22nd December 2024
Share

TUMAKURU:SHAKTHIPEETA FOUNDATION

  ‘ತುಮಕೂರಿನಲ್ಲೊಂದು ಬಫರ್ ಡ್ಯಾಂ’ ಎಂಬ ಶೀರ್ಷಿಕೆ ನೋಡಿ, ಬಫರ್ ಡ್ಯಾಂ ಎನ್ನ ಬೇಡಿ, ವಾಣಿವಿಲಾಸ ಡ್ಯಾಂಗೆ ಅಭಿವೃದ್ಧಿ ರೆವೂಲ್ಯೂಷನ್ ಫೋರಂ  ಹೆಸರಿಟ್ಟಿರುವಂತೆ ಮಧ್ಯೆ ಕರ್ನಾಟಕದ ವಾಟರ್ ಬ್ಯಾಂಕ್’ ಎಂಬ ಹೆಸರನ್ನೆ ಎಲ್ಲಾ ನದಿ ಪಾತ್ರಗಳವಾರು ಅಥವಾ ಜಿಲ್ಲಾವಾರು ಪ್ರವಾಹದ ನದಿ ನೀರು ಸಂಗ್ರಹಣಾ ಡ್ಯಾಂಗಳಿಗೆ ವಾಟರ್ ಬ್ಯಾಂಕ್’ ಎಂದು ಹೆಸರಿಡಲು ಸರ್ಕಾರಕ್ಕೆ ಸಲಹೆ ನೀಡುವುದು ಒಳ್ಳೆಯದು ಎಂದು ಹಲವಾರು ಜನ ನೀರಾವರಿ ಚಿಂತಕರು ಸಲಹೆ ನೀಡಿದ್ದಾರೆ.

‘ ರಾಜ್ಯದ ನದಿ ಜೋಡಣೆ ನೋಡೆಲ್ ಆಫೀಸರ್  ಶ್ರೀ ಕೆ.ಜೈಪ್ರಕಾಶ್ ರವರು ಮೊದಲು ಗುರುತಿಸ ಬೇಕಾಗಿರುವುದು ರಾಜ್ಯದ ಯಾವ ನದಿ ಪಾತ್ರದಲ್ಲಿ, ಯಾವ ಭಾಗದಲ್ಲಿ ನೀರಿನ ಕೊರತೆಯಿದೆ, ಯಾವ ನದಿ ಪಾತ್ರದ ನೀರನ್ನು, ಯಾವ ನದಿ ಪಾತ್ರಕ್ಕೆ ಜೋಡಣೆ ಮಾಡಬೇಕು ಎಂಬುದಾಗಿದೆ.’

ರಾಜ್ಯದ ನದಿ ಜೋಡಣೆ ಮತ್ತು ಕೇಂದ್ರದ ನದಿ ಜೋಡಣೆಯಿಂದ ದೊರಕುವ  ನದಿ ನೀರನ್ನು ರಾಜ್ಯದ ಯಾವ ಗ್ರಾಮಗಳಿಗೆ ಹಂಚಿಕೆ ಮಾಡಬೇಕು. ಈ ನೀರು ಸಂಗ್ರಹಿಸಲು ಎಲ್ಲೆಲ್ಲಿ ಎಷ್ಟು ನೀರಿನ ಸಾಮಾರ್ಥ್ಯದ ವಾಟರ್ ಬ್ಯಾಂಕ್’  ನಿರ್ಮಾಣ ಮಾಡಬೇಕು ಎಂಬ ಮಾಹಿತಿ ಸಂಗ್ರಹಿಸುವುದು ಅಗತ್ಯವಾಗಿದೆ.

2016 ರಲ್ಲಿ ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿಯಲ್ಲಿ ಸಿದ್ಧಪಡಿಸಿರುವ ಸ್ಟೇಟ್ ಇರ್ರಿಗೇಷನ್ ಪ್ಲಾನ್’ ಮತ್ತು ಡಿಸ್ಟ್ರಿಕ್ಟ್ ಇರ್ರಿಗೇಷನ್ ಪ್ಲಾನ್’ ವರದಿಯನ್ನು ಬೇಸ್ ಆಗಿ ತೆಗೆದುಕೊಳ್ಳುವುದು ಸೂಕ್ತವಾಗಿದೆ.

