22nd December 2024
Share

TUMAKURU:SHAKTHIPEETA FOUNDATION

ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ರಾಜ್ಯದ ನದಿ ಜೋಡಣೆ’ ಮೂಲಕ ‘ಊರಿಗೊಂದು ಕೆರೆ- ಕೆರೆಗೆ ನದಿ ನೀರು’ ಯೋಜನೆಯಡಿಯಲ್ಲಿ ಡಿಪಿಆರ್ ಸಿದ್ಧಪಡಿಸಲು ಈಗಾಗಲೇ ಆದೇಶ ಮಾಡಿದ್ದಾರೆ. ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಕೆ.ಜೈಪ್ರಕಾಶ್‍ರವರನ್ನು ನೋಡೆಲ್ ಆಫೀಸರ್ ಆಗಿ ನೇಮಕ ಮಾಡಿದ್ದಾರೆ.

ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ, ರಾಜ್ಯದ ಎಲ್ಲಾ ಕೆರೆ-ಕಟ್ಟೆಗಳ ಮಾಲೀಕತ್ವ ಬರದೇ ಇರಬಹುದು. ಆದರೆ ಕೆರೆ ಸಂರಕ್ಷಣಾ ಪ್ರಾಧಿಕಾರದಡಿ ಎಲ್ಲಾ ಕೆರೆ-ಕಟ್ಟೆಗಳ ಹೊಣೆಗಾರಿಕೆ’ ನಿಮ್ಮದೇ ಎಂಬ ಭಾವನೆ ನನ್ನದಾಗಿದೆ. ಹೀಗಿದ್ದರೂ ರಾಜ್ಯದ 224 ವಿಧಾನ ಸಭಾ ಕ್ಷೇತ್ರಗಳ ಕೆರೆ ಕಟ್ಟೆಗಳನ್ನು ತುಂಬಲು ಎಷ್ಟು ನದಿ ನೀರಿನ ಅಗತ್ಯವಿದೆ, ಯಾವ ನದಿ ನೀರಿನಿಂದ ತುಂಬಿಸ ಬಹುದು ಎಂಬ ಒಂದು ಪರಿಕಲ್ಪನಾ ವರದಿ ಏಕೆ ಸಿದ್ಧಪಡಿಸಿಲ್ಲ ಅಥವಾ ಒಂದು ವೇಳೆ ರಹಸ್ಯವಾಗಿ ಸಿದ್ಧಪಡಿಸಿದ್ದರೆ ಏಕೆ ಬಹಿರಂಗಪಡಿಸಿಲ್ಲ.’

ರಾಜ್ಯದ ಮುಖ್ಯಮಂತ್ರಿಗಳ ತವರು ಕ್ಷೇತ್ರ ಶಿಕಾರಿ ಪುರ ಮತ್ತು ನಿಮ್ಮ ತವರು ಕ್ಷೇತ್ರ ಚಿಕ್ಕನಾಯಕನಹಳ್ಳಿಗೆ ಮಾತ್ರ ಮಾಡಿಕೊಂಡರೆ ಇದು ನ್ಯಾಯವೇ?’ ಇದು ಮುಖ್ಯ ಮಂತ್ರಿಗಳಿಗೆ ಮಾಡಿದ ಅಪಮಾನವಾಗುವುದಿಲ್ಲವೇ?

ಕೇಂದ್ರ ಜಲಶಕ್ತಿ ಸಚಿವರಾದ ಶ್ರೀ ಗಜೇಂದ್ರ ಸಿಂಗ್‍ರವರಿಗೆ  ಶ್ರೀ ಜಿ.ಎಸ್.ಬಸವರಾಜ್‍ರವರು ಪತ್ರ ಬರೆದ ಹಿನ್ನಲೆಯಲ್ಲಿ ವರದಿ ನೀಡಲು ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಬಹಳ ದಿವಸಗಳಾಗಿವೆ, ಮುಖ್ಯ ಮಂತ್ರಿಗಳು ಆದೇಶ ಮಾಡಿ ಬಹಳ ದಿವಸಗಳಾಗಿವೆ. 

