30th April 2024
Share

TUMAKURU:SHAKTHIPEETA FOUNDATION

ರಾಜ್ಯ ಮಟ್ಟದ ದಿಶಾ ಸಮಿತಿಯ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರು(ಸಂಸದರು & ಶಾಸಕರು)ಗಳಿಗೆ ಮನವಿ.

  1. ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರುಅಧ್ಯಕ್ಷರು
  2. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಸಚಿವರಾದ ಶ್ರೀ ಕೆ.ಎಸ್.ಈಶ್ವರಪ್ಪನವರು ಉಪಾಧ್ಯಾಕ್ಷರು
  3. ಶ್ರೀ ಅನಂತ ಕುಮಾರ್ ಹೆಗ್ಗಡೆರವರು, ಲೋಕಸಭಾ ಸದಸ್ಯರುಉತ್ತರ ಕನ್ನಡ
  4. ಶ್ರೀ ರಮೇಶ್ ಜಿಗಜಿಣಗಿಯವರು, ಲೋಕಸಭಾ ಸದಸ್ಯರುವಿಜಯಪುರ
  5. ಶ್ರೀ ಜಿ.ಎಸ್.ಬಸವರಾಜ್ರವರು, ಲೋಕಸಭಾ ಸದಸ್ಯರುತುಮಕೂರು
  6. ಶ್ರೀ ಡಿ.ಕೆ.ಸುರೇಶ್ರವರು, ಲೋಕಸಭಾ ಸದಸ್ಯರುಬೆಂಗಳೂರು ಗ್ರಾಮಾಂತರ
  7. ಶ್ರೀಮತಿ ಸುಮಲತಾರವರು, ಲೋಕಸಭಾ ಸದಸ್ಯರುಮಂಡ್ಯ
  8. ಶ್ರೀ ಪ್ರಜ್ವಲ್ರೇವಣ್ಣನವರು ಮತ್ತು ಲೋಕಸಭಾ ಸದಸ್ಯರುಹಾಸನ
  9. ಶ್ರೀ ಆಸ್ಕರ್ ಪರ್ನಾಂಡೀಸ್ರವರು, ರಾಜ್ಯಸಭಾ ಸದಸ್ಯರು
  10. ಶ್ರೀ ರಾಜೀವ್ ಚಂದ್ರಶೇಖರ್ರವರು, ರಾಜ್ಯಸಭಾ ಸದಸ್ಯರು
  11. ಶ್ರೀ ಲಾಲಜಿ ಮೆಂಡನ್ರವರು, ಕಾಪುವಿಧಾನ ಸಭಾ ಕ್ಷೇತ್ರ
  12. ಶ್ರೀ ಮತಿ ಸೌಮ್ಯರೆಡ್ಡಿರವರು, ಜಯನಗರವಿಧಾನ ಸಭಾ ಕ್ಷೇತ್ರ
  13. ಶ್ರೀ ನಿರಂಜನ್ ಕುಮಾರ್ ರವರು, ಗುಂಡ್ಲು ಪೇಟೆ  – ವಿಧಾನ ಸಭಾ ಕ್ಷೇತ್ರ
  14. ಶ್ರೀ ಶಂಕರ್ ಬಿ.ಪಾಟೀಲ್ ಮುನೆಕೊಪ್ಪರವರು, ನವಲಗುಂದವಿಧಾನ ಸಭಾ ಕ್ಷೇತ್ರ
  15. ಶ್ರೀ ಬಸವರಾಜ್ ಮತ್ತಿಮಡುರವರು, ಕಲ್ಬುರ್ಗಿವಿಧಾನ ಸಭಾ ಕ್ಷೇತ್ರ
  16. ಶ್ರೀಮತಿ ಶಾಲಿನಿರಜನೀಶ್ರವರು ಸದಸ್ಯ ಕಾರ್ಯದರ್ಶಿ ದಿಶಾ ಹಾಗೂ ಅಪರಮುಖ್ಯ ಕಾರ್ಯದರ್ಶಿಗಳು, ಯೋಜನಾ ಇಲಾಖೆ.

ಕೇಂದ್ರ ಸರ್ಕಾರ ಸಂವಿಧಾನಭದ್ಧವಾಗಿ ರಚಿಸಿರುವ ರಾಜ್ಯ ಮಟ್ಟದ ದಿಶಾ ಸಮಿತಿಯಲ್ಲಿ ಕೇಂದ್ರ ಸರ್ಕಾರದ ಅನುದಾನಗಳ ಸಮರ್ಪಕ ಬಳಕೆ, ಕಾಲಮಿತಿಯಲ್ಲಿ ಖರ್ಚು, ದುರುಪಯೋಗವಾಗಿದ್ದಲ್ಲಿ ಪರಿಶೀಲನೆ ಮತ್ತು ಹೊಸ ಬೇಡಿಕೆಗಳನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸುವ ಬಗ್ಗೆ   ಚರ್ಚಿಸಲು ಸರ್ವಪಕ್ಷಗಳ ಚುನಾಯಿತ ಜನ ಪ್ರತಿನಿಧಿಗಳ, ಅಧಿಕಾರಿಗಳ ಮತ್ತು ಪರಿಣಿತರ ವೇದಿಕೆಯಾಗಿದೆ.

ಸೋಶಿಯಲ್ ಮೀಡಿಯಾಗಳಲ್ಲಿ ಕೊರೊನಾ ಅನುದಾನಗಳ ಬಗ್ಗೆ ವ್ಯಾಪಕವಾಗಿ ಟೀಕೆಗಳು ನಡೆಯುತ್ತಿವೆ, ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಮಾಡಿ, ಕರ್ನಾಟಕ ರಾಜ್ಯಕ್ಕೆ ಅನ್ಯಾಯಮಾಡಿದೆ ಎಂದು ಬಿಂಬಿಸಲಾಗುತ್ತಿದೆ. ಕೇಂದ್ರ ಸರ್ಕಾರ ನೀಡಿರುವ ಅನುದಾನಗಳನ್ನು ಬಳಸುತ್ತಿಲ್ಲ ಎಂಬ ದೂರುಗಳು ಇವೆ, ಇದರಲ್ಲಿ ಸತ್ಯ ಯಾವುದು. ಅಪಪ್ರಚಾರ ಯಾವುದು ಎಂಬುದರ ಬಗ್ಗೆ ರಾಜ್ಯ ಮಟ್ಟದ ದಿಶಾ ಸಮಿತಿ ಮತ್ತು ಜಿಲ್ಲಾ ಮಟ್ಟದ ದಿಶಾ ಸಮಿತಿಗಳಲ್ಲಿ ಚರ್ಚಿಸಿ, ಮಾಹಿತಿಯನ್ನು ಜನತೆಗೆ ಮಾಧ್ಯಮಗಳ ಮೂಲಕ ಬಿಡುಗಡೆ ಮಾಡುವುದು ಸೂಕ್ತವಾಗಿದೆ.

 ಆದ್ದರಿಂದ ರಾಜ್ಯ ಮಟ್ಟದ ದಿಶಾ ಸಮಿತಿ ಸಭೆ ಕರೆದು ಚರ್ಚಿಸಲು ತಾವೆಲ್ಲರೂ ಚಿಂತನೆ ಮಾಡುವುದು ಒಳ್ಳೆಯದು.