29th March 2024
Share

TUMAKURU : SHAKTHIPEETA FOUNDATION

ಶ್ರೀಮತಿ ಶುಭಕಲ್ಯಾಣ್ರವರಿಗೊಂದು ಬಹಿರಂಗ ಪತ್ರ  

ದಿನಾಂಕ: 30.06.2020 ರಂದು ಬೆಳಿಗ್ಗೆ 10.30 ಗಂಟೆಗೆ ತುಮಕೂರು ಜಿಲ್ಲಾ ದಿಶಾ ಸಮಿತಿ ಸಭೆಯನ್ನು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ಅಧ್ಯಕ್ಷತೆಯಲ್ಲಿ ಕರೆಯಲಾಗಿದೆ.

ಇದೂವರೆಗೂ ಮೂರು ಸಭೆಗಳು ನಡೆದಿವೆ, ಜೊತೆಗೆ ಹತ್ತಾರು ವಿವಿಧ ಇಲಾಖೆಗಳ ಸಭೆಗಳು, ವಿವಿಧ ಯೋಜನೆಗಳ ಸ್ಥಳ ತನಿಖೆಗಳು ನಡೆದಿವೆ. ಇವೆಲ್ಲಾ ಸಭೆಗಳ ನಿರ್ಣಯ ಮತ್ತು ಸ್ಥಳ ತನಿಖೆಗಳ ಮಾಹಿತಿ ದಿಶಾ ಸಮಿತಿ ಸಭೆಯಲ್ಲ್ಲಿ ಅನುಮೋದನೆಯಾಗಿಲ್ಲ ಎಲ್ಲವೂ ಸಭೆಯಲ್ಲಿ ಚರ್ಚೆಯಾಗುವುದು ಅಗತ್ಯವಾಗಿದೆ.

 ಶ್ರೀ ಜಿ.ಎಸ್.ಬಸವರಾಜ್‌ರವರು 5 ನೇ ಭಾರಿಗೆ ಸಂಸದರಾದ ನಂತರ ಮೊಟ್ಟ ಮೊದಲ ದಿಶಾ ಸಮಿತಿ ಸಭೆ ದಿನಾಂಕ:21.09.2019 ರಂದು ನಡೆದಿದೆ. ಒಂದು ವರ್ಷಕ್ಕೆ ಸರಿಯಾಗಿ ದಿನಾಂಕ:21.09.2020 ರಂದು ದಿಶಾ ಸಮಿತಿ ಕರೆಯಲು ಸಂಸದರು ಚಿಂತನೆ ನಡೆಸಿದ್ದಾರೆ.

 ತುಮಕೂರು ಜಿಲ್ಲೆಯ ಮುಂದಿನ 2050 ರವರೆಗಿನ ದೂರದೃಷ್ಠಿ ಯೋಜನೆಗಳು ಸೇರದಂತೆ, ಇದೂವರೆಗೂ ಸ್ವಾತಂತ್ರ್ಯ ಪೂರ್ವದ ಪ್ರತಿಯೊಂದು ಯೋಜನೆಗಳು ಸೇರಿದಂತೆ ಎಲ್ಲಾ ಯೋಜನೆಗಳ ಮಾಹಿತಿ, 2574 ಗ್ರಾಮಗಳವಾರು, 330 ಗ್ರಾಮ ಪಂಚಾಯಿತಿವಾರು, 11 ನಗರ ಸ್ಥಳೀಯ ಸಂಸ್ಥೆವಾರು, 11 ಸ್ಥಳೀಯ ಸಂಸ್ಥೆವಾರು, 11 ವಿಧಾನಸಭಾ ಕ್ಷೇತ್ರವಾರು ಮತ್ತು  3 ಲೋಕಸಭಾ ಕ್ಷೇತ್ರವಾರು ಮಾಹಿತಿಗಳು ತುಮಕೂರು-ಜಿಐಎಸ್ ನಲ್ಲಿ ಇತಿಹಾಸ ಸಹಿತ ಒಂದೇ ಕಡೆ ದಾಖಲೆಯಾಗಲೇಬೇಕು ಇದು ಸಂಸದರ ಗುರಿ?