ಮುಖ್ಯ ಮಂತ್ರಿಗಳು ತುಮಕೂರು ಜಿಲ್ಲೆಯನ್ನು ಪೈಲಟ್ ಯೋಜನೆಯಾಗಿ ತೆಗೆದುಕೊಳ್ಳಿ’ ಎಂದು ಮಾನ್ಯ ಪ್ರಧಾನಿಯವರಿಗೂ ಪತ್ರ ಬರೆದಿದ್ದಾರೆ. ಸಾಕಷ್ಟು ಪೂರಕವಾದ ಕೆಲಸಗಳು ಕಳೆದ ಎರಡು ವರ್ಷದಿಂದ ನಡೆದಿವೆ.

ನಾನು ನಿಮಗೆ ‘ಕೆರೆ-ಕಟ್ಟೆಗಳ ರಾಜ’ ಎಂದು ಬರೆದಿದ್ದೆ, ನೀವೂ ಈ ವಿಚಾರದಲ್ಲಿ ರಾಜರ ಕೆಲಸ ಏಕೆ ಮಾಡುತ್ತಿಲ್ಲ ಎಂಬ ಕೊರಗು ನನಗಿದೆ. ಯೋಜನೆ ಯಾವ ಕಾಲಕ್ಕಾದರೂ ಪೂರ್ಣಗೊಳ್ಳಲಿ, ನಿಮ್ಮ ಕಾಲದಲ್ಲಿ ಒಂದು ವರದಿ ಸಿದ್ಧಪಡಿಸಿ ಇತಿಹಾಸ ನಿರ್ಮಿಸಿ’ 

 ಇದೂವರೆಗೂ ನೀವೂ ಮತ್ತು ಬಸವರಾಜ್‍ರವರು ನಾನೊಂದು ತೀರ- ನಿನೊಂದು ತೀರಾ’ ಎನ್ನುವ ಹಾಗಿದ್ದೀರಿ ಎಂದು ಜನ ಮಾತನಾಡಿ ಕೊಳ್ಳುತ್ತಿದ್ದರೂ. ಈಗ ಕೊರೊನಾ ವಿಚಾರದಲ್ಲಿ ನಾ ನಿನ್ನ ಬಿಡಲಾರೆ’ ಎಂಬಂತೆ ಅಂಟಿ ಕೊಂಡಿದ್ದಾರೆ ಎಂದು ಅದೇ ಜನ ಖುಷಿಯಾಗಿದ್ದಾರೆ. ಇದೇ ಕಾವಿನಲ್ಲಿ ತುಮಕೂರು ಜಿಲ್ಲೆಯ ಊರಿಗೊಂದು ಕೆರೆ- ಕೆರೆಗೆ ನದಿ ನೀರು’ ಯೋಜನೆಯ ಪರಿಕಲ್ಪನಾ ವರದಿ ಚಿತ್ರಣ ಬಹುತೇಕ ಸಿದ್ಧವಾಗಿದೆ. ಅಧಿಕೃತ ಮಾಡಿ ಸರ್ಕಾರಕ್ಕೆ ಸಲ್ಲಿಸಿ.

  ಮಾದರಿಯಾಗಿ ತುಮಕೂರು ಜಿಲ್ಲೆಯ ಊರಿಗೊಂದು ಕೆರೆ- ಆ ಕೆರೆಗೆ ನದಿ ನೀರು ನಕ್ಷೆ ಮತ್ತು ಪರಿಕಲ್ಪನೆ ಸಿದ್ಧಪಡಿಸಿ, ನಂತರ ರಾಜ್ಯದ ಎಲ್ಲಾ 224 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಶೀಘ್ರವಾಗಿ ಪೂರ್ಣಗೊಳಿಸಿ. ನಿಮಗೆ ಈಗಾಗಲೇ ‘ರಾಜಕೀಯದಲ್ಲಿ ಯಾವುದೂ ಶಾಶ್ವತವಲ್ಲ’ ಎಂಬ ಅರಿವೂ ಆಗಿದೆ. ಈಗಂತೂ ಸಣ್ಣ ನೀರಾವರಿ ಇಲಾಖೆ ನಿಮ್ಮ ಕೈಯಲ್ಲಿದೆ. ಮುಖ್ಯ ಮಂತ್ರಿಗಳ ಆದೇಶ ಎಂಬ ಅಸ್ತ್ರವೂ’ ಇದೆ. ಚಿಕ್ಕನಾಯಕನಹಳ್ಳಿಗೆ ಯೋಜನೆ ಸಿದ್ಧಪಡಿಸಿದ ‘ಅನುಭವವೂ’ ಇದೆ. ಸಿಕ್ಸರ್ ಬಾರಿಸುವಿರಾ?