22nd December 2024
Share
G.S.BASAVARAJ, K. JAIPRAKASH, MAHESH.VARADAIAH,MOHAN KUMAR, MANASA & KUNDARANAHALLI RAMESH

TUMAKURU:SHAKTHIPEETA FOUNDATION

ಕಾಲ ನಮ್ಮನ್ನು ಕಾಯುವುದಿಲ್ಲ, ಹುದ್ದೆಯಿಂದ ವ್ಯಕ್ತಿಗೆ ಬೆಲೆ ಬರುವುದಿಲ್ಲ, ವ್ಯಕ್ತಿಯಿಂದ ಹುದ್ದೆಗೆ ಬೆಲೆ ಬರುತ್ತದೆ. ಸರ್ಕಾರಿ ಆದೇಶ ಕಾಯುವುದು ಬೇಡ, ಸರ್ಕಾರದಿಂದ ಬಂದ ಪತ್ರವೇ ಸಾಕು. ಅದ್ದರಿಂದ ರಾಜ್ಯದ ನದಿ ಜೋಡಣೆ ಯೋಜನೆಯ ಬಗ್ಗೆ ಡಿಪಿಆರ್ ಮಾಡುವ ಕೆಲಸ ತಿಂಗಳು ಲೆಕ್ಕದಲ್ಲಿ, ದಿನದ ಲೆಕ್ಕದಲ್ಲಿ ಬೇಡ, ಗಂಟೆಗಳ ಲೆಕ್ಕ ಹಾಕಿ ಪೂರ್ಣಗೊಳಿಸಿ ಎಂದು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಸಲಹೆ ನೀಡಿದರು.

ರಾಜ್ಯದ ನದಿ ಜೋಡಣೆಯ ಡಿಪಿಆರ್ ತಯಾರಿಸಲು ನೋಡೆಲ್ ಆಫೀಸರ್ ಆಗಿ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಕೆ. ಜೈಪ್ರಕಾಶ್ ರವರನ್ನು ನೇಮಕ ಮಾಡಿರುವುದರಿಂದ ಅವರು ದಿನಾಂಕ:15.03.2021 ರಂದು ಕಾವೇರಿ ನೀರಾವರಿ ನಿಗಮದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದರು.

ದಿನಾಂಕ:23.02.2021 ರಂದು ಸರ್ಕಾರದಿಂದ ಪತ್ರ ಬರೆದಿದ್ದರೂ, ಈ ವರೆಗೂ ಏಕೆ ಕಾರ್ಯಾರಂಭ ಮಾಡಿಲ್ಲ ಎಂದು ಕೇಳಿದಾಗ ಶ್ರೀ ಕೆ.ಜೈಪ್ರಕಾಶ್ ರವರು ಸರ್ಕಾರದಿಂದ ಆದೇಶ ಬರಬಹುದು ಎಂದು ಕಾಯುತ್ತಿದ್ದೇನೆ ಸಾರ್, ಎಂದಾಗ ಈ ರೀತಿ ಹಾಸ್ಯ ಚಟಾಕಿ ಹಾರಿಸಿದರು.

ನಾನು 5 ನೇ ಭಾರಿ ಲೋಕಸಭಾ ಸದಸ್ಯನಾಗಿ ಆಯ್ಕೆಯಾದ ನಂತರ, ದಿನಾಂಕ:03.06.2019 ರಂದು ಆಗಿನ ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಹೆಚ್.ಡಿ.ಕುಮಾರ ಸ್ವಾಮಿಯವರಿಗೆ ರಾಜ್ಯದ ನದಿ ಜೋಡಣೆ ಬಗ್ಗೆ ಪತ್ರ ಬರೆಯಲು ಆರಂಭಿಸಿದೆ.  ಇನ್ನೇನು 2 ವರ್ಷ ಮುಗಿಯಲಿದೆ.

ಅಂದಿನಿಂದ ಇಲ್ಲಿಯವರೆಗೆ ಮಾನ್ಯ ಪ್ರಧಾನ ಮಂತ್ರಿಯವರಿಗೆ, ಕೇಂದ್ರ ಜಲಶಕ್ತಿ ಸಚಿವರಿಗೆ, ಮಾನ್ಯ ಮುಖ್ಯ ಮಂತ್ರಿಯವರಿಗೆ, ಮಾನ್ಯ ಜಲಸಂಪನ್ಮೂಲ ಸಚಿವರಿಗೆ ಹಲವಾರು ಪತ್ರಗಳನ್ನು ಬರೆದಿದ್ದೇನೆ. ಹಲವಾರು ಇಲಾಖೆಗಳಲ್ಲಿ ಹಲವಾರು ಸಭೆಗಳನ್ನು ಮಾಡಿದ್ದೇನೆ.