 ಇದೂ ದಿಶಾ ಸಮಿತಿಯ ಮತ್ತು ಡಿಜಿಟಲ್ ಇಂಡಿಯಾದ ನಿರ್ಧಿಷ್ಠ ಉದ್ದೇಶವೂ ಹೌದು. ಬ್ರಿಟೀಷ್ ಅಧಿಕಾರಿಗಳು ಮಾಡಿರುವ ಟೋಪೊಷೀಟ್ ನಲ್ಲಿರುವ ಮಾಹಿತಿಗಳಿಂದ ಆರಂಭಿಸಿ ಇಂದಿನ ಗೂಗಲ್ ಇಮೇಜ್‌ವರೆಗೂ ಕಾಣುವ ಪ್ರತಿಯೊಂದು ಯೋಜನೆಯ ಮಾಹಿತಿ ಲಭ್ಯವಾಗಬೇಕು. ಯೋಜನೆಗಳಿಗೆ ದಾಖಲೆ ದೊರೆಯದಿದ್ದಾಗ ಕಾರಣ ಸಹಿತ ಮಾಹಿತಿ ಇರಬೇಕು.

ದಿಶಾ ಸಮಿತಿ ವ್ಯಾಪ್ತಿಗೆ ಕೇಂದ್ರ ಸರ್ಕಾರದ ಅನುದಾನದ ಯೋಜನೆಗಳು ಬಂದರೂ, ಪ್ರಗತಿ ಪರಿಶೀಲನೆ ಮಾಡುವಾಗ ಡೂಪ್ಲಿಕೇಟ್/ಓವರ್‌ಲ್ಯಾಪ್ ಆಗದಂತೆ ಕ್ರಮವಹಿಸಲು ರಾಜ್ಯ ಸರ್ಕಾರದ ಮಾಹಿತಿಗಳು ಲಭ್ಯವಾಗಬೇಕು.

 ತುಮಕೂರು ಜಿಲ್ಲೆಗೆ ಒಂದೇ ಜಿಐಎಸ್ ಆಧಾರಿತ ನಕ್ಷೆ, ಒಂದೇ ಕಡೆ ಮಾಹಿತಿ ದೊರೆಯುವ ತುಮಕೂರು-ಜಿಐಎಸ್‌ನಲ್ಲಿಯೇ ಎಲ್ಲಾ ಇಲಾಖೆಗಳು ಪ್ರತಿಯೊಂದು ಯೋಜನೆಯ ಮಾಹಿತಿ ಅಫ್‌ಲೋಡ್ ಮಾಡುವುದು ಕರಾರುವಕ್ಕಾದ ನಿಯಮವಾಗ ಬೇಕು ಮತ್ತು ಅಗತ್ಯವಿರುವ ವೆಬ್ ಲಿಂಕ್ ಮಾಡಬೇಕು.

 ದಿನಾಂಕ:28.02.2020 ರಂದು ನಡೆದ ದಿಶಾ ಸಮಿತಿಯ ಸಭೆಯಲ್ಲಿ 10 ವರ್ಷಗಳ ಕಾಲ ಒಂದು ಸಂಸ್ಥೆಗೆ ಹೊರಗುತ್ತಿಗೆ ನೀಡಿ ತುಮಕೂರು ಜಿಐಎಸ್   ನಿರ್ವಹಣೆ ಮಾಡಲು ನಿರ್ಣಯ ಕೈಗೊಳ್ಳಲಾಗಿದೆ. ದಿನಾಂಕ: 30.06.2020 ರ ದಿಶಾ ಸಮಿತಿ ಸಭೆ ದಿನಾಂಕ:21.09.2020 ರ ಸಭೆಗೆ ಒಂದು ದಿಕ್ಸೂಚಿಯಾಗಲಿದೆ. ಈ ಮಧ್ಯೆ ತಾವೂ ಅಗತ್ಯವಿರುವ ಎಷ್ಟು ಸಭೆಗಳನ್ನು ಆಯೋಜಿಸಿದರೂ ಸಂಸದರು ಭಾಗವಹಿಸಲು ದೃಢ ನಿರ್ಧಾರ ಕೈಗೊಂಡಿದ್ದಾರೆ.

