22nd December 2024
Share

TUMAKURU:SHAKTHIPEETA FOUNDATION

ದೇಶದ ಪ್ರಧಾನ ಮಂತ್ರಿಯವರಾದ ಶ್ರೀ ನರೇಂದ್ರಮೋದಿಯವರು ಪ್ರಧಾನಿಯಾಗಿ ಇಂದಿಗೆ 7 ವರ್ಷಗಳು ತುಂಬಿವೆ. ಮೋದಿಯವರು 2016 ರಲ್ಲಿ ಜಾರಿಗೆ ತಂದಿರುವ, ಕೇಂದ್ರ ಸರ್ಕಾರ ಆಯಾ ರಾಜ್ಯಗಳಿಗೆ ಬಿಡುಗಡೆ ಮಾಡಿರುವ ಅನುದಾನದ ಯೋಜನೆಗಳ ಪ್ರಗತಿ ಪರಿಶೀಲನೆ ಮಾಡಿ ಎಂದು ರಾಜ್ಯ ಮಟ್ಟದಲ್ಲಿ ಮಾನ್ಯ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ದಿಶಾ ಸಮಿತಿ ಮತ್ತು ಜಿಲ್ಲಾ ಮಟ್ಟದಲ್ಲಿ ಲೋಕಸಭಾ ಸದಸ್ಯರ ಅಧ್ಯಕ್ಷತೆಯಲ್ಲಿ ದಿಶಾ ಸಮಿತಿ ರಚಿಸಿದ್ದರೂ, ನಿಗದಿತ ಅವಧಿಯಲ್ಲಿ ದಿಶಾ ಸಮಿತಿ ಸಭೆ ನಡೆಸದೆ ಮೋದಿಯವರಿಗೆ ಅಪಮಾನ ಮಾಡಿದ್ದಾರೆ.

ಇನ್ನೂ ವಿಶೇಷವೆಂದರೆ ಬಿಜೆಪಿ ಮತ್ತು ಬೆಂಬಲಿತ ಮುಖ್ಯ ಮಂತ್ರಿಗಳು ರಾಜ್ಯ ಮಟ್ಟದಲ್ಲಿ ಹಾಗೂ ಜಿಲ್ಲಾ ಮಟ್ಟದಲ್ಲಿ 333 ಜನ ಲೋಕಸಭಾ ಸದಸ್ಯರು ಇದ್ದರೂ, ಅವರ ಪಕ್ಷದವರೇ ಅವರ ಮಾತು ಕೇಳದಿದ್ದರೇ ಹೇಗೆ? ಎಂಬ ಪ್ರಶ್ನೆ ಜನತೆಗೆ ಬರುವುದಿಲ್ಲವೇ?’

ಶಕ್ತಿಪೀಠ ಫೌಂಡೇಷನ್ ದಿಶಾ ಸಮಿತಿಗಳ ಪ್ರಗತಿ ಬಗ್ಗೆ ಅಧ್ಯಯನ ಮಾಡುತ್ತಿದೆ. ಕನಿಷ್ಟ ಪಕ್ಷ ನಮ್ಮ ರಾಜ್ಯದಲ್ಲಾದರೂ ಮೋದಿಯವರಿಗೆ ಬಿಜಿಪಿಯವರೇ ಬೆಲೆ ಕೊಡುತ್ತಾರಾ ಕಾದು ನೋಡಬೇಕಿದೆ.

ಬಿಜೆಪಿ ಪಕ್ಷದ ರಾಜ್ಯಾದ್ಯಾಕ್ಷರೇ ಸಂಸದರಾಗಿದ್ದಾರೆ, ಅವರೇ ಮೊದಲು ಸರಿಯಾಗಿ ದಿಶಾ ಸಮಿತಿ ಸಭೆ ನಡೆಸಿಲ್ಲ ಎಂದರೆ ಬೇರೆಯವರು ಹೇಗೆ ನಡೆಸುತ್ತಾರೆ. ಶ್ರೀ ನಳೀನ್ ಕುಮಾರ್‍ರವರೇ, ದಯವಿಟ್ಟು ದಿಶಾ ಸಮಿತಿಯತ್ತ ಗಮನ ಹರಿಸುವಿರಾ? ಮೋದಿಯವರ ಕನಸಿಗೆ ಬೆಂಬಲಿಸುವಿರಾ? ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ಎನ್ನುವವರಿಗೆ ಅಂಕಿ ಅಂಶಗಳ ಪ್ರಕಾರ ದಿಟ್ಟ ಉತ್ತರ ನೀಡುವಿರಾ?’ ನಾನಂತೂ ನಂಬಿದ್ದೇನೆ ಇಂದಿನಿಂದ ತಾವೂ ಈ ಬಗ್ಗೆ ವಿಶೇಷವಾಗಿ ಗಮನ ನೀಡುವಿರಿ ಎಂದು ಕಾದು ನೋಡೋಣ?

