29th March 2024
Share

TUMAKURU:SHAKTHIPEETA FOUNDATION

ತುಮಕೂರು ಸ್ಮಾರ್ಟ್ ಸಿಟಿ ವತಿಯಿಂದ ತುಮಕೂರು ನಗರ ಗ್ರಂಥಾಲಯದ ಆವರಣದಲ್ಲಿ ನಿರ್ಮಾಣ ಮಾಡಿರುವ ಬೃಹತ್ ಕಟ್ಟಡದಲ್ಲಿ ದೇಶದಲ್ಲಿಯೇ ವಿಶೇಷತೆ ಹೊಂದಿರುವ ನಾಲೇಡ್ಜ್ ಹಬ್ ಅಥವಾ ನಾಲೇಡ್ಜ್ ಪಾರ್ಕ್ ಅಥವಾ ಜ್ಞಾನ ಭಂಡಾರ ಯಾವುದೇ ಹೆಸರಿನ ಡಿಜಿಟಲ್ ಲೋಕವನ್ನು ಸೃಷ್ಟಿಸಲು ಸಜ್ಜಾಗಿದೆ.

ತುಮಕೂರು ಸ್ಮಾರ್ಟ್ ಸಿಟಿ ಅಡ್ವೈಸರಿ ಫೋರಂ ಸಭೆಯಲ್ಲಿ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರು , ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿ ಗಣೇಶ್‌ರವರು, ಜಿಲ್ಲಾಧಿಕಾರಿಯವರಾದ ಶ್ರೀ ವೈ.ಎಸ್.ಪಾಟೀಲ್‌ರವರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ರಂಗಸ್ವಾಮಿಯವರು ಸೇರಿದಂತೆ ಸಭೆಯಲ್ಲಿ ಭಾಗವಹಿಸಿದ್ದ ಎಲ್ಲರೂ ಒಮ್ಮತದ ನಿರ್ಣಯ ಮಾಡಿ ರೂಪುರೇಷೆ ಸಿದ್ಧಪಡಿಸಲು ಹಾಗೂ ನಿರ್ವಹಣೆಗಾಗಿ ಒಂದು ಸಮಿತಿಯನ್ನು ರಚಿಸಲಾಗಿದೆ.

ಇಲ್ಲಿ ಮಕ್ಕಳಿಂದ ಆರಂಭಿಸಿ ಹಿರಿಯ ನಾಗರೀಕರವರೆಗೂ, ರೈತರಿಂದ ಆರಂಭಿಸಿ ನಿರುದ್ಯೋಗಿಗಳಿಗೂ, ಸಂಶೋಧಕರಿಗೂ, ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ, ಉದಯೋನ್ಮುಖ ಬರಹಗಾರರಿಗೂ, ವಿವಿಧ ವರ್ಗದ ಜನತೆಗೂ ಜ್ಞಾನದ ರಸದೌತಣ ನೀಡುವ ಕೇಂದ್ರವಾಗಲಿದೆ. ತುಮಕೂರಿನ ಇತಿಹಾಸ ಮತ್ತು ಅಭಿವೃದ್ಧಿ ಮಾಹಿತಿಗಳು ಇಲ್ಲಿ ಡಿಜಿಟಲ್ ಲೈಬ್ರರಿಯಲ್ಲಿ ದಾಖಲಾಗಲಿದೆ.

ಆತ್ಮಹತ್ಯೆ ಮಾಡಿಕೊಳ್ಳಲು ಇಚ್ಚಿಸಿದವರಿಗೆ ಸ್ವಾಮಿ ವಿವೇಕನಂದರ ಪುಸ್ತಕಗಳನ್ನು ಓದಿ ನಂತರ ಆತ್ಮಹತ್ಯೆ ಮಾಡಿಕೊಳ್ಳಿ ಎಂದು ಹೇಳಿದರೆ, ಪುಸ್ತಕ ಓದಿದ ನಂತರ ಅವರೇ ಆತ್ಮಹತ್ಯೆ ಮಾಡಿಕೊಳ್ಳುವರರ ಮನಸ್ಸು ಬದಾಲಾಯಿಸಲು ಆಂದೋಲನವನ್ನೇ ರೂಪಿಸುತ್ತಾರಂತೆ.

 ಹಾಗೆಯೇ ನಿರುದ್ಯೋಗಿಗಳು, ಜೀವನದಲ್ಲಿ ಕತ್ತಲು ಕವಿದಿರುವವರು,  ಈ ಆವರಣದೊಳಗೆ ಬಂದರೆ ಮುಂದೆ ಅವರೇ ಅಂಥಹವರಿಗೆ ದಾರಿ ದೀಪವಾಗುವ ವಾತವಾರಣ ಸೃಷ್ಟಿಸುವಂತಾಗಬೇಕು, ಎಂಬ ಪರಿಕಲ್ಪನೆ ಮೊಳಕೆಯೊಡೆದಿದೆ. ಕಟ್ಟಡದ ಆವರಣ ಗೋಡೆಯಿಂದ ಆರಂಭಿಸಿ ಒಂದು ಅಡಿ ಕಟ್ಟಡದ ಜಾಗದಲ್ಲೂ ಜ್ಞಾನ ಭಂಢಾರವೇ ತುಂಬಿರ ಬೇಕು. ಡಿಜಿಟಲ್ ರೂಪದಲ್ಲೂ, ಬರಹಗಳ ರೂಪದಲ್ಲೂ ಇರಬೇಕು ಮತ್ತು ಪುಸ್ತಕಗಳ,ಕಡತಗಳ ರೂಪದಲ್ಲೂ ಎಲ್ಲಾ ಮಾಹಿತಿ ಒಂದೇ ಕಡೆ ದೊರೆಯಬೇಕು ಎಂಬ ಕನಸು ಕಾಣಲಾಗಿದೆ.