ಪ್ರತಿ ಶುಕ್ರವಾರದ ಸಭೆ ಮಾದರಿಯಾಗಬೇಕು?

 ತುಮಕೂರು ನಗರದ ಜಿಐಎಸ್ ಲೇಯರ್ ಅಂತಿಮಗೊಳಿಸಲು ಪ್ರತಿ ಶುಕ್ರವಾರ ಸಂಜೆ 5.30  ಗಂಟೆಗೆ ಸಭೆ ನಡೆಸಲು ಸಂಸದ ಶ್ರೀ ಜಿ.ಎಸ್.ಬಸವರಾಜ್‌ರವರಿಗೆ ಮತ್ತು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್‌ರವರಿಗೆ ಮತ್ತು  ತುಮಕೂರು ಜಿಲ್ಲಾಧಿಕಾರಿ ಡಾ. ಶ್ರೀ ರಾಕೇಶ್‌ಕುಮಾರ್‌ರವರಿಗೆ ಸಮಯ ದೊರೆಯಲಿದೆ ಎಂದಾದರೇ, ಜಿಲ್ಲೆಯ ಪ್ರತಿಯೊಂದು ಇಲಾಖೆಯ ಅಧಿಕಾರಿಗಳು ಪ್ರತಿವಾರ ಸಭೆ ನಡೆಸಿ ಎಲ್ಲಾ ಇಲಾಖೆಗಳ ಮಾಹಿತಿ ಒಂದೇ ಕಡೇ ಬರಲು ಶ್ರಮಿಸಲೇ ಬೇಕಲ್ಲವೇ. 352 ಸ್ಥಳೀಯ ಸಂಸ್ಥೆಗಳು ವಿಶೇಷ ಗಮನಹರಿಸಬೇಕಲ್ಲವೇ?

2020 ಕೊರೊನಾ ಮಹಾಮಾರಿಯ ಕೃಪೆಯಿಂದ ಯೋಜನೆಗಳ ಅನುಷ್ಠಾನಕ್ಕೆ ಸಂಕಷ್ಠ ಬರಲಿದೆ, ಡೇಟಾ ಸಂಗ್ರಹಣೆಗೆ ಅಗತ್ಯವಿರುವ ಹಣಕ್ಕೆ ಮತ್ತು ಸಮಯಕ್ಕೆ ತೊಂದರೆಯಾಗಲಾರದು. ಈ ವರ್ಷವನ್ನು ತುಮಕೂರು ದಿಶಾ ಜಿಲ್ಲೆಯ ತಾಜಾ ಡೇಟಾ ಸಂಗ್ರಹಣೆಯ ವರ್ಷವಾಗಿ ಆಚರಿಸ ಬಹುದಲ್ಲವೇ?

ಸಿ.ಇ.ಓ ತುಮಕೂರು ಜಿಲ್ಲಾ ಪಂಚಾಯತ್ ಹಾಗೂ ಸದಸ್ಯ ಕಾರ್ಯದರ್ಶಿ ದಿಶಾ  ತುಮಕೂರು ಜಿಲ್ಲೆ. ತುಮಕೂರು ಇವರು ವಿಶೇಷ ಗಮನ ಹರಿಸಬೇಕು ಹಾಗೇಯೇ ಜಿಲ್ಲೆಯ ಪ್ರತಿಯೊಂದು ಇಲಾಖಾ ಅಧಿಕಾರಿಗಳು ಮತ್ತು ನೌಕರರು ಸಹಕರಿಸಬೇಕು.

