ಕೋರೋನಾ ಸೋಂಕಿತರ ನೋವಿಗಿಂತ ಅವರ ಕುಟುಂಬದವರಿಗೆ ಮತ್ತು ರಾಜ್ಯದ ಜನರಿಗೆ ಭಯ ಹುಟ್ಟಿಸುವ ವಾತಾವಾರಣ ಸೋಶಿಯಲ್ ಮೀಡಿಯಾಗಳಲ್ಲಿ ಬರುತ್ತಿವೆ. ಬಿಜೆಪಿ ಜನಪ್ರಿಯಗೊಳಿಸಿದ ಸೋಶಿಯಲ್ ಮೀಡಿಯಾ ನಿಮ್ಮ ಸರ್ಕಾರಗಳಿಗೆ ಮುಳುವಾಗುವ ರೀತಿಯಲ್ಲಿದೆ ಅದೇನೆ ಇರಲಿ.
ಕೋರೋನಾ ಸೋಂಕಿತರಿಗೆ ಕೇಂದ್ರ ಸರ್ಕಾರ ಖರ್ಚು ಮಾಡುವ ಹಣ, ರಾಜ್ಯ ಸರ್ಕಾರ ಖರ್ಚು ಮಾಡುವ ಹಣ ಮತ್ತು ರಾಜ್ಯದ ಪ್ರತಿಯೊಬ್ಬ ಸೋಂಕಿತರು ಖರ್ಚು ಮಾಡಿರುವ ಆಸ್ಪತ್ರೆ ಬಿಲ್ ಮತ್ತು ಇತರೆ ಖರ್ಚು ಹಣದ ಮಾಹಿತಿಯನ್ನು ಸೋಂಕಿತರವಾರು ಬಿಡುಗಡೆ ಮಾಡುವ ಮೂಲಕ ಸರ್ಕಾರಗಳ ಮಾನ, ಮರ್ಯಾದೆ ಉಳಿಸಿಕೊಳ್ಳಬೇಕಿದೆ.
ಬಿಜೆಪಿ ಸರ್ಕಾರಗಳ ಮೇಲೆ ದೊಡ್ಡ ಚಪ್ಪಡಿಯನ್ನು ಸೋಶಿಯಲ್ ಮೀಡಿಯಾಗಳ ಮೂಲಕ ಎಳೆಯಲಾಗುತ್ತಿದೆ, ಇದು ಸರಿ ಅಥವಾ ಸುಳ್ಳು ಮಾಹಿತಿ ಎಂಬುದನ್ನು ತಾವು ಹೇಳಲೇ ಬೇಕಿದೆ.
ಇನ್ಸೂರೆನ್ಸ್‌ಗಳಿಂದ ಆಗುವ ಅನೂಕೂಲ, ಆಸ್ಪತ್ರೆಗಳಲ್ಲಿ ಪಡೆಯುವ ಹಣ(ಸೋಂಕಿತರು ಆನ್‌ಲೈನ್ ಪೇಮೆಂಟ್ ಮಾಡಲಿ) ಹಾಗೂ ಸರ್ಕಾರಗಳಿಂದ ಆಸ್ಪತ್ರೆಗಳಿಗೆ ನೀಡುವ ಹಣದ ವಿವರ ಇಷ್ಟು ಮಾಹಿತಿ ಪಾರದರ್ಶಕವಾಗಿರಲಿ.
ಆಸ್ಪತ್ರೆಗಳಿಗೆ ಪೋಲೀಸ್ ಭಧ್ರತೆ ನೀಡಬೇಕಾಗುವ ಕಾಲ ದೂರವಿಲ್ಲ, ಅವರೆಲ್ಲಾ ಜನರ ದೃಷ್ಠಿಗೆ ಖಳನಾಯಕರಾಗುತ್ತಿದ್ದಾರೆ, ದೊಡ್ಡ ಪ್ರಚಾರ ಅಥವಾ ಅಪಪ್ರಚಾರ ನಡೆಯುತ್ತಿದೆ. ಉದಾಸೀನ ಮಾಡದೆ ಜನತೆಯ ಮುಂದೆ ಡಿಜಿಟಲ್ ಮಾಹಿತಿ ಹಂಚಿಕೊಳ್ಳುವುದು ಒಳ್ಳೆಯದು.