ಈ ಕಟ್ಟಡದ ಒಳಗೆ ಬರುವವರ ಮಾಹಿತಿಗಾಗಿ ಆಧಾರ್ ಬಯೋಮೆಟ್ರಿಕ್ ಅಳವಡಿಸಲು ಯೋಚಿಸಲಾಗಿದೆ. ಯಾವ ವರ್ಗ ಹೆಚ್ಚಿನ ರೀತಿಯಲ್ಲಿ ಬಳಸಿಕೊಳ್ಳುತ್ತಾರೆ ಎಂಬ ಡಿಜಿಟಲ್ ದಾಖಲೆ ಸಂಗ್ರಹಿಸಲು ಯೋಚಿಸಲಾಗಿದೆ. ಕಾಲಮಿತಿ ನಿಗಧಿಪಡಿಸಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಸಮಿತಿ ಮತ್ತು ನಗರ ಗ್ರಂಥಾಲಯ ಪ್ರಾಧಿಕಾರ ರೂಪುರೇಷೆ ನಿರ್ಧರಿಸಲಿದೆ.

ದಿನಾಂಕ:16.04.2021  ರಂದು ಈ ಕಟ್ಟಡದ ಪ್ರಗತಿಯನ್ನು ಪರಿಶೀಲನೆ ಮಾಡಲಾಯಿತು. ಈ ಸಂದರ್ಭದಲ್ಲಿ ತುಮಕೂರು ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ರಂಗಸ್ವಾಮಿಯವರು, ಇಇ ಶ್ರೀ ಬಸವರಾಜೇ ಗೌಡರವರು, ಗ್ರಂಥಾಲಯದ ಶ್ರೀಮತಿ ಮಂಜುಳರವರು, ಶ್ರೀ ಬಸವರಾಜ್‌ರವರು ಸೇರಿದಂತೆ ವಿವಿಧ ಅಧಿಕಾರಿಗಳು ವಿವಿಧ ಮಾಹಿತಿಗಳನ್ನು ಹಂಚಿಕೊಂಡರು.

 ನಾನು ಕೇಳಿದ ಹಲವಾರು ಮಾಹಿತಿಗಳನ್ನು ಒಂದೆರಡು ದಿವಸದಲ್ಲಿ ನೀಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ,  ನಂತರ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಉನ್ನತ ಮಟ್ಟದ ಅಧಿಕಾರಿಗಳ ಜೊತೆಯಲ್ಲೂ ಸಮಾಲೋಚನೆ ನಡೆಸಿ, ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಸಮಿತಿಯ ಪದಾಧಿಕಾರಿಗಳ ಜೊತೆಯಲ್ಲೂ ಚರ್ಚಿಸಿದ ನಂತರ ಮುಂದಿನ  ತುಮಕೂರು ಸ್ಮಾರ್ಟ್ ಸಿಟಿ ಅಡ್ವೈಸರಿ ಫೋರಂ ಸಭೆಯಲ್ಲಿ  ಅಂತಿಮ ರೂಪುರೇಷೆ ನೀಡಲಾಗುವುದು.

 ಈ ಬಗ್ಗೆ ತುಮಕೂರು ಜಿಲ್ಲೆಯ ವಿವಿಧ ವರ್ಗದವರ ಅಭಿಪ್ರಾಯ ಸಂಗ್ರಹಿಸಲು ಒಂದು ಡಿಜಿಟಲ್ ಆಂದೋಲವನ್ನು ರೂಪಿಸಲು ಸಹ ತುಮಕೂರು ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ರಂಗಸ್ವಾಮಿಯವರು ಚಿಂತನೆ ನಡೆಸಿದ್ದಾರೆ.

ತುಮಕೂರು ಜಿಲ್ಲೆಯ ವಿವಿಧ ವರ್ಗಧ ಜನರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಮನವಿ ಮಾಡಲಾಗಿದೆ. ಆಗಸ್ಟ್ ತಿಂಗಳಿನಿಂದ ಆಕ್ಟೋಬರ್ ವೇಳೆಗೆ ತುಮಕೂರು ಸ್ಮಾರ್ಟ್ ಸಿಟಿಯ ವಿವಿಧ ಕಾಮಗಾರಿಗಳ ಲೋಕಾರ್ಪಣೆ ಮಾಡಲು ನಗರದ ಶಾಸಕರು ಚಿಂತನೆ ನಡೆಸಿದ್ದಾರೆ. ಈ ವೇಳೆಗೆ ಈ ಜ್ಞಾನ ಭಂಡಾರವೂ  ಲೋಕಾರ್ಪಣೆ ಯಾಗುವ ಆಶಾಭಾವನೆಯಿದೆ.