ಶ್ರೀ ಜಿ.ಎಸ್.ಬಸವರಾಜ್‌ರವರು ಲೋಕಸಭಾ ಸದಸ್ಯರು, ತುಮಕೂರು ಹಾಗೂ ಅಧ್ಯಕ್ಷರು ದಿಶಾ ಸಮಿತಿ, ತುಮಕೂರು ಜಿಲ್ಲೆ ಇವರು ನೀಡಿರುವ ಈ ಸಭೆ ಅಜೆಂಡಾವನ್ನು ಮೊದಲು ಎಲ್ಲರೂ ಅರ್ಥಮಾಡಿಕೊಳ್ಳಿ. ಇದರಂತೆ ಸಭೆಯ ಮಾಹಿತಿಗಳು ಇಲಾಖಾವಾರು ಲಭ್ಯವಿರಲಿ.

 ನೋಡಿ ಮೇಡಂ ತುಮಕೂರಿನ ಶಕ್ತಿಪೀಠ ಫೌಂಡೇಷನ್ ಮತ್ತು ಅಭಿವೃದ್ಧಿ ರೆವೂಲ್ಯೂಷನ್ ಫೋರಂ ತುಮಕೂರು ಜಿಲ್ಲೆಯ ಜಿಐಎಸ್ ಆಧಾರಿತಾ ತಾಜಾ ಡೇಟಾ ಸಂಗ್ರಹಿಸುವ ಕೆಲಸದಲ್ಲಿ ನಿರಂತರವಾಗಿ ಶ್ರಮಿಸಲಿದೆ. ಈಗಾಗಲೇ ಇಲಾಖಾವಾರು ಯೋಜನೆಗಳ ಪಟ್ಟಿಯನ್ನು ಸಹ ಮೇಲ್ ಮಾಡಿದ್ದೇನೆ ಹಾಗೂ ತುಮಕೂರು ಜಿಲ್ಲೆಯ ಸಮಗ್ರ ನೀರಾವರಿ ಯೋಜನೆ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲು ಕೈಗೊಳ್ಳಬೇಕಾದ ಕಲ್ಪನಾವರದಿಯನ್ನು ತಯಾರಿಸಿ ಸಂಸದರ ಮೂಲಕ ತಮಗೆ ನೀಡಲಾಗಿದೆ.

ಯಾವುದೇ ಇಲಾಖೆಯ ಅಧಿಕಾರಿಗಳು ಯಾವಾಗ ಕರೆದರೂ ನಮ್ಮಲ್ಲಿರುವ ವಿಷಯಗಳನ್ನು ಹಂಚಿಕೊಳ್ಳಲಿದ್ದೇವೆ. ಬೋಗಸ್ ಡೇಟಾಕ್ಕೆ ಜಿಲ್ಲೆಯಲ್ಲಿ ಇತಿಶ್ರೀ ಆಡಲೇಬೇಕು.

 ಡೇಟಾ ಸಂಗ್ರಹಿಸಲು ಯಾವುದೇ ಇಲಾಖೆಗೆ ಆರ್ಥಿಕ ನೆರವಿನ ಅಗತ್ಯವಿದ್ದಲ್ಲಿ ಸರ್ಕಾರಗಳಿಂದ ಮಂಜೂರು ಮಾಡಿಸಲು ಸಂಸದರು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು  ಮತ್ತು ಜಿಲ್ಲಾಧಿಕಾರಿಗಳು ಪಣ ತೊಟ್ಟಿದ್ದಾರೆ.

ನಾವು ಇನ್ನೂ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಜೆ.ಸಿ.ಮಾಧುಸ್ವಾಮಿರವರ  ಬಳಿ ಈ ಬಗ್ಗೆ ಸಮಾಲೋಚನೆ ನಡೆಸಿಲ್ಲ, ಶೀಘ್ರವಾಗಿ ಅವರೊಂದಿಗೂ ಸಮಾಲೋಚನೆ ನಡೆಸಲು ಉದ್ದೇಶಿಸಲಾಗಿದೆ.

