28th March 2024
Share

TUMAKURU:SHAKTHI PEETA FOUNDATION

ತುಮಕೂರು ಜಿಲ್ಲೆಗೆ ಆಗಿನ ಸಂಸದ ಶ್ರೀ ಜಿ.ಎಸ್.ಬಸವರಾಜ್ ರವರ ಮನವಿ ಮೇರೆಗೆ ಸುಮಾರು 100 ಕೋಟಿ ವೆಚ್ಚದಲ್ಲಿ ಎಂ.ಎಸ್.ಎಂ.ಇ.ಟೆಕ್ನಾಲಜಿ ಸೆಂಟರ್ ಸ್ಥಾಪಿಸಲು 2014 ರಲ್ಲಿ ಯುಪಿಎ ನೇತೃತ್ವದ ಕೇಂದ್ರ ಸರ್ಕಾರ ಹಸಿರು ನಿಶಾನೆ ನೀಡಿತ್ತು. ಮತ್ತೆ 2021 ರಲ್ಲಿ ಎಂ.ಎಸ್.ಎಂ.ಇ.ಟೆಕ್ನಾಲಜಿ ಸೆಂಟರ್ ಆರಂಭವಾಗುವ ಲಕ್ಷಣಗಳು ಕಾಣುತ್ತಿವೆ. 

ತುಮಕೂರು ಜಿಲ್ಲಾಡಳಿತ 15 ಎಕರೆ ಸರ್ಕಾರಿ ಜಮೀನು ಮಂಜೂರಾಗಿತ್ತು.

ಅಧಿಕಾರಿಗಳ ಮತ್ತು ಚುನಾಯಿತ ಜನಪ್ರತಿನಿಧಿಗಳ ನಿಲ್ರ್ಯಕ್ಷದಿಂದ 100 ಕೋಟಿ ರೂ 20 ಕೋಟಿ ಯೋಜನೆಗೆ ಇಳಿದಿದೆ.

2018 ರಲ್ಲಿರಾಜ್ಯ ಸರ್ಕಾರ ಸ್ಟ್ಯಾರ್ಟ್ ಅಫ್ ಇನ್ನೋವೇಷನ್‍ಹಬ್ ಗೆ ರೂ 7 ಕೋಟಿ ಮಂಜೂರು ಮಾಡಿತ್ತು. ಅಧಿಕಾರಿಗಳ ಮತ್ತು ಚುನಾಯಿತ ಜನಪ್ರತಿನಿಧಿಗಳ ನಿಲ್ರ್ಯಕ್ಷದಿಂದ ಅದು ಹೋಯಿತು.

ಈಗ ರೂ 20 ಕೋಟಿ ಕೇಂದ್ರ ಸರ್ಕಾರದ ಹಣ ಇದೆಯಂತೆ, ಇದರಲ್ಲಿ ಏನೇನು ಮಾಡಬಹುದು ಎಂಬ ಮಾಹಿತಿ ಪಡೆಯಬೇಕಿದೆ.

ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಇನ್‍ಕ್ಯುಬೇಷನ್ ಸೆಂಟರ್‍ಗೆ ಎಂದು ಒಂದು ಕಟ್ಟಡ ನಿರ್ಮಾಣ ಮಾಡಿದೆ. ಇದರ ಮಾಲೀಕತ್ವ ಗ್ರಂಥಾಲಯ ಇಲಾಖೆಯದ್ದಾಗಿದೆ.

ಎಂ.ಎಸ್.ಎಂ.ಇ.ಟೆಕ್ನಾಲಜಿ ಸೆಂಟರ್ ರಾಜ್ಯದಲ್ಲಿ ಸಣ್ಣ ಕೈಗಾರಿಕಾ ಸಚಿವರ ವ್ಯಾಪ್ತಿಗೆ ಬರಲಿದೆ.

ಈ ಎರಡು ಇಲಾಖೆಗಳು ಕುಳಿತು ಏನೇನು ಮಾಡಬೇಕು, ಹೇಗೆ ಮಾಡಬೇಕು ಎಂಬ ನಿರ್ಧಾರಕೈಗೊಳ್ಳಬಹುದಾಗಿದೆ.

ಸಾರ್ವಜನಿಕ ಗ್ರಂಥಾಲಯಕ್ಕೂ ಒಂದು ಕಮಿಟಿ ಇದೆ.

ಇನ್ ಕ್ಯುಬೇಷನ್ ಸೆಂಟರ್ ಸ್ಥಾಪಿಸಲು/ನಿರ್ವಹಣೆ ಮಾಡಲು ಒಂದು ಸಮಿತಿ ಇದೆ.

ಜಿಲ್ಲಾಧಿಕಾರಿಗಳು ಈ ಬಗ್ಗೆ ಒಂದು ನಿರ್ಧಾರ ಕೈಗೊಂಡು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಮುಂದೆ ತುಮಕೂರು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್‍ರವರು ಅಂತಿಮ ರೂಪು ನೀಡಲಿದ್ದಾರೆ. 2021 ರಲ್ಲಿ ಆರಂಭವಾದರೆ ಸಾಕು? ಎನ್ನುತ್ತಾರೆ ದಿಶಾ ಸಮಿತಿ ಸದಸ್ಯರಾದ ಶ್ರೀ ಟಿ.ಆರ್.ರಘೋತ್ತಮರಾವ್‍ರವರು.