22nd December 2024
Share

TUMAKURU: SHAKTHIPEETA FOUNDATION

ತುಮಕೂರು ಡಿಹೆಚ್‌ಶ್ರೀ ನಾಗೇಂದ್ರವರವರೇ,

ಕೊರೊನಾಗೆ ಮೆಡಿಸನ್ ಇದೆಯಾ? ಗೃಹಿಣಿ ಶ್ರೀ ಮತಿ ಉಮಾರವರ ಪ್ರಶ್ನೆ.

ಕೊರೊನಾ ಮಹಾಮಾರಿಯಿಂದ ಜನತೆ ಬೆಚ್ಚಿ ಬಿದ್ದಿದ್ದಾರೆ. ಕೊರೊನಾಗೆ ಮೆಡಿಸನ್ ಇಲ್ಲದಿದ್ದರೂ ಆಸ್ಪತ್ರೆಗಳಲ್ಲಿ ಲಕ್ಷಗಟ್ಟಲೇ ಬಿಲ್ ನೋಡಿ, ಕೊರೊನಾ ಬರದೇ ಇರುವವರು ಸಹ ಹಾರ್ಟ್ ಅಟ್ಯಾಕ್ ಆಗುತ್ತಿದ್ದಾರಂತೆ. ಔಷಧಿ ಇಲ್ಲದೆ ಬ್ಲೇಡ್ ಕಾಕುತ್ತಿದ್ದಾರೆ, ಇದಕ್ಕೆ ನಿಮ್ಮ ಉತ್ತರ ಏನು?

ಆಯುಷ್ಮಾನ್ ಕಾರ್ಡ್ ಉಪಯೋಗ ಏನೇನು? ಬಿಜೆಪಿ ನಾಯಕ ಶ್ರೀ ಭೀಮಶೆಟ್ಟಿಯವರ ಡಿಜಿಟಲ್ ಪ್ರಶ್ನೆ.

ಆಯುಷ್ಮಾನ್ ಕಾರ್ಡ್ ಇದ್ದರೂ ಆಸ್ಪತ್ರೆಗಳಲ್ಲಿ ಹಣ ನೀಡಲು ಒತ್ತಾಯಿಸುತ್ತಿದ್ದಾರಂತೆ ಆಯುಷ್ಮಾನ್ ಕಾರ್ಡ್ ಉಪಯೋಗ ಏನೇನು? ಎಂಬ ಬಗ್ಗೆ  ಜನತೆಗೆ ಮಾಹಿತಿ ನೀಡಲು ಈ ಮೂಲಕ ಮನವಿ. ನೀವೂ ನೀಡುವ ಮಾಹಿತಿಯನ್ನೇ ನಾನು ನೀಡಬೇಕಾಗಿದೆ.

ತುಮಕೂರು ಜಿಲ್ಲಾ ಆಯುಷ್ ಅಧಿಕಾರಿ ಶ್ರೀ ಸಂಜೀವ್ ಮೂರ್ತಿಯವರೇ,

ಆಯುಷ್ ಔಷಧಿ ಏನು ಮಾಡಬೇಕು ಹೇಗೆ ಮಾಡಬೇಕು ಶ್ರೀಮತಿ ಸುಜಾತರವರ ಪ್ರಶ್ನೆ?

ಶ್ರೀಮತಿ ಸುಜಾತರವರ ಮನೆಯಲ್ಲಿ ಒಂದು ಅಂದಾಜಿನ ಪ್ರಕಾರ ಮುನ್ನೆಚ್ಚರಿಕೆ ಕ್ರಮವಾಗಿ ಈ ಕೆಳಕಂಡ ಆಯುಷ್ ಟ್ರೀಟ್‌ಮೆಂಟ್ ಪಡೆಯುತ್ತಿದ್ದಾರಂತೆ. ಇದರಲ್ಲಿ ಯಾವುದು ಸರಿ ಅಥವಾ ಯಾವುದು ಬೇಡ ಅಥವಾ ಯಾವುದು ಮಾಡಬೇಕು ಎಂಬ ಬಗ್ಗೆ ಮಾಹಿತಿ ನೀಡಲು ಈ ಮೂಲಕ ಮನವಿ.

