TUMAKURU:SHAKTHIPEETA FOUNDATION
ಕೊರೊನಾ ಮಹಾಮಾರಿಗೆ ತುತ್ತಾಗಿರುವವರ ಹಿತದೃಷ್ಠಿಯಿಂದ ಶಿಕ್ಷಣ ಸಾಲ ಮಾದರಿಯಲ್ಲಿ ಆರೋಗ್ಯ ಸಾಲ ವಿತರಣೆ ಮಾಡಲು ಬ್ಯಾಂಕುಗಳಿಗೆ ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರ ಸಾಲ ಯೋಜನೆ ಘೋಶಿಸುವುದು ಸೂಕ್ತವಾಗಿದೆ.
ಈ ಸಾಲದ ಯೋಜನೆಗೆ ಯಾವುದೇ ಆಧಾರ ಬೇಡ, ಆಧಾರ್‌ಕಾರ್ಡ್ , ಬ್ಯಾಂಕ್ ಅಕೌಂಟ್, ಪಾನ್ ಕಾರ್ಡ್ ಮತ್ತು ಆಸ್ಪತ್ರೆಗೆ ಧಾಖಾಲಾತಿ ಮಾಹಿತಿ ಇದ್ದರೆ ಸಾಕು. ಸಿಬಿಲ್ ಆಗಲಿ ಅಥವಾ ಇತರೆ ದಾಖಲೆಗಳನ್ನು ಕೇಳಿದರೆ ಗೋವಿಂದ. ಜನ ತತ್ತರಿಸಿ ಹೋಗಿದ್ದಾರೆ, ಸೋಶಿಯಲ್ ಮೀಡಿಯಾ ಮೂಲಕ ಬಿಲ್ ಆವಾಂತರ ಕೇಳಿ ಕಾಯಿಲೆ ಇರುವವರು ಮನೆಯಲ್ಲಿ ಹೇಳುವುದಿಲ್ಲಾ, ನಂತರ ಮನೆ ಮಂದಿಗೆಲ್ಲಾ ಹರಡಿರುವ ಉದಾಹರಣೆಗಳು ಇವೆ.
ಬಡವರ ಬಳಿ ಆಸ್ಪತ್ರೆಗೆ ಕಟ್ಟಲು ಹಣವೂ ಇರುವುದಿಲ್ಲಾ, ಆದ್ದರಿಂದ ಸರ್ಕಾರ ವಿಶೇಷ ಪ್ರಕರಣ ಎಂದು ಘೋಶಿಸಿ ಸಾಲ ಯೋಜನೆ ಜಾರಿಗೊಳಿಸುವುದು ಉತ್ತಮ. ಒಂದು ವೇಳೆ ಈ ರೀತಿ ಯಾವುದಾದರೂ ಸಾಲದ ಯೋಜನೆ, ಇನ್‌ಸೂರೆನ್ಸ್ ಯೋಜನೆ ಇದ್ದಲ್ಲಿ ವ್ಯಾಪಕ ಪ್ರಚಾರ ಮಾಡುವುದು ಅಗತ್ಯವಾಗಿದೆ. ರೋಗಿಗಳ ಕುಟುಂಬಕ್ಕೆ ಆತ್ಮ ಸ್ಥೈರ್ಯ ತುಂಬುವುದು ಸರ್ಕಾರಗಳ ಆಧ್ಯ ಕರ್ತವ್ಯ.
ಈ ಯೋಜನೆಯಲ್ಲೂ ಗೋಲ್ ಮಾಲ್ ಆಗದ ರೀತಿ ರೂಪುರೇಷೆ ನಿರ್ಧರಿಸಬೇಕು. ಆರೋಗ್ಯ ಕಾರ್ಡ್, ಆಯುಷ್ಮಾನ್ ಭಾರತ್ ಹೀಗೆ ಇರುವ ಯೋಜನೆಗಳ ಅರಿವು ಜನತೆಗೆ ಇನ್ನೂ ಇಲ್ಲ ಎಂದರೆ ತಪ್ಪಾಗಲಾರದು.
ಚಿಕ್ಕನಾಯಕನಹಳ್ಳಿ ತಾಲ್ಲೋಕಿನ ಒಬ್ಬ ಕೊರೊನಾ ರೋಗಿಯ ಪುತ್ರ ತುಮಕೂರು ಲೋಕಸಭಾ ಸದಸ್ಯ ಶ್ರೀ ಜಿ.ಎಸ್.ಬಸವರಾಜ್‌ರವರ ಬಳಿ ಬಂದು ಸಾರ್ ನಮ್ಮ ತಂದೆಗೆ ಕೊರೊನಾ ಆಗಿತ್ತು. ತುಮಕೂರಿನ — ನರ್ಸಿಂಗ್ ಹೋಂಗೆ ಸೇರಿಸಿದ್ದೆ, ಕಾಯಿಲೆ ಗುಣಮುಖವಾಗಿದೆ, ಅವರು ಕೇಳಿದಷ್ಟು ಹಣ ನೀಡಲು ಸಾಧ್ಯವಿಲ್ಲ, ಆದರೇ ಅವರು ಹಣ ನೀಡದೆ ಡಿಸ್ಚಾರ್ಜ್ ಮಾಡುವುದಿಲ್ಲ ಎಂದು ಹೇಳುತ್ತಾರೆ, ನರ್ಸಿಂಗ್ ಹೋಂಗೆ ಹೇಳಿ ಸಾರ್ ಎಂದು ಗೋಗರೆಯುತ್ತಿದ್ದರು.