ದಿನಾಂಕ:21.09.2019 ರಂದು ನಡೆದ ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿಯಲ್ಲಿ ತುಮಕೂರು ಜಿಲ್ಲೆಯ ಸಮಗ್ರ ನೀರಾವರಿ ಬಗ್ಗೆ ಹಾಗೂ ರಾಜ್ಯದ ನದಿ ಜೋಡಣೆ ಬಗ್ಗೆ ನಿರ್ಣಯ ಮಾಡಲಾಗಿದೆ. ಈ ಎಲ್ಲಾ ನಡವಳಿಕೆಗಳ ಹಿನ್ನೆಲೆಯಲ್ಲಿ ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಮಾನ್ಯ ಪ್ರಧಾನ ಮಂತ್ರಿಯವರಾದ ಶ್ರೀ ನರೇಂದ್ರ ಮೋದಿಯವರಿಗೆ ದಿನಾಂಕ:10.02.2019, 12.02.2019  ಮತ್ತು 10.02.2020  ರಂದು ಪತ್ರ ಬರೆಯುವ ಮೂಲಕ ಮಾನ್ಯ ಪ್ರಧಾನಿಯವರ ಗಮನ ಸೆಳೆದಿದ್ದಾರೆ.

ದಿನಾಂಕ:29.07.2019 ರಂದು ಕೇಂದ್ರ ಸರ್ಕಾರದ ಜಲಶಕ್ತಿ ಸಚಿವರಾದ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ರವರಿಗೆ ಪತ್ರ ಬರೆದ ಹಿನ್ನಲೆಯಲ್ಲಿ ಅವರ ಕಚೇರಿಯಂದ ದಿನಾಂಕ:16.10.2019  ರಂದೇ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ, ಜೊತೆಗೆ ಸುಮಾರು 11 ಭಾರಿ ಕೇಂದ್ರ ಸರ್ಕಾರದಿಂದ ನೆನಪೋಲೆ, ಇ ಮೇಲ್ ಕಳುಹಿಸುವುದರ ಜೊತೆಗೆ ಕೇಂದ್ರ ಸರ್ಕಾರದ ಇಲಾಖೆಯ ಅಧಿಕಾರಿಗಳು ಹಲವಾರು ಸಲ ರಾಜ್ಯ ಸರ್ಕಾರದ ಜಲಸಂಪನ್ಮೂಲ ಇಲಾಖೆಗೆ ಬಂದು ಸಮಾಲೋಚನೆ ನಡೆಸಿದ್ದಾರೆ. ಆದರೇ ಇದೂವರೆಗೂ ರಾಜ್ಯ ಸರ್ಕಾರದಿಂದ ಉತ್ತರ ನೀಡಿಲ್ಲ ಎಂಬ ಅಂಶ ನನಗೆ ದೆಹಲಿಯಲ್ಲಿ ಜಲಶಕ್ತಿ ಸಚಿವಾಲಯದಲ್ಲಿ ತಿಳಿಸಿದಾಗ ಮೈಯಲ್ಲಾ ಬೆಂಕಿ ಆಯಿತು.

ನಾವು ಸಭೆಗಳ ಮೇಲೆ ಸಭೆ ಮಾಡಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುತ್ತಿದ್ದೇವೆ, ಆದರೇ ಇದೂವರೆಗೂ ಕೇಂದ್ರದಿಂದ ಈ ರೀತಿ ಪತ್ರ ಬಂದಿದೆ ಎಂದು ಏಕೆ ತಿಳಿಸಲಿಲ್ಲ ಎಂಬುದೇ ತಿಳಿಯುತ್ತಿಲ್ಲ.

