22nd December 2024
Share

TUMAKURU:SHAKTHIPEETA FOUNDATION

ಕರ್ನಾಟಕ ರಾಜ್ಯ ಹೈಕೋರ್ಟ್ ದಿನಾಂಕ:29.04.2021 ರಂದು ರಾಜ್ಯಾದ್ಯಾಂತ ಖಾಸಗಿ ಆಸ್ಪತ್ರೆ ಬೆಡ್‍ಗಳ ಮಾಹಿತಿಯನ್ನು 24 ಗಂಟೆಯೊಳಗೆ ವೆಬ್‍ಸೈಟ್ ಮಾಡಿ ಪ್ರಕಟಿಸಿ ಎಂದು ಫನಾಗೆ ಆದೇಶ ನೀಡಿರುವುದು ಸ್ವಾಗಾತಾರ್ಹವಾಗಿದೆ,

ಫನಾ ಎಂದರೆ ಖಾಸಗಿ ಆಸ್ಪತ್ರೆಗಳ ಸಂಘಟನೆ. ನಮ್ಮ ಇ ಪತ್ರಿಕೆ ರಾಜ್ಯ ಸರ್ಕಾರಕ್ಕೆ ಖಾಸಗಿ ಆಸ್ಪತ್ರೆ ಬೆಡ್ ಮಾಹಿತಿ ಪ್ರಕಟಿಸಿ ಎಂದು ಆಗ್ರಹಿಸಪಡಿಸಲಾಗಿತ್ತು. ಇದೇ ವಿಷಯವನ್ನು ನ್ಯಾಯಾಲಯವಾದರೂ ಮಾಡಿ ಉತ್ತಮ ಕೆಲಸ ಮಾಡಿದೆ ನಮಗೂ ತೃಪ್ತಿ ತಂದಿದೆ.

ಇದರಿಂದ ಕೊರೋನಾ ಸೋಂಕಿತರು ಮನೆಯಲ್ಲಿಯೇ ಕುಳಿತು ಯಾವ ಆಸ್ಪತ್ರೆಯಲ್ಲಿ ಬೆಡ್ ಖಾಲಿ ಇದೆ ನೋಡಿ ಬುಕ್ ಮಾಡಿ ಹೋಗುವುದು ಒಂದಾದರೆ, ಸರ್ಕಾರ ನಿಗದಿ ಪಡಿಸಿರುವ ರೀತಿಯಲ್ಲಿ ಕೋವಿಡ್ ಸೋಂಕಿತರಿಗೆ ಬೆಡ್ ನೀಡಿದ್ದಾರೆಯೇ ಎಂಬ ಡಿಜಿಟಲ್ ಮಾಹಿತಿ ದೊರೆಯುತ್ತದೆ. ಇದೇ ರೀತಿ ರಾಜ್ಯ ಸರ್ಕಾರದ ಆಸ್ಪತ್ರೆಗಳಲ್ಲೂ ಮಾಡುವುದು ಒಳ್ಳೆಯದು. 

ರಾಜ್ಯದ ಪ್ರತಿಯೊಂದು ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಯಲ್ಲಿರುವ ಆಕ್ಸಿಜಿನ್

ರಾಜ್ಯದ ಪ್ರತಿಯೊಂದು ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಯಲ್ಲಿರುವ ರೆಮ್‍ಡಿಸಿವಿರ್.

ರಾಜ್ಯದ ಪ್ರತಿಯೊಂದು ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಯಲ್ಲಿರುವ ಲಸಿಕೆ.

