22nd November 2024
Share

TUMAKURU:SHAKTHIPEETA FOUNDATION

ಪ್ರಧಾನ ಮಂತ್ರಿಯವರಾದ ಶ್ರೀ ನರೇಂದ್ರಮೋದಿಯವರು ಮತ್ತು ಕೇಂದ್ರ ಜವಳಿ ಸಚಿವರಾದ ಶ್ರೀಮತಿ ಸ್ಮøತಿ ಇರಾನಿರವರು ದೇಶದಲ್ಲಿ 10 ಮೆಗಾ ಇಂಡಸ್ಟ್ರಿಯಲ್ ಟೆಕ್ಸ್‍ಟೈಲ್ ಪಾರ್ಕ್ ಮಾಡಲು ಚಿಂತನೆ ನಡೆಸಿದ್ದಾರೆ ಎಂದು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‍ರವರು ತಿಳಿಸಿದ್ದಾರೆ.

ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನಲ್ಲಿ ಸುಮಾರು 1000 ಎಕರೆಗೂ ಹೆಚ್ಚು ಸರ್ಕಾರಿ ಜಮೀನು ಇರುವ ಕಡೆ ಹುಡುಕಿ ಪ್ರಸ್ತಾವನೆ ಸಿದ್ಧಪಡಿಸಲು ಜಿಲ್ಲಾಧಿಕಾರಿ ಶ್ರೀ ವೈ.ಎಸ್.ಪಾಟೀಲ್‍ರವರಿಗೆ ಪತ್ರ ಬರೆದಿದ್ದಾರೆ. ಮಧುಗಿರಿ ಉಪವಿಭಾಗಾಧಿಕಾರಿಯವರಾದ ಶ್ರೀ ಸೋಮಪ್ಪರವರಿಗೆ ಮಾತನಾಡಿ ಎರಡು ಮೂರು ದಿವಸದಲ್ಲಿ ಸರ್ಕಾರಿ ಜಮೀನು ಹುಡುಕಿ ನಾನು ಸಹ ಮಧುಗಿರಿಗೆ ಬರುತ್ತೇನೆ ಅಲ್ಲಿಯೇ ಜಮೀನು ನೋಡಿ ಸಭೆ ಮಾಡೋಣ ಎಂದು ತಿಳಿಸಿದ್ದಾರೆ.

ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ಶ್ರೀ ನಾಗೇಶ್‍ರವರಿಗೆ ಮಾತನಾಡಿ, ಟೆಕ್ಸ್‍ಟೈಲ್ ಕಮೀಷನರ್ ಜೊತೆ ಮಾತನಾಡಿ, ಯೋಜನೆಯ ಪೂರ್ಣ ಮಾಹಿತಿಯೊಂದಿಗೆ ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಲು ಸಲಹೆ ನೀಡಿದ್ದಾರೆ. 

ಒಂದು ವಾರದೊಳಗೆ ರಾಜ್ಯ ಸರ್ಕಾರದ ಮೂಲಕ ಕೇಂದ್ರ ಸರ್ಕಾರಕ್ಕೆ ಕಲ್ಪನಾವರದಿ ಕಳುಹಿಸಲು ಚಿಂತನೆ ನಡೆಸಿದ್ದಾರೆ. 15 ನೇ ಲೋಕಸಭಾ ಅವಧಿಯಲ್ಲಿ ತುಮಕೂರು ಜಿಲ್ಲೆಯ ಮಧುಗಿರಿ ಅಥವಾ ತಿಪಟೂರು ತಾಲ್ಲೂಕಿನಲ್ಲಿ ಟೆಕ್ಸ್ ಟೈಲ್ ಪಾರ್ಕ್ ಮಾಡಲು ಕೇಂದ್ರ ಸರ್ಕಾರದಿಂದ ಪ್ರಕಟಣೆ ಮಾಡಿಸಿದ್ದರೂ ಅಂದು 150 ಎಕರೆ ಸರ್ಕಾರಿ ಜಮೀನು ಕೊಡಲು ಆಗಿನ ಶಾಸಕರುಗಳು ಮನಸ್ಸು ಮಾಡಲಿಲ್ಲ.

ಅಂದಿನ ಶಾಸಕರಾದ ಶ್ರೀ ಷಡಾಕ್ಷರಿರವರು ತಿಪಟೂರು ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ ನನ್ನನ್ನು ಆ ಸಭೆಗೆ ಕರೆದಿದ್ದರು, ಸರ್ಕಾರಿ ಜಮೀನು ಸಾಧ್ಯಾವಿಲ್ಲ, ರೈತರು ಉಳುಮೆ ಮಾಡಿದ್ದಾರೆ, ನಿನಗೂ ನಿಮ್ಮ ಎಂಪಿಯವರಿಗೂ ಓಟಿನ ಲೆಕ್ಕ ಇಲ್ಲ 1000 ಕುಟುಂಬಗಳನ್ನು ಎತ್ತಿಹಾಕಿ ಹೆಚ್.ಎ,ಎಲ್ ಗೆ ಜಮೀನು ಕೊಡಿಸಿದ್ದೀರಿ, ನನಗೆ ಆ ರೀತಿ ಮಾಡಲು ಆಗಲ್ಲ ಎಂದು ಹೇಳಿದ್ದು ‘ನನಗಿನ್ನೂ ತಲೆಮೇಲೆ ಹೊಡೆದಂತಿದೆ’.

ಮಧುಗಿರಿಯ ಆಗಿನ ಶಾಸಕರಾದ ಶ್ರೀ ಕೆ.ಎನ್.ರಾಜಣ್ಣನವರು ಮತ್ತು ಶ್ರೀ ಜಿ.ಎಸ್.ಬಸವರಾಜ್‍ರವರು ಟೂ ಬಳೆ’ ಬಿಟ್ಟಿದ್ದರು. ನಾನು ಸಹ ಪ್ರಯತ್ನ ಮಾಡಲಿಲ್ಲ. ಬಸವರಾಜ್‍ರವರು ಸೋಲು ಯೋಜನೆ ನೆನೆಗುದಿಗೆ ಬಿತ್ತು. ಈಗ ಪರಿಸ್ಥಿತಿ ಬೇರೆ ಆಗಿದೆ, ನೋಡೋಣ ಯಾರು ಸರ್ಕಾರಿ ಜಮೀನು ಹುಡುಕಲು ಶ್ರಮಿಸುತ್ತಾರೆ.