ಅಟಲ್ ಭೂಜಲ್ ಮತ್ತು ಜಲಾಮೃತ ಯೋಜನೆಯಡಿ ರಾಜ್ಯದ ಪ್ರತಿ ಗ್ರಾಮದ ವಾಟರ್ ಆಡಿಟ್, ವಾಟರ್ ಬಡ್ಜೆಟ್ ಮತ್ತು ವಾಟರ್ ಸ್ಟ್ರಾಟಜಿ’ ಯನ್ನು ಮೊದಲು ಪೂರ್ಣಗೊಳಿಸಿದರೇ ಮಾತ್ರ ಊರಿಗೊಂದು ಕೆರೆ _ ಕೆರೆಗೆ ನದಿ ನೀರು’ ಯೋಜನೆಗೆ ಪೂರಕವಾಗಲಿದೆ.

 ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ರಾಜ್ಯದ ಪ್ರತಿ ಗ್ರಾಮದ, ಪ್ರತಿ ಜಲಸಂಗ್ರಹಾಗಾರಕ್ಕೆ ಇಷ್ಟು ನದಿ ನೀರಿನ ಅಗತ್ಯವಿದೆ ಎಂಬ ಬೇಡಿಕೆಯನ್ನು ಜಲಸಂಪನ್ಮೂಲ ಇಲಾಖೆಗೆ ಕೊಡಬೇಕು. ಸಣ್ಣ ನೀರಾವರಿ ಸಚಿವರಾದ ಶ್ರೀ ಜೆ.ಸಿ.ಮಾಧುಸ್ವಾಮಿಯವರು ಮತ್ತು ಸಣ್ಣ ನೀರಾವರಿ ಇಲಾಖೆ ಕಾರ್ಯದರ್ಶಿ ಶ್ರೀ ಮೃತ್ಯುಂಜಯ ಸ್ವಾಮಿಯವರು ಕರಾರು ವಕ್ಕಾದ ರಿಯಲ್ ಡಾಟಾದೊಂದಿಗೆ ಮನವಿ ಸಲ್ಲಿಸುವುದು ಅವರ ಕರ್ತವ್ಯ ಹಾಗೂ ಹಕ್ಕು ‘ನದಿ ನೀರಿನಲ್ಲಿ ಸಾಮಾಜಿಕ ನ್ಯಾಯ ಬೇಡವೇ?’

ತುಮಕೂರು ಸಂಸದ ಶ್ರೀ ಜಿ.ಎಸ್.ಬಸವರಾಜ್‌ರವರ ಮನವಿ ಮೇರೆಗೆ ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಸಣ್ಣ ನೀರಾವರಿ ಇಲಾಖೆ ಕಾರ್ಯದರ್ಶಿಗೆ ಈಗಾಗಲೇ ಸೂಚಿಸಿದ್ದರೂ, ಈವರೆಗೂ ಇಷ್ಟು ನೀರು ನಮ್ಮ ಇಲಾಖೆಗೆ ಬೇಕು ಎಂಬ ‘ಲೆಕ್ಕ  ಹೇಳಿಲ್ಲ ಯಾಕೆ ಸ್ವಾಮಿ?’

‘ಮಾಧುಸ್ವಾಮಿಯವರೇ ಜೀವನದಲ್ಲಿ ನಿಮಗೊಂದು ಬಂಫರ್ ಅವಕಾಶ ದೊರಕಿದೆ. ಜೀವನದಲ್ಲಿ ಜನರ ಸೇವೆ ಮಾಡಲು ಇದಕ್ಕಿಂತ ಇನ್ನೂ ಯಾವ ಇಲಾಖೆ ಬೇಕು?’ ಮುಖ್ಯ ಮಂತ್ರಿಗಳ ಸೂಚನೆ ಜೊತೆಗೆ, ಕೇಂದ್ರ ಸರ್ಕಾರದಿಂದ ಶ್ರೀ ಜಿ.ಎಸ್.ಬಸವರಾಜ್ ರವರ ಮನವಿ ಮೇರೆಗೆ ಕೇಂದ್ರ ಜಲಶಕ್ತಿ ಸಚಿವರಾದ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ರವರು ಸಹ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಆದ್ದರಿಂದ ರಾಜ್ಯದ 29340 ಗ್ರಾಮಗಳ 38608 ಜಲಸಂಗ್ರಹಾರಗಳಿಗೆ ನದಿ ನೀರು ತುಂಬಿಸಲು ಬೇಕಾಗಿರುವ ನೀರು ಮತ್ತು ಯೋಜನೆಗೆ ಎಷ್ಟು ಹಣ ಬೇಕು ಸಿದ್ಧಪಡಿಸಿ ಸ್ವಾಮಿ.

