22nd December 2024
Share

TUMAKURU:SHAKTHIPEETA FOUNDATION

 ತುಮಕೂರು ನಗರದ ಸರ್ಕಾರಿ ಜೂನಿಯರ್ ಕಾಲೇಜು ಆವರಣದಲ್ಲಿ ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ ಒಂದು ಜಿಮ್ ಕಟ್ಟಡ ನಿರ್ಮಾಣ ಮಾಡಿ, ಉಪಕರಣಗಳನ್ನು ತಂದು ಹಾಕಿದ್ದಾರೆ. ಸುಮಾರು ದಿವಸಗಳಿಂದ ಧೂಳು ತಿನ್ನುತ್ತಿದೆ. ಇದನ್ನು ‘ನಿರ್ವಹಣೆ ಮಾಡುವರು ಯಾರು?’ ಎನ್ನುವುದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಾಕ್ಷರಾದ ಶ್ರೀ ನರಸಿಂಹರಾಜುರವರ ವಾದ.

ಹಿಂದೆ ಇದೇ ಆವರಣದಲ್ಲಿರುವ ಒಂದು ಜಿಮ್ ಕಟ್ಟಡವನ್ನು ಯಾರೋ ಖಾಸಗಿಯವರು ಆಕ್ರಮಿಸಿಕೊಂಡಿದ್ದಾರಂತೆ, ತೆರವು ಮಾಡಲು ಕೇಳಿದರೆ ಪ್ರಾಂಶುಪಾಲರಾದ ಶ್ರೀ ಜಯರಾಮಯ್ಯನವರಿಗೆ ಧಮ್ಕಿ’ ಹಾಕುತ್ತಾರಂತೆ. ಈಗ ಕ್ರೀಡಾಭಿಮಾನಿಗಳು ಮತ್ತು ಕ್ರೀಡಾ ಸಂಸ್ಥೆಯವರು ಹೊಸ ಜಿಮ್ ಕಟ್ಟಡ  ನಮಗೆ ಕೊಡಿ ನಾವು ನಿರ್ವಹಣೆ ಮಾಡುತ್ತೇವೆ ಎಂದು ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್‍ಗೆ ಮನವಿ ಸಲ್ಲಿಸಿದ್ದಾರೆ. 

ಇದರ ಮಾಲೀಕತ್ವವೇ ಗೊಂದಲವಿದೆ, ಡಿಡಿಪಿ ಒಬ್ಬರು ಈ ಜಮೀನಿನ ಖಾತೆ ನಮ್ಮ ಹೆಸರಲ್ಲಿದೆ ಎಂದು ಬಹಳ  ಹಿಂದೆ ನನಗೆ ದಾಖಲೆ ತೋರಿಸಿದ್ದರು. ಇನ್ನೋಮ್ಮೆ ನಮ್ಮ ಹೆಸರಿನಲ್ಲಿದೆ ಎಂದು ಪ್ರಾಂಶುಪಾಲರು ಹೇಳಿದ್ದರು. ಎರಡು ಇಲಾಖೆ ಸರ್ಕಾರವೇ ತೊಂದರೆಯಿಲ್ಲ.

ಇನ್ನೊಂದು ಪವಾಡವೆಂದರೆ ಈ ಜಮೀನಿನ ದಾಖಲೆಯೇ ಇವರ ಬಳಿ ಇರಲಿಲ್ಲ ಸುಮಾರು 2001 ರಲ್ಲಿ ನಾನೇ ಪತ್ರಗಾರದಿಂದ ನಾನೇ ಸಂಗ್ರಹ ಮಾಡಿ ನೀಡಿದ್ದೇ. ಮೊನ್ನೆ ಪ್ರಥಮ ದರ್ಜೆ ಮಹಿಳಾ ಕಾಲೇಜಿಗೆ ನಿವೇಶನ ನೀಡುವಾಗ ಈ ದಾಖಲೆ ಕೇಳಿದರೆ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರಿಗೆ ಕೊಡಲು ಹಿಂದೆ-ಮುಂದೆ ನೋಡುತ್ತಿದ್ದರು. ನಾನೇ ಹೇಳಿ ಕೊಡಿಸಿದ್ದಾಯಿತು.

