6th December 2023
Share

TUMAKURU:SHAKTHIPEETA FOUNDATION

ಕೇಂದ್ರ ಸರ್ಕಾರ ಕೊರೊನಾ ಹಿನ್ನಲೆಯಲ್ಲಿ ಆಯುಷ್ ಇಲಾಖೆಗೆ ಪುನರ್ ಜೀವನ ನೀಡುವುದು ಅಗತ್ಯವಾಗಿದೆ ಎಂದು ನಾಟಿ ವೈದ್ಯ ಶ್ರೀ ನಾಗಣ್ಣನವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಮ್ಮದೇನಿದ್ರು ಕಾಯಿಲೆ ಬರುವುದನ್ನು ತಡೆಗಟ್ಟಲು ಪ್ರಯತ್ನ ಮಾಡುವುದಾಗಿದೆ. ಕಾಯಿಲೆ ಬಂದ ನಂತರ ಅಲೋಪತಿ ಚಿಕಿತ್ಸೆ ಅಗತ್ಯವಾಗಿದೆ.

ಕೊರೊನಾ ಸಮಯದಲ್ಲಿ ಕಾಯಿಲೆಗಿಂತ ಜನರಿಗೆ ದುಡ್ಡಿನ ಚಿಂತೆ ಕಾಡುತ್ತಿದೆ. ಆಸ್ಪತ್ರೆಗೆ ಸೇರಿದ ನಂತರ ಬಿಲ್ ಎಷ್ಟು ಬರಲಿದೆ ಎಂಬುದೇ ಒಂದು ಕಾಯಿಲೆಯಾಗಿದೆ. ಸರ್ಕಾರ ಕೊರೊನಾಗೆ ಉಚಿತವಾಗಿ ಚಿಕಿತ್ಸೆ ನೀಡಬೇಕು. ಇಲ್ಲದಿದ್ದರೆ ದುಡ್ಡಿಗೆ ಹೆದರಿಕೊಂಡು ಆಸ್ಪತ್ರೆಗೆ ಸೇರದೆ ಮನೇಯಲ್ಲಿಯೇ ಸಾಯುತ್ತಾರೆ.

ಮೊದಲು ನಾವೇನಾದ್ರು ಹೇಳಿದರೆ ಬುರುಡೆ ಅಜ್ಜ ಎನ್ನುತ್ತಿದ್ದವರು ಕಳ್ಳರು ಬಂದ ಹಾಗೆ ಬಂದು ನಮ್ಮ ಜೊತೆ ಚರ್ಚೆ ನಡೆಸುತ್ತಿದ್ದಾರೆ. ನಮಗೂ ಇನ್ನೊಂದು ಯುಗ ಬರಲಿದೆ. ಆದರೇ ನಾಟಿ ವೈದ್ಯರ ಕುಚೇಷ್ಟೆಯಿಂದ ಒಬ್ಬರ ಕಾಲನ್ನು ಒಬ್ಬರು ಎಳೆದುಕೊಂಡು ಸಂಘಟನೆ ಹಾಳಾಗಿದೆ. ಸರ್ಕಾರಗಳ ಹಂತದಲ್ಲಿ ಇರುವ ಯೋಜನೆಗಳ ಅರಿವು ನಮಗೂ ಇಲ್ಲ.ಮೇಲ್ಮಟ್ಟದಲ್ಲಿ ನಮ್ಮ ಹೆಸರು ಹೇಳಿಕೊಂಡು ನುಂಗಣ್ಣಗಳು ದುಡ್ಡು ತಿನ್ನುತ್ತಿದ್ದಾರಂತೆ ಎಂಬ ಅಂಶಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

About The Author