12th September 2024
Share

TUMAKURU:SHAKTHIPEETA FOUNDATION

ಮಾನ್ಯ ಮಾಜಿ ಉಪಮುಖ್ಯಮಂತ್ರಿಗಳಾದ ಶ್ರೀ ಡಾ.ಜಿ.ಪರಮೇಶ್ವರ್‍ರವರು  ಕ್ರೀಡಾ ಮತ್ತು ಯುವ ಸಬಲೀಕರಣ ಸಚಿವರಾಗಿದ್ದಾಗ ತುಮಕೂರು ಜಿಲ್ಲೆಗೆ ಕ್ರೀಡಾ ವಿಶ್ವವಿದ್ಯಾಲಯ ಸ್ಥಾಪನೆ ಮಾಡುವುದಾಗಿ ಮುಂಗಡ ಪತ್ರದಲ್ಲಿ ಮಂಡಿಸಿದ್ದರು.

ಏಕೋ ಏನೋ ಇದುವರೆಗೂ ನೆನೆಗುದಿಗೆ ಬಿದ್ದಿದೆ. ನಿನ್ನೆ ಖೇಲೋ ಇಂಡಿಯಾ ಕ್ರೀಡಾ ಗ್ರಾಮದ ಯೋಜನೆ ಬಗ್ಗೆ ದೆಹಲಿ ಮತ್ತು ಬೆಂಗಳೂರಿನ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದಾಗ, ಒಬ್ಬ ಅಧಿಕಾರಿ ಸಾರ್ ಪರಮೇಶ್ವರ್ ರವರ ಕನಸಿನ ‘ಕ್ರೀಡಾ ವಿಶ್ವ ವಿದ್ಯಾಲಯ’ ಯೋಜನೆ ಚಾಲನೆಗೆ ಮತ್ತೆ ಕಾಂಗ್ರೆಸ್ ಸರ್ಕಾರ ಬರಬೇಕಾ ಎಂದು ಪ್ರಶ್ನೆ ಮಾಡಿದರು.

ಮುಂದುವರೆದು ನೀವೂ ಅವರು ಚೆನ್ನಾಗಿಲ್ವಾ ಎಂದರು, ನನಗೆ ಆಶ್ಚರ್ಯ ಆಯಿತು, ಆ ಅಧಿಕಾರಿಯವರು ನನ್ನ ಇ-ಪೇಪರ್ ಓದುತ್ತಿದ್ದಾರೆ, ಒಂದು ದಿವಸವೂ ಕ್ರೀಡಾ ವಿಶ್ವವಿದ್ಯಾಲಯದ ಬಗ್ಗೆ ನಾನು ಬರೆದಿಲ್ಲ, ಶ್ರಮಿಸಿಯೂ ಇಲ್ಲ. ನಂತರ ನಾನು ಅವರಿಗೆ ಹೇಳಿದೆ, ಕೆಲಸ ಆಗುವುದು ಬಿಡುವುದು ಬೇರೆ, ನಾನು ಅವರ ಕನಸಿನ ಯೋಜನೆಗೆ ಇಂದಿನಿಂದ ಪ್ರಾಮಾಣಿಕವಾಗಿ ಚಾಲನೆ ನೀಡುತ್ತೇನೆ.

