28th March 2024
Share

TUMAKURU:SHAKTHIPEETA FOUNDATION

 ರಾಜ್ಯ ಸರ್ಕಾರದ ಶೈಕ್ಷಿಣಿಕ ಸುಧಾರಣೆಗಳ ಸಲಹೆಗಾರ ಹಾಗೂ ಪಿಇಎಸ್ ವಿಶ್ವವಿದ್ಯಾನಿಲಯದ ಚಾನ್ಸಿಲರ್ ಶ್ರೀ ಎಂ.ಆರ್.ದೊರೆಸ್ವಾಮಿರವರು ಮತ್ತು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರು ರಾಜ್ಯದ/ದೇಶದ ವಿಶ್ವವಿದ್ಯಾನಿಲಯಗಳಲ್ಲಿರುವ ಅಧ್ಯಯನ ಕೇಂದ್ರಗಳು, ಅಧ್ಯಯನ ಪೀಠಗಳು ಮತ್ತು ರೀಸರ್ಚ್ ಕೇಂದ್ರಗಳ ಕಾರ್ಯವೈಖರಿ ಬಗ್ಗೆ  ಸುದೀರ್ಘ ಸಮಾಲೋಚನೆ ನಡೆಸಿದರು.

  ಶ್ರೀ ಎಂ.ಆರ್.ದೊರೆಸ್ವಾಮಿರವರು ಸಂಪುಟ ದರ್ಜೆಸ್ಥಾನಮಾನ ಹೊಂದಿದ್ದು ಶೈಕ್ಷಣಿಕ ಸುಧಾರಣೆಗಳ ಬಗ್ಗೆ ವಿಶೇಷ ಯೋಜನೆಗಳನ್ನು ರೂಪಿಸುವತ್ತಾ ದಾಪುಗಾಲು ಇಟ್ಟಿದ್ದಾರೆ. ದಿನಾಂಕ:18.06.2020 ರಂದು ವಿಧಾನಸೌಧದ ಎರಡನೇ ಮಹಡಿಯಲ್ಲಿರುವ ಅವರ ಕಚೇರಿಯಲ್ಲಿ ಸಮಾಲೋಚನೆ ನಡೆಸಲಾಯಿತು.

ವಿಶ್ವವಿದ್ಯಾನಿಲಯಗಳಲ್ಲಿರುವ ಅಧ್ಯಯನ ಕೇಂದ್ರಗಳು, ಅಧ್ಯಯನ ಪೀಠಗಳು ಮತ್ತು ರೀಸರ್ಚ್ ಕೇಂದ್ರಗಳು ಏನೇನು ಅಧ್ಯಯನ ಮಾಡಲಿವೆ, ಅವುಗಳಿಂದ ಜನತೆಗೆ ಅಥವಾ ಸರ್ಕಾರಕ್ಕೆ ಯಾವ ರೀತಿ ಅನೂಕೂಲವಾಗಿವೆ ಎಂಬ ಬಗ್ಗೆ ಇದೂವರೆಗೂ ಯಾವ ವೇದಿಕೆಯಡಿಯಲ್ಲಿ ಚರ್ಚಿಸಲಾಗಿದೆ.

  ಸಭೆಗಳನ್ನು ನಡೆಸಿ ಪ್ರಾರ್ಥಿಸಿದರು, ವಂದಿಸಿದರು ಎಂಬ ಹೇಳಿಕೆಗೆ ಸೀಮೀತವಾಗಿವೆ ಎಂಬ ಸಾರ್ವಜನಿಕ ದೂರುಗಳಿವೆ. ರಾಜ್ಯದ ಸುಮಾರು 60 ವಿಶ್ವವಿದ್ಯಾನಿಲಯಗಳಲ್ಲಿ ಒಂದು ಅಂದಾಜಿನ ಪ್ರಕಾರ 600 ಕ್ಕೂ ಹೆಚ್ಚು ಅಧ್ಯಯನ ಕೇಂದ್ರಗಳು, ಅಧ್ಯಯನ ಪೀಠಗಳು ಮತ್ತು ರೀಸರ್ಚ್ ಕೇಂದ್ರಗಳು ಇರಬಹುದು. ಸುಮಾರು ರೂ 500 ಕೋಟಿ ಹಣ ಡಿಪಾಸಿಟ್ ಇಟ್ಟು ಅವುಗಳ ಬಡ್ಡಿಯಲ್ಲಿ ನಡೆದು ಕೊಂಡು ಹೋಗಲು ಒಂದು ಸಂಪ್ರದಾಯ ಅಥವಾ ನಿಯಮವಿದೆ.

