27th March 2023
Share

TUMAKURU:SHAKTHIPEETA FOUNDATION

ಕೊರೊನಾ ಮಾಹಮಾರಿಯ ಕಾಟದಿಂದ ಯಾವುದೇ ಕಾಯಿಲೆ ಆಗಿ ಸತ್ತಾಗ ಹೆಣ ಹೊರಲು ಜನ ಬರದಂತಹ ಸ್ಥಿತಿ ನಿರ್ಮಾಣವಾಗಿದೆ. ಪ್ರಧಾನಿ ಶ್ರೀ ನರೇಂದ್ರಮೋದಿಯವರ ರಾಜ್ಯವಾದ ಗುಜರಾತ್ ರಾಜ್ಯದ ಒಂದು ದೃಷ್ಯ ನೋಡಿ, ಶವದ ಕುಟುಂಬದ ಹೆಣ್ಣುಮಕ್ಕಳು ಶವ ಹೊರುತ್ತಿದ್ದಾರೆ.

 ಗುಜಾರತ್‌ನಲ್ಲಿರುವ ತುಮಕೂರಿನವರೇ ಆದ ಪರಿಸರ ತಜ್ಞ ಶ್ರೀ ಡಿ.ಜೆ.ಮೋಹನ್‌ರವರು ಈ ಪೋಟೋ ಕಳುಹಿಸಿ, ತುಮಕೂರು ಜನತೆಗೆ ಈ ರೀತಿ ಆಗದಂತೆ ನೋಡಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ. ಆದರೇ ಪೋಟೋ ವಿವರಣೆ ನೀಡಿಲ್ಲ.

ಎಲ್ಲದಕ್ಕೂ ಸರ್ಕಾರಗಳನ್ನು ಟೀಕೆ ಮಾಡುವ ಬದಲು ನಮ್ಮ ಕರ್ತವ್ಯದ ಬಗ್ಗೆಯೂ ಯೋಚಿಸಬೇಕಲ್ಲವೇ? ಪೋಲೀಸ್,   ಆರೋಗ್ಯ ಇಲಾಖೆ ಸಿಬ್ಬಂಧಿ, ಪೌರಕಾರ್ಮಿಕರ ಸೇವೆ ನೋಡಿಯೂ ಜನರಿಗೆ ಬುದ್ದಿ ಬಂದ ಹಾಗೆ ಕಾಣುವುದಿಲ್ಲ. ಜನರನ್ನು ತಿದ್ದುವ ಕೆಲಸ ಯಾರು ಮಾಡಬೇಕು? ಯಾರು ಮಾಡುತ್ತಿದ್ದಾರೆ ಎಂಬುದೇ ಒಂದು ಯಕ್ಷ ಪ್ರಶ್ನೆ.