ನಾನು ಅಲ್ಲಿಯೇ ಕುಳಿತಿದ್ದೆ, ಶ್ರೀ ಜೆ.ಸಿ.ಮಾಧುಸ್ವಾಮಿಯವರ ಬಳಿ ಹೇಳಿಸ ಬಹುದಿತ್ತಲ್ಲ ಎಂದೆ, ಆತ ಇವರು ಹೇಳುತ್ತಿಲ್ಲಾ, ಹಾಗೇಯೇ ಮಾಧುಸ್ವಾಮಿಯವರು ಹೇಳಲಿಲ್ಲ ನಮ್ಮ ಕರ್ಮ ಎಂದು ಹೇಳಿ ಹೊರಟು ಹೋದ. ನಾನು ಪುನಃ ಆತನನ್ನು ಕರೆದು ವಿವರವಾದ ಮಾಹಿತಿಯನ್ನು ನನ್ನ ವಾಟ್ಸ್‌ಆಫ್‌ಗೆ ಕಳುಹಿಸು ಎಂದು ಹೇಳಿ ನಂಬರ್ ಕೊಟ್ಟೆ.
ನಾನು ಆತ ಕಳುಹಿಸಿದ್ದ ಮಾಹಿತಿಯನ್ನು ಡಿಹೆಚ್‌ಓ ಶ್ರೀ ನಾಗೇಂದ್ರರವರಿಗೆ ಫಾರ್‌ವಾರ್ಡ್ ಮಾಡಿ ಹೇಳಿದೆ. ಪುನಃ ಒಂದೆರಡು ದಿನ ಬಿಟ್ಟು ಅವರು ಫೋನ್ ಮಾಡಿದರು, ಏನಪ್ಪಾ ಎಂದಾಗ ನಾನು ನಿಮ್ಮ ಬಳಿ ಬರಬೇಕು ಎಲ್ಲಿದ್ದೀರಾ ಎಂದರು.
ಏಕೆ ಏನಾಯಿತು ಎಂದಾಗ ನಮ್ಮ ತಂದೆ ಡಿಸ್ಚಾರ್ಜ್ ಆಯಿತು. ನನ್ನ ಹೇಂಡತಿ ತಾಳಿ ಬಿಟ್ಟು ಎಲ್ಲಾ ಅಡ ಇಟ್ಟು ನರ್ಸಿಂಗ್ ಹೋಂಗೆ ಬಿಲ್ ಕಟ್ಟಿದ್ದೆ. ಪುನಃ ಅವರು ಹೇಳಿದ ಬಿಲ್ ಕಟ್ಟಲು ನನ್ನ ಬಳಿಹಣವಿರಲಿಲ್ಲ. ನಾನು ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸಿದ್ದೆ. ಸಾರ್ ಒಳ್ಳೆಯದಾಯಿತು ಎಂದಾಗ ನನಗೂ ಸಮದಾನವಾಯಿತು.
ಸರಿ ನನ್ನ ಬಳಿ ಏಕೆ ಬರಬೇಕು ಎಂದಾಗ ಹಣ್ಣಿನ ಬುಟ್ಟಿ ಕೊಡಬೇಕು ಸಾರ್ ಎಂದಾಗ, ಅದಕ್ಕೆ ಯಾವ ಸಾಲ ಮಾಡುತ್ತಿಯಾ ಎಂದಾಗ ಇಲ್ಲಾ ಸಾರ್ ಭೇಟಿಯಾಗಲೇ ಬೇಕು ಎಂದಾಗ ದಯವಿಟ್ಟು ಬೇಡ ಹೋಗಿ ಡಿಹೆಚ್‌ಓ ರವರಿಗೆ ಥ್ಯಾಂಕ್ಸ್ ಹೇಳು ಎಂದು ಹೇಳಿದೆ.
ಪುನಃ ನಾನು ದಿಶಾ ಸಮಿತಿಯಲ್ಲಿ ಡಿಹೆಚ್‌ಓ ಶ್ರೀ ನಾಗೇಂದ್ರರವರನ್ನು ಕೊರೊನಾ ರೋಗಿಗಳ ಬಿಲ್ ಬಗ್ಗೆ ಪ್ರಶ್ನೆ ಮಾಡಿದಾಗ, ಜಿಲ್ಲಾಧಿಕಾರಿಗಳಾದ ಶ್ರೀ ಡಾ.ರಾಕೇಶ್ ಕುಮಾರ್‌ರವರು ಯಾವುದಾದರೂ ಅಂತಹ ನಿಖರವಾದ ಮಾಹಿತಿ ನೀಡಿ ಕ್ರಮ ಕೈಗೊಳ್ಳುತ್ತೇವೆ ಎಂದರು. ಡಿಹೆಚ್‌ಓರವರು ಮಾತನಾಡಿ ನೀವು ಹೇಳಿದ ಕೇಸ್ ಸರಿಯಾಗಿತ್ತು ಸಾರ್, ಅವರಿಗೆ ನ್ಯಾಯ ದೊರಕಿತು ಎಂದಾಗ ನಾನು ಸಹ ಥ್ಯಾಂಕ್ಸ್ ಹೇಳಿದೆ.