಂತ್ರಿಗಳು ಮಾನ್ಯ ಪ್ರಧಾನ ಮಂತ್ರಿಯವರಿಗೆ ಬರೆದ ಪತ್ರ, ಆಯವ್ಯಯದಲ್ಲಿ ಮಂಡನೆಯಾಗಿರುವ ಯೋಜನೆಗಳು ಸೇರಿದಂತೆ ಎಲ್ಲಾ ವಿಚಾರಗಳನ್ನು ಗಣನೆಗೆ ತೆಗೆದು ಕೊಂಡು ಉತ್ತಮವಾದ ಪ್ರಸ್ತಾವನೆಯನ್ನು ತಯಾರಿಸಲುವ ಅಗತ್ಯದ ಬಗ್ಗೆ ಪ್ರತಿಪಾದಿಸಿದರು.

ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಅಧ್ಯಕ್ಷ ಕುಂದರನಹಳ್ಳಿ ರಮೇಶ್ ಮಾತನಾಡಿ ಪ್ರಸ್ತಾವನೆ ಸಲ್ಲಿಸುವವರೆಗೂ ಪ್ರತಿ ಹದಿನೈದು ದಿನಕ್ಕೊಮ್ಮೆ ಪರಿಶೀಲನೆ ಸಭೆ ನಡೆಸುವ ಮೂಲಕ ಕಾಲಮಿತಿಯಲ್ಲಿ ಪ್ರಸ್ತಾವನೆ ಸಿದ್ಧಪಡಿಸಲು ಆಗ್ರಹ ಪಡಿಸಿದರು.

ತಾಂತ್ರಿಕ ಸಮಿತಿಯ ಕಾರ್ಯದರ್ಶಿಯಾಗಿ ನಿವೃತ್ತ ಎಸ್.ಇ ಶ್ರೀ ಹರೀಶ್‌ರವರನ್ನು ನೇಮಿಸಿ, ತಾಂತ್ರಿಕ ಸಮಿತಿಯ ರೂಪುರೇಷೆಗಳನ್ನು ಸಿದ್ಧಪಡಿಸಲು ಅಧಿಕಾರ ನೀಡಲಾಯಿತು.

 ತುಮಕೂರಿನ ಸ್ಪೆಕ್ಟ್ರಾ ಅಸೋಯೇಷನ್‌ನ ಶ್ರೀ ಸತ್ಯಾನಂದ್ ಹಲವಾರು ಯೋಜನೆಗಳ ಪಿಪಿಟಿ ಪ್ರದರ್ಶಿಸಿದರು. ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಪ್ರೀತಿಕ್ಯಾಡ್‌ನ ಶ್ರೀ ವೇದಾನಂದಾಮೂರ್ತಿ, ಪಾವಗಡದ ಶ್ರೀ ಶಿವಪ್ರಸಾದ್, ಮಣುವಿನಕುರಿಕೆ ಶ್ರೀ ಶಿವರುದ್ರಯ್ಯ, ತೋವಿನಕೆರೆ ಶ್ರೀ ವಿಜಯಕುಮಾರ್, ಶ್ರೀ ಮಲ್ಲೇಶ್, ಶ್ರೀ ಯೋಗಾನಂದ್, ಶ್ರೀ ರಘುನಂದನ್, ಶ್ರೀ ಗೋವಿಂದಯ್ಯ, ಶ್ರೀ ರಂಗನಾಥ್, ಶ್ರೀ ಲೋಕೇಶ್, ಶ್ರೀ ಉಮಾಶಂಕರ್, ಶ್ರೀ ಹೊನ್ನೇಶ್ ಕುಮಾರ್, ಶ್ರೀ ರೇಣುಕಪ್ರಸಾದ್ ಇನ್ನೂ ಮಂತಾದವರು ಬಾಗವಹಿಸಿದ್ದರು.