22nd December 2024
Share

TUMAKURU:SHAKTHIPEETA FOUNDATION

ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ನಡುವೆ ಯಾವಾಗಲೂ ಮಲತಾಯಿ ಧೋರಣೆ, ರಾಜ್ಯ ರಾಜ್ಯಗಳಿಗೆ ಅನುದಾನ ಬಿಡುಗಡೆ ತಾರತಮ್ಯದ ಬಗ್ಗೆ ಮಾತುಗಳು ಕೇಳುತ್ತಲೆ ಇರುತ್ತವೆ. ಇದು ಎಲ್ಲಾ ಸರ್ಕಾರಗಳಿದ್ದಾಗಲೂ ಇದ್ದೆ ಇದೆ.

ಕೇಂದ್ರದಲ್ಲಿ ಒಂದು ಪಕ್ಷದ ಸರ್ಕಾರ,  ರಾಜ್ಯದಲ್ಲಿ ಇನ್ನೊಂದು ಪಕ್ಷದ ಸರ್ಕಾರ ಇರುವಾಗ ತಾರತಮ್ಯದ ಬಗ್ಗೆ ಮಾತನಾಡಿದರೆ ಇರಬಹುದು ಎಂಬ ಸಹಜ ನಂಬಿಕೆ ಜನತೆಗೆ ಬರಲಿದೆ. ಕೇಂದ್ರದಲ್ಲೂ ಮತ್ತು ರಾಜ್ಯದಲ್ಲೂ ಒಂದೇ ಪಕ್ಷದ ಸರ್ಕಾರ ಇದ್ದಾಗ ಅನುದಾನದಲ್ಲಿ ತಾರತಮ್ಯ ಎಂದರೆ ಯಾರೂ ಅಷ್ಟು ಸುಲಭವಾಗಿ ನಂಬುವುದಿಲ್ಲ.

ನನ್ನ ಗಮನಕ್ಕೆ ಬಂದಿರುವ ಪ್ರಕಾರ ಸೂಕ್ತ ಪ್ರಸ್ತಾವನೆ ಸಲ್ಲಿಸಿದಲ್ಲಿ, ಕೇಂದ್ರ ಸರ್ಕಾರ ಅನುದಾನ ವಿಚಾರದಲ್ಲಿ ರಾಜಕೀಯ ಮಾಡುವುದು ಬಹಳ ಕಡಿಮೆ. ಸೂಕ್ತ ಪ್ರಸ್ತಾವನೆ ಕಳುಹಿಸದೇ ಇರುವುದು, ಫಾಲೋ ಅಫ್ ಮಾಡದೆ ಇದ್ದಾಗ, ಹಿಂದೆ ಬಿಡುಗಡೆ ಮಾಡಿದ್ದ ಹಣದ  ಯುಸಿ ನೀಡದೇ ಇದ್ದಾಗ ಮಾತ್ರ ಅನುದಾನ ಬಿಡುಗಡೆಯಾಗುವುದಿಲ್ಲ.

ಇಂದು ವಿರೋಧ ಪಕ್ಷದ ನಾಯಕರಾದ ಶ್ರೀ ಸಿದ್ಧರಾಮಯ್ಯನವರು ಗುಜರಾತ್ ರಾಜ್ಯಕ್ಕೆ ತೌಕ್ತೆ ಚಂಡ ಮಾರುತಕ್ಕೆ ರೂ 1000 ಕೋಟಿ ಅನುದಾನ ಮಂಜೂರು ಮಾಡಿದ ಪ್ರಧಾನಿ ಶ್ರೀ ನರೇಂದ್ರಮೋದಿಯವರು ಕರ್ನಾಟಕ ರಾಜ್ಯದಲ್ಲೂ ತೌಕ್ತೆ ಚಂಡ ಮಾರುತಕ್ಕೆ ಹಾನಿಯಾಗಿದ್ದರೂ ಏಕೆ ಅನುದಾನ ಬಿಡುಗಡೆ ಮಾಡಿಲ್ಲ ಎಂದು ಕೇಳಿದ್ದಾರೆ.

ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಚಿವರಾದ ಶ್ರೀಮತಿ ನಿರ್ಮಲ ಸೀತಾರಾಮನ್‍ರವರು, ಶ್ರೀ ಪ್ರಹ್ಲಾದ್ ಜೋಷಿಯವರು, ಶ್ರೀ ಸದನಂದಾಗೌಡರವರು ಮತ್ತು ಕರಾವಳಿ ಭಾಗದ ಸಂಸದರು ಚಂಡ ಮಾರುತದ ಸಂತ್ರಸ್ಥರು, ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ ನಳೀನ್ ಕುಮಾರ್ ಕಟೀಲ್‍ರವರು, ಬಿಜೆಪಿ ರಾಷ್ಟ್ರೀಯ ಪದಾಧಿಕಾರಿಗಳಾದ ಶ್ರೀ ಬಿ.ಎಲ್.ಸಂತೋಷ್‍ರವರು &  ಶ್ರೀ ಸಿ.ಟಿ.ರವಿರವರು ಶ್ರೀ ಸಿದ್ಧರಾಮಯ್ಯನವರಿಗೆ ಏನೂ ಉತ್ತರ ಕೊಡುವರೋ ಕಾದು ನೋಡಬೇಕು.