TUMAKURU:SHAKTHIPEETA FOUNDATION
ತುಮಕೂರು ಜಿಲ್ಲೆಯ ಸಮಗ್ರ ನೀರಾವರಿ ಪ್ರಸ್ತಾವನೆ ಯೋಜನೆಗಳು
ತುಮಕೂರು ಜಿಲ್ಲೆಯ ಸಮಗ್ರ ನೀರಾವರಿ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲು ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಅಧ್ಯಯನ ಪೀಠದ ತಾಂತ್ರಿಕ ಸಮಿತಿಯ ನಿರ್ದೆಶಕರಾದ ಶ್ರೀ ಕೆ.ಜೈಪ್ರಕಾಶ್ ರವರ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಗಳ ಸಮನ್ವಯತೆಯೊಂದಿಗೆ ಪರೀಶಿಲಿಸಿ ವರದಿ ನೀಡಲು ದಿನಾಂಕ:23.06.2020 ರಂದು ಮದ್ಯಾಹ್ನ 3 ಗಂಟೆಗೆ ಬೆಂಗಳೂರಿನ ಕಾವೇರಿ ನೀರಾವರಿ ನಿಗಮದ ಸಭಾಂಗಣದಲ್ಲಿ ನಡೆಯುವ 4 ನೇ ತಾಂತ್ರಿಕ ಸಭೆಯಲ್ಲಿ ಚರ್ಚಿಸುವ ವಿಚಾರಗಳು.
- ಹೇಮಾವತಿ ನದಿ ನೀರನ್ನು ಇಸ್ರೇಲ್ ಮಾದರಿ ಮೈಕ್ರೋ ಇರ್ರಿಗೇಷನ್ ಮತ್ತು ಹೇಮಾವತಿ ವ್ಯಾಪ್ತಿಯ ಕೆರೆಗಳಿಗೆ ನದಿ ನೀರಿನ ಯೋಜನೆಯ ಯೋಜನೆಯ ಪ್ರಸ್ತಾವನೆಯನ್ನು ಕಾವೇರಿ ನೀರಾವರಿ ನಿಗಮ ತಯಾರಿಸುವ ಬಗ್ಗೆ.
- ಕೇಂದ್ರ ಜಲಜೀವನ್ ಮಿಷನ್ ಯೋಜನೆಯಡಿ ಮನೆ ಮನೆಗೆ ನೀರು ಸರಬರಾಜು ಮಾಡುವ ಯೋಜನೆಯ ಪ್ರಸ್ತಾವನೆಯನ್ನು ಗ್ರಾಮೀಣ ಕುಡಿಯುವ ನೀರಿನ ಇಲಾಖೆ ತಯಾರಿಸುವ ಬಗ್ಗೆ.
- ತುಮಕೂರು ಜಿಲ್ಲೆಯ ಕೆರೆಗಳಿಗೆ ನದಿ ನೀರು ಮತ್ತು ಇತರ ಉದ್ದೇಶಗಳಿಗೆ ಅಗತ್ಯವಿರುವ ನದಿ ನೀರು ತರುವ ಯೋಜನೆಯ ಪ್ರಸ್ತಾವನೆಯನ್ನು ವಿಶ್ವೇಶ್ವರಯ್ಯ ಜಲ ನಿಗಮ ತಯಾರಿಸುವ ಬಗ್ಗೆ.
- ತುಮಕೂರು ಜಿಲ್ಲೆಯ ವಾಟರ್ ಬಡ್ಜೆಟ್, ವಾಟರ್ ಆಡಿಟ್ ಮತ್ತು ವಾಟರ್ ಸ್ಟ್ರಾಟಜಿಯನ್ನು ಜಲಗ್ರಾಮ ಕ್ಯಾಲೆಂಡರ್ ಮೂಲಕ ಅಟಲ್‌ಭೂಜಲ್ ಯೋಜನೆ ಮತ್ತು ಜಲಾಮೃತ/ಅಂತರ್ಜಲ ಚೇತನ ಯೋಜನೆಗಳು ಸೇರಿದಂತೆ ಕನ್ವರ್ಜೆನ್ಸ್ ಯೋಜನೆಯ ಪ್ರಸ್ತಾವನೆಯನ್ನು ಸಣ್ಣ ನೀರಾವರಿ ಇಲಾಖೆ ತಯಾರಿಸುವ ಬಗ್ಗೆ.
