11th December 2024
Share
KUNDARANAHALLI RAMESH, AJAY, UMASHANKAR , & NIC TEAM

TUMAKURU:SHAKTHIPEETA FOUNDATION

  ಪ್ರಧಾನ ಮಂತ್ರಿಯವರಾದ ಶ್ರೀ ನರೇಂದ್ರಮೋದಿಯವರು ಕೇಂದ್ರ ಸರ್ಕಾರದ ಅನುದಾನಗಳ ಪ್ರಗತಿ ಪರಿಶೀಲನೆಗೆ ಲೋಕಸಭಾ ಸದಸ್ಯರ ಅಧ್ಯಕ್ಷತೆಯಲ್ಲಿ ರಚಿಸಿರುವ ಜಿಲ್ಲಾ ಮಟ್ಟದ ದಿಶಾ ಸಮಿತಿಗಳನ್ನು ರಚಿಸಿ 6 ವರ್ಷಗಳು ತುಂಬಲಿವೆ. ಈ ಸಂದರ್ಭದಲ್ಲಿ ತುಮಕೂರು ಜಿಲ್ಲಾ ದಿಶಾ ಸಮಿತಿ ತನ್ನದೇ ಆದ ‘DIHSA MONITORING CELL#DISHA  PORTAL’  ರಚಿಸುವ ಕೆಲಸ ಭರದಿಂದ ಸಾಗಿದೆ.

ಮುಂದಿನ ದಿಶಾ ಸಭೆಯಲ್ಲಿ ವೆಬ್ ಸೈಟ್ ಚಾಲನೆ ನೀಡಲು ಹಿಂದಿನ ದಿಶಾ ಸಮಿತಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಇಂದು(22.06.2021) ಎನ್.ಐ.ಸಿ ಅಧಿಕಾರಿಗಳ ಜೊತೆ ಅವರ ಕಚೇರಿಯಲ್ಲಿ ಸಮಾಲೋಚನೆ ನಡೆಸಲಾಯಿತು. ಜಿಲ್ಲಾ ಅಧಿಕಾರಿ ಶ್ರೀ ಅಜಯ್‍ರವರು ಕೇಂದ್ರ ಸರ್ಕಾರದ ದಿಶಾ ಡ್ಯಾಷ್ ಬೋರ್ಡ್’ ನಲ್ಲಿ ಅಡಕವಾಗಿರುವ ಅಂಶಗಳ ಮತ್ತು ತುಮಕೂರು ಜಿಲ್ಲಾ ಮಟ್ಟದ ದಿಶಾ ಡ್ಯಾಷ್ ಬೋರ್ಡ್’ ನಲ್ಲಿ ಯಾವ ಅಂಶಗಳನ್ನು ಸೇರ್ಪಡೆ ಮಾಡಲಾಗಿದೆ ಮತ್ತು ಇನ್ನೂ ಯಾವ ಅಂಶಗಳನ್ನು ಸೇರ್ಪಡೆ ಮಾಡಲು ಉದ್ದೇಶಿಸಲಾಗಿದೆ ಎಂಬ ಬಗ್ಗೆ ಮಾಹಿತಿ ನೀಡಿದರು.

1951 ರಿಂದ ಇಲ್ಲಿಯವರೆಗೂ ತುಮಕೂರು ಲೋಕಸಭಾ ಕ್ಷೇತ್ರ ಪ್ರತಿನಿಧಿಸಿರುವ ಸಂಸದರಿಂದ ಆರಂಭಿಸಿ,ಇಲ್ಲಿಯವರೆಗೂ ಸಂಸದರ ಮಾಹಿತಿಗಳು. ತುಮಕೂರು ಜಿಲ್ಲೆಯಲ್ಲಿನ ಇಂಚಿಂಚು ಡಿಜಿಟಲ್ ಮಾಹಿತಿಗಳನ್ನು ಆಯಾ ಇಲಾಖಾವಾರು, ಯೋಜನಾವಾರು, ವಿಷಯವಾರು ಸಂಪೂರ್ಣ ಮಾಹಿತಿಗಳು ಬೆರಳತುದಿಯಲ್ಲಿ ಒಂದೇ ಕಡೆ ದೊರೆಯಲಿದೆ.

‘ಕೇಂದ್ರ ಸರ್ಕಾರದ ದಿಶಾ ಸಮಿತಿ ವ್ಯಾಪ್ತಿಗೆ ಬರುವ 42 ಯೋಜನೆಗಳು, ಇತ್ತೀಚೆಗೆ ಕೇಂದ್ರ ಸರ್ಕಾರ ಘೋಷಣೆ ಮಾಡಿರುವ ಯೋಜನೆಗಳು, ಕಳೆದ ಎರಡು ವರ್ಷದಿಂದ ಜಿಲ್ಲಾ ಮಟ್ಟದ ದಿಶಾ ಸಮಿತಿ ನಿರ್ಣಯ ಮಾಡಿರುವ ಪ್ರತಿಯೊಂದು ಹೊಸ ಪ್ರಸ್ತಾವನೆಗಳು ಮತ್ತು ದಿಶಾ ಸಮಿತಿಯ ವಿಷಯವಾರು ಪಾಲನಾ ವರದಿಗಳು, ಕೇಂದ್ರ ಸರ್ಕಾರದ ಯೋಜನೆಗಳಿಗೆ ಜಿಲ್ಲಾಧಿಕಾರಿಗಳ ಮತ್ತು ಸಿಓಗಳ ಅಧ್ಯಕ್ಷತೆಯಲ್ಲಿ ರಚಿಸಿರುವ ಸಮಿತಿಯ ನಡವಳಿಕೆಗಳು ಮತ್ತು ಕೈಗೊಂಡ ಕ್ರಮಗಳ ಮಾಹಿತಿಯೂ ದೊರೆಯಲಿದೆ.’