ಸಂಸದರಾದ ಶ್ರೀ ಜಿ.ಎಸ್.ಬಸವರಾಜ್‍ರವರ ಜೊತೆಯು ಮಾತನಾಡಿದೆ, ಅವರು ಸೆಂಟ್ರಲ್ ವಿಸ್ತಾ ತುಮಕೂರಿಗೆ ಏಕೆ ತರಬಾರದು ಎಂದರೆ ನಡಿ ಹೋಗೋಣ, ಯಾರ ಬಳಿ ಮಾತನಾಡಬೇಕು, ಒಂದು ಪತ್ರ ಮಾಡಿಸು ಎನ್ನುವ ಆತ್ಮವಿಶ್ವಾಸದ ಮನಸ್ಸಿನ ವ್ಯಕ್ತಿ. ಆಮೀನು ಎಷ್ಟು ಬೇಕು ಎಂದಾಗ, ನಾನು ಕನಿಷ್ಟ 100 ಎಕರೆ ಸರ್ಕಾರಿ ಜಮೀನು ಬೇಕಂತೆ ಎಂದಾಗ, ಮೊದಲು ಜಮೀನು ಹುಡುಕು ಎಂಬ ಸಲಹೆ ನೀಡಿದರು. ಅಲ್ಲಿಗೆ ಕ್ರೀಡಾ ವಿಶ್ವವಿದ್ಯಾಲಯದ ಕಡತ ಆರಂಭವಾಯಿತು. ಸರ್ಕಾರಿ ಜಮೀನು ಪತ್ತೆ ಹಚ್ಚಲು ಸಂದರ ಪತ್ರವೂ ಇಂದೇ ಸಿದ್ಧವಾಯಿತು.

ಮುಂದಿನ ದಿಶಾ ಸಮಿತಿಯಲ್ಲಿ ಈ ವಿಚಾರದ ಬಗ್ಗೆ ಚರ್ಚೆ ನಡೆಯಲಿದೆ, ಸುಮಾರು 100 ಎಕರೆ ಸರ್ಕಾರಿ ಜಮೀನಿನ ಅಗತ್ಯವಿದೆ, ನದಿ ನೀರಿನ ಅಲೋಕೇಷನ್ ಆಗಬೇಕಿದೆ. ಕೇಂದ್ರ ಸರ್ಕಾರಕ್ಕೂ ಪ್ರಸ್ತಾವನೆ ಸಲ್ಲಿಸಬೇಕಿದೆ. ಪರಮೇಶ್ವರ್‍ರವರ ಕನಸಿನ ಬಗ್ಗೆಯೂ ಸಮಾಲೋಚನೆ ನಡೆಸಬೇಕಿದೆ.

‘ಈ ಯೋಜನೆಗೂ ಆಚಾನಕ್ ಆಗಿ ಶನಿಜಯಂತಿಯ ದಿನವೇ ಚಾಲನೆ ದೊರಕಿದ್ದು ಒಂದು ಪವಾಡವೇ ಸರಿ?’

ತುಮಕೂರು ಜಿಲ್ಲಾ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷರಾದ ಶ್ರೀ ನರಸಿಂಹರಾಜು ರವರು ಜಿಮ್ ಕಟ್ಟಡದ ಬಗ್ಗೆ ನನಗೆ ಒಂದು ಅವಾಜ್ ಹಾಕಿದ್ದರು. ಅವರ ಕನಸಿನ ಚಿಂತನೆಗೆ ಚಾಲನೆ ನೀಡುವುದು ಹೇಗೆ ಎಂಬ ಪರಿಕಲ್ಪನೆಗೆ ಯೋಚಿಸುತ್ತಿರುವಾಗ ಕ್ರೀಡಾ ವಿಶ್ವಾ ವಿದ್ಯಾಲಯದ ಬಗ್ಗೆ ಗಮನ ಹರಿದಿದೆ.

ಶೀಘ್ರವಾಗಿ ಈ ಬಗ್ಗೆ ತುಮಕೂರು ಜಿಲ್ಲೆಯ ಕ್ರೀಡಾ ಪಟುಗಳ ಸಭೆ ಆಯೋಜಿಸಿ, ಒಂದು ಚಿಂತನ-ಮಂಥನ ಮಾಡಬೇಕಿದೆ. ಇದು ಮುಂದಿನ ದಿಶಾ ಸಮಿತಿಗೂ ಮುನ್ನ ಆಗಬೇಕಿದೆ. ಈ ಸಭೆಯನ್ನು ಯಾರು ಆಯೋಜಿಸಲು ಮುಂದೆ ಬರುತ್ತಾರೆ ಕಾದು ನೋಡೋಣ.