ಸೋಂಕಿತರಿಗೆ ಅಗತ್ಯವಿರುವ ಆಸ್ಪತ್ರೆ ಸಿಬ್ಬಂಧಿಯೂ ಮುಖ್ಯ. ಒಂದು ದಿವಸ ಇವರೆಲ್ಲರಿಗೂ ಸ್ಟ್ರೆಸ್ ಆಗಿ ಜಿಲ್ಲೆಗೊಂದು ಹುಚ್ಚಾಸ್ಪತ್ರೆ ಮಾಡುವ ಕಾಲ ದೂರವಿಲ್ಲ. ಅಗತ್ಯ ಸಿಬ್ಬಂದಿ ಇಲ್ಲದಿದ್ದಲ್ಲಿ ಸ್ಕಿಲ್ ಡೆವಲಪ್ ಮೆಂಟ್ ಇಲಾಖೆ, ಕಾರ್ಮಿಕ ಇಲಾಖೆ, ಜಿಲ್ಲಾ ಉದ್ಯೋಗ ಅಧಿಕಾರಿ ಡಿಜಿಟಲ್ ಮ್ಯಾನ್ ಪವರ್ ಪಟ್ಟಿಯೊಂದಿಗೆ ಸನ್ನದ್ಧವಾಗಿರಬೇಕು. ಇಲ್ಲದೆ ಇದ್ದಲ್ಲಿ ಮೊಂದೊಂದು ದಿನ ಕಷ್ಟವಾಗಲಿದೆ.

ಆಂಬುಲೆನ್ಸ್ ಕೊರತೆ ಇರುವ ಕಡೆ ಸರ್ಕಾರಿ ಬಸ್‍ಗಳನ್ನೇ ತಾತ್ಕಾಲಿಕ ಆಂಬುಲೇನ್ಸ್‍ಗಳಾಗಿ ಸಿದ್ಧ ಮಾಡಿಕೊಳ್ಳಬೇಕು.

ಶವ ಸುಡಲು ಅಥವಾ ಹೂಣಲು ಮಾನ್ಯ ಕಂದಾಯ ಸಚಿವರಾದ ಶ್ರೀ ಆರ್.ಆಶೋಕ್‍ರವರು ಸರ್ಕಾರಿ ಜಮೀನು ಹುಡುಕಿ ಇಟ್ಟುಕೊಳ್ಳಲು ಆದೇಶ ನೀಡಿರುವ ಮಾದರಿಯಲ್ಲಿ ಸಂಬಂಧಿಸಿದ ಎಲ್ಲಾ ಇಲಾಖೆಗಳ ಸಚಿವರು ಸಿದ್ಧವಾಗಿರಬೇಕು.

ಆಯಾ ಆಸ್ಪತ್ರೆಯ ವ್ಯಾಪ್ತಿಯ ಅಥವಾ ಪ್ರತಿಯೊಂದು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಸೋಂಕಿತರು ಮತ್ತು ವರ್ಗದ ಪಟ್ಟಿಯನ್ನು ಪ್ರಕಟಿಸಬೇಕು. ಇದರಿಂದ ಏನೇನು ಎಲ್ಲೆಲ್ಲಿ ಕೊರತೆಯಿದೆ ಎಂಬ ಡಿಜಿಟಲ್ ಲೈವ್ ಮಾಹಿತಿ ದೊರೆಯಲಿದೆ.

ಪ್ರಧಾನ ಮಂತ್ರಿಯವ ಕಚೇರಿ, ಮುಖ್ಯ ಮಂತ್ರಿಯವರ ಕಚೇರಿ, ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ, ಸಂಸದರ ಕಚೇರಿ ಮತ್ತು ಶಾಸಕರ ಕಚೇರಿಯಲ್ಲಿ ರಿವ್ಯೂ ಮಾಡಿ, ಸಾಮಾಜಿಕ ನ್ಯಾಯದಡಿಯಲ್ಲಿ ಎಲ್ಲಿಗೆ ಏನು ಬೇಕೋ ಅದನ್ನು ಸರಬರಾಜು ಮಾಡಲು ಉಪಯೋಗವಾಗಲಿದೆ. ನೀಡ್ ಬೇಸ್ಡ್ ಆಧಾರದಲ್ಲಿ ಹಂಚಿಕೆ ಮಾಡ ಬಹುದು. ಜನರ ಆಹಾಕಾರ ಕಡಿಮೆಯಾಗಲಿದೆ.