- ತುಮಕೂರು ಜಿಲ್ಲೆಯ ನಗರ ಪ್ರದೇಶಗಳ ಕುಡಿಯುವ ನೀರಿನ ಪ್ರಸ್ತಾವನೆಯನ್ನು ಕರ್ನಾಟಕ ನಗರ ನೀರು ಸರಬರಾಜು ಮಂಡಳಿ ಇಲಾಖೆ ತಯಾರಿಸುವ ಬಗ್ಗೆ.
- ತುಮಕೂರು ಜಿಲ್ಲೆಯ ಕೈಗಾರಿಕಾ ಪ್ರದೇಶಗಳ ಕುಡಿಯುವ ನೀರಿನ ಪ್ರಸ್ತಾವನೆಯನ್ನು ಕೆಐಡಿಬಿ ತಯಾರಿಸುವ ಬಗ್ಗೆ.
- ತುಮಕೂರು ಜಿಲ್ಲೆಯ 330 ಗ್ರಾಮ ಪಂಚಾಯಿತಿ ಪ್ರದೇಶಗಳ ಜಲಗ್ರಾಮ ಕ್ಯಾಲೆಂಡರ್‌ನ್ನು ತಮ್ಮ ತಮ್ಮ ಕಚೇರಿಯಲ್ಲಿ ಪ್ರಕಟಿಸಿ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸುವ ಬಗ್ಗೆ.
- ತುಮಕೂರು ಜಿಲ್ಲೆಯ 11 ನಗರ ಪ್ರದೇಶಗಳ ಜಲಗ್ರಾಮ ಕ್ಯಾಲೆಂಡರ್‌ನ್ನು ತಮ್ಮ ತಮ್ಮ ಕಚೇರಿಯಲ್ಲಿ ಪ್ರಕಟಿಸಿ ಸಾರ್ವಜನಿಕರ ಅಭಿಪ್ರಾಯ ಅಭಿಪ್ರಾಯ ಸಂಗ್ರಹಿಸುವ ಬಗ್ಗೆ.
- ತುಮಕೂರು ನಗರದ ವ್ಯಾಪ್ತಿಯಲ್ಲಿ ಮಳೆ ನೀರು ಎಷ್ಟು ದೊರೆಯಲಿದೆ? ಆ ಮಳೆ ನೀರು ಎಲ್ಲಿಗೆ ಹರಿಯಲಿದೆ, ತುಮಕೂರು ನಗರದ ಹೇಮಾವತಿ ನೀರಿನ ಅಲೋಕೇಷನ್ 1.135 ನೀರಿನ ಬಳಕೆ, ತುಮಕೂರು ನಗರ, ತುಮಕೂರು ನಿಮ್ಜ್ ಮತ್ತು ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಅಭಿವೃದ್ಧಿ ಅಗುತ್ತಿರುವ ’ತ್ರಿವಳಿ ನಗರ’ ಪ್ರದೇಶಗಳ ನೀರಿನ ಅಗತ್ಯ ಎಷ್ಟು ಎಂಬ ಬಗ್ಗೆ ಅಧ್ಯಯನ ವರದಿ ತಯಾರಿಸುವ ಬಗ್ಗೆ.
(ಶ್ರೀ ಹರೀಶ್) ನಿವೃತ್ತ ಎಸ್.ಇ ತಾಂತ್ರಿಕ ಸಮಿತಿಯ ಕಾರ್ಯದರ್ಶಿ.