ತುಮಕೂರು–1 ಮ್ಯಾಪ್ –1 & ತುಮಕೂರು – 1 ಡೇಟಾ–1 ,
TUMAKURU:SHAKTHIPEETA FOUNDATION
ತುಮಕೂರು ನಗರದಲ್ಲಿ ಯಾವುದೇ ಇಲಾಖೆ, ಯಾವುದೇ ಯೋಜನೆಯ ಅನುದಾನದಲ್ಲಿ, ಯಾವುದೇ ಕಾಮಗಾರಿ ಕೈಗೊಂಡರೂ ಒಂದೇ ಜಿಐಎಸ್ ಮ್ಯಾಪ್‌ನಲ್ಲಿ ಗುರುತಿಸುವುದು ಕಡ್ಡಾಯ ಮಾಡಲಾಗುವುದು ಎಂದು ತುಮಕೂರು ನಗರದ ಶಾಸಕ ಶ್ರೀ ಜಿ.ಬಿ.ಜ್ಯೋತಿಗಣೇಶ್ ತಿಳಿಸಿದ್ದಾರೆ.
ಬಹಳ ವರ್ಷಗಳಿಂದ ನಗರದ ಸಾರ್ವಜನಿಕರ ಬೇಡಿಕೆಗೆ ಸ್ಪಂದನೆ ನೀಡಲಾಗಿದೆ, ಸ್ಮಾರ್ಟ್ ಸಿಟಿ ಮಾರ್ಗದರ್ಶಿಯಡಿಯೂ ಈ ಯೋಜನೆ ಜಾರಿಮಾಡಲು ನಿರ್ದೇಶನ ನೀಡಲಾಗಿತ್ತು. ಬಹಳ ಮುಖ್ಯವೆಂದರೆ ಭೂಮಿಯಲ್ಲಿ ಹೂತಿರುವ ವಿವಿಧ ಪೈಪ್‌ಲೈನ್‌ಗಳ ಮಾರ್ಗವನ್ನು ಪತ್ತೆ ಹಚ್ಚಲಾಗುವುದು.
ಒಂದು ರಸ್ತೆಯಲ್ಲಿರುವ ಪ್ರತಿಯೊಂದು ಸ್ವತ್ತಿನ ಪಿಐಡಿ ನಂಬರ್, ಇ – ಸ್ವತ್ತು ಸಂಖ್ಯೆ, ಮನೆ ಡೋರ್ ನಂಬರ್, ರಸ್ತೆಯ ನಾಮಫಲಕ ಮತ್ತು ಪ್ರತಿ ಮನೆಯ ವೋಟರ್ ಲಿಸ್ಟ್ ಆಯಾ ಮನೆಯ ಡೋರ್ ನಂಬರ್‌ಗೆ ಹೊಂದಾಣಿಕೆಯಾಗಿರುವಂತೆ ನಮೂದಾಗಿರಬೇಕು ಎಂಬ ಮಹತ್ರವಾದ ನಿರ್ಣಯವನ್ನು ಕೈಗೊಳ್ಳಲಾಗಿದೆ.
ಯಾವುದೇ ಒಂದು ಸ್ವತ್ತಿನ, ಒಂದು ಯೋಜನೆಯನ್ನು ಕ್ಲಿಕ್ ಮಾಡಿದರೇ ಆ ಸ್ವತ್ತಿನ ಅಥವಾ ಯೋಜನೆಯ ಇತಿಹಾಸದ ಪುಟಗಳು ದೊರೆಯಲಿವೆ, ಇದೊಂದು ತುಮಕೂರು ನಗರದ ಮಟ್ಟಿಗೆ ಐತಿಹಾಸಿಕ ಯೋಜನೆಯಾಗಲಿದೆ. ಮಾನ್ಯ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ಡಿಜಿಟಲ್ ಇಂಡಿಯಾವನ್ನು ಅಕ್ಷರಷಃ ಜಾರಿ ಮಾಡಲಾಗುವುದು.
ದಿನಾಂಕ:26.06.2020 ರಂದು ತುಮಕೂರು ಸ್ಮಾರ್ಟ್ ಸಿಟಿ ಇಂಟಿಗ್ರೇಟೆಡ್ ಕಮ್ಯಾಂಡ್ ಕಂಟ್ರೋಲ್ ಸೆಂಟರ್‌ನಲ್ಲಿ ಜಿಲ್ಲಾಧಿಕಾರಿ ಶ್ರೀ ರಾಕೇಶ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ತುಮಕೂರು ಸ್ಮಾರ್ಟ್ ಸಿಟಿ ಅಡ್ವೈಸರಿ ಫೋರಂ ಸಭೆಯಲ್ಲಿ ಮಹತ್ತರವಾದ ನಿರ್ಣಯ ಕೈಗೊಳ್ಳಲಾಯಿತು.
