21st November 2024
Share
DDLR SUJAYKUMAR, DUDC PD SHUBHA & KUNDARANAHALLI RAMESH

TUMAKURU:SHAKTHIPEETA FOUNDATION

ತುಮಕೂರು ಸ್ಮಾರ್ಟ್ ಸಿಟಿ ಅಡ್ವೈಸರಿ ಫೋರಂ ಸಭೆಯಲ್ಲಿ  SURVEY CONTROL MONUMENT ಬಗ್ಗೆ ಚರ್ಚೆ ನಡೆಯಿತು. ಜಿಲ್ಲಾಧಿಕಾರಿ ಶ್ರೀ ವೈ.ಎಸ್.ಪಾಟೀಲ್ ರವರು ಮಾತನಾಡಿ ಈ ವಿಚಾರವನ್ನು ಡಿಡಿಎಲ್‌ಆರ್ ಜೊತೆ ಮಾತನಾಡಿ ರೂಪುರೇಷೆ ನಿರ್ಧರಿಸಲು ತಿಳಿಸಿದರು.

ಈ ಬಗ್ಗೆ ಡಿಡಿಎಲ್‌ಆರ್ ಶ್ರೀ ಸುಜಯ್ ಕುಮಾರ್ ರವರು ಮತ್ತು  SURVEY CONTROL MONUMENT ಬಗ್ಗೆ 2011 ರಲ್ಲಿ ನಗರಾಭಿವೃದ್ಧಿ ಇಲಾಖೆಯಲ್ಲಿ ಒಂದು ಮಾರ್ಗದರ್ಶಿ ಸೂತ್ರ ಹೊರಡಿಸಿ ಈ SURVEY CONTROL MONUMENT ನಿರ್ಮಾಣ ಮಾಡಲು ಜಿಲ್ಲಾಧಿಕಾರಿ ಅಧ್ಯಕ್ಷರು ಮತ್ತು ಜಿಲ್ಲಾ  ಯೋಜನಗರಾಭಿವೃದ್ಧಿ ಪ್ರಾಧಿಕಾರದ ಪಿಡಿಯವರು ಸದಸ್ಯ ಕಾರ್ಯದರ್ಶಿಯಾಗಿದ್ದಾರೆ. ಈ ಹಿನ್ನಲೆಯಲ್ಲಿ ಪಿಡಿಯವರಾದ ಶ್ರೀಮತಿ ಶುಭರವರು ಹಾಜರಿದ್ದರು.

ಕೇವಲ 10 ನಿಮಿಷದಲ್ಲಿ ಸರ್ವೇ ಆಫ್ ಇಂಡಿಯಾದ ಅಧಿಕಾರಿಗಳೊಂದಿಗೆ ಡಿಡಿಎಲ್‌ಆರ್ ಮಾತನಾಡಿ ಸಮಾಲೋಚನೆ ನಡೆಸಿದರು. ತುಮಕೂರು ಸ್ಮಾರ್ಟ್ ಸಿಟಿ ಎಂಡಿಯವರು ಸರ್ವೇ ಆಫ್ ಇಂಡಿಯಾಕ್ಕೆ ಪತ್ರ ಬರೆದರೆ ಶೀಘ್ರದಲ್ಲಿ ಅವರು ಅಗತ್ಯಕ್ರಮಕೈಗೊಳ್ಳುವುದಾಗಿ ತಿಳಿಸಿದ್ದಾರೆ ಎಂಬ ಮಾಹಿತಿ ನೀಡಿದರು.

ಈ ಯೋಜನೆಯ ಮಹತ್ವ ಅರಿತಿದ್ದ ಡಿಡಿಎಲ್‌ಆರ್ ಸಾರ್ ಇದು ಬಹಳ ಒಳ್ಳೆಯ ಕೆಲಸ, ಪೈಲಟ್ ಆಗಿ ತುಮಕೂರು ನಗರದಲ್ಲಿ ಮಾಡಿ ನಂತರ ತುಮಕೂರು ಜಿಲ್ಲಾಧ್ಯಾಂತ ಮಾಡೋಣ, ಡಿಜಿಟಲ್ ಸರ್ವೇ ಮಾಡಬೇಕಾದರೇ ಇದು ಆಗಲೇ ಬೇಕು. ಬಹಳ ಆಕ್ಯುರೆಸಿ ಬರುತ್ತದೆ. ಎಂಬ ಸಂತೋಷ ಹಂಚಿಕೊಂಡರು.

ಶ್ರೀಮತಿ ಶುಭರವರು ಜಿಲ್ಲಾಧಿಕಾರಿಗಳಿಂದ ಸರ್ವೇ ಆಫ್ ಇಂಡಿಯಾಕ್ಕೆ ಪತ್ರ ಬರೆಸಿ ಶೀಘ್ರ ಕ್ರಮಕೈಗೊಳ್ಳುವುದಾಗಿ ತಿಳಿಸಿದರು. ತುಮಕೂರು ಸ್ಮಾರ್ಟ್ ಸಿಟಿ ಎಂಡಿಯವರಾದ ಶ್ರೀ ರಂಗಸ್ವಾಮಿರವರಿಗೂ ದೂರವಾಣಿಯಲ್ಲಿ ಮಾತನಾಡಿದಾಗ ಅವರು ಸಹ ಸಭೆ ನಡವಳಿಕೆಯಾಗಿದೆ, ಇಂದೇ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ.

ಸಾಮಾನ್ಯಜನರಿಗೆ ಇದರ ಮಹತ್ವ ತಿಳಿಯ ಬೇಕೆಂದರೆ ನಗರದ ಚರಂಡಿಗಳಲ್ಲಿ, ರಸ್ತೆಗಳಲ್ಲಿ ನೀರು ನಿಂತು ಕೆಸರು ಗದ್ದೆಯಾಗುವ ಸ್ಥಿತಿಯನ್ನು ಬದಾಯಿಸುವ ಸಾಧನ ಇವಾಗಲಿವೆ. ಕಾಟಾಚಾರದ ಸಮೀಕ್ಷೆ ನಡೆಸುವವರಿಗೆ ಕಡಿವಾಣ ಬೀಳಲಿದೆ. ಜಿಐಎಸ್ ಲೇಯರ್ ತಪಾಸಣೆ ಮಾಡಲು ಇದು ವರದಾನವಾಗಲಿದೆ’

ತುಮಕೂರು ಸ್ಮಾರ್ಟ್ ಸಿಟಿ ಕೈಗೊಳ್ಳುವ ಮಹತ್ವದ ಕೆಲಸ ಇದಾಗಲಿದೆ.