  1. ಪ್ರಾಣಯಾಮ, ಲೋಮ ವಿಲೋಮ ಮಾಡುವುದು.
  2. ಬೆಳಿಗ್ಗೆ ಎರಡು ಕಪ್ ಬಿಸಿ ನೀರು ಕುಡಿಯುವುದು.
  3. ಬಿಸಿ ನೀರಿನಲ್ಲಿ ಬೆಳಿಗ್ಗೆ ಆಮ್ಲಕ ಚೂರ್ಣ ಕುಡಿಯುವುದು.
  4. ಮನೆಯಲ್ಲಿ ರಾತ್ರಿ ನೆನಸಿದ (ಅಗಸೆ ಬೀಜ, ಕಡ್ಲೆ ಬೀಜ, ಕಡ್ಲೆ ಕಾಳು, ಒಣಗಿದ ದ್ರಾಕ್ಷಿ, ಮೆಂಥ್ಯೆ, ಗಸಗಸೆ) ಬೆಳಿಗ್ಗೆ ತಿನ್ನುವುದು.
  5. ಬೆಳಿಗ್ಗೆ ಮತ್ತು ರಾತ್ರಿ ಬಿಸಿ ನೀರಿಗೆ ಉಪ್ಪು ಮತ್ತು ನಿಂಬೆ ರಸ ಹಾಕಿಕೊಂಡು ಮುಕ್ಕಳಿಸುವುದು.
  6. ಮೂಗಿನ ಹೊಳ್ಳೆಗೆ ನಿಂಬೆ ರಸ ಹಾಕಿ ಮುಕ್ಕಳಿಸುವುದು.
  7. ತೆಂಗಿನ ಎಣ್ಣೆಯನ್ನು ಬಾಯಿಗೆ ಹಾಕಿ ಕೊಂಡು ಆಯಿಲ್ ಪುಲ್ಲಿಂಗ್ ಮಾಡುವುದು.
  8. ಮೂಗಿನ ಹೊಳ್ಳೆಗೆ, ತುಟಿಗೆ ಮತ್ತು ಕಣ್ಣಿಗೆ ತೆಂಗಿನ ಎಣ್ಣೆಯನ್ನು ಹಚ್ಚಿ ಕೊಳ್ಳುವುದು.
  9. ದಿನಕ್ಕೆ ಎರಡು ಭಾರಿ ಟಾರ್ಗೆಟ್ ಇನ್‌ಹೇರ್ ಮಾಡುವುದು.
  10. ದಿನಕ್ಕೆ ಎರಡು ಭಾರಿ ಬಿಸಿ ನೀರಿನ ಹಬೆ ತೆಗೆದುಕೊಳ್ಳುವುದು.
  11. ದಿನಕ್ಕೆ ಒಂದು ಬಾರಿ ಕಷಾಯ(ಧನ್ಯ,ಜೀರಿಗೆ, ಮೆಣಸು, ಲವಂಗ ಮತ್ತು ಬೆಲ್ಲ) ಕುಡಿಯುವುದು.
  12. ರಾತ್ರಿ ಹಾಲಿಗೆ ಅರಿಶಿನ ಪುಡಿ ಹಾಕಿಕೊಂಡು ಕುಡಿಯುವುದು.
  13. ಮನೆಯಲ್ಲಿ ಮಾಡಿದ ದಿನಕ್ಕೆ ಒಂದು ಬಾರಿ ಹಾಲಿಗೆ  ಪೌಡರ್(ಬಾದಾಮಿ, ವಾಲ್‌ನೆಟ್, ಪಿಸ್ತಾ, ಗೋಡಂಬಿ, ಕುಂಬಳ ಬೀಜ, ಕಲ್ಲಂಗಡಿ ಬೀಜ, ಸೂರ್ಯಕಾಂತಿ ಬೀಜ, ಓಡ್ಸ್, ಚಿಯಾ ಬೀಜಗಳ) ಹಾಕಿ ಕುಡಿಯುವುದು.
  14. ದಿನಕ್ಕೆ ಒಂದು ಬಾರಿ ಅಮೃತ ಬಳ್ಳಿ ಕಷಾಯ ಕುಡಿಯುವುದು.
  15. ಬಿಸಿ ಬಿಸಿ ಊಟ ಮತ್ತು ತಿಂಡಿ ಮಾಡುವುದು.
  16. ಬಿಸಿ ನೀರು ಕುಡಿಯುವುದು.
  17. ಮನೆಯಲ್ಲಿದ್ದರೆ ಎರಡು ಮೂರು ಭಾರಿ ಸೋಪ್‌ನಿಂದ ಕೈತೊಳೆಯುವುದು.
  18. ಹೊರಗಡೆ ಹೋದಾಗ ಸ್ಯಾನಿಟೈಸರ್ ಉಪಯೋಗಿಸುವುದು.
  19. ಮಾಸ್ಕ್ ಹಾಕಿಕೊಳ್ಳುವುದು.
  20. ಮನೆಯಲ್ಲಿ ಸಂಜೆ ಅಗ್ನಿಹೋತ್ರ ಹೋಮ ಮಾಡುವುದು.
  21. ತೋಟಕ್ಕೆ ಹೋದಾಗ ಬೇವಿನ ಸೊಪ್ಪು ತಿನ್ನುವುದು.
  22. ದಿನಕ್ಕೆ ಎರಡು ಭಾರಿ ಸೂರ್ಯನ ಶಾಖಾ ಪಡೆಯುವುದು.
  23. ದಿನಕ್ಕೆ ಎರಡು ತುಳಸಿ ಎಲೆ ತಿನ್ನುವುದು.
  24. ರಾತ್ರಿ ಮನೆ ಬಂದಾಗ ಸ್ನಾನ ಮಾಡುವುದು.

ಬಹುತೇಕ ಮನೆಯಲ್ಲಿಯೇ ಲಾಕ್ ಡೌನ್ ಅಗತ್ಯ ಬಿದ್ದಾಗ ಮಾತ್ರ ತೋಟ, ಅಂಗಡಿ ಮತ್ತು ಬ್ಯಾಂಕ್‌ಗೆ ಹೋಗಿ ಬರುತ್ತಾರಂತೆ.

ನಾನು ನೇರವಾಗಿ ಉತ್ತರ ಬರೆಯಲು ಸಾಧ್ಯವಾಗುವುದಿಲ್ಲ. ಆದರೇ ಇಲಾಖಾ ಅಧಿಕಾರಿಗಳು ನೀಡುವ ಮಾಹಿತಿಯನ್ನು ಪ್ರಕಟಿಸಲಾಗುವುದು.