22nd December 2024
Share

TUMAKURU:SHAKTHIPEETA FOUNDATION

ಹನುಮ, ಆಂಜನೇಯ,ಹನುಮಂತ,ಅಂಜಲೀಪುತ್ರ ಹೀಗೆ ಹಲವಾರು ಹೆಸರಿನಲ್ಲಿ ಕರೆಯುವ ಶ್ರೀರಾಮನ ಪರಮಭಕ್ತ, ಶಿವನ ಅಂಶ, ಶಕ್ತಿದೇವತೆಯ ಆರಾಧಕನನ್ನು ವಿಶ್ವದ ಬಹುತೇಕ ಎಲ್ಲಾ ಜನಾಂಗವೂ ಪೂಜಿಸುತ್ತಾರೆ. ಕರ್ನಾಟಕ ದಲ್ಲದಂತೂ ಪ್ರತಿಯೊಂದು ಗ್ರಾಮದಲ್ಲೂ ಆಂಜನೇಯ ದೇವಾಲಯವಿದೆ. ಶ್ರೀ ರಾಮನ ದೇವಾಲಯಗಳಿಗಿಂತ ಆಂಜನೇಯ ದೇವಾಲಗಳೇ ಜಾಸ್ತಿ ಇವೆ,
ಶ್ರೀರಾಮನ ಜನ್ಮಸ್ಥಳ ವಿವಾದ ಶ್ರೀರಾಮನ ಮತ್ತು ವಿಷ್ಣುವಿನ ದಶಾವತರಗಳ ಬಗ್ಗೆ ಜನತೆಗೆ ನಿರಂತರವಾಗಿ ರಿನ್ಯೂವಲ್ ಮಾಡುತ್ತಿದೆ ಎಂದರೆ ತಪ್ಪಾಗಲಾರದು. ಆದರೇ ಪರಮಭಕ್ತನಾದ ಶ್ರೀ ಆಂಜನೇಯನ ಬಗ್ಗೆ ಯಾವುದೇ ಸರ್ಕಾರ ಅಥವಾ ಯಾವುದೇ ಸಂಘಟನೆ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ, ನಮ್ಮ ರಾಜ್ಯದ ರಾಜ್ಯಪಾಲರೇ ಹನುಮನ ಹುಟ್ಟಿದ ಸ್ಥಳದ ಅಭಿವೃದ್ಧಿ ಬಗ್ಗೆ ಪ್ರಸ್ತಾಪಿಸಿದರೂ, ಅಮೇರಿಕದ ಅಧ್ಯಕ್ಷ ಶ್ರೀ ಒಬಾಮರವರು ಯಾವಾಗಲೂ ತನ್ನ ಜೇಬಿನಲ್ಲಿ ಹನುಮನ ವಿಗ್ರಹ ಇಟ್ಟುಕೊಳ್ಳುವ ಸುದ್ದಿ ಹರಿದಾಡಿದರೂ ವಿಷಯ ಇಷ್ಟು ಗಂಭಿರತೆ ಪಡೆದಿರಲಿಲ್ಲ.
ಈಗಂತೂ ಟಿಟಿಡಿಯವರು ಹನುಮನ ಜನ್ಮಸ್ಥಳದ ಬಗ್ಗೆ ಮಾತನಾಡಿದ ದಿವಸವೇ ಆಂಜನೇಯನ ಬಗ್ಗೆ ಬೆಂಕಿಹತ್ತಿಕೊಂಡಿದೆ ರಾಮಸೇತುವೆ, ಸಂಜೀವಿನಿ ಬೆಟ್ಟ ಮತ್ತು ಶ್ರೀಲಂಕಾಗೆ ಬೆಂಕಿ ಇಟ್ಟ ವಿಷಯಗಳಿಗಿಂತ ಹನುಮನ ಜನ್ಮಸ್ಥಳ, ಓಡಾಡಿದ ಜಾಗಗಳು, ಈಗಲೂ ಆಂಜನೇಯ ಬದುಕಿದ್ದಾನೆ ಎಂಬ ವಿಷಯವೂ ಪ್ರಚಲಿತವಾಗಿದೆ.
ಜನ್ಮಸ್ಥಳದ ವಿವಾದದ ಹಿಂದೆ ಯಾವ ಉದ್ದೇಶವಿದೆಯೋ, ಯಾವ ಅಜೆಂಡಾವಿದೆಯೂ ಗೊತ್ತಿಲ್ಲ, ಆದರೇ ನಿಜಕ್ಕೂ ಆಂಜನೇಯನ ಭಕ್ತರ ಭಕ್ತಿ ಪರಾಕಷ್ಟೆ ತಲುಪಲಿದೆ. ಸಂಶೋಧಕರು, ಇತಿಹಾಸ ಪರೀಣಿತರು ಅಧ್ಯಯನ ಸಂಸ್ಥೆಗಳು ಆಂಜನೇಯನ ಇಂಚಿಂಚು ಮಾಹಿತಿಗಳನ್ನು ಕಲೆಹಾಕುವ, ಪ್ರತಿಪಾದಿಸುವ ಮೂಲಕ ಭಕ್ತರಿಗೆ ರಸದೌತಣ ಬಡಿಸಲಿದ್ದಾರೆ.
ನನ್ನ ಪ್ರಕಾರ ಇದೂ ಒಂದು ಆಂಜನೇಯನ ಪವಾಡವೇ ?