ಎರಡು ಮೂರು ದಿವಸದಲ್ಲಿ ಸೂಕ್ತ ಆದೇಶ: ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್
ತುಮಕೂರು ಮಹಾನಗರಪಾಲಿಕೆ, ತುಮಕೂರು ಸ್ಮಾರ್ಟ್ ಸಿಟಿ ಮತ್ತು ತುಮಕೂರು ಟೂಡಾ ಮೂರು ಸಲಹಾ ಕಂಪನಿಗಳೊಂದಿಗೆ ಮಾಡಿಕೊಂಡಿರುವ ಒಪ್ಪಂದದ ಪ್ರಕಾರ ನಗರದ ಒಂದು ಇಂಚಿನ ಭೂಮಿಯೂ ಯಾರ ಮಾಲೀಕತ್ವದಲ್ಲಿದೆ, ಯಾವ ಇಲಾಖೆ ಯಾವ ಜಿಐಎಸ್ ಲೇಯರ್‌ವಾರು ಮಾಹಿತಿ ಅಫ್ ಲೋಡ್ ಮಾಡಬೇಕು ಎಂಬ ಬಗ್ಗೆ ಇಲಾಖೆವಾರು ಅಧಿಕಾರಿ/ಇಂಜನಿಯರ್/ಕೇಸ್‌ವರ್ಕರ್‌ವಾರು ಹೊಣೆಗಾರಿಕೆ ನೀಡಬೇಕು ಎಂಬ ಬಗ್ಗೆ ಕಡತದೊಂದಿಗೆ ಬನ್ನಿ ಸೂಕ್ತ ಆದೇಶ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಶ್ರೀ ಡಾ.ರಾಕೇಶ್ ಕುಮಾರ್ ಅಧಿಕಾರಿಗಳಿಗೆ ಆದೇಶಿಸಿದರು.
ಟೂಡಾ ಜಿಐಎಸ್ ಆಧಾರಿತ ಮಾಸ್ಟರ್ ಪ್ಲಾನ್ ಮಾಡುತ್ತಿದ್ದು ನಗರದ 35 ವಾರ್ಡ್‌ಗಳಲ್ಲಿರುವ ಭೂ ಬಳಕೆ ಕರಾರುವಕ್ಕಾಗಿ ಇರಬೇಕು, ತಾಜಾ ಡೇಟಾ ಸಂಗ್ರಹಿಸಬೇಕು ಎಂದು ಖಡಕ್ ನಿರ್ದೆಶನ ನೀಡಿದರು. ನಗರದಲ್ಲಿರುವ 18 ಜನ ಬಿಲ್‌ಕಲೆಕ್ಟರ್ ವಾರು ವ್ಯಾಪ್ತಿ ನಿಗದಿ ಪಡಿಸಿ, ಪ್ರತಿ ಬಿಲ್‌ಕಲೆಕ್ಟರ್ ಪ್ರತಿ ಶುಕ್ರವಾರದ ಸಭೆಯಲ್ಲಿ ಎಷ್ಟು ಸ್ವತ್ತಿನ ಮಾಹಿತಿ ಅಫ್ ಲೋಡ್ ಮಾಡಲಾಗಿದೆ ಎಂಬ ಬಗ್ಗೆ ಶೇಕಡವಾರು ಸಭೆಗೆ ಹಾಜರಾಗಲು ಸೂಚಿಸಿದರು.
ಸಭೆಯಲ್ಲಿ ತುಮಕೂರು ಮಹಾನಗರಪಾಲಿಕೆ ಆಯುಕ್ತ ಮತ್ತು ತುಮಕೂರು ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೆಶಕರಾದ ಶ್ರೀ ಭೂಬಾಲನ್ ಮತ್ತು ಟೂಡಾ ಆಯುಕ್ತ ಶ್ರೀ ಯೋಗಾನಂದ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ತುಮಕೂರು ಸ್ಮಾರ್ಟ್ ಸಿಟಿ ಅಡ್ವೈಸರಿ ಫೋರಂ ಸದಸ್ಯ ಕುಂದರನಹಳ್ಳಿ ರಮೇಶ್ ಭಾಗವಹಿಸಿದ್ದರು.