ನಮ್ಮ ರಾಜ್ಯ ಕೇಂದ್ರ ಸರ್ಕಾರದಿಂದ ಹೆಚ್ಚಿಗೆ ಅನುದಾನ ಪಡೆಯ ಬೇಕಾದರೆ ದಿಶಾ ಸಮಿತಿಗಳ ಪಾತ್ರ ಮಹತ್ತರವಾಗಿದೆ. ಆದರೆ ನಮ್ಮ ರಾಜ್ಯದ ದಿಶಾ ಸಮಿತಿ ಸಭೆ ಪಟ್ಟಿ ನೋಡಿ. ಹೇಗಿದ್ದಾರೆ ನಮ್ಮ ನೆಚ್ಚಿನ  ಸಂಸದರು.

ಗೆ                                                                                                                                  ದಿನಾ0ಕ:30.05.2021

ಸನ್ಮಾನ್ಯ ಶ್ರೀ ಬಿ.ಎಸ್.ಯಡಿಯೂರಪ್ಪವರು.

 ಮುಖ್ಯ ಮಂತ್ರಿಗಳು.ಕರ್ನಾಟಕ ಸರ್ಕಾರ.

ಹಾಗೂ

ಅಧ್ಯಕ್ಷರು. ರಾಜ್ಯ ಮಟ್ಟದ ದಿಶಾ ಸಮಿತಿ.

ವಿಧಾನ ಸೌಧ, ಮೂರನೇ ಮಹಡಿ, ಬೆಂಗಳೂರು.

ಇವರಿಂದ.

ಕುಂದರನಹಳ್ಳಿ ರಮೇಶ್.

ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯ. ಕರ್ನಾಟಕ ಸರ್ಕಾರ.

ಪಾರ್ವತಿ ನಿಲಯ, 1 ನೇ ಮುಖ್ಯ ರಸ್ತೆ, ಜಯನಗರ ಪೂರ್ವ,  ಶೆಟ್ಟಿಹಳ್ಳಿ ಮುಖ್ಯ ರಸ್ತೆ. ತುಮಕೂರು-572102.

ಮೊ:9886774477

ಇವರ ಮುಖಾಂತರ

ಶ್ರೀಮತಿ ಶಾಲಿನಿ ರಜನೀಶ್

ಸದಸ್ಯ ಕಾರ್ಯದರ್ಶಿ, ರಾಜ್ಯ ಮಟ್ಟದ ದಿಶಾ ಸಮಿತಿ.

ಬಹುಮಹಡಿಗಳ ಕಟ್ಟಡ, 7 ನೇ ಪ್ಲೋರ್. ಬೆಂಗಳೂರು.

ಮಾನ್ಯರೇ.

ವಿಷಯ: ರಾಜ್ಯ ಮತ್ತು ಜಿಲ್ಲಾ ಮಟ್ಟದ ದಿಶಾ ಸಮಿತಿ ನಡೆಸುವ ಬಗ್ಗೆ.

  ಕೇಂದ್ರ ಸರ್ಕಾರದ ದಿಶಾ ಮಾರ್ಗ ಸೂಚಿಯಂತೆ ಲೋಕಸಭಾ ಸದಸ್ಯರ ಅಧ್ಯಕ್ಷತೆಯ ಜಿಲ್ಲಾ ಮಟ್ಟದ ದಿಶಾ ಸಮಿತಿಗಳು ಏಪ್ರಿಲ್ ಮೊದಲ ವಾರದಲ್ಲಿ ಸಭೆ ನಡೆಸಬೇಕಿತ್ತು. ಇದೂವರೆಗೂ ಕೇವಲ ತುಮಕೂರು ಮತ್ತು ದಾವಣಗೆರೆ’ ಎರಡು ಜಿಲ್ಲೆಗಳು ಮಾತ್ರ ಸಭೆ ನಡೆಸಿವೆ. ಇನ್ನೂ ಉಳಿದಂತೆ ಜಿಲ್ಲಾ ಮಟ್ಟದ ದಿಶಾ ಸಮಿತಿಗಳು ಯಾವುದೇ ಸಭೆ ನಡೆಸಿ ಕೇಂದ್ರ ಸರ್ಕಾರದ ಪೋರ್ಟ್‍ಲ್‍ಗೆ ಅಫ್ ಲೋಡ್ ಮಾಡಿಲ್ಲ.

 ಕೊರೊನಾ ವಿಷಯದಲ್ಲಿ ಸಂಸದರು ಬಿಲ ಸೇರಿದ್ದಾರೆ ಎಂದು ಜನತೆ ಮತ್ತು ವಿರೋದ ಪಕ್ಷಗಳ ನಾಯಕರು ಟೀಕಿಸುತ್ತಿದ್ದಾರೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ಮಲತಾಯಿ ಧೋರಣೆ ಮಾಡಿದೆ ಎಂದು ಕೆಲವರು ಟೀಕಿಸಿದರೆ, ಇನ್ನೂ ಕೆಲವರು ರಾಜ್ಯ ಸರ್ಕಾರ ಜಿಲ್ಲೆಗಳಿಗೆ ಮಲತಾಯಿ ಧೋರಣೆ ಮಾಡಲಾಗಿದೆ ಎಂಬ ವ್ಯಾಖ್ಯಾನಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಇವುಗಳ ಏನೇ ಇರಲಿ, ಅದು ಬೇರೆ ವಿಚಾರ.

