9th October 2024
Share

TUMAKURU:SHAKTHIPEETA FOUNDATION

ಕೊರೊನಾ ಮಾಹಾಮಾರಿ ದೇಶದಲ್ಲಿ ಲೆಕ್ಕಕೊಡಿ’ ಎಂದು ಅಬ್ಬರಿಸುವಂತೆ ಮಾಡಿದೆ ಎಂದರೆ ತಪ್ಪಾಗಲಾರದು. ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಕೇಂದ್ರ ಸರ್ಕಾರಕ್ಕೆ ಲೆಕ್ಕಕೊಡಿ ಎಂದರೆ, ಹೈಕೋರ್ಟ್ ನ್ಯಾಯಾಧೀಶರು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಲೆಕ್ಕಕೊಡಿ ಎನ್ನುತ್ತಾರೆ.

ಮಾನ್ಯ ಪ್ರಧಾನ ಮಂತ್ರಿಯವರು ಕೇಂದ್ರ ಸರ್ಕಾರ ರಾಜ್ಯಗಳಿಗೆ ನೀಡಿರುವ ವೆಂಟಿಲೇಟರ್ ಆಡಿಟ್ ಮಾಡಿಸಿ, ಅವುಗಳನ್ನು ಸಮರ್ಪಕವಾಗಿ ಬಳಸಿಲ್ಲ ಲೆಕ್ಕಕೊಡಿ ಎನ್ನುತ್ತಾರೆ. ವಿರೋಧ ಪಕ್ಷಗಳ ನಾಯಕರುಗಳು ಸಹ ಕೇಂದ್ರ ಸರ್ಕಾರವನ್ನು ಮತ್ತು ಪ್ರಧಾನಿಯವರಾದ ಶ್ರೀ ನರೇಂದ್ರ ಮೋದಿಯವರನ್ನು ರಾಜ್ಯ, ರಾಜ್ಯಗಳಿಗೆ ತಾರತಮ್ಯ ಮಾಡಿದ್ದೀರಿ? ಮಲತಾಯಿ ಧೋರಣೆ ಮಾಡಿದ್ದೀರಿ? ಒಂದೊಂದು ರಾಜ್ಯಕ್ಕೆ ಒಂದೊಂದು ರೀತಿ ನೀಡಿದ್ದೀರಿ ಲೆಕ್ಕಕೊಡಿ ಎಂದು ಕೇಳುತ್ತಿದ್ದಾರೆ.

ರಾಜ್ಯದಲ್ಲಿ ವಿರೋಧಪಕ್ಷದ ನಾಯಕರಾದ ಶ್ರೀ ಸಿದ್ಧರಾಮಯ್ಯನವರು ಲೆಕ್ಕಕೋಡಿ, ಇಲ್ಲವೇ ಮೀಟಿಂಗ್ ಮಾಡಲು ಅವಕಾಶಕೊಡಿ ಎಂದು ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರನ್ನು ಕೇಳುತ್ತಿದ್ದಾರೆ.

 ಮೈಸೂರಿನ ಲೋಕಸಭಾ ಸದಸ್ಯರಾದ ಶ್ರೀ ಪ್ರತಾಪ್ ಸಿಂಹರವರು, ಜಿಲ್ಲಾಧಿಕಾರಿ  ಶ್ರೀಮತಿ ರೋಹಿಣಿ ಸಿಂಧೂರಿಯವರಿಗೆ ಲೆಕ್ಕಕೊಡಿ ಎಂದರೆ, ಅವರು ಮೈಸೂರು ಮಹಾನಗರ ಪಾಲಿಕೆಯ ಆಯುಕ್ತೆ ಶ್ರೀಮತಿ ಶಿಲ್ಪನಾಗ್‍ರವರನ್ನು ಲೆಕ್ಕಕೊಡಿ ಎಂದರೆ ಅವರು ರಾಜಿನಾಮೆ ನೀಡಿದ್ದಾರೆ ಎನ್ನುತ್ತಾರೆ ಜಿಲ್ಲಾಧಿಕಾರಿಯವರು.

ಬೆಂಗಳೂರು ದಕ್ಷಿಣ ಲೋಕಸಭಾ ಸದಸ್ಯರಾದ ಶ್ರೀ ತೇಜಸ್ವಿ ಸೂರ್ಯರವರು ವಾರ್ ರೂಂಗೆ ಹೋಗಿ ಲೆಕ್ಕ ಕೇಳಿದರೆ, ಯಾರೋ ಒಬ್ಬರು ವಕೀಲರು ಅವರನ್ನೇ ‘ಸ್ಟ್ರಸ್ ಪಾಸ್ ಮಾಡಿದ್ದಾರೆ ಎನ್ನುತ್ತಿದ್ದಾರೆ.’ ದಿಶಾ ಸಮಿತಿಯ ಅಧ್ಯಕ್ಷರು, ಸದಸ್ಯರು  ಯಾವಾಗ, ಯಾವ ಇಲಾಖೆಗೆ ಸೂಚನೆ ನೀಡಿ ಅಥವಾ ಸೂಚನೆ ನೀಡದೇ ಧೀಡಿರ್ ಆಗಿ ಭೇಟಿ ನೀಡಬಹುದು ತಪಾಸಣೆ ಮಾಡಬಹುದು ಎಂದು ದಿಶಾ ಮಾರ್ಗದರ್ಶಿ ಸೂತ್ರದಲ್ಲಿದೆ.

