TUMAKURU:SHAKTHIPEETA FOUNDATION
ತುಮಕೂರು ಮಹಾನಗರ ಪಾಲಿಕೆ ತುಮಕೂರು ಸ್ಮಾರ್ಟ್ ಸಿಟಿಯಾದರೂ ಕರಾರುವಕ್ಕಾದ ಡಿಜಿಟಲ್ ಡೇಟಾ ಸಂಗ್ರಹ ಮಾಡುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್, ತುಮಕೂರು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ಮತ್ತು ಜಿಲ್ಲಾಧಿಕಾರಿ ಶ್ರೀ ರಾಕೇಶ್ ಕುಮಾರ್ ತುಮಕೂರಿನಲ್ಲಿ ಡೇಟಾ ಸಮರ ಸಾರಿದ್ದಾರೆ.
ಕೇಂದ್ರ ಸರ್ಕಾರದ ಅನುದಾನ ಕೋಟಿಗಟ್ಟಲೆ ಜಿಐಎಸ್ ಆಧಾರದ ಡೇಟಾ ಸಂಗ್ರಹಮಾಡಲು ವ್ಯಯಮಾಡಿದ್ದರೂ ಯಾವುದೇ ಪ್ರಯೋಜವಾಗಿಲ್ಲ. ದೇಶದ ಪ್ರತಿಯೊಂದು ಸ್ಮಾರ್ಟ್ ಸಿಟಿಗೆ ಆರಂಭದಲ್ಲಿಯೇ ಕೇಂದ್ರ ಸರ್ಕಾರ ರೂ 2 ಕೋಟಿ ಅನುದಾನ ನೀಡಿದೆ.
ಗೂಗಲ್ ಪೋಟೋ ತೋರಿಸಿ ಯಾಮಾರಿಸುವ ಕೆಲಸವನ್ನು ಕೆಲವು ಅಧಿಕಾರಿಗಳು ಮತ್ತು ನೌಕರರು ಮಾಡುತ್ತಿದ್ದಾರೆ. ನಿಜವಾಗಿಯೂ ಸರ್ಕಾರದ ಸೌಲಭ್ಯ ತಲುಪಬೇಕಾದವರಿಗೆ ತಲುಪುತ್ತಿಲ್ಲ ಮತ್ತು ಸಾಮಾಜಿಕ ನ್ಯಾಯದಡಿಯಲ್ಲಿ ಅಭಿವೃದ್ಧಿ ಆಗುತ್ತಿಲ್ಲ.
ಜಿಐಎಸ್ ಆಧಾರಿತ ಡೇಟಾ ತಯಾರಿಸಲು ಹಿಂದೇಟು ಹಾಕಲು ಪ್ರಮುಖ ಕಾರಣ ಒಮ್ಮೆ ಡೇಟಾ ಮತ್ತು ನಕ್ಷೆ ಸಿದ್ಧವಾದ ಮೇಲೆ ಯಾರು ಯಾವುದೇ ಗೋಲ್ ಮಾಡಲು ಸಾಧ್ಯವಿಲ್ಲ, ಸುಳ್ಳು ಲೆಕ್ಕ ತೋರಿಸಿ ಬಿಲ್ ಮಾಡಲು ಆಗುವುದಿಲ್ಲ ಒಂದು ರೂಪಾಯಿ ಕಾಮಗಾರಿಯೂ ಎಲ್ಲಿ, ಯಾವ ದಿನದಂದು ನಡೆದಿದೆ ಎಂಬ ಕರಾರುವಕ್ಕಾದ ಮಾಹಿತಿ ದೊರೆಯಲಿದೆ.
