TUMAKURU:SHAKTHIPEETA FOUNDATION
ಕರ್ನಾಟಕ ರಾಜ್ಯ ಸರ್ಕಾರದ ಕೆಲವು ಅಧಿಕಾರಿಗಳು ಮತ್ತು ರಾಜಕಾರಣಿಗಳು ನೀರಾವರಿ ವಿಚಾರದಲ್ಲಿ ಯಾವುದೇ ಯೋಜನೆ ಬಗ್ಗೆ ಮಾತನಾಡಿದರೂ ಅಯ್ಯೋ ಇದು ಮಾಡಿದರೆ ತಮಿಳು ನಾಡಿನವರೂ ಕ್ಯಾತೆ ತೆಗೆಯುತ್ತಾರೆ, ಇದು ಮಾಡಿದರೆ ಮಹರಾಷ್ಟ್ರ, ಗೋವಾ, ಆಂದ್ರವರು ಕ್ಯಾತೆ ತೆಗೆಯುತ್ತಾರೆ ಹೀಗೆ ಕಥೆ ಹೇಳುವ ಕಾಲ ಒಂದಿತ್ತು.
ಅನ್ಯ ರಾಜ್ಯದವರೇಕೆ ನಮ್ಮ ನಮ್ಮಲ್ಲಿಯೇ ದುರುದ್ದೇಶದ ವಿರೋಧಗಳನ್ನು ನಾವು ಎದುರಿಸುತ್ತಿದ್ದೇವೆ. ಯಾರೋ ಒಬ್ಬ ಪತ್ರಿಕೆಯಲ್ಲಿ ಮೇಕೆದಾಟು ಯೋಜನೆ ಬಗ್ಗೆ ಒಂದು ವರದಿ ಬರೆದ, ಅದರ ಆಧಾರದ ಮೇಲೆ ಎನ್.ಜಿ.ಟಿ ಸ್ವಯಂ ಆಗಿ ಕೇಸು ದಾಖಲಿಸಿಕೊಂಡಿತ್ತು. ಇದನ್ನು ನಮ್ಮ ಸರ್ಕಾರ ತನ್ನ ಬುದ್ದಿವಂತಿಕೆಯಿಂದ ಏನೇನು ಹೇಳಬೇಕೋ ಹೇಳಿ ಹೊಡೆದು ಹಾಕಿತು.
‘ಸುಮ್ಮನೇ ಇದ್ದರೆ, ಮೇಕೆದಾಟು ಯೋಜನೆ ಬಗ್ಗೆ ಮಾತನಾಡುವುದೇ ಅಪರಾಧವಾಗುತ್ತಿತ್ತು. ಈಗ ಇಂಥ ನೂರು ಆರೋಪಗಳು ಬಂದರೂ ನಮ್ಮ ಸರ್ಕಾರ ಎದುರು ಉತ್ತರ ನೀಡಲು ಸಿದ್ದರಿದ್ದೇವೆ ಎಂಬ ಒಂದು ಪಾಠ ಕಲಿಯಿತು.’
ಪ್ರವಾಹದ ನದಿ ನೀರಿನ ಬಳಕೆ ಬಗ್ಗೆ ಯೋಜನೆ ರೂಪಿಸಲಿ, ಈಗಿರುವ ‘ಚುನಾಯಿತ ಜನಪ್ರತಿನಿಧಿಗಳ ಮೊಮ್ಮಕ್ಕಳು ಅಧಿಕಾರಕ್ಕೆ’ ಬರುವ ವೇಳೆಗೆ ಎಲ್ಲಾ ಸಮಸ್ಯೆಗಳನ್ನು ನಾಯಾಲಯಗಳ ಮೂಲಕ ಬಗೆ ಹರಿಸಬಹುದು. ಯಾವತ್ತು ಮಾಡಿದರೂ ವಿರೋದ ಬಂದೇ ಬರುತ್ತದೆ. ಈಗಲೇ ಎಲ್ಲಾ ಯೋಚಿಸಿ ಒಂದು ನಿರ್ಣಯಕ್ಕೆ ನಮ್ಮ ಸರ್ಕಾರ ಬರ ಬೇಕಿದೆ.
ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಇದು ಸಕಾಲ, ಚುನಾವಣಾ ಸರದಿ ಇನ್ನೂ ನಮ್ಮ ರಾಜ್ಯದ್ದು, ತಮಿಳು ನಾಡು ಚುನಾವಣಾ ದೃಷ್ಠಿ ಇಟ್ಟುಕೊಂಡು ಕೇಂದ್ರ ಸರ್ಕಾರ ತಮಿಳುನಾಡಿಗೆ ಯೋಜನೆ ಮಂಜೂರು ಮಾಡಿ ಈಗಾಗಲೇ ಕೈ ಸುಟ್ಟುಕೊಂಡಿದೆ. ನಮ್ಮ ರಾಜ್ಯಕ್ಕೆ ಒಂದು ದಾರಿ ತೋರಿದೆ. ‘ಆಗುವುದೆಲ್ಲಾ ಒಳ್ಳೆಯದ್ದಕ್ಕೆ’ ಎಂಬ ನೀತಿ ಪಾಠಕ್ಕೆ ಪೂರಕವಾಗಿದೆ.