ಅಷ್ಟೆ ಏಕೆ, ನಾನೇ ತುಮಕೂರು ಜಿಲ್ಲೆಯಲ್ಲಿ ಕೊರೊನಾ ಸಂಬಂದಿಸಿದ ಕೆಲವು ಮಾಹಿತಿಗಳನ್ನು ತುಮಕೂರು ಜಿಲ್ಲಾ ದಿಶಾ ಸಮಿತಿಯ ಸದಸ್ಯನಾಗಿ ಕೇಳಿದರೆ, ತುಮಕೂರು ಜಿಲ್ಲಾ ದಿಶಾ ಸಮಿತಿಯಲ್ಲಿ 15 ದಿನಗಳು ಬಿಟ್ಟು ಕೊಡುತ್ತೇವೆ ಎಂದು ಸಭೆ ನಡವಳಿಕೆ ಮಾಡಿದ್ದಾರೆ.

ನೋಡಿ ಇದನ್ನೆಲ್ಲಾ ಮೂಕಪ್ರೇಕ್ಷರಂತೆ ನೋಡುತ್ತಿರುವ ಮತದಾರ ಪ್ರಭುಗಳು ಆಯಾ ಜಿಲ್ಲೆಯ ದಿಶಾ ಸಮಿತಿ ಅಧ್ಯಕ್ಷರು ಅಥವಾ ಸದಸ್ಯ ಕಾರ್ಯದರ್ಶಿಯವರನ್ನು ಮಾಹಿತಿ ಹಕ್ಕು ಅಧಿನಿಯಮದ ಪ್ರಕಾರ ಕೇಳಿದರೆ, ಕೊರೊನಾ ಸಂಭಂದ ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗಿರುವ ಹಣ, ಹಂಚಿಕೆ ಮಾಡಿರುವ ಲಸಿಕೆ, ಮಾತ್ರೆ, ವೆಂಟಿಲೇಟರ್, ಆಕ್ಸಿಜಿನ್, ರೆಮ್ಡಿಸಿವಿರ್, ಆಕ್ಸಿಜಿನ್ ಘಟಕ ಇತ್ಯಾದಿ ಇತ್ಯಾದಿ ತಾಜಾ ಲೆಕ್ಕಕೊಡಬೇಕು.

ಅಷ್ಟೆ ಏಕೆ ಕೇಂದ್ರ ಸರ್ಕಾರದಿಂದ, ಯಾವುದೇ ಇಲಾಖೆಯ, ಯಾವುದೇ ಯೋಜನೆಯ ಅನುದಾನದ ಲೆಕ್ಕವನ್ನು ದಿಶಾ ಸಮಿತಿಗಳು ಬೆರಳ ತುದಿಯಲ್ಲಿ ಇಟ್ಟಿರಬೇಕು ಕೇಳಿದ ತಕ್ಷಣ ನೀಡಬೇಕು. ಇದು ಡಿಜಿಟಲ್ ಯುಗ, ಇದು ಡಾಟಾ ಯುಗ.

ಮಾಜಿಪ್ರಧಾನಿಯವರಾದ ಶ್ರೀ ಮನೋಮೊಹನ್ ಸಿಂಗ್‍ರವರ ಕನಸಿನ ಮಾಹಿತಿ ಹಕ್ಕು ಅಧಿನಿಯಮದ ಪ್ರಕಾರ ಮತ್ತು ಹಾಲಿ ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರ ಕನಸಿನ ದಿಶಾ ಸಮಿತಿಯು ಕೇಂದ್ರದ ಯೋಜನೆಗಳ ಒಂದು ಪೈಸೆ ತಾಜಾ ಲೆಕ್ಕ ಇಡಬೇಕು, ಕೇಂದ್ರ ಹಣ ದುರುಪಯೋಗ ಆಗಿದ್ದಲ್ಲಿ ತನಿಖೆ ನಡೆಸಲು ಕ್ರಮಕೈಗೊಳ್ಳ ಬೇಕು, ಸದುಪಯೋಗ ಆಗಿದೆಯೇ ಎಂದು ಕಟ್ಟ ಕಡೆಯ ವ್ಯಕ್ತಿ, ಕುಟುಂಬ ಮತ್ತು ಗ್ರಾಮದ/ನಗರದ ಒಂದು ಸರ್ವೆನಂಬರ್‍ಗೆ ತಲುಪಿರ ಮಾಹಿತಿಯನ್ನು ಚರ್ಚಿಸಬೇಕು? ಅದು ಜಿಐಎಸ್ ಆಧಾರಿತ ಇರಬೇಕು. ಇದು ನಿಯಮ, ಬರೀ ಕಾಗದದಲ್ಲಿ ಇದ್ದರೆ, ಬರೀ ಭಾಷಣದಲ್ಲಿ ಇದ್ದರೇ ಹೇಗೆ? ಇವರಿಬ್ಬರೂ ಜಾರಿಗೆ ತಂದಿರುವ ಯೋಜನೆಯ ಫಲ ಸಾರ್ವಜನಿಕರಿಗೆ ಪಕ್ಕಾ ಲೆಕ್ಕ ಸಿಗಲಿದೆ. ವಿಚಾರಗಳಲ್ಲಿ ಇಬ್ಬರಿಗೂ ಅಭಿನಂದನೆಗಳು.’

