22nd December 2024
Share
G.S.BASAVARAJ, K.JAIPRAKASH, SATHYANAND & KUNDARANAHALLI RAMESH

TUMAKURU:SHAKTHIPEETA FOUNDATION

ಕರ್ನಾಟಕ ರಾಜ್ಯದ ನದಿ ಜೋಡಣೆ ಯೋಜನೆ ಅಧ್ಯಯನಕ್ಕೆ ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪ ನವರು ಆದೇಶ ನೀಡಿದ್ದಾರೆ. ಊರಿಗೊಂದು ಕೆರೆ- ಕೆರೆಗೆ ನದಿ ನೀರು’ ಇದು ಶ್ರೀ ಜಿ.ಎಸ್.ಬಸವರಾಜ್‌ರವರ ಕನಸು, ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯನವರಿಂದ ಬಂದ ಬಳುವಳಿ.

 ರಾಜ್ಯದ ನದಿ ಜೋಡಣೆ ನೋಡೆಲ್ ಆಫೀಸರ್ ಆಗಿ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಕೆ.ಜೈಪ್ರಕಾಶ್ ನೇಮಕವಾಗಿದ್ದಾರೆ. ’ಪ್ರವಾಹದ ಸಂದರ್ಭದಲ್ಲಿ ಸುಮಾರು 600 ಟಿ.ಎಂ.ಸಿ ಅಡಿ’ ನೀರನ್ನು ರಾಜ್ಯಾದ್ಯಾಂತ ಬಳಸಲು ಚಿಂತನೆ ಆರಂಭವಾಗಿದೆ. ಈ ನೀರನ್ನು ರಾಜ್ಯದ ಎಲ್ಲೆಲ್ಲಿ ಯಾವ ಯಾವ ಕಡೆ ಸ್ಟೋರ್ ಮಾಡಕೊಳ್ಳಬೇಕು ಎಂಬ ಪರಿಕಲ್ಪನೆಯೂ ಮೊಳಕೆಯೊಡೆದಿದೆ.

 ಈ ಹಿನ್ನಲೆಯಲ್ಲಿ ತುಮಕೂರು ಜಿಲ್ಲೆಯಲ್ಲೊಂದು ’ಬಫರ್ ಡ್ಯಾಂ’ ನಿರ್ಮಾಣ ಮಾಡಬಹುದು ಎಂದು ಜಿ.ಎಸ್.ಪರಮಶಿವಯ್ಯನವರು ಹೇಳುತ್ತಿದ್ದರು. ಬಸವರಾಜ್‌ರವರು ಕಳೆದ 30 ವರ್ಷಗಳಿಂದ ’ಜಾಲಗುಣಿ ಬಳಿ ಡ್ಯಾಂ’ ನಿರ್ಮಾಣ ಮಾಡುತ್ತೇವೆ ಎಂದು ಹೇಳುತ್ತಲೇ ಬಂದಿದ್ದಾರೆ..

 ಜಲಸಂಪನ್ಮೂಲ ಇಲಾಖೆಯ ಕಾರ್ಯದರ್ಶಿಯಾಗಿದ್ದ ಶ್ರೀ ಗುರುಪಾದಸ್ವಾಮಿಯವರು ಹೇಮಾವತಿ ಪ್ಲಡ್ ಪ್ಲೋ ಕೆನಾಲ್’ ಪ್ರಸ್ತಾವನೆ ಮಾಡುವಾಗ, ಈ ಜಾಗದಲ್ಲಿಯೇ ಡ್ಯಾಂ ನಿರ್ಮಾಣ ಮಾಡಲು ಸ್ಥಳ ಗುರುತಿಸಲಾಗಿತ್ತು. ಈ ಡ್ಯಾಂಗೆ ಒಂದು ಆಕಾರವನ್ನು ತುಮಕೂರಿನ ಸ್ಪೆಕ್ಟ್ರಾ ಅಸೋಯೇಷನ್ ಶ್ರೀ ಸತ್ಯಾನಂದ್‌ರವರು ಮತ್ತು ಅವರ ತಂಡ ನೀಡುತ್ತಾ ಇದೆ. ಅಂದು ಸಹ ಅವರೇ ಮಾಡಿದ್ದರು. ಪರಮಶಿವಯ್ಯನವರ ಸಲಹೆ ಮೇರೆಗೆ ಶ್ರೀ ಮಲ್ಲೇಶ್‌ರವರು ಮಾರ್ಗದರ್ಶನ ಮಾಡಿದ್ದರು. ಇಂದು ಜೈಪ್ರಕಾಶ್‌ರವರು ಮಾರ್ಗದರ್ಶನ ನೀಡುತ್ತಿದ್ದಾರೆ.

