22nd December 2024
Share
G.S.BASAVARAJ, UPENDRA SING & KUNDARANAHALLI RAMESH

TUMAKURU:SHAKTHI PEETA FOUNDATION

ತುಮಕೂರು ಜಿಲ್ಲೆ ಮಧುಗಿರಿಯಲ್ಲಿ ಮೆಗಾ ಇಂಡಸ್ಟ್ರಿಯಲ್ ಟೆಕ್ಸ್ ಟೈಲ್ಸ್  ಪಾರ್ಕ್ ಮಾಡುವ ಬಗ್ಗೆ ಕರ್ನಾಟಕ ರಾಜ್ಯ ಟೆಕ್ಸ್ ಟೈಲ್ಸ್  ಆಯುಕ್ತರಾದ  ಶ್ರೀ ಉಪೇಂದ್ರ ಸಿಂಗ್ ರವರೊಂದಿಗೆ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಸಮಾಲೋಚನೆ ನಡೆಸಿದರು.

ಕೇಂದ್ರ ಸರ್ಕಾರ ಕಳೆದ ಮುಂಗಡ ಪತ್ರದಲ್ಲಿ ದೇಶದಲ್ಲಿ 7 ಮೆಗಾ ಪಾರ್ಕ್ ಗಳನ್ನು ಮಾಡಲು ಪ್ರಕಟಿಸಿದೆ. ಇದರಲ್ಲಿ ಒಂದನ್ನು ಕರ್ನಾಟಕ ರಾಜ್ಯಕ್ಕೆ ಮಂಜೂರು ಮಾಡುವ ಭರವಸೆ ಇದೆ. ಮಾರ್ಗದರ್ಶಿ ಸೂತ್ರ ಇನ್ನೂ ಅಂತಿಮವಾಗಿಲ್ಲ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 1000 ಎಕರೆ ಜಮೀನು, ನೀರು, ವಿದ್ಯುತ್ ಮತ್ತು ಮೂಲಭೂತ ಸೌಕರ್ಯ ನೀಡಲು ಸಮೀಕ್ಷೆ ಆರಂಭವಾಗಿದೆ.

ಕೇಂದ್ರದ ತಂಡ ಯಾವ ಜಿಲ್ಲೆಯನ್ನು ಆಯ್ಕೆ ಮಾಡುವುದೋ, ಆ ಜಿಲ್ಲೆಯಲ್ಲಿ ಪಾರ್ಕ್ ಆರಂಭವಾಗ ಬಹುದು ಎಂಬ ಮಾಹಿತಿಯನ್ನು ಆಯುಕ್ತರು ನೀಡಿದರು.