![](https://epaper.shakthipeeta.in/wp-content/uploads/2021/06/Capture-2.png)
TUMAKURU:SHAKTHIPEETA FOUNDATION
ಕೇಂದ್ರ ಸರ್ಕಾರ ದಿನಾಂಕ:26.06.2016 ರಂದು ದಿಶಾ ಸಮಿತಿಗಳನ್ನು ರಚಿಸಲು ಆದೇಶಿಸಿದೆ. ‘ಮಾನ್ಯ ಮುಖ್ಯ ಮಂತ್ರಿಗಳ ಅಧ್ಯಕ್ಷತೆಯಲ್ಲಿ ರಾಜ್ಯಮಟ್ಟದ ದಿಶಾ ಸಮಿತಿಗಳು ಮತ್ತು ದೇಶದ 697 ಜಿಲ್ಲಾ ಮಟ್ಟದಲ್ಲಿ ಲೋಕಸಭಾ ಸದಸ್ಯರ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ದಿಶಾ ಸಮಿತಿಗಳು’ ಕಾರ್ಯನಿರ್ವಹಿಸುತ್ತಿವೆ.
‘ದಾಖಲೆಗಳ ಪ್ರಕಾರ ಭಾರತ ದೇಶದಲ್ಲಿ 738 ಜಿಲ್ಲೆಗಳಿವೆ ಎಂದು ಕೆಲವು ಕಡೆ ಮತ್ತು 718 ಜಿಲ್ಲೆಗಳಿವೆ ಎಂದು ಕೆಲವು ಕಡೆ ಇದೆ. ದಾಖಲೆ ಪ್ರಕಾರ 697 ದಿಶಾ ಸಮಿತಿಗಳು ಇವೆ.’
ಸಾಮಾಜಿಕ ನ್ಯಾಯದಡಿ ಜನಸಾಮಾನ್ಯರಿಗೂ ಕೇಂದ್ರ ಸರ್ಕಾರದ ಯೋಜನೆಗಳ ಸೌಲಭ್ಯ ದೊರಕಿಸುವುದು ದಿಶಾ ಸಮಿತಿಯ ಉದ್ದೇವಾಗಿದೆ. ಲೋಕಸಭಾ ಸದಸ್ಯರಿಗೂ ಕಿಮ್ಮತ್ತು ತರುವಂತಹ ಸಮಿತಿಗಳಾಗಿವೆ. ಆದರೇ ದೇಶದಲ್ಲಿ ಗಮನಿಸಿದಾಗ ದಿಶಾ ಸಮಿತಿಗಳ ಮಹತ್ವ ಸಂಸದರಿಗೆ ಇನ್ನೂ ಆರ್ಥವಾಗಿಲ್ಲ.
ಕೇಂದ್ರ ಸರ್ಕಾರ ದಿಶಾ ಸಮಿತಿಗಳನ್ನು ಚುರುಕು ಮಾಡಲು ಬಹಳಷ್ಟು ಶ್ರಮ ಹಾಕುತ್ತಿದೆ. ಆದರೇ ಕೆಲವು ಸಂಸದರು ಜಪ್ಪಯ್ಯ ಅನ್ನುತ್ತಿಲ್ಲ. ಆದ್ದರಿಂದ ಪ್ರತಿ ವರ್ಷ ‘ಜೂನ್ 26 ರಂದು ದಿಶಾ ಫೌಂಡೇಷನ್ ಡೇ ಆಚರಣೆ’ ಮಾಡಿ, ಕ್ರಮಬದ್ಧವಾಗಿ ದಿಶಾ ಸಮಿತಿ ಸಭೆ ನಡೆಸುವ ಜಿಲ್ಲಾ ಮಟ್ಟದ ದಿಶಾ ಸಮಿತಿಗಳಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲು ಮಾನ್ಯ ಪ್ರಧಾನ ಮಂತ್ರಿಯವರಾದ ಶ್ರೀ ನರೇಂದ್ರಮೋದಿ ಯವರಿಗೂ ಮತ್ತು ಕೇಂದ್ರ ಗ್ರಾಮೀಣಾಭಿವೃದ್ಧಿ ಪಂಚಾಯತ್‍ರಾಜ್ ಸಚಿವರಾದ ಶ್ರೀ ನರೇಂದ್ರಸಿಂಗ್ ತೋಮರ್ ರವರಿಗೂ ಪತ್ರ ಬರೆಯಲಾಗಿದೆ.
ಅವರಿಬ್ಬರಿಗೂ ಈ ವರೆಗೂ ದೇಶಾದ್ಯಾಂತ ನಡೆಸಿರುವ ವಾರ್ಷಿಕ ದಿಶಾ ಸಮಿತಿ ಸಭೆಗಳ ಮಾಹಿತಿ ನೀಡಿ. ಸೂಕ್ತ ಕ್ರಮ ಕೈಗೊಳ್ಳಲು ಕೋರಲಾಗಿದೆ. ಈಗಾಗಲೇ ‘ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‍ರವರು 9 ಸಲಹೆಗಳನ್ನು ನೀಡಿದ್ದು, ದಿಶಾ ಮಾರ್ಗದರ್ಶಿ ಸೂತ್ರದಲ್ಲಿ ಅವುಗಳನ್ನು ಅಳವಡಿಸಿದಲ್ಲಿ ವಿಧಿಯಿಲ್ಲದೆ ದೇಶದ ಎಲ್ಲಾ ಜಿಲ್ಲಾ ಮಟ್ಟದ ದಿಶಾ ಸಮಿತಿಗಳ ಸಭೆ ನಡೆಯಲೇ ಬೇಕಾಗುತ್ತದೆ’ ಎಂಬ ಅಂಶವನ್ನು ಅವರ ಗಮನಕ್ಕೆ ತರಲಾಗಿದೆ.