ಅದೇನೆ ಇರಲಿ ನಾನು ದಿನಾಂಕ:09.11.2020 ರಂದು ಮಾನ್ಯ ಮುಖ್ಯ ಮಂತ್ರಿಯವರಿಗೆ ಬರೆದ ಪತ್ರದ ಆಧಾರದ ಮೇಲೆ ತಮ್ಮನ್ನು ನೋಡೆಲ್ ಆಫೀಸರ್ ಆಗಿ ನೇಮಕ ಮಾಡಿದ್ದಾರೆ. ನಾನೂ ಇದೂವರೆಗೂ ಬರೆದಿರುವ ಎಲ್ಲಾ ಪತ್ರಗಳ ವಿಷಯಗಳನ್ನೂ  ಸೇರ್ಪಡೆ ಮಾಡಿ ಒಂದು ಕಲ್ಪನಾ ವರದಿ’ ಸಿದ್ಧಪಡಿಸಿ, ಕಾಲ ಮಿತಿ ನಿಗದಿಗೊಳಿಸಿ ಕಾರ್ಯಕ್ರಮ ರೂಪಿಸಲು ಸಲಹೆ ನೀಡಿದರು.

‘ಅತಿ ಶೀಘ್ರದಲ್ಲಿ ರಾಜ್ಯದ 28 ಜನ ಲೋಕಸಭಾ ಸದಸ್ಯರು ಹಾಗೂ 12 ಜನ ರಾಜ್ಯ ಸಭಾ ಸದಸ್ಯರ ಸಭೆಯನ್ನು  ಕೇಂದ್ರ ಸಚಿವರಾದ ಶ್ರೀ ಪ್ರಹ್ಲಾದ್ ಜೋಷಿಯವರು ಕರೆಯುವುದಾಗಿ ತಿಳಿಸಿದ್ದಾರೆ. ಸಭೆಯ ವೇಳೆಗೆ ಕೇಂದ್ರ ಸರ್ಕಾರದಿಂದ ಆಗಬೇಕಾದ ಕೆಲಸಗಳ ಬಗ್ಗೆ ವಿವರವಾದ ಮಾಹಿತಿ ಸಂಗ್ರಹಿಸಿ ನೀಡಲು ಸೂಚಿಸಿದರು.’

  ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಕೆ. ಜೈಪ್ರಕಾಶ್‌ರವರು ಪ್ರತಿಕ್ರೀಯೆ ನೀಡಿ ನಿಮ್ಮ ಕಾಳಜಿ ನಮಗೆ ಅರ್ಥವಾಗಿದೆ ಸಾರ್, ಇಂದಿನಿಂದ ಸಮರೋಪಾದಿಯಲ್ಲಿ ಕಾರ್ಯ ಆರಂಭಿಸುವ ಭರವಸೆ ನೀಡಿದರು. ಜೊತೆಗೆ ಅವರ ಸಿಬ್ಬಂಧಿ ಕರೆದು ಮಾತನಾಡಿ ಒಂದು ರೋಡ್ ಮ್ಯಾಪ್ ಸಿದ್ಧಪಡಿಸಲು ಡಿಕ್ಟೇಟ್ ಮಾಡಿದರು.

 ರಾಜ್ಯ ದಿಶಾ ಸಮಿತಿ ಸದಸ್ಯ ಕುಂದರನಹಳ್ಳಿ ರಮೇಶ್ ಮಾತನಾಡಿ ನೋಡಿ ಸಾರ್, ನೀರಾವರಿ ತಜ್ಞ ಶ್ರೀ ಜಿ.ಎಸ್.ಪರಮಶಿವಯ್ಯನವರು ಮತ್ತು ಶ್ರೀ ಜಿ.ಎಸ್.ಬಸವರಾಜ್‌ರವರು ಈ ಯೋಜನೆ ಹೋರಾಟ ಆರಂಭಿಸಿ ಸುಮಾರು 38 ವರ್ಷಗಳು ಕಳೆದವು. ನಾನೂ ಇವರಿಬ್ಬರ ಜೊತೆ ಸೇರಿ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ದಿನಾಂಕ:07.01.1997  ರಂದು ಅಪ್ನಾಸ್ ಸಂಸ್ಥೆ ಹುಟ್ಟು ಹಾಕಿ ಇನ್ನೇನು 25 ವರ್ಷ ತುಂಬಲಿದೆ.

ಬಸವರಾಜ್‌ರವರ ಸಂಸದರ ಅಧಿಕಾರದ ಈ ಅವಧಿಯಲ್ಲಿ 2 ವರ್ಷ ಮುಗಿಯಿತು. ಅವರು ಈಗ ಕೇಂದ್ರ ಜಲಶಕ್ತಿ ಸಚಿವಾಯಲದ ಸಮಿತಿ ಸದಸ್ಯರಾಗಿದ್ದಾರೆ. ಜೊತೆಗೆ ರಾಜ್ಯ ದಿಶಾ ಸಮಿತಿಯ ಸದಸ್ಯರು ಆಗಿದ್ದಾರೆ.