‘ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ಹಾದಿ ಇಡಿದಿದೆ. ‘ರಾಜ್ಯದ ಇತಿಹಾಸದÀಲ್ಲಿ ಮೊಟ್ಟ ಮೊದಲ ಭಾರಿಗೆ ಭಧ್ರಾ ಮೇಲ್ದಂಡೆ ಯೋಜನೆಗೆ ಎನ್.ಪಿ.ಪಿ ಯೋಜನೆಯಡಿ ಹಸಿರು ನೀಶಾನೆ’ ನೀಡಿದೆ. ಬೇಡ್ತಿ-ವರದಾ ಯೋಜನೆ ಬಗ್ಗೆ ಅಧ್ಯಯನ ಮಾಡಲು ಚಾಲನೆ ನೀಡಿದೆ. ನೇತ್ರಾವತಿ-ಹೇಮಾವತಿ ಲಿಂಕ್‍ಗೆ ಬದಲಾಗಿ ಎತ್ತಿನಹೊಳೆ ಯೋಜನೆಯನ್ನು ನೇತ್ರಾವತಿ-ಪಾಲಾರ್, ಪೆನ್ನಾರ್ ಲಿಂಕ್‍ಗೆ ಮಾಡುವ ಪ್ರಸ್ತಾವನೆಗೆ ಚಾಲನೆ ದೊರಕಿದೆ. ಈ ವರ್ಷ ಬಹುತೇಕ ಕೇಂದ್ರ ಸರ್ಕಾರ ಒಪ್ಪಿಗೆ ನೀಡಲಿದೆ. ನಮ್ಮ ರಾಜ್ಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಲೇ ಬೇಕು.’
ಇವೆಲ್ಲಾ ನಮ್ಮ ರಾಜ್ಯಕ್ಕೆ ವರದಾನವಾಗಲಿದೆ. ಈಗ ಉಳಿದ ಯಾವ ಯೋಜನೆಗಳನ್ನು ರಾಜ್ಯದ ನದಿಜೋಡಣೆ ಯೋಜನೆಯಾಗಿ ಮಾಡಬಹುದು ಎಂಬ ಅಧ್ಯಯನ ಆರಂಭವಾಗಿದೆ. ಇದಕ್ಕೆ ಒಂದು ‘ಡೆಡಿಕೇಟೆಡ್ ತಂಡ’ ಬೇಕು. ಈ ತಂಡದಲ್ಲಿ ಇಂಜಿನಿಯರ್ ಗಳು, ಪಕ್ಷಾತೀತವಾಗಿ ನೀರಾವರಿ ವಿಚಾರದಲ್ಲಿ ಆಸಕ್ತಿ ಇರುವ ಚುನಾಯಿತ ಜನಪ್ರನಿದಿಗಳು, ಪರಿಣಿತರು ಇರಬೇಕು.
ಇಷ್ಟೆ ಇದ್ದರೇ ಸಾಲದು ಯೋಜನೆಗೆ ಮೋದಲೇ ಗುತ್ತಿಗೆ ದಾರರನ್ನು ನಿಗದಿಗೊಳಿಸಿದರೆ, ಅವರು ಎಲ್ಲೇಲ್ಲೀ ಏನೇನು ಮಾಡಬೇಕೋ ಮಾಡಿ ಯೋಜನೆಯನ್ನು ಮಂಜೂರು ಮಾಡಿಸಲು ಮುಂದೆ ಬರುತ್ತಾರೆ. ಅವರಿಗೆ ಎಲ್ಲಾ ತಂತ್ರಗಳು ಗೊತ್ತಿವೆ. ‘ರವಿ ಕಾಣದ್ದನ್ನು ಕವಿ ಕಂಡ’ ಗಾದೆಯ ಹಾಗೆ ‘ಅಧಿಕಾರಿಗಳು ಮಾಡದ್ದನ್ನ ಗುತ್ತಿಗೆ ದಾರರು ಮಾಡುತ್ತಾರೆ’ ಎಂಬ ಹೊಸ ಗಾದೆ ಹುಟ್ಟು ಹಾಕಬಹುದು.
‘ನಮ್ಮ ಹಳ್ಳಿಹಕ್ಕಿಯಂತ ಹೊಸ ಸಂಶೋಧಕರಿಗೆ ಎಲ್ಲವೂ ತಿಳಿದಿದ್ದರೂ, ಅಬ್ಬರಿಸಲು ಒಂದು ಅವಕಾಶ ಸಿಕ್ಕಿದರೂ, ಯೋಜನೆ ಆಗಬೇಕಾದರೇ ಕೆಲವು ತಂತ್ರಗಾರಿಕೆಗಳನ್ನು ಯೋಜನೆಯೆ ಡಿಪಿಆರ್ ನಲ್ಲಿ ಸೇರಿಸಲೇ ಬೇಕು.ಇದು ಕರ್ನಾಟಕದ ಪರಿಸ್ಥಿತಿ ಅಲ್ಲ, ವಿಶ್ವದ ಮೂಲೆ ಮೂಲೆಯಲ್ಲೂ ಚಾಲ್ತಿಯಲ್ಲಿ ಇರುವ, ಅನೈತಿಕವಾದರೂ ಮೂಲಭೂತ ಹಕ್ಕು ಎಂಬಂತ ಸಂಪ್ರದಾಯ ವಾಗಿದೆ. ಈ ಪಿಡುಗು ಒದ್ದೋಡಿಸಲೂ ಆ ದೇವರೇ ಬಂದರೂ ಸಾಧ್ಯವಾಗುವುದಿಲ್ಲವೇನೋ ಎಂಬ ಮಟ್ಟದಲ್ಲಿದೆ. ಆದರೂ ನಾವೂ ಆಶಾವಾದಿಗಳಾಗಬೇಕು. ಈ ಸ್ಥಿತಿ ಬದಲಾಗಲಿದೆ ಎಂಬ ಕನಸಿನಲ್ಲಿಯೇ ಇರೋಣ?’