ಕೇಂದ್ರ ಸರ್ಕಾರದ ಆದೇಶದ ಪ್ರಕಾರ ಸಂಸದರ ಅಧ್ಯಕ್ಷತೆಯ ದಿಶಾ ಸಮಿತಿಗಳ ಪಾತ್ರ ಇಲ್ಲಿ ಮಹತ್ತರವಾಗಿದೆ. ಇಲ್ಲದೇ ಇದ್ದಲ್ಲಿ ಕೋರ್ಟ್ ಹೀಗೆ ಮಾಡಿ ಎಂದು ಆದೇಶ ನೀಡಿದಾಗ ನಿವೇಲ್ಲಾ ಇದ್ದೂ ಸತ್ತಂತೆಯೇ? ನೀವೇ ಯೋಚಿಸಿ, ನಿಮಗೆ ಪ್ರಧಾನಿಯವರು ನೀಡಿರುವ ಅಧಿಕಾರ ಉಪಯೋಗಿಸಿಕೊಳ್ಳದೇ ಇದ್ದಲ್ಲಿ ಜನರ ಪಾಲಿಗೆ ಖಳನಾಯಕರಾಗುತ್ತಿರಿ.

ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿರುವ ಪಿಪಿಪಿ ಯೋಜನಾ ಸಮಿತಿಯು ಸಭೆ ನಡೆಸಿ ಕೊರತೆಗಳಿರುವ ಪರಿಕರಗಳ ಪೂರೈಕೆಗೆ ಪಿಪಿಪಿ ಯೋಜನೆಯಡಿಯಲ್ಲಿ ಹೂಡಿಕೆಗೆ ಇರುವ ಅವಕಾಶಗಳ ಬಗ್ಗೆ ಬೆಳಕು ಚೆಲ್ಲಬೇಕು. ತಜ್ಞರ ಪ್ರಕಾರ 3 ನೇ ಅಲೆ ಬರಲಿದೆ ಈಗಲೇ ಎಚ್ಚರವಿರಲಿ.

ಇಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಸಾಕಷ್ಟು ಕೆಲಸ ಮಾಡುತ್ತಿದ್ದರೂ ಯಾವುದೋ ಷಡ್ಯಂತ್ರ ಕೃತಕ ಆಕ್ಸಿಜಿನ್ ಆಭಾವ ಸೃಷ್ಠಿಸುವ ಶಂಕೆಯನ್ನು ಆರೋಗ್ಯ ಸಚಿವರಾದ ಶ್ರೀ ಸುಧಾಕರ್‍ರವರು ಬಹಿರಂಗವಾಗಿ ಹೇಳಿದ್ದಾರೆ.

ಗೃಹ ಸಚಿವರಾದ ಶ್ರೀ ಬಸವರಾಜ್ ಬೊಮ್ಮಾಯಿರವರ ರೆಮ್‍ಡಿಸಿವಿರ್ ಬ್ಲಾಕ್ ಮಾರುಕಟ್ಟೆ ಪತ್ತೆಹಚ್ಚಿದಾಗ ಅದರ ಮೇಲೆ ಮೇಡ್ ಇನ್ ಬಾಂಗ್ಲಾದೇಶ ಎಂದು ಬರೆದಿರುವುದನ್ನು ಬಹಿರಂಗವಾಗಿ ಹೇಳಿದ್ದಾರೆ, ಇವೆಲ್ಲಾ ನೋಡಿದರೆ ರೋಗಿಗಳನ್ನು ಸಾಯಿಸುವ ಮೂಲಕ ಸರ್ಕಾರಗಳಿಗೆ ಕೆಟ್ಟ ಹೆಸರು ತರುವ ಪ್ರಮಾದ ನಡೆಯುವ ಶಂಕೆ ಜನ ಸಾಮಾನ್ಯರಿಗೂ ಬರಲಿದೆ.