28th March 2024
Share

TUMAKURU:SHAKTHIPEETA FOUNDATION

‘ಕಳೆದ ತುಮಕೂರು ಲೋಕಸಭಾ ಚುನಾವಣೆಯಲ್ಲಿ ಹೇಮಾವತಿ ಎಕ್ಸ್ ಪ್ರೆಸ್ ಕೆನಾಲ್ V/S ಹೇಮಾವತಿ ನಾಲಾ ಆಧುನೀಕರಣ ಬಹಳ ಸುದ್ದಿ ಮಾಡಿತು. ಹೇಮಾವತಿ ವ್ಯಾಪ್ತಿಯ ಜನ ಜಾತಿ ಮತ್ತು ಪಕ್ಷಾರಹಿತವಾಗಿ ಹೇಮಾವತಿ ಎಕ್ಸ್‍ಪ್ರೆಸ್ ಕೆನಾಲ್ ವಿರುದ್ಧ ತಿರುಗಿ ಬಿದ್ದಿದ್ದರು.’

ಚುನಾಯಿತ ಜನಪ್ರತಿನಿಧಿಗಳು ಸಹ ಈ ವಿಚಾರದಲ್ಲಿ ಡಾ.ಜಿ.ಪರಮೇಶ್ವರ್‍ರವರು ಉಪಮುಖ್ಯ ಮಂತ್ರಿಯಾಗಿದ್ದಾಗಲೇ ಒಂದಾಗಿ ಶ್ರಮಿಸಿದ್ದರು. ಆದರೂ ಪ್ರಯೋಜನವಾಗಿರಲಿಲ್ಲ. ಶ್ರೀ ಜಿ.ಎಸ್.ಬಸವರಾಜ್‍ರವರು ಆರಂಭದಿಂದ ಇಲ್ಲಿಯವರೆಗೂ ಕಡತದ ಅನುಸರಣೆ ಮಾಡುವ ಮೂಲಕ ಗುರಿ ತಲುಪುವ ಹಂತಕ್ಕೆ ಬಂದಿದ್ದಾರೆ.

ಸಿದ್ಧಗಂಗಾ ಮಠಕ್ಕೆ ವಿರೋಧ ಪಕ್ಷದ ನಾಯಕರಾಗಿ ಬಂದಿದ್ದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಹೇಮಾವತಿ ಎಕ್ಸ್ ಪ್ರೆಸ್ ಕೆನಾಲ್ ರದ್ದು ಪಡಿಸುವುದಾಗಿ ಘೋಷಣೆ ಮಾಡಿದ್ದರು. ಮುಖ್ಯ ಮಂತ್ರಿಯಾದ ಕೂಡಲೇ ಸಚಿವ ಸಂಪುಟದಲ್ಲಿದ್ದ ಶ್ರೀ ಜೆ.ಸಿ.ಮಾಧುಸ್ವಾಮಿರವರು ಹೇಮಾವತಿ ಎಕ್ಸ್‍ಪ್ರೆಸ್ ಕೆನಾಲ್ ರದ್ದುಪಡಿಸಲಾಗಿದೆ ಎಂದು ಘೋಶಿಸಿದ್ದರು.

 ಹೇಮಾವತಿ ನಾಲಾ ಆಧುನೀಕರಣ ಕಾಮಗಾರಿಗೆ ಸಚಿವ ಸಂಪುಟದ ಅನುಮೋದನೆ ಆಗಿದ್ದರೂ ಪುನಃ ನೆನೆಗುದಿಗೆ ಬಿದ್ದಿತ್ತು. ಮಾನ್ಯ ಮುಖ್ಯಮಂತ್ರಿಯವರು ಮೊನ್ನೆ ಸಿದ್ಧಗಂಗಾ ಮಠಕ್ಕೆ ಬಂದು ಶ್ರೀಗಳ ಗದ್ದುಗೆಯ ದರ್ಶನ ಮಾಡಿ, ಎರಡು ವರ್ಷದಿಂದ ನೆನೆಗುದಿಗೆ ಬಿದ್ದಿದ್ದ ಹೇಮಾವತಿ ನಾಲಾ ಆಧುನೀಕರಣ ಕಾಮಗಾರಿಗೆ  ಟೆಂಡರ್ ಕರೆಯುವ ಮೂಲಕ ಚಾಲನೆ ನೀಡಿದ್ದಾರೆ.

 ತುಮಕೂರು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರು ಸಹ ಮಾನ್ಯ ಮುಖ್ಯ ಮಂತ್ರಿಯವರೊಂದಿಗೆ ಮಾತನಾಡಿದ್ದರು. ಉಳಿದ ಯಾರು ಮಾತನಾಡಿದ್ದಾರೋ, ಇಲ್ಲವೋ ನನಗೆ ಗೊತ್ತಿಲ್ಲ. ಶನಿಜಯಂತಿ ದಿವಸ ಶ್ರೀ ಜಿ.ಎಸ್.ಬಸವರಾಜ್‍ರವರು ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರೊಂದಿಗೆ ಚರ್ಚಿಸಿದ ನಂತರ ಗ್ರಹಣ ಬಿಟ್ಟಿತು ಎಂದು ಹರ್ಷ ವ್ಯಕ್ತ ಪಡಿಸಿದ್ದರು. ಹೇಮಾವತಿ ಎಕ್ಸ್‍ಪ್ರೆಸ್ ಕೆನಾಲ್ ನಿಂದ ತೊಂದರೆಗೆ ಒಳಪಡುತ್ತಿದ್ದ ಜನರಿಗಂತೂ  ವರದಾನವಾಗಿದೆ. ಹೇಮಾವತಿ ವಿಚಾರದಲ್ಲಿ ಮತ್ತೆ ಜೀವದಾನವಾಗಿದೆ’  

 ಬಹು ದೊಡ್ಡ ಗಂಡಾಂತರದಿಂದ ಪಾರು ಮಾಡಿದ ಶ್ರೀ ಬಿ.ಎಸ್.ಯಡಿಯೂಪ್ಪನವರಿಗೊಂದು ಜನತೆಯ ಪರವಾಗಿ ದೊಡ್ಡ ಸಲಾಂ!! ಜಿಲ್ಲೆಗೆ ಯಾವ ಯೋಜನೆ ಮಾಡುತ್ತಾರೋ, ಬಿಡುತ್ತಾರೋ ಇದಂತು ದೇವರು ಮೆಚ್ಚುವ ಕೆಲಸ. ಶ್ರಮಿಸಿದ ಎಲ್ಲಾ ಹಂತದ ಅಧಿಕಾರಿಗಳಿಗೂ ಅಭಿನಂದನೆಗಳು. ಎರಡು ವರ್ಷದಿಂದ ನಿರಂತರವಾಗಿ ಸುತ್ತಿ ಸುತ್ತಿ ಬಿಪಿ ರೈಸ್ ಮಾಡಿಕೊಳ್ಳುತ್ತಿದ್ದ ಶ್ರೀ ಜಿ.ಎಸ್.ಬಸವರಾಜ್‍ರವರು ನೆಮ್ಮದಿಯಿಂದ ನಿದ್ದೆ ಮಾಡಬಹುದಾಗಿದೆ.