 ರಾಜ್ಯದ ಗ್ರಾಮವಾರು, ಜಲಸಂಗ್ರಹಗಾರಗಳವಾರು ನದಿ ನೀರಿನ ಅವಶ್ಯಕತೆಯ ಬಗ್ಗೆ ತಾವು ಗಮನಹರಿಸಲೇ ಬೇಕು. ಯೋಜನೆ ಯಾವಾಗ ಬೇಕಾದರೂ ಆಗಲಿ, ನಿಮ್ಮ ಅವಧಿಯಲ್ಲಿ ಇಂಥ ಗ್ರಾಮಗಳಿಗೆ, ಇಂಥ ನದಿ ನೀರು ಬರಲಿದೆ ಎಂಬ ಅಲೋಕೇಷನ್ ಮಾಡಿಸಿ ಇದಕ್ಕಿಂತ ದೊಡ್ಡ ಕೆಲಸ  ಯಾವುದಿದೆ.’

ಸಣ್ಣ ನೀರಾವರಿ ಇಲಾಖೆ ವತಿಯಿಂದ ತುಮಕೂರು ಜಿಲ್ಲೆಯಲ್ಲಿನ ನದಿ ನೀರಿನ ಮಾಹಿತಿ ಮತ್ತು ಕೆರೆಗಳ ಮಾಹಿತಿ ಸಿದ್ಧಪಡಿಸಿರುವಂತೆ,  ಮೊದಲು  ರಾಜ್ಯದ 31 ಜಿಲ್ಲೆಗಳ ಮಾಹಿತಿ ಸಂಗ್ರಹಿಸಿ ಸ್ವಾಮಿ. ಅಧಿಕಾರಿಗಳು ಈಗ ನೀಡುವ ‘ಡಾಟಾ ಬರೀ ಬೋಗಸ್, ಜಿಐಎಸ್  ಆಧಾರಿತ ಡಾಟಾ ಸಿದ್ಧಪಡಿಸಿ ಕೊಳ್ಳಲೇ ಬೇಕು, ಇದು ನಿಮಗೂ ಗೊತ್ತಿದೆ.’

‘ಈ ಯುಗಾದಿ ದಿವಸ ನೀವೂ ಪ್ರತಿಜ್ಞೆ ಮಾಡಿದರೇ, ಮುಂದಿನ ಯುಗಾದಿ ವೇಳೆಗೆ ಒಂದು ’ಜಲಗ್ರಂಥ’ ರಚಿಸಬಹುದು. ದೇಶದಲ್ಲಿಯೇ ವಿನೂತನವಾಗಲಿದೆ. ’ಉತ್ತರ ಧೃವ – ದಕ್ಷಿಣ ಧೃವ’ ಯಾರಿಗೂ ಒಳ್ಳೆಯ ಬೆಳವಣಿಗೆಯಲ್ಲ, ಕೂಡಿ ಬಾಳಿದರೇ ಸ್ವರ್ಗ ಸುಖ.’

ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯನಾಗಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ವಿಳಂಭ ಮಾಡುವ ಇಲಾಖಾ ಅಧಿಕಾರಿಗಳ ಕಚೇರಿಯಲ್ಲಿ ಟೇಬಲ್ ಚಳುವಳಿ’ ಮಾಡಲು ನಾನು ಇಂದು(13.04.2021) ಪ್ರತಿಜ್ಞೆ ಮಾಡಿದ್ದೇನೆ. ಮೊದಲು ನಿಮ್ಮ ಇಲಾಖೆಯಿಂದ ಆರಂಭಿಸಲು ಸಜ್ಜಾಗಿದ್ದೇನೆ ಎಂಬ ಅಂಶವನ್ನು ಬಹಿರಂಗವಾಗಿ ತಮ್ಮ ಗಮನಕ್ಕೆ ತರಬಯಸಿದ್ದೇನೆ.