 ಯಾವುದೇ ಇಲಾಖೆಯ ಅಧಿಕಾರಿಗಳು ಹಡಗಲ ಅಜ್ಜಿ ಕಥೆ ಹೇಳಬಾರದು, ಕರಾರುವಕ್ಕಾದ ಡೇಟಾ ಮತ್ತು ಜಿಐಎಸ್ ಲೇಯರ್ ಬಗ್ಗೆ ಖಚಿತ ಲಿಖಿತ ಮಾಹಿತಿಯೊಂದಿಗೆ ಸಭೆಗೆ ಆಗಮಿಸಲಿ. ಪ್ರತಿಯೊಂದು ಇಲಾಖೆಯ ಅಧಿಕಾರಿಗಳು ನೀಡುವ ಮಾಹಿತಿ ಬಗ್ಗೆ ಸಭೆ ನಡವಳಿಕೆಯಲ್ಲಿ ನಮೂದಾಗಲಿ, ಆಯಾ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಸಭೆ ನಡವಳಿಕೆಯೊಂದಿಗೆ ಪತ್ರ ಬರೆಯುವ ಪದ್ದತಿ ಆರಂಭಿಸಬೇಕಾಗುವುದು.

ದಿನಾಂಕ:30.06.2020 ದಿಶಾ ಸಭೆಯಲ್ಲಿ ಚರ್ಚಿಸುವ ವಿಚಾರಗಳು

  1. ಇದೂವರೆಗೂ ನಡೆದಿರುವ ದಿಶಾ ಸಮಿತಿಯ ಪಾನಾ ವರದಿಗಳ ಬಗ್ಗೆ.
  2. ತುಮಕೂರು ಜಿಐಎಸ್ ಇಲಾಖಾವಾರು ಎಷ್ಟೆಷ್ಟು ಲೇಯರ್ ಅಫ್‌ಲೋಡ್ ಮಾಡಿದ್ದಾರೆ. ಇನ್ನೂ ಎಷ್ಟೆಷ್ಟು ಲೇಯರ್ ಅಫ್‌ಲೋಡ್ ಮಾಡಲಿದ್ದಾರೆ ಎಂಬ ಬಗ್ಗೆ.
  3. ತುಮಕೂರು ಜಿಲ್ಲಾ ಸಮಗ್ರ ನೀರಾವರಿ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸುವ ಬಗ್ಗೆ.
  4. ತುಮಕೂರು ಜಿಲ್ಲೆಯ ನೀರಿನ ಆಯವ್ಯಯ, ಆಡಿಟ್ ಮತ್ತು ಸ್ಟ್ರಾಟಜಿ ಬಗ್ಗೆ.
  5. ಕೇಂದ್ರ ಸರ್ಕಾರದ ಯೋಜನೆಗಳ ಎಲ್ಲಾ ಇಲಾಖೆಗಳಿಂದ 2019-20 ನೇ ಸಾಲಿನ ವರ್ಷದಲ್ಲಿ ಮಂಜೂರಾದ, ಖರ್ಚಾದ, ಉಳಿಕೆ ಹಣ ಅಥವಾ ಬಿಡುಗಡೆ ಮಾಡಬೇಕಾಗಿರುವ ಮೊತ್ತದ ಇಂಡೆಕ್ಸ್ ಬಗ್ಗೆ.
  6. ಕೇಂದ್ರ ಸರ್ಕಾರದ ಯೋಜನೆಗಳ ವಿವಿಧ ಇಲಾಖೆಗಳ ಹಣವನ್ನು ವಿವಿಧ ಬ್ಯಾಂಕ್‌ಗಳಲ್ಲಿ ಡಿಪಾಸಿಟ್ ಮಾಡಿರುವ ಹಣದ ಇಂಡೆಕ್ಸ್ ಬಗ್ಗೆ.
  7. ಇನ್‌ವೆಸ್ಟ್ ತುಮಕೂರು ಬಗ್ಗೆ.
  8. ವಿವಿಧ ಇಲಾಖಾವಾರು ಪ್ರಗತಿ ಪರಿಶೀಲನೆ ಬಗ್ಗೆ.
  9. ಅಧ್ಯಕ್ಷರ ಅಪ್ಪಣೆ ಮೇರೆಗೆ ಬರುವ ಇತರೆ ವಿಚಾರಗಳು.