ತಮ್ಮನ್ನು ರಾಜ್ಯದ ನದಿ ಜೋಡಣೆ ಡಿಪಿಆರ್ ಮಾಡಲು ನೋಡೆಲ್ ಆಫೀಸರ್ ಆಗಿ ಸರ್ಕಾರ ನೇಮಿಸಿದೆ.  ತಾವೂ ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯನವರ ಅಧ್ಯಯನ ಕೇಂದ್ರದ ತಾಂತ್ರಿಕ ನಿರ್ಧೇಶಕರಾಗಿರಬಹುದು. ಅಧ್ಯಯನ ಕೇಂದ್ರ ಜೀವಂತವಾಗಿದೆಯೋ ಅಥವಾ ಸತ್ತಿದೆಯೋ ತಿಳಿದಿಲ್ಲ.

 ನಾನು ಸಹ ರಾಜ್ಯದ ದಿಶಾ ಸಮಿತಿ ಸದಸ್ಯನಾಗಿದ್ದೇನೆ. ಕೇಂದ್ರ ಸರ್ಕಾರದ ಇಲಾಖೆಗಳಲ್ಲಿ ಮತ್ತು ರಾಜ್ಯ ಸರ್ಕಾರದ ಇಲಾಖೆಗಳಲ್ಲಿ ಕಡತಗಳ ಸ್ಥಿತಿಗತಿ ಬಗ್ಗೆ ತಿಳಿದು ಕೊಳ್ಳಲು ನನಗೂ ಒಂದು ಸುವರ್ಣ ಅವಕಾಶ ಸಿಕ್ಕಿದೆ. ಈಗ ನಾವು ಕಾಲಹರಣ ಮಾಡಿದರೇ ಜನರಲ್ಲ, ದೇವರು ನಮ್ಮನ್ನು ಕ್ಷಮಿಸುವುದಿಲ್ಲ ಆದ್ದರಿಂದ ಸಮರೋಪಾದಿಯಲ್ಲಿ ಚಟುವಟಿಕೆ ಆರಂಭಿಸಲು ಅಭಿಪ್ರಾಯ ವ್ಯಕ್ತಪಡಿಸಿದರು.

 ತಕ್ಷಣ ತುಮಕೂರು ಜಿಲ್ಲಾ ದಿಶಾ ಸಮಿತಿಯಲ್ಲಿ ಪಿಪಿಟಿ ಪ್ರದರ್ಶಿಸಿದ ಇಐ ಟೆಕ್ನಾಲಜಿ ಶ್ರೀ ರಂಗನಾಥ್‌ರವರು ಮತ್ತು ಪ್ರೀತಿಕ್ಯಾಡ್‌ನ ಶ್ರೀ ವೇದಾನಂದಾ ಮೂರ್ತಿಯವರನ್ನು ಕರೆಸಿ ಸುಧೀರ್ಘವಾದ ಮಾತುಕತೆ ನಡೆಸಿದರು.

ಈ ಸಭೆಯಲ್ಲಿ ತುಮಕೂರು ಹೇಮಾವತಿ ನಾಲಾ ವಲಯದ ಮುಖ್ಯ ಇಂಜಿನಿಯರ್ ಶ್ರೀ ಮಹೇಶ್, ಎಸ್‌ಇ. ಶ್ರೀ ವರದಯ್ಯ, ಇಇ ಶ್ರೀ ಮೋಹನ್ ಕುಮಾರ್ ಮತ್ತು ಎಇ ಮಾನಸ ಹಾಜರಿದ್ದರು.

ರಾಜ್ಯದ ಜಲಗ್ರಂಥ’ ರಚಿಸುವ ಕಾರ್ಯಕ್ಕೆ ಚಾಲನೆ ನೀಡಲು ಎಲ್ಲಾ ಸಿದ್ದತೆಗಳು ಆರಂಭವಾಗುವ ಮಹೂರ್ತ ಫಿಕ್ಸ್ ಆರಂಭವಾಯಿತು ಎಂದರೆ ತಪ್ಪಾಗಲಾರದು.