22nd December 2024
Share

ನಿನ್ನೆ(10.06.2021) ರಂದು ಬೆಳಿಗ್ಗೆ ಇ- ಪೇಪರ್ ಬರೆಯಲು ಕುಳಿತೆ, ಏಕೋ ನನಗೆ ಪೇಪರ್ ಬಿಟ್ಟು ಬೇರೆ ಪತ್ರಗಳನ್ನು ಮಾಡಲು ಮನಸ್ಸು ಬಂತು. ನಂತರ ನನ್ನ ಧರ್ಮಪತ್ನಿಗೆ ಕೇಳಿದೆ, ಈ ದಿನದ ವಿಶೇಷ ಏನು ನೋಡು, ಆಕೆ ಈ ದಿನ ಶನಿ ಜಯಂತಿ, ಸೂರ್ಯಗ್ರಹಣ ಮತ್ತು ಬಾದಾಮಿ ಅಮಾವಾಸೆ ವಿಚಿತ್ರ ದಿವಸವಿದೆ ಎಂಬ ಅಂಶ ತಿಳಿಸಿದಾಗ ನನಗೂ ಆಶ್ಚರ್ಯವಾಯಿತು.

ನಾನು ಮತ್ತು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಬೆಂಗಳೂರಿಗೆ ಹೊರಟಾಗ ಈ ದಿನದ ಕೆಲಸ ಏನೇನು ಎಂಬ ಚರ್ಚೆ ಅರಂಭವಾಯಿತು. ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು, ಮುಖ್ಯ ಕಾರ್ಯದರ್ಶಿ ಶ್ರೀ ರವಿಕುಮಾರ್‍ರವರು, ಮುಖ್ಯ ಮಂತ್ರಿಯವರ ಆಪ್ತ ಕಾರ್ಯದರ್ಶಿ ಶ್ರೀ ರಮಣರೆಡ್ಡಿರವರು, ಜಲಸಂಪನ್ಮೂಲ ಅಪರ ಮುಖ್ಯ ಕಾರ್ಯದರ್ಶಿ ಶ್ರೀ ರಾಕೇಶ್ ಸಿಂಗ್ ರವರು, ಗೃಹ ಕಾರ್ಯದರ್ಶಿಯವರಾದ ಶ್ರೀ ರಜನೀಶ್ ಗೋಯೆಲ್, ಜಲಸಂಪನ್ಮೂಲ  ಕಾರ್ಯದರ್ಶಿ ಶ್ರೀ ಲಕ್ಷ್ಮಣರಾವ್ ಪೇಶ್ವೆರವರು, ಲೋಕೋಪಯೋಗಿ ಕಾರ್ಯದರ್ಶಿ ಶ್ರೀ ಕೃಷ್ಣರೆಡ್ಡಿರವರು, ಕೆಎನ್‍ಎನ್‍ಎಲ್ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಮಲ್ಲಿಕಾರ್ಜುನ್ ಗುಂಗೆರವರು, ಸಿಎನ್‍ಎನ್‍ಎಲ್ ವ್ಯವಸ್ಥಾಪಕ ನಿರ್ದೇಶಕ ನಿರ್ದೇಶಕರಾದ ಶ್ರೀ ಕೆ.ಜೈಪ್ರಕಾಶ್‍ರವರು ಹೀಗೆ ಆನೇಕ ಯೋಜನೆಗಳ ಬಗ್ಗೆ ಚರ್ಚೆ ಆರಂಭವಾಯಿತು.

 ನಂತರ ನಾನು ಈ ದಿವಸದ ಮಹತ್ವ ಹೇಳಿದಾಗ ಬಸವರಾಜ್‍ರವರು ಶನಿ ಜಯಂತಿ ಎಂದರೆ ನಮ್ಮ ಕೆಲವು ಅಭಿವೃದ್ಧಿ ಯೋಜನೆಗಳಿಗೆ ಶನಿಕಾಟವಿರಬಹುದು, ಬಹಳ ಸತಾಯಿಸಿವೆ ನೋಡೋಣ ನಡಿ, ಇವತ್ತು ಎಲ್ಲಾ ಬಿಡುಗಡೆಯಾಗಬಹುದು ಎಂದು ತಮಾಷೆ ಮಾಡಿದರು.

ನಿಜಕ್ಕೂ ಈ ದಿನ ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನರವರೊಡನೆ ಚರ್ಚಿಸಿದಾಗ ಬಹಳ ದಿನಗಳಿಂದ ನೆನೆ ಗುದಿಗೆ ಬಿದ್ದಿರುವ ಯೋಜನೆಗಳಿಗೆ ಚಾಲನೆ ದೊರಕಿತು. ಮುಖ್ಯಮಂತ್ರಿಯವರೇ ಈ ಕೆಲಸ ಆಗಬೇಕು ಕಡತ ತರಿಸಿ ಎಂದು ಅವರ ಆಪ್ತ ಶಾಖೆಗೆ ನಿರ್ದೇಶನ ನೀಡಿದರು.

ಈ ದಿವಸ ಬಸವರಾಜ್ ರವರಿಗೆ ಅತ್ಯಂತ ಇಷ್ಟದ ಜಿಲ್ಲೆಯ ಮೂರು ಬೃಹತ್ ಯೋಜನೆಗಳಿಗೆ ಚಾಲನೆ ದೊರಕಿತು, ನನಗೆ ಇಷ್ಟವಾದ ನಮ್ಮ ಗ್ರಾಮಪಂಚಾಯಿತಿಯ ವ್ಯಾಪ್ತಿಯ ಮೂರು ಒಳ್ಳೆಯ ಯೋಜನೆಗಳಿಗೂ ಜೀವ ಬಂತು. ಜೊತೆಗೆ ಮೂರು ಜನರಿಗೆ ವೈಯಕ್ತಿಕವಾಗಿ ಆಗ ಬೇಕಾದ ಕೆಲಸಕ್ಕೂ ಚಾಲನೆ ದೊರಕಿತು. ಇದರಲ್ಲಿ ಒಬ್ಬ ಅಂತೂ ಹಲವಾರು ವರ್ಷಗಳಿಂದ ಒದ್ದಾಡುತ್ತಿದ್ದ ಕೆಲಸ. ನಿಜಕ್ಕೂ ಆತನ ಕೆಲಸ ಆದರೆ ಆತನ ಜೀವಮಾನದ ಸಾಧನೆ.

ನಾವು ಅಂದುಕೊಂಡಿದ್ದಕ್ಕಿಂತ ಜಾಸ್ತಿ ಕೆಲಸ ಆದಾಗ,  ಈ ದಿವಸ ನಿಜಕ್ಕೂ ಒಳ್ಳೆಯ ದಿವಸವೇ ಎಂದು ಬರುವಾಗ ಮತ್ತೆ ಮೆಲುಕು ಹಾಕಿದೆವು.