ವಾರ್ಷಿಕ ದಿಶಾ ಸಭೆಗಳ ಮಾಹಿತಿ.
- 2015-16 ರಲ್ಲಿ 697 ಜಿಲ್ಲಾ ಮಟ್ಟದ ದಿಶಾ ಸಮಿತಿಗಳಲ್ಲಿ 10 ಜಿಲ್ಲೆಗಳಲ್ಲಿ, 15 ದಿಶಾ ಸಮಿತಿಗಳ ಸಭೆ ನಡೆದಿವೆ, ನಿಯಮ ಪ್ರಕಾರ 2788 ದಿಶಾ ಸಮಿತಿ ಸಭೆಗಳು ನಡೆಯ ಬೇಕಿತ್ತು.
- 2016-17 ರಲ್ಲಿ 697 ಜಿಲ್ಲಾ ಮಟ್ಟದ ದಿಶಾ ಸಮಿತಿಗಳಲ್ಲಿ 484 ಜಿಲ್ಲೆಗಳಲ್ಲಿ, 853 ದಿಶಾ ಸಮಿತಿಗಳ ಸಭೆ ನಡೆದಿವೆ, ನಿಯಮ ಪ್ರಕಾರ 2788 ದಿಶಾ ಸಮಿತಿ ಸಭೆಗಳು ನಡೆಯ ಬೇಕಿತ್ತು.
- 2017-18 ರಲ್ಲಿ 697 ಜಿಲ್ಲಾ ಮಟ್ಟದ ದಿಶಾ ಸಮಿತಿಗಳಲ್ಲಿ 443 ಜಿಲ್ಲೆಗಳಲ್ಲಿ, 821 ದಿಶಾ ಸಮಿತಿಗಳ ಸಭೆ ನಡೆದಿವೆ, ನಿಯಮ ಪ್ರಕಾರ 2788 ದಿಶಾ ಸಮಿತಿ ಸಭೆಗಳು ನಡೆಯ ಬೇಕಿತ್ತು.
- 2018-19 ರಲ್ಲಿ 697 ಜಿಲ್ಲಾ ಮಟ್ಟದ ದಿಶಾ ಸಮಿತಿಗಳಲ್ಲಿ 405 ಜಿಲ್ಲೆಗಳಲ್ಲಿ, 683 ದಿಶಾ ಸಮಿತಿಗಳ ಸಭೆ ನಡೆದಿವೆ, ನಿಯಮ ಪ್ರಕಾರ 2788 ದಿಶಾ ಸಮಿತಿ ಸಭೆಗಳು ನಡೆಯ ಬೇಕಿತ್ತು.
- 2019-20 ರಲ್ಲಿ 697 ಜಿಲ್ಲಾ ಮಟ್ಟದ ದಿಶಾ ಸಮಿತಿಗಳಲ್ಲಿ 365 ಜಿಲ್ಲೆಗಳಲ್ಲಿ, 461 ದಿಶಾ ಸಮಿತಿಗಳ ಸಭೆ ನಡೆದಿವೆ, ನಿಯಮ ಪ್ರಕಾರ 2091 ದಿಶಾ ಸಮಿತಿ ಸಭೆಗಳು ನಡೆಯ ಬೇಕಿತ್ತು.
- 2020-21 ರಲ್ಲಿ 697 ಜಿಲ್ಲಾ ಮಟ್ಟದ ದಿಶಾ ಸಮಿತಿಗಳಲ್ಲಿ 440 ಜಿಲ್ಲೆಗಳಲ್ಲಿ, 644 ದಿಶಾ ಸಮಿತಿಗಳ ಸಭೆ ನಡೆದಿವೆ, ನಿಯಮ ಪ್ರಕಾರ 2788 ದಿಶಾ ಸಮಿತಿ ಸಭೆಗಳು ನಡೆಯ ಬೇಕಿತ್ತು.
- 2021-22 ರಲ್ಲಿ 697 ಜಿಲ್ಲಾ ಮಟ್ಟದ ದಿಶಾ ಸಮಿತಿಗಳಲ್ಲಿ 17 ಜಿಲ್ಲೆಗಳಲ್ಲಿ, 17 ದಿಶಾ ಸಮಿತಿಗಳ ಸಭೆ ನಡೆದಿವೆ, ನಿಯಮ ಪ್ರಕಾರ ಈವರೆಗೆ 687 ದಿಶಾ ಸಮಿತಿ ಸಭೆಗಳು ನಡೆಯ ಬೇಕಿತ್ತು.