ಜಿಲ್ಲೆಯ 330 ಗ್ರಾಮ ಪಂಚಾಯಿತಿಗಳು ಮತ್ತು 11 ನಗರ ಸ್ಥಳೀಯ ಸಂಸ್ಥೆಗಳು ಮತ್ತು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳ ಡಿಜಿಟಲ್ ಲಿಂಕ್ ಗಳಿಗೂ ಈ ವೆಬ್‍ಸೈಟ್‍ನಿಂದ ಸಂಪರ್ಕಿಸ ಬಹುದಾಗಿದೆ. ಡಿಜಿಟಲ್ ತಾಜಾ ಡಾಟಾಗಳನ್ನು ಆಯಾ ಇಲಾಖೆಯ ಅಧಿಕಾರಿಗಳೆ ಅಫ್‍ಡೇಟ್ ಮಾಡಲು ಎಲ್ಲರಿಗೂ ಪಾಸ್‍ವರ್ಡ್ ನೀಡುವ ವ್ಯವಸ್ಥೆಯೂ ಜಾರಿಗೆ ಬರಲಿದೆ.

ಉತ್ತಮ ಕೆಲಸ ಮಾಡಿರುವ ಇಲಾಖೆಗಳಿಗೆ ದಿಶಾ ಅವಾರ್ಡ್’ ನೀಡಲು ಕೆಂಪು, ಹಳದಿ ಮತ್ತು ಹಸಿರು‘ ಬಣ್ಣಗಳಿಂದ RANKING  ನೀಡುವ ಆಟೋಮ್ಯಾಟಿಕ್ ವ್ಯವಸ್ಥೆಯು ಇರಲಿದೆ. ಪ್ರತಿವರ್ಷ ತುಮಕೂರು ಜಿಲ್ಲೆಗೆ ಕೇಂದ್ರ ಸರ್ಕಾರದ ಪ್ರತಿಯೊಂದು ಇಲಾಖೆಗಳಿಂದ ಬಂದಿರುವ  ಅನುದಾನಗಳ ಇಂಡೆಕ್ಸ್ ಸಹ ದೊರೆಯಲಿದೆ.

ಇವೆಲ್ಲಕ್ಕಿಂತ ಮಿಗಿಲಾಗಿ ಸಂಘ ಸಂಸ್ಥೆಗಳ, ವಿಷಯವಾರು ಪರಿಣಿತರ, ಸಾರ್ವಜನಿಕರ ಸಲಹೆ ಸೂಚನೆಗಳಿಗೂ ಅವಕಾಶ ಕಲ್ಪಿಸಲಾಗುವುದು. ಎಲ್ಲವೂ ಜಿಐಎಸ್ ಮಯ ಈ ರೀತಿಯ ವಿಶೇಷ ಡಿಜಿಟಲ್ ಮಾಹಿತಿ ಸಾರ್ವಜನಿಕರ ವೀಕ್ಷಣೆಗೂ ದೊರೆಯಲಿದೆ. ಎಲ್ಲಾ ಅಂಶಗಳನ್ನು  ಕಾಲಮಿತಿಯಲ್ಲಿ ಪೂರ್ಣಗೊಳಿ¸ಲು ಏನೇನು ಮಾಡಬೇಕಾಗುವುದು ಎಂಬ ಮಾಹಿತಿಗಳ ಬಗ್ಗೆಯೂ ಸುಧೀರ್ಘವಾಗಿ ಚರ್ಚೆ ನಡೆಸಲಾಯಿತು.

ಮೋದಿಯವರ ಕನಸಿನ ಪ್ರತಿಯೊಂದು ಯೋಜನೆಗಳನ್ನು  ಜಾರಿಗೊಳಿಸಿದ ಕೀರ್ತಿ ಪ್ರಪ್ರಥಮವಾಗಿ ತುಮಕೂರು ಜಿಲ್ಲಾ ದಿಶಾ ಸಮಿತಿಗೆ ದೊರೆಯಲೇ ಬೇಕು ಎಂಬ ಹಠದಿಂದ ದಿನಾಂಕ:21.09.2019 ರಿಂದ ಇಲ್ಲಿಯವರೆಗೂ ನಿರಂತರವಾಗಿ ದಿಶಾ ಸಮಿತಿ ಶ್ರಮಿಸುತ್ತಿದೆ.

‘ಹಾಳಾದ ಕೊರೊನಾ ಮಹಾಮಾರಿಯಿಂದ ನಮ್ಮ ಸಂಸದರಾದ ಶ್ರೀ ಜಿ.ಎಸ್.ಬಸವರಾಜ್ ರವರ ಸ್ಪೀಡ್ ಗೆ ಅಡ್ಡ ಬಂದಿದ್ದರೂ, ಕುಂಟುತ್ತಾ ಸಾಗಿದರೂ 2022 ಆಗಸ್ಟ್ 15 ವೇಳೆಗೆ ನಮ್ಮ ಗುರಿ ತಲುಪುತ್ತೇವೆ ಎಂಬ ಅನಿಸಿಕೆ ನಮ್ಮದಾಗಿದೆ. ಕಾದು ನೋಡೋಣ?’