 ’ಇಂದು ಕನಸಿನ ಯೋಜನೆಗೆ ರಾಜ್ಯದ ನದಿ ಜೋಡಣೆ ಅಧ್ಯಯನದಿಂದ ಪುನಃ ಚಾಲನೆ ದೊರಕಿದೆ. ಡ್ಯಾಂ ವಿಶೇಷ ಎಂದರೆ ಸುಮಾರು 40 ರಿಂದ 50 ಟೆ.ಎಂ.ಸಿ ಅಡಿ ನೀರು ಸಂಗ್ರಹಣಾ ಸಾಮಾರ್ಥ್ಯ, 20 ರಿಂದ 25 ಕೀಮೀ ಫೆರಫೆರಿಯಲ್ ಮಣ್ಣಿನ ಏರಿ, ಏರಿಯ ಬೇಸ್ ಸುಮಾರು 400 ಮೀಟರ್‌ನಿಂದ 500 ಮೀ ಅಗಲ, ಏರಿಯ ಎತ್ತರ  ಸುಮಾರು 45 ಮೀಟರ್‌ನಿಂದ 80 ಮೀವರೆಗೂ ಬರಬಹುದು. ಕೇವಲ 7500 ರಿಂದ 9000 ಎಕರೆ ಜಮೀನು ಸಾಕಾಗಲಿದೆ. ಸುಮಾರು 18 ಗ್ರಾಮಗಳು ಯೋಜನೆಯ ವ್ಯಾಪ್ತಿಗೆ ಬರಲಿವೆ’ ಇದು ಸಹ ಎತ್ತಿನಹೊಳೆ ಅಕ್ವಿಡಕ್ಟ್‌ನಂತೆ, ರಾಷ್ಟ್ರದಲ್ಲಿಯೇ ವಿನೂತನ ಯೋಜನೆಯಾಗಲಿದೆ.

 ಎತ್ತಿನಹೊಳೆ ಯೋಜನೆಯ ಭೈರುಗೊಂಡ್ಲು ಡ್ಯಾಂಗೆ ಸುಮಾರು 5000 ಎಕರೆ ಜಮೀನಿನಲ್ಲಿ, ಸುಮಾರು 5.75 ಟಿ.ಎಂ.ಸಿ ಅಡಿ ನೀರು ಸಂಗ್ರಹವಾಗಲಿದೆ. ಸುಮಾರು 49 ಟಿ.ಎಂ.ಸಿ ಅಡಿ ನೀರನ ಸಂಗ್ರಹಣಾ ಸಾಮಾರ್ಥ್ಯದ ಕೆ.ಆರ್.ಎಸ್ ಡ್ಯಾಂಗೆ ಸುಮಾರು 32000 ಎಕರೆ ಜಮೀನು ಮುಳುಗಡೆಯಾಗಿದೆಯಂತೆ. ಈ ಎಲ್ಲಾ ಮಾಹಿತಿಯ ಸಂಗ್ರಹಣೆಯೂ ಆರಂಭವಾಗಿದೆ.

ತುಮಕೂರು ತಾಲ್ಲೂಕು, ಗುಬ್ಬಿ ತಾಲ್ಲೂಕು ಮತ್ತು ಶಿರಾ ತಾಲ್ಲೋಕಿನ ಸಂಗಮ’ದಲ್ಲಿ ಈ ಡ್ಯಾಂ ನಿರ್ಮಾಣವಾಗಲಿದೆ. ಈ ಬಗ್ಗೆ ಆಳವಾದ ಆಧ್ಯಯನವನ್ನು ಶ್ರೀ ಸತ್ಯಾನಂದ್ ಆರಂಭಿಸಿದ್ದಾರೆ, ಇದೇ ಮಾದರಿ ಮಣ್ಣಿನ ಏರಿಯನ್ನು ಮಹಾರಾಷ್ಟ್ರದ ಧಾಮಿನಿ ಆಣೆಕಟ್ಟಿಗೆ ಸುಮಾರು ವರ್ಷಗಳ ಹಿಂದೆ ಇವರೇ ಗುತ್ತಿಗೆದಾರರ ಜೊತೆ ಸೇರಿ ಡಿಸೈನ್ ಮಾಡಿದ ಅನುಭವವೂ ಇದೆ.

ತುಮಕೂರು ನಿಮ್ಜ್, ತುಮಕೂರು ಏರ್ ಪೋರ್ಟ್ ಜೊತೆಗೆ ತುಮಕೂರು ಬಫರ್ ಡ್ಯಾಂ’  ಪರಿಕಲ್ಪನೆಯೂ ಜನರ ಬಾಯಿಗೆ ಬಂದಂತಾಗಿದೆ. ಯುಗಾದಿ ಅಮಾವಾಸೆಯ(11.04.2021) ರಂದು ಜೈಪ್ರಕಾಶ್‌ರವರ ಮನೆಯಲ್ಲಿ ಸಂಸದ ಶ್ರೀ ಜಿ.ಎಸ್.ಬಸವರಾಜ್‌ರವರೊಂದಿಗೆ ಗಂಭಿರವಾದ ಚರ್ಚೆ ನಡೆದಿದೆ.