19th April 2024
Share
PRSHLAD JOSHI. G.S.BASAVARAJ, BINDAR & KUNDARANAHALLI RAMESH

TUMAKURU:SHAKTHIPEETA FOUNDATION

ಕೇಂದ್ರ ಸರ್ಕಾರದ ಸಂಸದೀಯ, ಗಣಿ ಮತ್ತು ಕಲ್ಲಿದ್ದಲು ಸಚಿವರಾದ ಶ್ರೀ ಪ್ರಹ್ಲಾದ ಜೋಷಿಯವರು ರಾಜ್ಯದ ನದಿಜೋಡಣೆ ಯೋಜನೆಗೆ ಕೇಂದ್ರ ಸರ್ಕಾರದಿಂದ ದೊರೆಯುವ ಎಲ್ಲಾ ಸೌಲಭ್ಯವನ್ನು ಮಂಜೂರು ಮಾಡಿಸುವ ಭರವಸೆ ನೀಡಿದ್ದಾರೆ.

ಮಾನ್ಯ ಪ್ರಧಾನಿಯವರಾದ ಶ್ರೀ ನರೇಂದ್ರ ಮೋದಿಯವರ ಕನಸಿನಂತೆ 2023 ರೊಳಗೆ ರಾಜ್ಯದ ಪ್ರತಿಯೊಂದು ಮನೆಗೂ ನಲ್ಲಿ ಮೂಲಕ ಕುಡಿಯುವ ನೀರು ಒದಗಿಸುವ ’ಜಲಜೀವನ್ ಮಿಷನ್ ಯೋಜನೆ’ಯನ್ನು ಪೂರ್ಣಗೊಳಿಸಲೇ ಬೇಕಿದೆ.  ಮಾನ್ಯ ಮುಖ್ಯ ಮಂತ್ರಿಯವರು ಈಗಾಗಲೇ ಆದೇಶ ನೀಡಿರುವಂತೆ ರಾಜ್ಯಾಧ್ಯಾಂತ ’ಊರಿಗೊಂದು ಕೆರೆ- ಆ ಕೆರೆಗೆ ನದಿ ನೀರು’ ಯೋಜನೆಗೆ ಪೂರಕವಾಗಿ ರಾಜ್ಯದ ನದಿ ಜೋಡಣೆ ಜಾರಿಯಾಗಲೇ ಬೇಕಿದೆ.

ಮಾನ್ಯ ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿರವರ ಕನಸಿನಂತೆ ನದಿ ಜೋಡಣೆ ಯೋಜನೆಗೆ ನಾನು ಬದ್ಧ, ಕೇಂದ್ರ ಸರ್ಕಾರದಿಂದ ಮಂಜೂರಾತಿಗೆ ನಾನು ಶ್ರಮಿಸುತ್ತೇನೆ. ರಾಜ್ಯ ಸರ್ಕಾರ ದಿಂದ ಸೂಕ್ತ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲು ನೀವೂ ಶ್ರಮಿಸಿ ಎಂದು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರಿಗೆ  ಛಾಟಿ ಬೀಸಿದರು.

 ದೆಹಲಿಯ ಅವರ ಗೃಹ ಕಚೇರಿಯಲ್ಲಿ ಜಿ.ಎಸ್.ಬಸವರಾಜ್ ರವರು ಭೇಟಿಯಾಗಿ ಕೇಂದ್ರದಲ್ಲಿ ನೆನೆಗುದಿಗೆ ಬಿದ್ದಿರುವ ಯೋಜನೆಗಳ ಶೀಘ್ರ ಮಂಜೂರಾತಿಗಾಗಿ ನಡೆಸಿದ ಚರ್ಚೆಯ ಸಂದರ್ಭದಲ್ಲಿ ವಿಶೇಷವಾಗಿ ನದಿ ಜೋಡಣೆ ಯೋಜನೆಗಳ ಬಗ್ಗೆ ಗಮನಹರಿಸಲಾಯಿತು.

ರಾಜ್ಯ ದಿಶಾ ಸಮಿತಿ ಸದಸ್ಯರಾದ ಕುಂದರನಹಳ್ಳಿ ರಮೇಶ್ ರವರಿಗೆ  ರಾಜ್ಯದ ನೆನೆಗುದಿಗೆ ಬಿದ್ದಿರುವ ಯೋಜನೆಗಳ ಬಗ್ಗೆ ಪ್ರತಿಯೊಂದು ಮಾಹಿತಿಯನ್ನು ನಮ್ಮ ಕಚೇರಿಯ ಅಧಿಕಾರಿಗಳ ಗಮನಕ್ಕೆ ತರಲು ಸಚಿವರು ಸೂಚಿಸಿದರು. 

ಶೀಘ್ರದಲ್ಲಿ ರಾಜ್ಯದ ನದಿ ಜೋಡಣೆ ಬಗ್ಗೆ ಮಾನ್ಯ ಪ್ರಧಾನಿಯವರ ಬಳಿ ನಿಯೋಗ ಹೋಗಲು ಪಕ್ಷಾತೀತವಾಗಿ ರಾಜ್ಯದ ಎಲ್ಲಾ ಸಂಸದರ ಸಭೆಯನ್ನು ದೆಹಲಿಯಲ್ಲಿ ನಡೆಸಲು ಸಮಾಲೋಚನೆ ನಡೆಯಿತು.

ರಾಜ್ಯ ಮಟ್ಟದ ಹಾಗೂ ಎಲ್ಲಾ ಜಿಲ್ಲಾಮಟ್ಟದ ದಿಶಾ ಸಮಿತಿ ಸಭೆಗಳಲ್ಲಿ ನೀರಿನ ಅಗತ್ಯತೆ ಬಗ್ಗೆ ಸೂಕ್ತ ನಿರ್ಣಯ ಮಾಡುವ ಬಗ್ಗೆಯೂ ಚರ್ಚಿಸಲಾಯಿತು.