  ಸುಮಾರು ಲಕ್ಷಾಂತರ ರೂಪಾಯಿ ವೇತನ ಪಡೆಯುವ ಪ್ರೋಫೆಸರ್‌ಗಳು ನಿರ್ದೆಶಕರಾಗಿ ರೂ ಇಪ್ಪತ್ತು ಸಾವಿರ ಮಾಸಿಕ ಭತ್ಯೆ ಪಡೆದು ಪಾಠವನ್ನು ಮಾಡದೇ, ಅಧ್ಯಯನಗಳನ್ನು ಮಾಡದೇ ಕಾಲಕಳೆಯುತ್ತಾರೆ ಎಂಬ ಅಪವಾದಗಳ ಬಗ್ಗೆ ಸಮಗ್ರ ತನಿಖೆಯಾಗಬೇಕು, ನಿರಂತರವಾಗಿ ಇವುಗಳ ಮೇಲೆ ನಿಗಾ ಇಟ್ಟಲ್ಲಿ ಬಹಳ ಸುಧಾರಣೆಯಾಗಲಿದೆ.

  ಸರ್ಕಾರಗಳ ಯೋಜನೆಗಳ ಬಗ್ಗೆ ಅಧ್ಯಯನಗಳು ನಡೆಯಬೇಕು, ಜನತೆಗೆ ವಸ್ತು ಸ್ಥಿತಿ ನೀಡುವಂತ ಅನಾಲಿಟಿಕ್ಸ್‌ಗಳ ವರದಿ ಬಿಡುಗಡೆ ಮಾಡುವ ಮೂಲಕ ಬೋಗಸ್ ಡೇಟಾಗಳ ಬಗ್ಗೆ ಗಮನ ಸೆಳೆಯುವಂತಾಗಬೇಕು. ಇವುಗಳ ಮೂಲಕ ಸುದಾರಣೆ ತರುವ ನಿಟ್ಟಿನಲ್ಲಿ ಇರುವ ಆಯಾಮಗಳ ಬಗ್ಗೆ ಚರ್ಚಿಸಲಾಯಿತು.

  ರಾಜ್ಯದ ಪ್ರತಿಯೊಂದು ಗ್ರಾಮಗಳ ಅಭಿವೃದ್ದಿ ಯೋಜನೆಗಳ ಅಧ್ಯಯನ ನಡೆಯಬೇಕು, ಮಹಾನ್ ಪುರುಷರ ಕನಸುಗಳ ಜಾರಿಗೆ ಶ್ರಮಿಸಬೇಕು, ಅಂಬೇಡ್ಕರ್ ಅಧ್ಯಯನ ಪೀಠದ ಮೂಲಕ ಸಂವಿಧಾನದ ಆಶಯಗಳ ಜಾರಿ ಹೇಗೆ ಆಗುತ್ತದೆ ಎಂಬ ಬಗ್ಗೆ ಗ್ರಾಮವಾರು ಡೇಟಾ ಒಂದೇ ಕಡೆ ಲಭ್ಯವಾಗ ಬೇಕು.

  ಬಗ್ಗೆ ವಿಶ್ವಮಟ್ಟದ ಆರ್ & ಡಿ ಹಬ್‌ನ್ನು ತುಮಕೂರಿನಲ್ಲಿ ಅಥವಾ ರಾಜ್ಯದ ಬೇರಡೆ ಪಿಪಿಪಿ ಮಾದರಿಯಲ್ಲಿ ಸ್ಥಾಪನೆ ಮಾಡಲು ಚಿಂತನೆ ನಡೆಸಲಾಗಿದೆ. ಬಗ್ಗೆ ತುಮಕೂರು ವಿಶ್ವವಿದ್ಯಾನಿಲಯದಲ್ಲಿ ರಾಜ್ಯ ಮಟ್ಟದ ವಿಚಾರ ಸಂಕಿರಣ ಆಯೋಜಿಸಲು ಚರ್ಚಿಸಲಾಯಿತು.

 ಈ ವೇಳೆ ಸಲಹೆಗಾರರ ಓಎಸ್‌ಡಿ ಪ್ರೋಫೆಸರ್ ಶ್ರೀ ಎಂ.ಆರ್.ರಂಗನಾಥ್‌ರವರು, ಆಪ್ತಕಾರ್ಯದರ್ಶಿ ಶ್ರೀ ಕೆ.ಜಿ.ಲೋಕೇಶ್‌ರವರು ಮತ್ತು ತುಮಕೂರಿನ ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಅಧ್ಯಕ್ಷ ಕುಂದರನಹಳ್ಳಿ ರಮೇಶ್ ಉಪಸ್ಥಿತರಿದ್ದರು.