ದಿಶಾ ಸಮಿತಿಗಳು ಕೊರೊನಾ ವಿಷಯಕ್ಕೆ ಸಂಬಂಧಿಸಿದಂತೆ ಆಯಾ ಜಿಲ್ಲೆಗೆ ಈವರೆಗೂ ನೀಡಿರುವ ಅನುದಾನಗಳು, ಉಪಕರಣಗಳು, ಸಲಕರಣೆಗಳು ಮತ್ತು ಆತ್ಮನಿರ್ಭರ ಯೋಜನೆಯಡಿ  ಎಷ್ಟು ಅನುದಾನ ಬಿಡುಗಡೆ ಮಾಡಿದೆ. ಈಗ ಹೊಸದಾಗಿ ಘೋಷಣೆ ಮಾಡಿರುವ ಕೊರೊನಾ ಅನಾಥ ಮಕ್ಕಳ ಯೋಜನೆಗೆ ಜಿಲ್ಲಾವರು ಎಷ್ಟು ಅರ್ಹ ಮಕ್ಕಳು ಬರಲಿದ್ದಾರೆ. ಡಾ.ಬಿ.ಎಂ.ನಂಜುಪ್ಪನವರ ವರದಿ ಅಥವಾ ಇನ್ನಯಾವುದೇ ವರದಿಗಳ ಆಧಾರದ ಮೇಲೆ ಆರೋಗ್ಯದ ವಿಚಾರದಲ್ಲಿ ಜಿಲ್ಲೆಗೆ ಏನೇನು ಅಗತ್ಯವಿದೆ, ಪಿಎಂ ಕೇರ್ಸ್‍ನಿಂದ ಆಗಿರುವ ಅನೂಕೂಲಗಳು ಮತ್ತು ಅನಾನುಕೂಲಗಳ ಬಗ್ಗೆ ಬಗ್ಗೆ ವಿಶೇಷವಾಗಿ ಚರ್ಚಿಸಿ ಮಾಧ್ಯಮಗಳಿಗೆ ಮಾಹಿತಿ ಬಿಡುಗಡೆ ಮಾಡಲು ಸೂಕ್ರ ಕ್ರಮ ಕೈಗೊಳ್ಳಲು ಮನವಿ ಮಾಡಲಾಗಿದೆ.’

  ರಾಜ್ಯಮಟ್ಟದ ದಿಶಾ ಸಮಿತಿಯನ್ನು 2016 ರಿಂದ ರಚಿಸದೇ ಅಂದಿನ ಮುಖ್ಯ ಮಂತ್ರಿಯವರಾದ ಶ್ರೀ ಸಿದ್ಧರಾಮಯ್ಯನವರು ಮತ್ತು ಶ್ರೀ ಹೆಚ್.ಡಿ.ಕುಮಾರಸ್ವಾಮಿಯವರು ರಾಜ್ಯ ಮಟ್ಟದ ದಿಶಾ ಸಮಿತಿ ಸಭೆ ನಡೆಸಲಿಲ್ಲ. ಈಗ ತಾವು ಸಮಿತಿ ರಚಿಸಿದ್ದರೂ ರಾಜ್ಯ ಮಟ್ಟದ ದಿಶಾ ಸಮಿತಿ ಸಭೆ ನಡೆಸಿಲ್ಲ. ದಯವಿಟ್ಟು ಆನ್‍ಲೈನ್ ಸಭೆ ನಡೆಸಿ ಕೇಂದ್ರ ಸರ್ಕಾರದ ಅನುದಾನಗಳ ಬಗ್ಗೆ ಚರ್ಚಿಸಿ, ಮಾಧ್ಯಮಗಳಿಗೆ ಮಾಹಿತಿ ಬಿಡುಗಡೆ ಮಾಡಲು ಈ ಮೂಲಕ ಕೋರಿದೆ.

  ತಾವು ರಾಜ್ಯದ ಎಲ್ಲಾ ಜಿಲ್ಲಾ ಮಟ್ಟದ ದಿಶಾ ಸಮಿತಿಗಳ ಅಧ್ಯಕ್ಷರ ಆನ್‍ಲೈನ್ ಸಭೆ ನಡೆಸುವುದು ಸೂಕ್ತವಾಗಿದೆ ಎಂಬ ಅಂಶವನ್ನು ತಮ್ಮ ಆಧ್ಯಗಮನಕ್ಕೆ ತರಬಯಸುತ್ತೇನೆ.

ವಂದನೆಗಳೊಂದಿಗೆ                                                                                           ತಮ್ಮ ವಿಶ್ವಾಸಿ.

                                                                                                                  (ಕುಂದರನಹಳ್ಳಿ ರಮೇಶ್)