1999 ರಲ್ಲಿ ಸಂಸದರಾಗಿದ್ದ ಶ್ರೀ ಜಿ.ಎಸ್.ಬಸವರಾಜ್ ರವರು ಪತ್ರ ಬರೆದು ಸಮೀಕ್ಷೆ ಮಾಡಿಸಿ ಎಂದಿದ್ದರು. ಸುಮಾರು 10 ವರ್ಷಗಳಾದರೂ ಸಮೀಕ್ಷೆ ಮಾಡಿಸಿಲ್ಲ, ಇನ್ನೂ ಯಾವ ಕಾಲಕ್ಕೆ ಸಮೀಕ್ಷೆ ಆಗುವುದೋ ದೇವರೇ ಬಲ್ಲ. ನಾನು ಈಗಲೂ ಕಡತದಲ್ಲಿ ನೋಡಿದೆ ಬಸವರಾಜ್‍ರವರ ಪತ್ರವೂ ಇದೆ, ಒತ್ತುವರಿ ತೆರವುಗೊಳಿಸಿ’ ಎಂದು ಸರ್ಕಾರಿ ಆದೇಶವೂ ಇದೆ,  ಇಲಾಖೆಯವರು ಗಮನಿಸುತ್ತಿಲ್ಲ. ಪಾಪ ಯಾರೋ ಖಾಸಿಗೆಯವರು ಅತಿಕ್ರಮಣದಾರರ ವಿರುದ್ಧ ಹೋರಾಡುತ್ತಿದ್ದರಂತೆ. ಅವರಲ್ಲಿ ಒಬ್ಬರೂ ಸತ್ತಿದ್ದಾರೆ. ಇನ್ನೋಬ್ಬರೂ ಸಾಯುವ ಸ್ಥಿತಿಯಲ್ಲಿದ್ದಾರಂತೆ.

ಆವರಣದಲ್ಲಿ ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ ಆಲದ ಮರಗಳ ಕೆಳಗೆ ಎಣ್ಣೆ ಹೊಡೆಯಲು ಒಂದು ಪಾರ್ಕ್ ನಿರ್ಮಾಣ ಮಾಡಿದ್ದಾರಂತೆ, ಇದರ ನಿರ್ವಹಣೆಗೆ ಪಕ್ಕದಲ್ಲಿರುವ ಬಾರ್‍ಗೆ ಕೊಡಿ ಎಂದು ಸಾರ್ವಜನಿಕರು ಅಣಕವಾಡುತ್ತಿದ್ದಾರೆ.’

ಕೆಲವರು ಅಸ್ಸಾಂ ರಾಜ್ಯದ ಗೌಹಾತಿ ನಗರದಲ್ಲಿರುವ ಮಾದರಿಯಲ್ಲಿ ಇದನ್ನು ಪ್ರೇಮಿಗಳ ಪಾರ್ಕ್’ ಮಾಡಿ ಎಂದು ಸಲಹೆ ನೀಡುತ್ತಿದ್ದಾರೆ. ಪರಿಸರ ತಜ್ಞ ಡಾ.ರುದ್ರಮೂರ್ತಿಯವರು ಗೌಹಾತಿಯಲ್ಲಿ ಐಐಟಿಯಲ್ಲಿ ಪಿಹೆಚ್‍ಡಿ ಮಾಡುವಾಗ ಅವರೇ ವಿಮಾನ ಟಿಕೆಟ್ ಕೊಡಿಸಿ ಕರೆಸಿಕೊಂಡು ಪ್ರೇಮಿಗಳ ಪಾರ್ಕ್ ತೋರಿಸಿದ್ದರು.