ಇದನ್ನು ಮಾಡಿ ನಾವೇ ಸಿಕ್ಕಿಹಾಕಿ ಕೊಳ್ಳಬೇಕಾ? ಆ ಪ್ರಧಾನಿ ಮೋದಿಗೂ ಬುದ್ದಿ ಇಲ್ಲ ಡಿಜಿಟಲ್ ಇಂಡಿಯಾ ಘೋಶಿಸಿ ನಾವು ಹೊಡೆದು ತಿನ್ನುತ್ತಿದ್ದ ಹಣಕ್ಕೆ ಕೊಕ್ಕೆ ಹಾಕಲಿದ್ದಾರೆ. ನೇರವಾಗಿ ಪಲಾನುಭವಿಗಳ ಖಾತೆಗೆ ಹಣ ಹಾಕಿದರೆ ನಮಗೇನು ಲಾಭ? ಎನ್ನುವ ದೋರಣೆ ಕೆಲವರಲ್ಲಿತ್ತು, ಇನ್ನೂ ಕೆಲವರು ಇದು ಒಳ್ಳೆಯ ಬೆಳವಣಿಗೆ ಮಾಡೋಣ ಅಂದರೂ ಅವರನ್ನು ಕೆಲವರು ಬಿಡುತ್ತಿರಲಿಲ್ಲ ಈಗ ಎಲ್ಲಾ ಅಧಿಕಾರಿಗಳು ಮತ್ತು ನೌಕರರು ’ತುಮಕೂರು ಸ್ಮಾರ್ಟ್ ಸಿಟಿ – ಡೇಟಾ ಸಿಟಿ’ ಮಾಡಲೇ ಬೇಕು ಎಂಬ ಪಣತೊಟ್ಟಿದ್ದಾರೆ.
ಈ ಜಿಐಎಸ್ ಲೇಯರ್ ಮಾಡುವುದರಿಂದ ಯಾವ ಅಧಿಕಾರಿ/ನೌಕರ ಯಾವ ಕೆಲಸ ಮಾಡಬೇಕಿತ್ತು? ಯಾರು ಶೇಕಡವಾರು ಎಷ್ಟು ಕೆಲಸ ಮಾಡಿದ್ದಾರೆ ಎಂಬ ದಾಖಲೆ ಕನ್ನಡಿಯಂತೆ ಅವರ ಮುಖಕ್ಕೆ ರಾಚಲಿದೆ.
ಯಾರು ಯಾವುದೇ ಕತೆ ಹೇಳುವಹಾಗಿಲ್ಲ, ದಾಖಲೆಯೇ ಎಲ್ಲಾ ಮಾಹಿತಿ ನೀಡಲಿದೆ, ಸಾರ್ವಜನಿಕರು ಸಹ ಮನೆಯಲ್ಲಿ ಕುಳಿತು ನಮ್ಮ ರಸ್ತೆಯಲ್ಲಿನ ಎಲ್ಲಾ ಕಾಮಗಾರಿಗಳ ವೀಕ್ಷಣೆ ಮಾಡ ಬಹುದಾಗಿದೆ. ಅಧಿಕಾರಿಗಳ ಮತ್ತು ನೌಕರರ ಕಾರ್ಯಕ್ಕೆ RANKING ನೀಡಬಹುದಾಗಿದೆ.
ಜಿಲ್ಲಾಧಿಕಾರಿಗಳು ಮೊದಲು ಎಲ್ಲಾ ಇಲಾಖೆಗಳನ್ನು ಇದರಲ್ಲಿ ತೊಡಗಿಸಿಕೊಳ್ಳಬೇಕು, ಕೆಳಹಂತದ ನೌಕರರಿಂದ ತಾಜಾ ಡೇಟಾ ಸಂಗ್ರಹಮಾಡಲು ಅವಕಾಶ ಕಲ್ಪಿಸಬೇಕು. ಆ ಹಿನ್ನೆಲೆಯಲ್ಲಿ ಮುಂದಿನ ಶುಕ್ರವಾರ ಅಂದರೆ ದಿನಾಂಕ:26.06.2020 ರಂದು ಈ ಪಟ್ಟಿಯಲ್ಲಿರುವ ಲೇಯರ್ ಸಿದ್ಧಪಡಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಆದೇಶ ನೀಡುವುದು ಸೂಕ್ತವಾಗಿದೆ.