ನೋಡಿ ಯಾರು, ಯಾರಿಗೆ ಲೆಕ್ಕಕೊಡಬೇಕು, ಹಾದಿ ಬೀದಿಯ ರಂಪಾಟ ನೋಡಿದರೆ, ಈ ದೇಶದಲ್ಲಿ ವಿರೋಧ ಪಕ್ಷಗಳು ಸರಿಯಾಗಿಲ್ಲ. ಅವರು ಚುರುಕಾಗಿದ್ದಾರೆ ಇವೆಲ್ಲವುಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಸದನಗಳಲ್ಲಿ ಅಬ್ಬರಿಸಬೇಕು.

ಈ ಕೆಲಸವನ್ನು ಶ್ರೀ ಮನೋಮೊಹನ್ ಸಿಂಗ್‍ರವರ ಕಾಲದಲ್ಲಿ ಅವರೇ ಮಾಡಿದ ಮಾಹಿತಿ ಹಕ್ಕು ಅಧಿನಿಯಮದ ಪ್ರಕಾರ ಎಲ್ಲಾ ದಾಖಲೆ ಸಂಗ್ರಹ ಮಾಡಿದ ಕೇಂದ್ರ ಬಿಜೆಪಿ ಸದನಗಳಲ್ಲಿ ಆರ್ಭಟ ನಡೆಸಿತ್ತು. ಸರ್ಕಾರವನ್ನೇ ತೆಗೆದರು. ಪ್ರಸ್ತುತ ಕೇಂದ್ರದ ಯಾವೊಂದು ವಿರೋಧ ಪಕ್ಷಗಳು ಅಂಕಿ ಅಂಶಗಳ ಪ್ರಕಾರ ಮಾತನಾಡುತ್ತಿಲ್ಲ. ಬರೀ ಬುರುಡೇ ಹೇಳಿಕೆಗಳಿಗೆ ಮಾತ್ರ ಸೀಮೀತವಾಗಿವೆ.’

 ದೇಶದಲ್ಲಿ 738 ಜಿಲ್ಲೆಗಳಿವೆ ಎಂದು ಕೆಲವು ದಾಖಲೆಗಳಲ್ಲಿ, 718 ಜಿಲ್ಲೆಗಳು ಇವೆ ಎಂದು ಕೆಲವು ದಾಖಲೆಗಳಲ್ಲಿ ಇದ್ದರೂ, 697ಜಿಲ್ಲೆಗಳಲ್ಲಿ ಮಾತ್ರ ಜಿಲ್ಲಾ ಮಟ್ಟದಲ್ಲಿ ದಿಶಾ ಸಮಿತಿಗಳು ಇವೆ, ಇವುಗಳ ಅಧ್ಯಕ್ಷರ ಬಳಿ ಮಾಹಿತಿಯನ್ನು ಮಾಹಿತಿ ಹಕ್ಕು ಅಧಿನಿಯಮದ ಪ್ರಕಾರ ಸಂಗ್ರಹ ಮಾಡಲು ಮತ್ತು ರಾಜ್ಯದ ಮಟ್ಟದ ದಿಶಾ ಸಮಿತಿಯ ಅಧ್ಯಕ್ಷರಾದ ಮುಖ್ಯ ಮಂತ್ರಿಗಳು ಅಥವಾ ಲೆಪ್ಟಿನೆಂಟ್ ಗರ್ವನರ್ ರವರಿಂದಲೂ ಮಾಹಿತಿ ಹಕ್ಕು ಅಧಿನಿಯಮದ ಪ್ರಕಾರ ಮಾಹಿತಿ ಸಂಗ್ರಹಿಸಲು ಚಿಂತನೆ ನಡೆಸಲಾಗಿದೆ.

ಆಸಕ್ತರು ಡಿಜಿಟಲ್ ಮೂಲಕ ಸಂಪರ್ಕಿಸ ಬಹುದು ಹಾಗೂ ತಮ್ಮ ಅಭಿಪ್ರಾಯ, ಸಲಹೆ ಮಾರ್ಗದರ್ಶನ ನೀಡಬಹುದು.