 ಸಂಜೆ ನಾವಿಬ್ಬರೂ ಮಾತ್ರ ಪ್ರೇಮಿಗಳಲ್ಲಿದೆ ಪಾರ್ಕ್ ಒಳಗೆ ಹೋಗಿದ್ದೆವು, ಕಾವಲುಗಾರರು ನೀವೂ ಹೀಗೆ ಒಬ್ಬೊಬ್ಬರೇ ಬರುವ ಆಗಿಲ್ಲ ಜೋಡಿಗಳು ಮಾತ್ರ ಬರಬೇಕು ಎಂದು ಎಚ್ಚರಿಸಿದ್ದರು. ಅದೊಂದು ವಾಟರ್ ಬಾಡಿ ಸುತ್ತಲೂ ಮರ-ಗಿಡ-ಬಳ್ಳಿಗಳಿಂದಲೇ ಹಸಿರು ಗೋಡೆ ಮಾದರಿ ಮಾಡಿ, ಮಧ್ಯೆ ಒಂದೊಂದು ಜೋಡಿ ಪ್ರತ್ಯೇಕವಾಗಿ ಕುಳಿತುಕೊಳ್ಳಲು ವ್ಯವಸ್ಥೆ ಮಾಡಿದ್ದಾರೆ.

ಪರಿಸರ ತಜ್ಞ ಡಾ.ರುದ್ರಮೂರ್ತಿಯವರ ಮುಂದೆ ಜೂನಿಯರ್ ಕಾಲೇಜು ಆವರಣ ಮಾತನಾಡಿದರೇ ಹೆಗರಿ ಬೀಳುತ್ತಾರೆ, ಇವರೆಲ್ಲಾ ಅವರ ಸ್ವಂತ ಹಣದಿಂದ ಸರ್ಕಾರಿ ಜಮೀನು ರಕ್ಷಣೆ ಮಾಡಲು ಶ್ರಮಿಸುತ್ತಿದ್ದಾರೆ. ಇನ್ನೊಬ್ಬ ಪರಿಸರ ತಜ್ಞರಾದ ಶ್ರೀ ಟಿ.ವಿ.ಎನ್. ಮೂರ್ತಿಯವರು ಎಣ್ಣೆ ಹೊಡೆಯುವದನ್ನು ತಪ್ಪಿಸಿ, ಕಡೇ ಪಕ್ಷ ಒಬ್ಬ ವಾಚ್‍ಮ್ಯಾನ್ ಹಾಕಿಸಿ ಎನ್ನುತ್ತಾರೆ.

ಸುಮಾರು 6-7 ಸರ್ಕಾರಿ ಕಾಲೇಜುಗಳು, ಹಾಸ್ಟೆಲ್‍ಗಳು ಇರುವ ಈ ಆವರಣ ನಿರ್ವಹಣೆ ಮಾಡುವುದನ್ನು ಬಿಟ್ಟು ಕುಡುಕರಿಗೆ, ಒತ್ತುವರಿದಾದರರಿಗೆ ಬಿಟ್ಟಿರುವ ಬಗ್ಗೆ ಡಿಡಿಪಿ ಶ್ರೀ ನಂಜಯ್ಯನವರೊಂದಿಗೆ ಸಮಾಲೋಚನೆ ನಡೆಸಲಾಯಿತು. ಅವರ ಪ್ರಕಾರ ಜಿಲ್ಲಾಧಿಕಾರಿಗಳೇ ಒಂದು ದಾರಿ ತೋರಿಸಬೇಕು?

ಕ್ರೀಡಾಭಿಮಾನಿಗಳು, ವಾಕ್ ಮಾಡುವವರು, ಪ್ರೇಮಿಗಳು,  ಸಾಹಿತಿಗಳು ಮತ್ತು ಹಿರಿಯ ನಾಗರೀಕರ ಸಭೆ ಮಾಡಿ ನಿಯಾಮುನುಸಾರ ಒಂದು ಒಳ್ಳೆಯ ನಿರ್ಧಾರ ಕೈಗೊಳ್ಳುವ ಆಶಾಭಾವನೆಯಿದೆ. ಜಿಲ್ಲಾಧಿಕಾರಿಗಳು ಏನು ಮಾಡುತ್ತಾರೆ ಕಾದು ನೋಡೋಣ?’