ಅಷ್ಟಕ್ಕೂ ರಾಜ್ಯದ ಅನಗತ್ಯ ಯೋಜನೆ ನಿಲ್ಲಿಸಿ, ಕೋರೋನಾ ಸೋಂಕಿತರಿಗೆ ಶೇ 100 ಉಚಿತ ಸೇವೆ ನೀಡುವುದು ಮತ್ತು ಗ್ರಾಮ ಗ್ರಾಮಕ್ಕೆ ಹೋಗಿ ಉಚಿತವಾಗಿ ಲಸಿಕೆ ನೀಡಲು ಸಾಧ್ಯವೇ ಪರಿಶೀಲಿಸಿ, ಎಷ್ಟೇ ಹಣ ಖರ್ಚಾದರೂ ಪರವಾಗಿಲ್ಲ, ಸಾಲ ಮಾಡಿದರೂ ಪರವಾಗಿಲ್ಲ, ರಾಜ್ಯದ ಜನರಿಗೆ ನೆಮ್ಮದಿ ನೀಡುವ ಕೆಲಸ ಮಾಡುವುದು ಸೂಕ್ತವಾಗಿದೆ.
ರಾಜ್ಯದ ಸಂಸದರ ಮತ್ತು ಶಾಸಕರ ಕಚೇರಿಗಳು ಕೋವಿಡ್ ಕೇರ್‌ಸೆಂಟರ್‌ಗಳಂತೆ ಕಾರ್ಯ ನಿರ್ವಹಿಸಲು ಆದೇಶ ನೀಡುವುದು ಒಳ್ಳೆಯದು.
ಎಲ್ಲಾ ಡಿಜಿಟಲ್ ವ್ಯವಸ್ಥೆ ಮಾಡಲೇ ಬೇಕಿದೆ. ಪ್ರತಿ ಗಂಟೆಗೆ ಒಮ್ಮೆ ಯಾವ ಆಸ್ಪತ್ರೆಯಲ್ಲಿ ಎಷ್ಟು ಬೆಡ್ ಖಾಲಿ ಇವೆ, ಆಕ್ಸಿಜಿನ್ ಸ್ಥಿತಿಗತಿ ಏನು? ಎಂಬ ಬಗ್ಗೆ ಸೋಂಕಿತರ ಮೊಬೈಲ್‌ಗೆ ಮಾಹಿತಿ ನೀಡಿ.
ಮೊದಲು ನಿಮ್ಮ ಸರ್ಕಾರದ ಸಚಿವರು ಅನಗತ್ಯ ಬುರುಡೆ ಬಿಡುವುದನ್ನು ನಿಲ್ಲಿಸಿ. ಪ್ರಾಮಾಣಿಕವಾಗಿ ಡಿಜಿಟಲ್ ಮಾಹಿತಿ ನೀಡಿದಲ್ಲಿ ಜನರಿಗೆ ನೆಮ್ಮದಿ ಬರಲಿದೆ, ಭಯದ ವಾತಾವಾರಣ ದೂರವಾಗಲಿದೆ. ಜನರಿಗೆ ರೋಗಕ್ಕಿಂತ ಆಸ್ಪತ್ರೆ ಬಿಲ್‌ಗಳ ಗಾಳಿ ಸುದ್ಧಿ ಭಯ ಹುಟ್ಟಿಸಿದೆ.
ಜೊತೆಗೆ ಆಯುಷ್ ಇಲಾಖೆ ಯೋಜನೆಗಳನ್ನು ಜನಪ್ರಿಯಗೊಳಿಸಿ, ಏಕೆಂದರೆ ಜನ ಯಥೇಚ್ಚವಾಗಿ ಮನೆ ಮದ್ದು ಮಾಡಿಕೊಂಡು ಉಪಯೋಗಿಸುತ್ತಿದ್ದಾರೆ, ಅದು ಇನ್ನೊಂದು ಅವಾಂತರ ಸೃಷ್ಠಿಸಲೂ ಬಹುದು.